ಶೀಘ್ರದಲ್ಲೇ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ
ರಾಜ್ಯಾದ್ಯಂತ ಇಂದು(ಮಾರ್ಚ್ 17) ಹಬ್ಬವನ್ನೇ ಆಚರಿಸುತ್ತಿರೋ ಪ್ರತಿಯೊಬ್ಬ ಅಪ್ಪು ಅಭಿಮಾನಿಗೂ ಹೊಸತೊಂದು ಸಿಹಿವಿಚಾರ ಕಾಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಎಲ್ಲೆಡೆ ಭರಪೂರ ಸ್ವಾಗತ ಸಿಗುತ್ತಿದೆ. ಅದ್ದೂರಿಯಾಗಿ ‘ಜೇಮ್ಸ್’ ಜೊತೆಗೆ ಅಪ್ಪುವಿನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು, ಅಪ್ಪುವನ್ನ ಬೆಳ್ಳಿತೆರೆ ಮೇಲೆ ಕಂಡು ಸಂತುಷ್ಟರಾಗಿದ್ದಾರೆ. ಈಗ ಈ ಸಂತಸಕ್ಕೆ ಹೊಸತೊಂದು ಸೇರ್ಪಡೆಯನ್ನ ಮಾನ್ಯಮುಖ್ಯಮಂತ್ರಿಗಳು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆಯೇ, ಕರ್ನಾಟಕ ಸರ್ಕಾರ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕನ್ನಡ ನಾಡಿನ ಪ್ರಜೆಗೆ ಸರ್ಕಾರದಿಂದ ಸಿಗಬಹುದಾದಂತ ಅತ್ಯಂತ ಹಿರಿಮೆಯ ಗೌರವ ‘ಕರ್ನಾಟಕ ರತ್ನ’ವನ್ನು […]