ಪ್ರಾದೇಶಿಕ ಭಾಷೆ ಕಲಿಯುತ್ತಿರುವ ಕಿರುತೆರೆಯ ರಾಧಾ ಮಿಸ್
ರಾಧಾ ರಮಣ ಧಾರಾವಾಹಿಯಾದ ಮೇಲೆ ನಟಿ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ. ಫೋಟೋಶೂಟ್ ಮಾಡಿಸಿ, ಒಳ್ಳೊಳ್ಳೆಯ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ, ಫ್ಯಾನ್ಸ್ ಗಳಿಂದ ಬರುವ ಕಮೆಂಟ್ ಗಳಿಗೆ ರಿಪ್ಲೈ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ. ಈಗಂತೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ನ್ನೂ ಮೈಟೈಂನ್ ಮಾಡುತ್ತಿದ್ದಾರೆ. ಇನ್ನು ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಕೂಡ ಮಾಡುತ್ತಾರೆ. […]
ನಿವೇದಿತಾ ಗೌಡ ಈಗ ಮಿಸಸ್ ಇಂಡಿಯಾ
ಸಿನಿಮಾದಲ್ಲಿ ನಟಿಸದ ನಿವೇದಿತಾ ಗೌಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದರು.ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿವೇದಿತಾ ಮಿಸೆಸ್ ಇಂಡಿಯಾಗಾಗಿ ತಾನು ನಡೆಸುತ್ತಿರುವ ತಯಾರಿ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ನಟಿ ಮಿಸಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸುವುದರೊಂದಿಗೆ ಹೊಸ ದಾಖಲೆಯನ್ನು ತನಗಾಗಿ ಮಾಡಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಿವೇದಿತಾ ಅವರ ಅಭಿಮಾನಿ ಬಳಗವೂ ಅಷ್ಟೇ ದೊಡ್ಡದಿದೆ. ಆದ್ದರಿಂದ ನಿವೇದಿತಾ […]
ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ
ಸ್ಯಾಂಡಲ್ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರುವ ಅಮೂಲ್ಯ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಭಡ್ತಿ ಪಡೆದಿದ್ದಾರೆ. ನಟನೆಯ ಹೊರತಾಗಿ ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ […]
ನಟನೆಯ ನಂತರ ಡ್ಯಾನ್ಸ್ ಮೂಲಕ ಗಮನ ಸೆಳೆದ ಚಂದನವನದ ಚೆಲುವೆ
‘ಗಾಳಿಪಟ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭಾವನಾ ರಾವ್ ಎಲ್ಲರಿಗೂ ಚಿರಪರಿಚಿತರು. ಎಲ್ಲರ ನೆಚ್ಚಿನ ನಟಿಯಾದ ಇವರು ಅಭಿನಯಕ್ಕೂ ಮುಂಚೆ ನೃತ್ಯ ಕಲಾವಿದೆ ಎನ್ನುವುದನ್ನು ಮರೆಯುವಂತಿಲ್ಲ. ತನ್ನ ನೃತ್ಯ ವೈಖರಿಯನ್ನು’ಗಾಳಿಪಟ’ ಸಿನಿಮಾದಲ್ಲೂ ತೋರಿಸಿರುವ ಇವರು ಡ್ಯಾನ್ಸ್ ಮೂಲಕವೇ ಗಮನ ಸೆಳೆದಿದ್ದಾರೆ. ಸಿನಿಮಾ ಶೂಟಿಂಗ್ ನಲ್ಲಿ ಬಿಝಿಯಾಗಿದ್ದ ಭಾವನಾ ನೃತ್ಯದ ಕಡೆ ಅಷ್ಟು ಗಮನ ಹರಿಸಲಿಲ್ಲವಾದರೂ ಈಗ ಮತ್ತೊಮ್ಮೆ ಅದೇ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ‘ಚಂದ್ರಚೂಡ ಶಿವ […]
ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ನಟಿ!
ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಜೋಡಿ ಇತ್ತೀಚೆಗಷ್ಟೇ ಅಧಿಕೃತವಾಗಿ ವಿವಾಹವಾದರು. ಆಪ್ತರ ವಲಯ, ಕುಟುಂಬಸ್ಥರನ್ನು ಮಾತ್ರ ಸೇರಿಸಿ ಮದುವೆಯಾದುದರಿಂದ ಇವರ ಮದುವೆ ನೋಡಬೇಕೆಂದರೂ ಅಭಿಮಾನಿಗಳಿಗೆ ಏನೇನು ಸಿಗಲಿಲ್ಲ. ಮದುವೆಯ ದಿನ ನಯನತಾರಾ ಮತ್ತು ವಿಘ್ನೇಶ್ ಹೇಗೆ ರೆಡಿಯಾಗಿದ್ದರು ಎಂಬುದನ್ನು ಕೆಲವು ಫೋಟೊಗಳಲ್ಲಷ್ಟೇ ನೋಡಬೇಕಾಯಿತು. ಆದರೆ ಸಿಕ್ಕ ಅಲ್ಪಸ್ವಲ್ಪ ಫೋಟೊದಲ್ಲಿ ಎಲ್ಲರ ಗಮನ ಸೆಳೆದಿದ್ದು ನಯನತಾರಾ ಸೀರೆ. ಇದೀಗ ಮದುವೆ ಕಳೆದು ಹಲವು ದಿನಗಳಾದರೂ ಆ ಸೀರೆ ಇನ್ನೂ ಸುದ್ದಿಯಲ್ಲಿದೆ. ಅದೇನಪ್ಪ ಅಂದ್ರೆ ಸತ್ಯ ಧಾರಾವಾಹಿಯ […]
ವೈರಲ್ ಆದ ರಾಧಿಕಾ ಪಂಡಿತ್ ಪೋಸ್ಟ್
ಕನ್ನಡ ಚಿತ್ರರಂಗದ ಅದ್ಭುತ ಜೋಡಿಗಳಲ್ಲಿ ಯಶ್ ರಾಧಿಕಾ ಕೂಡ ಒಬ್ಬರು. ಸಿನಿ ಜರ್ನಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಾದರಿ ದಂಪತಿಯಾಗಿ ಬದುಕುತ್ತಿರುವ ಇವರು ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿಯೂ ಹೌದು. ಈಗ ಈ ವಿಷಯ ಯಾಕೆಂದರೆ ನಟಿ ರಾಧಿಕಾ ಪಂಡಿತ್ ತಮ್ಮ ಕುಟುಂಬದ ಜೊತೆಗಿನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಧಿಕಾ ತಮ್ಮ ಕುಟುಂಬದ ಆಗುಹೋಗುಗಳನ್ನು, ಸಂತೋಷದ ಕ್ಷಣಗಳನ್ನು ಸಾಧಾರಣವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ […]
ಟ್ರೆಂಡಿಂಗ್ ಲಿಸ್ಟ್ ಸೇರಿದ ಯಶ್ ಹೆಸರು
ನಟ ಯಶ್ ಈಗಾಗಲೇ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನವೇರಿದ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದಂತವರು. ಲವ್ವರ್ ಬಾಯ್ ಯಾಗಿದ್ದ ನಟ ಕೆಜಿಎಫ್ ಮೂಲಕ ಕ್ರಿಯೇಟ್ ಮಾಡಿದ್ದು ಬೇರೆಯೇ ಜಗತ್ತು. ಕೆಜಿಎಫ್ 2 ಕೋಟಿಗಟ್ಟಲೆ ಬಾಚಿದ ಮೇಲಂತೂ ಯಶ್ ಅವರ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ರಾಕಿಬಾಯ್ ಮುಂದಿನ ಸಿನಿಮಾ ಅಂದರೆ 19ನೇ ಸಿನಿಮಾ ಏನಿರಬಹುದು ಎಂದು ಅಭಿಮಾನಿಗಳೆಲ್ಲ ಕಾತರದಿಂದ ಕಾಯುತ್ತಿದ್ದಾರೆ. ತಮ್ಮ ಕೆರಿಯರ್ ನ ಆರಂಭದಿಂದಲೇ ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಿ ಮುಂದೆ ಬಂದವರು ನಟ ಯಶ್. ಯಶಸ್ಸು […]
ಮತ್ತೆ ಕಿರುತೆರೆಗೆ ಸುಧಾರಾಣಿ
ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಎಲ್ಲರ ಮನ ಗೆದ್ದ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಸಿನಿಮಾಗಳ ಮೂಲಕ ಎಲ್ಲರನ್ನು ರಂಜಿಸಿರುವ ಸುಧಾರಾಣಿ ಇದೀಗ ಕನ್ನಡದ ‘ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಇದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.ಅಂದಹಾಗೆ ಶ್ರೀರಸ್ತು ಶುಭಮಸ್ತು ಪ್ರಸಾರವಾಗುತ್ತಿರುವುದು ಜೀ ಕನ್ನಡ ವಾಹಿನಿಯಲ್ಲಿ. ಜೀ ಕನ್ನಡ ವಾಹಿನಿಯು ಸದಾ ಒಂದಲ್ಲೊಂದು ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಅದು […]
ಮತ್ತೆ ಕಿರುತೆರೆಗೆ ಗೋಲ್ಡನ್ ಸ್ಟಾರ್!
ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಗೆ ಹೊಸಬರೇನಲ್ಲ. ಅವರು ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಹೋದವರು. ಆದರೂ ಕಿರುತೆರೆಯ ನಂಟನ್ನು ಎಂದು ಕಡಿದುಕೊಂಡವರಲ್ಲ. ಈ ಮೊದಲು ‘ಸೂಪರ್ ಮಿನಿಟ್’ ಮತ್ತು ‘ಗೋಲ್ಡನ್ ಗ್ಯಾಂಗ್’ ರಿಯಾಲಿಟಿ ಶೋಗಳ ಮೂಲಕ ಮಿಂಚಿದವರು ಇದೀಗ ಮತ್ತೊಂದು ಹೊಸ ರಿಯಾಲಿಟಿ ಶೋದೊಂದಿಗೆ ಕಿರುತೆರೆಗೆ ಬರಲಿದ್ದಾರೆ. ‘ನಮಸ್ಕಾರ ನಮಸ್ಕಾರ ನಮಸ್ಕಾರ …’ ಎಂದು ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಗಣೇಶ್ ಅವರ ಜೀವನ ‘ಮುಂಗಾರು ಮಳೆ’ ಸಿನಿಮಾದಿಂದ ಹೊಸ ತಿರುವನ್ನು ಪಡೆದುಕೊಂಡಿತು. ಸಿನಿಮಾ ಜಗತ್ತಿನೊಂದಿಗೆ ಕಿರುತೆರೆ ರಿಯಾಲಿಟಿ ಶೋ ಗಳನ್ನು […]
ಹೊಸ ರೂಪದಲ್ಲಿ ಬರುತ್ತಿದೆ ಈ ರಿಯಾಲಿಟಿ ಶೋ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’. ‘ಬಾದ್ ಷಾಹ್’ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಕಾರ್ಯಕ್ರಮ ಬಹುಪಾಲು ಕನ್ನಡಿಗರ ಅಚ್ಚುಮೆಚ್ಚು. ಈಗಾಗಲೇ 8 ಆವೃತ್ತಿಯನ್ನು ಮುಗಿಸಿಕೊಂಡಿರುವ ‘ಬಿಗ್ ಬಾಸ್’ ಇದೀಗ ಒಂಬತ್ತನೇ ಆವೃತ್ತಿಗೆ ಸಿದ್ದವಾಗುತ್ತಿದೆ. ಈ ಬಾರಿ ‘ಬಿಗ್ ಬಾಸ್’ ಹಲವು ಹೊಸ ಲಕ್ಷಣಗಳನಿಟ್ಟುಕೊಂಡು ಸೆಟ್ಟೇರುತ್ತಿದೆ. ಮಾಮೂಲಿಯಾಗಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ‘ಬಿಗ್ ಬಾಸ್’ ಈವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿತ್ತು ಆದರೆ ಈ ಬಾರಿ 9ನೇ ಸೀಸನ್ ಆರಂಭಕ್ಕೂ ಮುನ್ನವೇ […]