ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಪ್2” ಚಿತ್ರವನ್ನು 2022ರ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
KGF ಚಾಪ್ಟರ್ 2 ನಲ್ಲಿ ರವೀನಾ ಟಂಡನ್,ಸಂಜಯ್ ದತ್ ರಂತ ಸ್ಟಾರ್ ನಟರು ನಟಿಸಿರುವುದರಿಂದ KGF 2 ತೂಕ ಹಾಗೂ ನಿರೀಕ್ಷೆ ಆಕಾಶದೆತ್ತರದಲ್ಲಿದೆ.
ಆದರೆ ಅದೇ ದಿನದಂದು ಬಾಲಿವುಡ್ ನಲ್ಲಿ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಇದು ಅಮಿರ್ ಖಾನ್ ನಟಿಸಿ ನಿರ್ಮಾಣ ಮಾಡಿರುವ ಅವರ ಬಹು ಆಸೆಯ ಚಿತ್ರ. ಇದರಲ್ಲಿ ಅಮಿರ್ ಖಾನ್ ಸಿಖ್ಖ್ ಪಾತ್ರದಲ್ಲಿ ನಟಿಸಿದ್ದಾರೆ.
ಬಹಳ ಹಿಂದೆಯೇ ರಿಲೀಸ್ ಆಗಬೇಕಿದ್ದ ಲಾಲ್ ಸಿಂಗ್ ಚಡ್ಡಾ ಕೋವಿಡ್ ಕಾರಣಗಳಿಂದ ವಿಳಂಬವಾಗಿ ರಿಲೀಸ್ ಆಗುತ್ತಿದೆ.
ಏಪ್ರೀಲ್ 14 ಬೈಸಾಕಿ ದಿನ ಆದ್ದರಿಂದ ಅದು ಸಿಖ್ಖರ ಪವಿತ್ರವಾದ ಹಬ್ಬ ಅಂದೇ ಈ ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದ್ದಾರೆ.
ಇದು ಇಂಗ್ಲಿಷ್ ನಲ್ಲಿ ತೆರೆಗೆ ಬಂದಿದ್ದ ‘ಫಾರೆಸ್ಟ್ ಗಂಪ್‘ ಚಿತ್ರದ ರಿಮೇಕ್.
ಈ ಮಧ್ಯೆ ಅಮಿರ್ ಖಾನ್ ರವರು KGF ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಗೆ ಕ್ಷಮೆ ಕೇಳಿದ್ದಾರೆ. ಹಲವು ಕಾರಣಗಳಿಂದ ನನ್ನ ಸಿನಿಮಾ ರಿಲೀಸ್ ಡೇಟ್ ನ್ನು ಮುಂದೆ ಹಾಕಲಾಗಿತ್ತು. ಬೇಗ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ ಸಿನಿಮಾ quality ಮುಖ್ಯ. ನಾನು ಅದರ ಕಡೆ ಗಮನ ನೀಡಿದ್ದೆ. ಈಗಲಾದರೂ ಲಾಲ್ ಸಿಂಗ್ ಚಡ್ಡಾ ಸಿನಮಾವನ್ನು ರಿಲೀಸ್ ಮಾಡಲೇಬೇಕು ಇನ್ನು ಮುಂದೂಡಲು ಸಾಧ್ಯವಿಲ್ಲ ಆದರೆ ಇದು KGF 2 ರಿಲೀಸ್ ಡೇಟ್ ಗೆ ಕ್ಲಾಶ್ ಆಗುತ್ತಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಸ್ವತಃ ಅಮಿರ್ ಖಾನ್ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾತನಾಡಿದ್ದಾರೆ.