ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ ಎಂದ ಮೋಹಕತಾರೆ… ಯಾರ ಬಗ್ಗೆ ಹೇಳಿದ್ದು ಗೊತ್ತಾ?

ಚಂದನವನದ ಕ್ವೀನ್ ರಮ್ಯಾ ಸದ್ಯ ಚಿತ್ರರಂಗದಿಂದ ವಿರಾಮ ಪಡೆದಿದ್ದರೂ ಉತ್ತಮ ಸಿನಿಮಾ ಬಂದಾಗ ನೋಡುವುದನ್ನು ಮರೆಯುವುದಿಲ್ಲ. ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿರುವ ಚಿತ್ರವನ್ನು ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಬಿಡುಡೆಯಾಗಿ ಪ್ರೇಕ್ಷಕರ ಮನಗೆದ್ದ ಶ್ರೀನಿ ಹಾಗೂ ಅದಿತಿ ಪ್ರಭುದೇವ ನಟನೆಯ ಓಲ್ಡ್ ಮಾಂಕ್ ಚಿತ್ರ ರಮ್ಯಾ ನೋಡಿದ್ದಾರೆ. ಅವರಿಗಾಗಿಯೇ ನಿರ್ದೇಶಕ ಹಾಗೂ ನಟ ಶ್ರೀನಿ ಸ್ಪೆಷಲ್ ಅರೆಂಜ್ ಮಾಡಿ ಸಿನಿಮಾ ತೋರಿಸಿದ್ದರು. ಸಿನಿಮಾ ನೋಡಿ ಎಂಜಾಯ್ ಮಾಡಿದ್ದೇನೆ ಎಂದು ರಮ್ಯಾ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಇದರ ಜೊತೆಗೆ […]
ರಾಜಕೀಯ ಸಮಾವೇಶವಾಯಿತಾ? ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಇಂದಿನಿಂದ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ…ಈ ಚಿತ್ರೋತ್ಸವದಲ್ಲಿ ಸಾಕಷ್ಟು ಸಿನಿಮಾಗಳು ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ …ಸಿನಿಮಾ ಕಲಾವಿದರು ಹಾಗೂ ಪ್ರೇಕ್ಷಕರು ದೇಶ ವಿದೇಶದ ಸಿನಿಮಾಗಳನ್ನ ಚಿತೋತ್ಸವದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ… ಆದರೆ ಈ ವರ್ಷದ ಚಿತ್ರೋತ್ಸವ ರಾಜಕೀಯ ಸಮಾವೇಶವಾಗಿದೆ ಟೀಕೆಗಳು ಈಗಾಗಲೇ ಶುರುವಾಗಿದೆ .. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ರಾಜ ಕೀಯ ಸನ್ನಿವೇಶವಾಗಿದೆ ಎಂಬ ಟೀಕೆ ಕೇಳಿ ಬರುತ್ತಿರುವುದಕ್ಕೆ ಕಾರಣವೂ ಇದೆ…ಹೌದು ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾರಂಗದಿಂದ ನಾಲ್ಕು ಕಲಾವಿದರನ್ನ ಬಿಟ್ಟರೆ ಮಿಕ್ಕೆಲ್ಲಾ […]
ಜಗವೇ ನೀನು ಎಂದು ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ಸಿದ್ ಶ್ರೀರಾಮ್

ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಡಿರುವ “ನೋಟ ಬಂಗಾರವಾಯಿತೇ ಶ್ರೀವಲ್ಲಿ” ಎನ್ನುವ ಹಾಡು ಉಂಟು ಮಾಡಿದ ಹವಾ ಅಷ್ಟಿಷ್ಟಲ್ಲ. ಆ ಹಾಡು ಅದೆಷ್ಟು ಹಿಟ್ ಆಗಿದೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕೂಡಾ ಅದೇ ಹಾಡನ್ನು ಗುನುಗುನಿಸುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಆ ಹಾಡು ಹಿಟ್ ಆಗಿದೆ. ಇಂತಹ ಹಿಟ್ ಹಾಡಿನ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿರುವ ಸಿದ್ ಶ್ರೀರಾಮ್ ಅವರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಹೌದು ಆ ಮೂಲಕ ಕನ್ನಡದಲ್ಲಿಯೂ […]
ಇದೊಂದು ಅದ್ಭುತ ಪಯಣ ಎಂದ ಶುಭಾಪೂಂಜಾ…

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಪ್ರಸಾರವಾಗಿ ವರುಷ ಕಳೆದಿದೆ. ಫೆಬ್ರವರಿ 28 ರಂದು ಸ್ಪರ್ಧಿಗಳೆಲ್ಲಾ ದೊಡ್ಮನೆಯೊಳಗೆ ಮನೆ ಪ್ರವೇಶಿಸಿದ್ದರು. ಈ ಸಂತಸದ ವಿಚಾರವನ್ನು ಶುಭಾ ಪೂಂಜಾ ಅವರೇ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಫೋಟೋವೊಂದನ್ನು ಹಂಚಿಕೊಂಡಿರುವ ಶುಭಾ ಪೂಂಜಾ “ಒಂದು ವರುಷ! ಕಳೆದ ದಿನ ಇದೇ ದಿನ ಬಿಗ್ ಬಾಸ್ ಗೆ ಪ್ರವೇಶ.ಇದೊಂದು ಅದ್ಭುತ ಪಯಣ. ನಾನು ಇದುವರೆಗೂ ನಿಮ್ಮಿಂದ ತುಂಬಾ ಪ್ರೀತಿ ಸ್ವೀಕರಿಸಿದ್ದೇನೆ. ಇದು […]
ಅಮೂಲ್ಯ ಮನೆಯಲ್ಲಿ ಸಂಭ್ರಮ ಶುರು…

ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಎಂತಲೇ ಚಿರಪರಿಚಿತರಾಗಿರುವ ನಟಿ ಅಮೂಲ್ಯ ವೈಯಕ್ತಿಕ ಜೀವನದಲ್ಲಿಯೂ ಅವರು ಅದೃಷ್ಟವಂತೆ ಎಂಬುದು ಮತ್ತೆ ಸಾಬೀತಾಗಿದೆ.2017 ರಲ್ಲಿ ಜಗದೀಶ್ ಎಂಬುವವರನ್ನು ಅಮೂಲ್ಯ ಮದುವೆಯಾಗಿದ್ದರು. ಗರ್ಭಿಣಿಯಾದ ನಂತರ ವಿಭಿನ್ನ ರೀತಿಯ ಫೋಟೋ ಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದ್ಧೂರಿಯಾಗಿ ಸೀಮಂತ, ಬೇಬಿ ಶವರ್ ಪಾರ್ಟಿಗಳು ಕೂಟ ನಡೆದಿದ್ದವು.ಹೀಗೆ ವಿಭಿನ್ನ ರೀತಿಯಲ್ಲಿ ಅವರ ತಾಯ್ತನದ ಪ್ರತಿ ಹೆಜ್ಜೆಯನ್ನು ಅವರು ಆನಂದಿಸಿದ್ದರು ಹಾಗೂ ಅಪಾರ ಶುಭ ಹಾರೈಕೆಗಳನ್ನು ಪಡೆದಿದ್ದರು. ಇಂದು ಅಂದರೆ ಮಾರ್ಚ್ […]
ಶ್ರುತಿ ಹರಿಹರನ್ ಹೊಸ ಲುಕ್

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಶ್ರುತಿ ಹರಿಹರನ್ …ತನ್ನ ಪ್ರಬುದ್ಧ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ …ಮದುವೆ ಮಗು ಅಂತ ಸಣ್ಣ ಬ್ರೇಕ್ ಪಡೆದಿದ್ದ ಶ್ರುತಿ ಹರಿಹರನ್ ಸದ್ಯ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ …. ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ… ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಶ್ರುತಿ ಹರಿಹರನ್ ಇತ್ತೀಚೆಗಷ್ಟೇ ಹೊಸ ಫೋಟೋ ಶೂಟ್ ಒಂದನ್ನು ಮಾಡಿಸಿದ್ದಾರೆ .. ಕಂಪ್ಲೀಟ್ ಡಿಫರೆಂಟ್ […]
ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ದರ್ಶನ್

*ಸ್ಯಾಂಡಲ್ ವುಡ್ ಸ್ಟಾರ್ಸ್ ಗಳ ಜೊತೆ ದರ್ಶನ್ ಬರ್ತಡೆ ಸೆಲೆಬ್ರೇಷನ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನ ಕೆಲವು ದಿನಗಳ ಹಿಂದೆಯಷ್ಟೆ ಆಚರಣೆ ಮಾಡಿಕೊಂಡರು… ಕೋವಿಡ್ ಕಾರಣದಿಂದ ಈ ವರ್ಷವೂ ಕೂಡ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿಲ್ಲ …ಮನೆಯಲ್ಲಿಯೇ ಪತ್ನಿ ಹಾಗೂ ಮಗನ ಜತೆಗೆ ಸಿಂಪಲ್ಲಾಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ… ಆದರೆ ಈಗ ಸ್ಯಾಂಡಲ್ ವುಡ್ ನ ಸ್ಟಾರ್ ಗಳೆಲ್ಲರೂ ಸೇರಿ ದರ್ಶನ್ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ .. […]
ಹೊಸ ಯೋಜನೆ, ಹೊಸ ಪ್ರಾರಂಭ ಎಂದ ಸಿಂಪಲ್ ಸುಂದರಿ

ಚಂದನವನದ “ಸಿಂಪಲ್ ನಟಿ” ಎಂದೇ ಜನಪ್ರಿಯತೆ ಪಡೆದಿರುವ ಶ್ವೇತಾ ಶ್ರೀವಾತ್ಸವ್ ಸಣ್ಣ ಗ್ಯಾಪ್ ನ ನಂತರ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಟನೆ ಮಾತ್ರವಲ್ಲದೇ ಸಮಾಜಸೇವೆಯಲ್ಲಿಯೂ ಸಿಂಪಲ್ ಸುಂದರಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಶ್ವೇತಾ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ದಯೆ ಒಂದು ಆಯ್ಕೆಯಾಗಿದೆ. ದಯೆ ಯಾವಾಗಲೂ ಮುಖ್ಯ. ಹೊಸ ಯೋಜನೆ, ಹೊಸ ಸ್ನೇಹ , ಹೊಸ ಪ್ರಾರಂಭ”ಎಂದು ತಮ್ಮ ಹೊಸ ಯೋಜನೆ ಕುರಿತು ತಿಳಿಸಿದ್ದಾರೆ. […]
ಬೇಬಿ ಬಂಪ್ ಫೋಟೋಶೂಟ್ ಮೂಲಕ ಮನ ಸೆಳೆಯುತ್ತಿದ್ದಾರೆ ಅಮೂಲ್ಯ

ನಟಿ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿ ಸೀಮಂತ ಶಾಸ್ತ್ರ ನಡೆದಿತ್ತು. ಕುಟುಂಬಸ್ಥರು, ಬಂಧು ಮಿತ್ರರು ಸೇರಿ ಇತ್ತೀಚೆಗಷ್ಟೇ ಈ ಚೆಂದುಳ್ಳಿ ಚೆಲುವೆಯ ಸೀಮಂತ ನಡೆಸಿದ್ದರು. ತದ ನಂತರ ಸ್ಯಾಂಡಲ್ ವುಡ್ ಮಂದಿಯೂ ಕೂಡಾ ಜೊತೆ ಸೇರಿ ಮಗದೊಂದು ಸೀಮಂತ ನೆರವೇರಿಸಿದ್ದರು. ಇಂತಿಪ್ಪ ಅಮೂಲ್ಯ ಈಗ ಮತ್ತೆ ಗಮನಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಫೋಟೋಶೂಟ್. ಈ ಮೊದಲು ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮೂಲ್ಯ ಇತ್ತೀಚೆಗೆ ಮತ್ತೊಂದು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. […]
ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ಇನ್ನಿಲ್ಲ….

ರವಿಚಂದ್ರನ್ ಅವರ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಾಸ್ವಾಮಿ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನಹೊಂದಿದ್ದಾರೆ. 83 ವಯಸ್ಸಿನ ಪಟ್ಟಮ್ಮಾಳ್ ಅವರಿಗೆ ರವಿಚಂದ್ರನ್, ಬಾಲಾಜಿ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 10.30ರ ನಂತರ ಮನೆಗೆ ಕರೆತಂದು ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ರವಿಚಂದ್ರನ್ ತಿಳಿಸಿದ್ದಾರೆ…

