ಸ್ಯಾಂಡಲ್ ವುಡ್ ನ ಕೃಷ್ಣ ಅಜಯ್ ರಾವ್ ಅಭಿನಯದ “ಲವ್ ಯೂ ರಚ್ಚು” ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೇಳಿರಲಿಲ್ಲ. ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿರುವ ಅಜಯ್ ರಾವ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಪಯಣ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಟನೆ ಜೊತೆಗೆ ನಿರ್ದೇಶನದಲ್ಲಿ ಆಸಕ್ತಿ ಹೊಂದಿರುವ ಅಜಯ್ ಈ ವರ್ಷದ ಕೊನೆಯಲ್ಲಿ ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಜಯ್ ಈ ಸಿನಿಮಾಗಳು ಮುಗಿದ ನಂತರ ತಮ್ಮ ನಿರ್ದೇಶನದ ಹೊಸ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.
ಈ ಕುರಿತು ಮಾತನಾಡಿರುವ ಅಜಯ್ ” ಮಂಜು ಸ್ವರಾಜ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರ ರೆಟ್ರೋ ಲವ್ ಸ್ಟೋರಿ ಕಾದಂಬರಿ ಆಧಾರಿತವಾಗಿದೆ. ಇದರೊಂದಿಗೆ ಇನ್ನೊಂದು ಸ್ಕ್ರಿಪ್ಟ್ ಹುಡುಕುತ್ತಿದ್ದೇನೆ. ಮಂಜು ಅವರ ಸಿನಿಮಾ ಮುಗಿದ ಮೇಲೆ ಈ ಸಿನಿಮಾದ ಕೆಲಸ ಆರಂಭಿಸುವ ಯೋಜನೆ ಇದೆ. ನಂತರ ನಾನು ನಿರ್ದೇಶಕನಾಗಿ ಹೊಸ ಜರ್ನಿ ಆರಂಭಿಸುತ್ತೇನೆ ಎಂದಿದ್ದಾರೆ.