ಸುಹಾನ ಸೈಯದ್ ಸರಿಗಮಪ ವೇದಿಕೆಯಲ್ಲಿ ಕನ್ನಡ ಹಾಡುಗಳನ್ನ ಹಾಡಿ ಜನಮನ ಗೆದ್ದ ಸ್ಪರ್ಧಿ… ಅದಷ್ಟೇ ಅಲ್ಲದೆ ವೇದಿಕೆ ಮೇಲೆ ನೀನೆ ರಾಮ ನೀನೆ ಶ್ಯಾಮ ಎಂದು ಹಾಡುತ್ತಾ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದ ಸ್ಪರ್ಧಿ ..

ಸದ್ಯ ರಾಜ್ಯದೆಲ್ಲೆಡೆ ಹಿಜಾಬ್ ಹಾಗೂ ಕೇಸರಿ ಶಾಲಿನ ಬಗ್ಗೆ ಜೋರು ಚರ್ಚೆಗಳಾಗುತ್ತಿವೆ ..ಇದೇ ಸಮಯದಲ್ಲಿ ಸರಿಗಮಪ ಸ್ಪರ್ಧಿ ಸುಹಾನಾ ಸೈಯದ್ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ…

ನಾನು ಹಿಜಾಬ್ ಧರಿಸುವುದಿಲ್ಲ ಹಾಗಂತ ಹಿಜಾಬ್ ಧರಿಸುವವರ ವಿರೋಧಿಯೂ ನಾನಲ್ಲ….ಬಟ್ಟೆ ಧರಿಸುವುದು ಅವರವರ ಆಯ್ಕೆ…ನಾನು ಹಿಜಾಬ್ ಧರಿಸುವುದಿಲ್ಲ ಎಂದು ಪರ ವಿರೋಧ ಚರ್ಚೆಗಳು ಈಗ ಈಗಾಗಲೇ ಆಗಿದೆ…ಸದ್ಯ ನಡೆಯುತ್ತಿರುವ ಘಟನೆಯ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಬಟ್ಟೆ ಧರಿಸುವುದು ಅವರವರ ಇಚ್ಛೆಗೆ ಸಂಬಂಧಪಟ್ಟಿದ್ದು… ಅದನ್ನ ಯಾರೂ ಕೂಡ ಒತ್ತಾಯ ಮಾಡುವ ಆಗಿಲ್ಲ ….ಇನ್ನು ನನ್ನ ಪ್ರಕಾರ ಇಲ್ಲದಕ್ಕಿಂತಲೂ ಹೆಚ್ಚು ಶಿಕ್ಷಣ …ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು ನಂತರ ಅವರು ಧರಿಸುವ ಬಟ್ಟೆಯನ್ನು ಅವರೇ ನಿರ್ಧಾರ ಮಾಡುತ್ತಾರೆ… ಎಂದಿದ್ದಾರೆ ಸುಹಾನ ಸೈಯದ್

Share via
Copy link
Powered by Social Snap