ಕರುನಾಡ ರತ್ನ… ಪುನೀತ್ ರಾಜ್ ಕುಮಾರ್ ನಮ್ಮ ಜೊತೆಯಲ್ಲಿಲ್ಲ ಅನ್ನೋ ಸತ್ಯ ಇಂದಿಗೂ ಕೂಡ ಯಾರೂ ನಂಬಲು ತಯಾರಿಲ್ಲ.. ಅಪ್ಪು ಎಲ್ಲರನ್ನ ಬಿಟ್ಟು ಅಗಲಿ 3ತಿಂಗಳು ಕಳೆದಿದೆ… ಆದರೆ ಅವರ ನೆನಪು ಮಾತ್ರ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಗಾಢವಾಗಿ ಉಳಿದುಕೊಂಡು ಬಿಟ್ಟಿದೆ ..
ಪುನೀತ್ ಹಿಂದು ಮಾತ್ರವಲ್ಲ ಎಂದೆಂದಿಗೂ ಎಲ್ಲರ ಉಸಿರಲ್ಲಿ ಬೆರೆತು ಹೋಗಬೇಕು ಎನ್ನುವ ಕಾರಣದಿಂದ ನಟ ರಾಘವೇಂದ್ರ ರಾಜ್ ಕುಮಾರ್ ಹೊಸ ಆಲೋಚನೆಯೊಂದನ್ನು ಮಾಡಿದ್ದಾರೆ ..
ಮುಂದಿನ ಪೀಳಿಗೆಯ ಜನರಿಗೂ ಪುನೀತ್ ರಾಜ್ ಕುಮಾರ್ ಮನಸ್ಸಿನಲ್ಲಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬದ ಹೊತ್ತಿಗೆ ಸುಮಾರು 1ಲಕ್ಷ ಗಿಡಗಳನ್ನು ಅವರ ಹೆಸರಿನಲ್ಲಿ ನೆಡಲು ಅಭಿಮಾನಿಗಳಿಗೆ ರಾಘವೇಂದ್ರಾಜ್ ಕುಮಾರ್ ಮನವಿ ಮಾಡಿದ್ದಾರೆ ..
ಈಗಾಗಲೇ ಈ ಆಶಯಕ್ಕೆ ಚಾಲನೆ ಸಿಕ್ಕಿದ್ದು ಅಪ್ಪು ಅವರ ಮೂರನೇ ತಿಂಗಳ ತಿಥಿಯ ದಿನ ಸಮಾಧಿ ಬಳಿ ಬಂದ ಅಭಿಮಾನಿಗಳಿಗೆ ರಾಘವೇಂದ್ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ಗಿಡಗಳನ್ನ ವಿತರಣೆ ಮಾಡಿದ್ದಾರೆ …ಈ ಮೂಲಕ ಪುನೀತ್ ಪ್ರತಿಯೊಬ್ಬರ ಉಸಿರಿನಲ್ಲಿ ಬೆರೆತು ಹೋಗಲಿದ್ದಾರೆ…