ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮೊನ್ನೆಯಷ್ಟೇ ತಮ್ಮ ಬರ್ತ್ ಡೇ ಆಚರಿಸಿಕೊಂಡಿದ್ದು ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆದರೆ ಈ ಶುಭಸಮಯದಲ್ಲಿ ಅನುಶ್ರೀ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದು ತುಂಬಾನೇ ಭಾವುಕರಾಗಿದ್ದರು. ಜೊತೆಗೆ ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ವಿಚಾರವನ್ನು ಕೂಡಾ ಅನುಶ್ರೀ ವ್ಯಕ್ತಪಡಿಸಿಕೊಂಡಿದ್ದರು.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ತೆಗೆದ ಮೊದಲ ಫೋಟೋವನ್ನು ಹಂಚಿಕೊಂಡಿದ್ದ ಅನುಶ್ರೀ ” ಪ್ರತಿ ವರ್ಷ ಹರ್ಷದಿಂದ ಆಚರಿಸುವ ದಿನ.. ಯಾಕೆಂದ್ರೆ ನೀವು ಹಾರೈಸ್ತಿದ್ರಿ.. ಆದ್ರೆ ಈ ವರ್ಷ ಈ ದಿನ.. ಆದರೂ ಅಪ್ಪು ಸರ್ ನೀವು ಖಂಡಿತಾ ಆಶೀರ್ವಾದಿಸುತ್ತಿರುವಿರಿ.. ಈ ದಿನ ನಿಮಗೆ ಸಮರ್ಪಣೆ… ನಿಮ್ಮ ಹಾಗೆ ಬದುಕಲು ಅಸಾಧ್ಯ..ನಿಮ್ಮ ಹಾದಿಯಲ್ಲಿ ನಡೆಯುವ ಪ್ರಯತ್ನ ಸದಾ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ತಮ್ಮ ಹುಟ್ಟಿದ ದಿನವನ್ನು ಪವರ್ ಸ್ಟಾರ್ ಗಾಗಿ ಅರ್ಪಿಸಿರುವ ಅನುಶ್ರೀ 11 ವರ್ಷದ ಹಿಂದೆ ಪುನೀತ್ ರಾಜ್ ಕುಮಾರ್ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದರು. ಮಾತ್ರವಲ್ಲ ಅದು ಅವರು ಅಪ್ಪುವೊಂದಿಗೆ ತೆಗೆಸಿಕೊಂಡ ಮೊದಲ ಫೋಟೊವು ಆಗಿತ್ತು ಎಂಬುದು ವಿಶೇಷ.

Share via
Copy link
Powered by Social Snap