ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ರು ಕೂಡ ಅದ್ಯಾಕೋ ಬಿಗ್ ಸ್ಕ್ರೀನ್ ಅವರಿಗೆ ಯಶಸ್ಸು ತಂದುಕೊಡಲಿಲ್ಲ…ಆದರೆ ಚಂದನ್ ಅವರಿಗೆ ಕಿರುತೆರೆ ಎಂದಿಗೂ ಕೈ ಬಿಡಲಿಲ್ಲ ..

ಬಿಗ್ ಬಾಸ್ ನಿಂದ ಹೊರಬಂದ ನಂತರ ಸಾಕಷ್ಟು ಸ್ಪರ್ಧಿಗಳಿಗೆ ಸಿನಿಮಾಗಳಲ್ಲಿ ಆಫರ್ ಸಿಗುವುದು ಕಾಮನ್…ಅದೇ ರೀತಿ ಚಂದನ್ ಕೂಡ ಸಾಕಷ್ಟು ಆಫರ್ ಸಿಕಿತ್ತು… ಆದರೆ ಎಲ್ಲಾ ಕ್ವಾಲಿಟಿ ಇದ್ದರೂ ಕೂಡ ಸಿನಿಮಾದಲ್ಲಿ ಚಂದನ್ ಲಕ್ ಕೈ ಹಿಡಿಯಲಿಲ್ಲ… ಹಾಗಾಗಿ ಚಂದನ್ ಮರಳಿ ಕಿರುತೆರೆಗೆ ವಾಪಸಾದರು… ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಧಾರವಾಹಿಯಲ್ಲಿ ನಟಿಸುತ್ತಿರುವ ಚಂದನ್ ಇತ್ತೀಚೆಗಷ್ಟೇ ಐಷಾರಾಮಿಯ ಮನೆಯನ್ನ ಕೊಂಡುಕೊಂಡಿದ್ದಾರೆ ..

ನಟಿ ಕವಿತಾ ಗೌಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಇಬ್ಬರು ಕೂಡ ಕಿರುತೆರೆಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ… ಬೆಂಗಳೂರಿನ ಯುಬಿ ಸಿಟಿ ರಸ್ತೆಯಲ್ಲಿರುವ ಐಷಾರಾಮಿ ಫ್ಲ್ಯಾಟ್ ಅನ್ನು ಕೊಂಡುಕೊಂಡ ಚಂದನ್ ಈಗ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ .. ಇತ್ತೀಚೆಗಷ್ಟೇ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನ ರಿಜಿಸ್ಟರ್ ಮಾಡಿದ್ದು ಅದಕ್ಕೆ ಎವರೆಸ್ಟ್ ಸಿನೆಮಾಸ್ ಎಂದು ಹೆಸರಿಟ್ಟಿದ್ದಾರೆ ..ಇನ್ನು ಅದೇ ಸಂಸ್ಥೆ ಅಡಿಯಲ್ಲಿ ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಲಿದೆ …ಇದೆಲ್ಲದಕ್ಕೂ ಸಾಧ್ಯವಾಗಿತ್ತು ಕಿರುತೆರೆ ಎಂಬುದನ್ನ ಸ್ವತಃ ಚಂದನ್ ಅವರೇ ಹಂಚಿಕೊಂಡಿದ್ದಾರೆ…. ತಮ್ಮ ಬ್ಯಾನರ್ ರಿಜಿಸ್ಟ್ರೇಷನ್ ಮಾಡಿಸುವ ವಿಡಿಯೋನ ಶೇರ್ ಮಾಡಿರುವ ಚಂದನ್ ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಶುರು ಮಾಡಿ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದ್ದೆನೆ ಎಂದಿದ್ದಾರೆ… ಇನ್ನು ಚಿತ್ರಕ್ಕೆ ಈಗಾಗಲೇ ಟೈಟಲ್ ರಿಜಿಸ್ಟರ್ ಆಗಿದ್ದು ಅದನ್ನು ಕೂಡ ಸರ್ ಪ್ರೈಸ್ ಆಗಿ ರಿವಿಲ್ ಮಾಡಲಿದ್ದಾರಂತೆ …

Share via
Copy link
Powered by Social Snap