ಮುದ್ದುಮಣಿಯಾಗಿ ಮೋಡಿ ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯು ಯಶಸ್ವಿ 1000 ಸಂಚಿಕೆ ಪೂರೈಸಿದ್ದು ಒಂದು ತಿಂಗಳ ಹಿಂದೆಯಷ್ಟೇ ಮುಕ್ತಾಯಗೊಂಡಿತ್ತು. ಇದರ ಜೊತೆಗೆ ಮುದ್ದುಲಕ್ಷ್ಮಿ ಧಾರಾವಾಹಿಯ ಹೊಸ ಅಧ್ಯಾಯವೂ ಆರಂಭವಾಗಿತ್ತು. ಮುದ್ದುಲಕ್ಷ್ಮಿಯ ಮುದ್ದುಮಣಿಗಳು ಎಂಬ ಶೀರ್ಷಿಕೆಯಲ್ಲಿ ಹೊಸ ಅಧ್ಯಾಯ ಪ್ರಸಾರವಾಗುತ್ತಿದ್ದು ಮುದ್ದುವಿನ ಬೆಳೆದು ನಿಂಯ ಮಕ್ಕಳ ಕತೆಯನ್ನು ಅದು ಒಳಗೊಂಡಿದೆ. ಮುದ್ದುಲಕ್ಷ್ಮಿ ಮಗಳು ದೃಷ್ಟಿಯಾಗಿ ನಟಿಸುತ್ತಿರುವ ಸಮೀಕ್ಷಾಗೆ ಕಿರುತೆರೆ ಹೊಸದೇನಲ್ಲ. ಮೊದಲ ಆಡಿಶನ್ ನಲ್ಲಿಯೇ ನಟಿಸುವ ಅವಕಾಶ ಪಡೆದ ಈಕೆ ಖಳನಾಯಕಿಯಾಗಿಯೂ ಮೋಡಿ ಮಾಡಿದ ಪ್ರತಿಭೆ. ಉದಯ ವಾಹಿನಿಯಲ್ಲಿ […]
ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಹಿಂದಿ ಕಿರುತೆರೆಯ ಜನಪ್ರಿಯ ಶೋ

ಹಿಂದಿ ಟಿವಿ ಮಾರುಕಟ್ಟೆಯಲ್ಲಿ ಕಪಿಲ್ ಶರ್ಮ ಶೋ ಗೆ ತನ್ನದೇ ಆದ ಸ್ಥಾನವಿದೆ. ಹಾಸ್ಯದಿಂದ ಪ್ರೇಕ್ಷಕರ ಮನಗೆದ್ದಿರುವ ಈ ಶೋ ಟಾಪ್ ಸ್ಥಾನದಲ್ಲಿ ಇದೆ. ಹಿಂದಿ ಕಿರುತೆರೆ ಜಗತ್ತಿನಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿದ್ದ ಈ ಶೋ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಹಿಂದಿಯ ಜನಪ್ರಿಯ ಶೋ ಗಳ ಪೈಕಿ ಒಂದಾಗಿರುವ ಇದು ಸ್ಥಗಿತಗೊಳ್ಳುತ್ತಿರುವುದು ಜನರ ಮನದಲ್ಲಿ ಅಚ್ಚರಿ ಮೂಡಿಸಿದೆ. ಅಂದ ಹಾಗೇ ಈ ಶೋ ಸ್ಥಗಿತಗೊಳ್ಳುತ್ತಿರುವುದು ಕೆಲವು ದಿನಗಳ ಕಾಲ ಮಾತ್ರ. ಶೋ ವಿನ ಕ್ಯಾಪ್ಟನ್ ಕಪಿಲ್ […]
ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ ಕಿರುತೆರೆಯ ಯುವರಾಣಿ

ನಮ್ಮನೆ ಯುವರಾಣಿ ಧಾರಾವಾಹಿಯ ಮೀರಾಆಲಿಯಾಸ್ ಕೋಳಿಮರಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ಅಂಕಿತಾ ಅಮರ್ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅಂಕಿತಾ ಅಮರ್ ತನ್ನ ನಟನೆಯಿಂದ ಗಮನ ಸೆಳೆದವರು. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಅಂಕಿತಾ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಅಂಕಿತಾ ಅಮರ್ ತನ್ನ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಮನ […]
ವಿಲನ್ ಆಗಿ ಕಿರುತೆರೆಯತ್ತ ಮರಳಿದ ಅಮೃತಾ ರಾಮಮೂರ್ತಿ

ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಸದ್ಯ ಮಗಳು ಧೃತಿಯ ಆರೈಕೆಯಲ್ಲಿ ತೊಡಗಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅಮೃತಾ ಇದೀಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. “ಇದೊಂದು ತನ್ನ ಜೀವನದ ಉತ್ತಮ ಹಂತ “ಎಂದಿದ್ದಾರೆ. ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಮೃತಾ ಗರ್ಭಿಣಿಯ ಕಾರಣದಿಂದಾಗಿ ಅರ್ಧದಿಂದ ತೊರೆದಿದ್ದರು. ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. “ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ನಾನು ಪ್ರಮುಖ ಖಳನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಬಹುಶಃ ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತದ್ದೇನೆ […]
ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ನಂದಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ರಾಧಿಕಾ ಪಂಡಿತ್ ನಟಿಸಿದ್ದು ಕೇವಲ ಮೂರು ಧಾರಾವಾಹಿಗಳಲ್ಲಿ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಜಿಗಿದ ರಾಧಿಕಾ ಮುಂದೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಧಿಕಾ ಪಂಡಿತ್ ವಿವಾಹದ ಬಳಿಕ ಬಣ್ಣ ಹಚ್ಚಿದ್ದು ಕೊಂಚ ಕಡಿಮೆಯೇ. ಮಗಳು, ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ನಟನೆಯಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿಯೇ ಆ್ಯಕ್ಟೀವ್ ಆಗಿದ್ದಾರೆ. ಬಿಡುವಾದಗಲ್ಲೆಲ್ಲಾ ಮುದ್ದು ಮಕ್ಕಳ ಫೋಟೋ, […]
ರಿಯಾಲಿಟಿ ಶೋವಿಗೂ ಸೀರಿಯಲ್ ಗೂ ವ್ಯತ್ಯಾಸವಿದೆ – ಇಶಿತ ವರ್ಷ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ಮಾಯಾಳಾಗಿ ನಟಿಸಿದ್ದ ಇಶಿತ ವರ್ಷ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಆದರೆ ಈ ಬಾರಿ ಸಣ್ಣ ಬದಲಾವಣೆಯಿದೆ. ಇಶಿತ ಅವರು ಕಿರುತೆರೆಗೆ ಮರಳಿರುವುದೇನೋ ನಿಜ. ಆದರೆ ಈ ಬಾರಿ ಅವರು ನಟಿಯಾಗಿ ಮರಳಿಲ್ಲ. ಬದಲಿಗೆ ಸ್ಪರ್ಧಿಯಾಗಿ ಕಂ ಬ್ಯಾಕ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ರಿಯಾಲಿಟಿ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಇಶಿತ ವರ್ಷ “ಇದೊಂದು ಅದ್ಭುತವಾದ ಜರ್ನಿ” ಎಂದು ಹೇಳಿದ್ದಾರೆ. “ಇದೇ […]
ಭಾವುಕ ಪತ್ರ ಹಂಚಿಕೊಂಡ ಸಹನಾ ಅಪ್ಪಣ್ಣ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯು ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅತಿ ಹೆಚ್ಚು ಟಿ ಆರ್ ಪಿ ಯನ್ನು ಪಡೆಯುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇರುವುದು ತುಂಬಾ ವಿಶೇಷ. ಇಂತಿಪ್ಪ ಕನ್ಯಾಕುಮಾರಿಯಲ್ಲಿ ನಾಯಕ ಚರಣ್ ಅಕ್ಕ ಭಾಗ್ಯಲಕ್ಷ್ಮಿಯಾಗಿ ಅಭಿನಯಿಸುತ್ತಿರುವ ಸಹನಾ ಅಪ್ಪಣ್ಣ ಇದೀಗ ತಮ್ಮ ಪಾತ್ರಕ್ಕೆ ವಿದಾಯ ಹೇಳಲಿದ್ದಾರೆ. ಹೌದು, ಕಾರಣಾಂತರಗಳಿಂದ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರಬಂದಿರುವ ಸಹನಾ ಅಪ್ಪಣ್ಣ ಭಾವುಕ ಪತ್ರವೊಂದನ್ನು ಇನ್ ಸ್ಟಾಗ್ರಾಂನಲ್ಲಿ […]
ಹೀಗಿದೆ ನೋಡಿ ಕಿರುತೆರೆ ರಾಧೆಯ ನಟನಾ ಜರ್ನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆಶ್ಯಾಮ ಧಾರಾವಾಹಿಯಲ್ಲಿ ನಾಯಕಿ ರಾಧೆ ಆಗಿ ನಟಿಸುತ್ತಿರುವ ತನ್ವಿ ರಾವ್ ಅವರ ನಟನಾ ಯಾನ ಶುರುವಾಗಿದ್ದು ಹಿರಿತೆರೆಯಿಂದ. ಬಾಲಿವುಡ್ ಮೂಲಕ ಬಣ್ಣದ ಲೋಕದ ನಟು ಬೆಳೆಸಿಕೊಂಡ ತನ್ವಿ ರಾವ್ ಇದೀಗ ರಾಧೆಯಾಗಿ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಮಾಧುರಿ ದೀಕ್ಷಿತ್ ನಟಿಸಿರುವ ಗುಲಾಬಿ ಗ್ಯಾಂಗ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ನಟನಾ ಬದುಕಿಗೆ ಪಾದಾರ್ಪಣೆ ಮಾಡಿದ ತನ್ವಿ ರಾವ್ ಮೊದಲ ಬಾರಿಗೆ ಬಣ್ಣ ಹಚ್ಚಿದಾಗ ವಯಸ್ಸು ಕೇವಲ ಹದಿನೈದು ವರ್ಷ. […]
ಪುಟ್ಟ ಅತಿಥಿಯನ್ನು ಬರಮಾಡಿಕೊಳ್ಳಲಿದ್ದಾರೆ ಸ್ಟಾರ್ ದಂಪತಿ

ತಮ್ಮ ಹಾಸ್ಯದ ಮೂಲಕ ಜನರ ಮೊಗದಲ್ಲಿ ನಗು ತರಿಸುವ ಭಾರತಿ ಸಿಂಗ್ ಜೀವನದಲ್ಲಿ ಈಗ ಸಂತೋಷ ಮೂಡಿಸಲು ಪುಟ್ಟ ಅತಿಥಿ ಬರುತ್ತಿದ್ದಾರೆ. ಭಾರತಿ ಹಾಗೂ ಹರ್ಷ ಲಿಂಬಾಚಿಯಾ ಎಪ್ರಿಲ್ ನಲ್ಲಿ ಈ ಪುಟ್ಟ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಎಂಟನೆಯ ತಿಂಗಳ ಗರ್ಭಿಣಿಯಾಗಿದ್ದರೂ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಭಾರತಿ ಸಿಂಗ್ ತಾಯಿಯಾಗುವ ಸಂತಸದಲ್ಲಿದ್ದಾರೆ. ಈ ವಿಶೇಷ ಕ್ಷಣವನ್ನು ಭಾರತಿ ಸಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್ ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ […]
ನನಗೆ ಗೊತ್ತಿಲ್ಲದೆಯೇ ಪಾತ್ರದಲ್ಲಿ ಬದಲಾವಣೆ ಆಗಿದೆ – ಸ್ವಪ್ನ ದೀಕ್ಷಿತ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ಇದ್ದಕ್ಕಿದ್ದಂತೆ ಪಾತ್ರವೊಂದರ ಬದಲಾವಣೆಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಪಾತ್ರ ಬದಲಾಗುತ್ತಿರುವ ವಿಚಾರ ಸ್ವತಃ ಪಾತ್ರಧಾರಿಗೆ ತಿಳಿದಿಲ್ಲ. ಮಾತ್ರವಲ್ಲ ಈಗಾಗಲೇ ಆ ಪಾತ್ರಕ್ಕೆ ಬೇರೊಬ್ಬರು ಕೂಡಾ ಆಯ್ಕೆಯಾಗಿದ್ದು, ಅವರು ಶೂಟಿಂಗ್ ಗೆ ಹಾಜರಾಗಿದ್ದು ಕೂಡಾ ಅವರಿಗೆ ತಿಳಿಯದಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ಅಂದ ಹಾಗೇ ನಾವೀಗ ಹೇಳುತ್ತಿರುವುದು ತಾರಾ ಪಾತ್ರಧಾರಿ ಬಗ್ಗೆ. ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿ ಅಮ್ಮ ತಾರಾ ಆಗಿ ನಟಿಸುತ್ತಿರುವ ಸ್ವಪ್ನ ದೀಕ್ಷಿತ್ ಇನ್ನು ಮುಂದೆ […]

