ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಭಾವನಾ ಮೆನನ್

ಮಲೆಯಾಳಂ ನ ಜನಪ್ರಿಯ ನಟಿ ಭಾವನಾ ಮೆನನ್ ಕೆಲವು ವರ್ಷಗಳಿಂದ ಮಾಲಿವುಡ್ ನಿಂದ ದೂರವಿದ್ದರು. ಈಗ ಅವರು ಮತ್ತೆ ನಟನೆಯತ್ತ ಮರಳಿದ್ದು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಅಭಿನಯಿಸಲಿರುವ ಚಿತ್ರದ ಪೋಸ್ಟರ್ ನ್ನು ಕೂಡಾ ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. “ಎನ್ಟಿಕಕ್ಕಕ್ಕೋರು ಪ್ರೇಮಂರ್ಡನ್” ಎಂಬ ಸಿನಿಮಾದಲ್ಲಿ ಭಾವನಾ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ವಿಭಿನ್ನವಾಗಿದೆ. ಆದಿಲ್ ಅಶ್ರಫ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು ಸಿನಿಮಾದ ಕುರಿತು […]

ಶೀಘ್ರದಲ್ಲೇ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ

ರಾಜ್ಯಾದ್ಯಂತ ಇಂದು(ಮಾರ್ಚ್ 17) ಹಬ್ಬವನ್ನೇ ಆಚರಿಸುತ್ತಿರೋ ಪ್ರತಿಯೊಬ್ಬ ಅಪ್ಪು ಅಭಿಮಾನಿಗೂ ಹೊಸತೊಂದು ಸಿಹಿವಿಚಾರ ಕಾಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಎಲ್ಲೆಡೆ ಭರಪೂರ ಸ್ವಾಗತ ಸಿಗುತ್ತಿದೆ. ಅದ್ದೂರಿಯಾಗಿ ‘ಜೇಮ್ಸ್’ ಜೊತೆಗೆ ಅಪ್ಪುವಿನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು, ಅಪ್ಪುವನ್ನ ಬೆಳ್ಳಿತೆರೆ ಮೇಲೆ ಕಂಡು ಸಂತುಷ್ಟರಾಗಿದ್ದಾರೆ. ಈಗ ಈ ಸಂತಸಕ್ಕೆ ಹೊಸತೊಂದು ಸೇರ್ಪಡೆಯನ್ನ ಮಾನ್ಯಮುಖ್ಯಮಂತ್ರಿಗಳು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆಯೇ, ಕರ್ನಾಟಕ ಸರ್ಕಾರ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕನ್ನಡ ನಾಡಿನ ಪ್ರಜೆಗೆ ಸರ್ಕಾರದಿಂದ ಸಿಗಬಹುದಾದಂತ ಅತ್ಯಂತ ಹಿರಿಮೆಯ ಗೌರವ ‘ಕರ್ನಾಟಕ ರತ್ನ’ವನ್ನು […]

ರಾಜ್ಯಾದ್ಯಂತ ಇಂದು ಅಪ್ಪು ಹಬ್ಬ, ‘ಜೇಮ್ಸ್’ ಜೊತೆಗೆ

ಕನ್ನಡದ ‘ಯುವರತ್ನ’, ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರದ್ದು ಇಂದು 47ನೇ ವರ್ಷದ ಜನುಮದಿನೋತ್ಸವ. 1975ರಲ್ಲಿ ರಾಜ್ ದಂಪತಿಯ ಕುಡಿಯಾಗಿ ಹುಟ್ಟಿದ ಇವರು ಇಂದು ಕರುನಾಡ ಮನೆಯ ಮಗನಾಗಿ ಉಳಿದುಕೊಂಡಿದ್ದಾರೆ. ಉಸಿರು ಹೋದರು ಹೆಸರು ಹಸಿರಾಗಿರುವಂತ ಪವರ್ ಸ್ಟಾರ್ ನ ಜನ್ಮದಿನವನ್ನ ರಾಜ್ಯಾದ್ಯಂತ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಟಿಕೆಟ್ ಗಳು ಒಮ್ಮೆಲೆ ಮಾರಾಟವಾಗಿದ್ದವು, ನಡುರಾತ್ರಿಯಲ್ಲಿಟ್ಟಿದ್ದ ಶೋಗಳು ಕೂಡ ಹೌಸ್ ಫುಲ್ ಆಗುವುದರ ಜೊತೆಗೆ ಚಿತ್ರಮಂದಿರದ ಸುತ್ತಮುತ್ತ ಪಟಾಕಿಯ ಸದ್ದೇ ನಿನಾದವಾದಂತೆ ಕೇಳಿಬರುತ್ತಿತ್ತು. […]

ಈಕೆ ನಾಯಕಿ ಮಾತ್ರವಲ್ಲ ಗಾಯಕಿಯೂ ಹೌದು!

2021 ರ ಬ್ಲಾಕ್ ಬಾಸ್ಟರ್ ಸಿನಿಮಾ ರಾಬರ್ಟ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಆಶಾ ಭಟ್ ಮೊದಲ ಸಿನಿಮಾದಲ್ಲಿಯೇ ಮನೆ ಮಾತಾದಾಕೆ. ನಟನೆಯ ಹೊರತಾಗಿ ಇದೀಗ ಈಕೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಾಡುಗಳ ವಿಡಿಯೋದ ತುಣುಕುಗಳನ್ನು ಶೇರ್ ಮಾಡುತ್ತಿದ್ದ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡದ ಸಿನಿ ರಂಗದ ಎವರ್ ಗ್ರೀನ್ ಹಾಡು ಎನಿಸಿಕೊಂಡಿರುವ ತುಂತುರು ಅಲ್ಲಿ ನೀರ ಹಾಡು ಎನ್ನುವ ಸುಮಧುರ ಹಾಡಿಗೆ […]

ವೇದಿಕೆ ಮೇಲೆಯೇ ಕಣ್ಣೀರಿತ್ತ ಶಿವಣ್ಣ

ಮಾರ್ಚ್ 13ರಂದು ಅದ್ದೂರಿಯಾಗಿ ‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದಿರುವುದು ನಮಗೆಲ್ಲ ಗೊತ್ತಿರೋ ವಿಷಯ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಲ್ಲಿ ಭಾವುಕರಾಗದ ನಟ-ನಟಿಯರಿಲ್ಲ. ಅರ್ಧ ದಾರಿಯಲ್ಲೇ ಅಗಲಿಹೋದ ಅಪ್ಪುವನ್ನು ನೆನೆದು ಕಂಬನಿಮಿಡಿಯದ ಹೃದಯವೇ ಇಲ್ಲ ಎನ್ನಬಹುದು. ಇನ್ನು ಅವರ ಸ್ವಂತ ಮನೆಯವರ ಸ್ಥಿತಿ ವಿವರಿಸುವುದು ಕಷ್ಟಸಾಧ್ಯ. ವೇದಿಕೆ ಮೇಲೆ ಬಂದು ಮಾತನಾಡಿದ ಶಿವಣ್ಣ ರಾಘಣ್ಣ ಇರ್ವರೂ ಕಣ್ತುಂಬಿಕೊಂಡೆ ಕೆಳಗಿಳಿದರು. ಅಪ್ಪುವಿನ ಬಗ್ಗೆ ಗದ್ಗದ ಕಂಠದಿಂದಲೇ ಮಾತನಾಡಿದ ಶಿವಣ್ಣ, “ಅಪ್ಪುವನ್ನು ‘ಪ್ರೇಮದ ಕಾಣಿಕೆ’ ಚಿತ್ರದಿಂದಲೂ ನೋಡಿಕೊಂಡೆ ಬಂದಿದ್ದೇವೆ. ಇಂದು ಅವನು […]

ಅಪ್ಪು ಇನ್ಮೇಲೆ ಡಾ| ಪುನೀತ್ ರಾಜಕುಮಾರ್

ಕನ್ನಡದ ಕಣ್ಮಣಿ, ಯುವರತ್ನ ಪುನೀತ್ ರಾಜಕುಮಾರ್ ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ. ಬಾಲನಟನಾಗಿ ಬಣ್ಣ ಹಚ್ಚಿದ ಅಪ್ಪು, ರಾಷ್ಟ್ರಪ್ರಶಸ್ತಿ ಪಡೆದು ಸಾಧನೆ ಮೆರೆದವರು. ‘ಅಪ್ಪು’ ಚಿತ್ರದಿಂದ ಸಂಪೂರ್ಣ ಪ್ರಮಾಣದ ನಾಯಕನಟನಾಗಿ ತೆರೆಮೇಲೆ ಬಂದ ಪುನೀತ್ ಅಪ್ಪುವಾಗಿಯೇ ಜನಮನದಲ್ಲಿ ಉಳಿದು ಹೋದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ಪುನೀತ್ ಇದೀಗ ಡಾ| ಪುನೀತ್ ರಾಜಕುಮಾರ್ ಆಗಲಿದ್ದಾರೆ. ನಟನೆಯಷ್ಟೇ ಅಲ್ಲದೇ ಇನ್ನು ಹಲವಾರು ರಂಗಗಳಲ್ಲಿ ಅಪ್ಪು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. […]

ಬೆಂಗಳೂರು ಸಿನಿಮೋತ್ಸವ. ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಿನಿಮಾಗಳು

ಮಾರ್ಚ್ 3ನೇ ತಾರೀಕಿನಂದು ಚಾಲನೆಗೊಂಡಿದ್ದ 2022ನೇ ಸಾಲಿನ ‘ಬೆಂಗಳೂರು ಅಂತರ್ರಾಷ್ಟ್ರೀಯ ಸಿನಿಮೋತ್ಸವ’ ಮಾರ್ಚ್ 10ನೇ ತಾರೀಕಿನಂದು ಮುಕ್ತಾಯ ಕಂಡಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಪಸ್ಥಿತಿಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ಸಿನಿ ಉತ್ಸವ ಕರುನಾಡ ರಾಜ್ಯಪಾಲರಾದ ತಾವರ್ ಚಂದ್ ಗೆಹಲೊಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದೊಂದಿಗೆ ಸಂಪೂರ್ಣಗೊಂಡಿದೆ. 2020 ಹಾಗು 2021ನೇ ಸಾಲಿನಲ್ಲಿ ಬಂದಂತಹ ಉತ್ತಮ ಚಿತ್ರಗಳನ್ನ ಗುರುತಿಸಿ, ಗೌರವಿಸಿ, ಪ್ರಶಸ್ತಿ ಪ್ರಧಾನವನ್ನ ಬೆಂಗಳೂರು ಸಿನಿಮೋತ್ಸವದಲ್ಲಿ ಮಾಡಲಾಗಿದೆ. […]

ಹುಟ್ಟುಹಬ್ಬದಾಚರಣೆಗೆ ಬ್ರೇಕ್ ಹಾಕಿದ ನವರಸ ನಾಯಕ

ಒಬ್ಬ ಸೆಲೆಬ್ರಿಟಿ ಅಥವಾ ಸಿನಿಮಾ ಸ್ಟಾರ್ ನ ಹುಟ್ಟಿದ ದಿನ ಅಂದರೆ ಅದೆಷ್ಟು ಸಂಭ್ರಮ, ಸಡಗರ. ದೂರದೂರುಗಳಿಂದ ಅಭಿಮಾನದ ಮಹಾಸಾಗರವನ್ನೇ ಹೊತ್ತುಬರುವ ಅಸಂಖ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನುಮದಿನವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ನಟ-ನಟಿಯರು ಕೂಡ ಹಾಗೇ, ತಮ್ಮ ಅಭಿಮಾನಿಗಳ ಜೊತೆ ಸಡಗರದಿಂದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಾರೆ. ಆದರೆ ಈಗ ಕನ್ನಡದ ಬಹುಪಾಲು ನಟರು ತಮ್ಮ ಜನುಮದಾಚರಣೆಗೆ ಕಡಿವಾಣ ಹಾಕಿಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಕಾರಣ. ಕರುನಾಡ ಯುವರತ್ನ ಅಪ್ಪು ನಮ್ಮನ್ನ ಅಗಲಿದ್ದು. ಸದ್ಯ ಈ ಸಾಲಿಗೆ ನವರಸ […]

ಮತ್ತೆ ‘RRR’ ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ…. ಮಾರ್ಚ್ 14ಕ್ಕೆ ತ್ರಿಬಲ್ ಸಿನಿಮಾದಿಂದ ಮತ್ತೊಂದು ಗಾನಬಜಾನ

ಚಿತ್ರಬ್ರಹ್ಮ ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾಗಾಗಿ ಚಿತ್ರರಸಿಕರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. […]

ಹಾಲಿವುಡ್ ಗೆ ಕಾಲಿಡಲಿದ್ದಾರೆ ಆಲಿಯಾ ಭಟ್

ಬಾಲಿವುಡ್ ನಲ್ಲಿ ಗಂಭೀರ ಛಾಪು ಮೂಡಿಸಿರೋ ಕೆಲವೇ ಕೆಲವು ನಟಿಮಣಿಯರಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ತಮ್ಮ ನಟನೆಯ ಮೂಲಕ ತಮ್ಮದೇ ಆದ ಒಂದು ಸ್ಥಾನವನ್ನ ಆಲಿಯಾ ಭಟ್ ಈಗಾಗಲೇ ಹಿಂದಿಯಲ್ಲಿ ಕಂಡುಕೊಂಡಿದ್ದಾರೆ. ರಾಜಾಮೌಳಿಯವರ RRR ಮೂಲಕ ತೆಲುಗು ಸಿನಿಮಾರಂಗಕ್ಕೂ ಕಾಲಿಟ್ಟಿರೋ ಆಲಿಯಾ ಭಟ್, ಟೋಲಿವುಡ್ ನ ಪ್ರೇಕ್ಷಕರ ಕಣ್ಣುಕುಕ್ಕಲು ಕಾಯುತ್ತಿದ್ದಾರೆ. ಇದಷ್ಟೇ ಅಲ್ಲದೇ ಆಲಿಯಾಗೆ ಇದೀಗ ಇಂಗ್ಲೀಷ್ ಸಿನಿಮಾವೊಂದರಿಂದ ಕೂಡ ಅವಕಾಶ ಬಂದಿದ್ದು ಇನ್ನೇನು ಕೆಲವೇ ಸಮಯದಲ್ಲಿ ಅವರ ಭಾಗದ ಚಿತ್ರೀಕರಣ ಆರಂಭವಾಗಲಿದೆಯಂತೆ. […]