ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ.. ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋನಲ್ಲಿ ಸ್ನೇಹಿತರ ಗ್ಯಾಂಗ್ ನ ಕರೆದು ಅವರ ಹಿಂದಿನ ದಿನಗಳ ಕಷ್ಟ ಸುಖ ಹಾಗೂ ನೆನಪಿನಲ್ಲಿ ಉಳಿದಿರುವಂಥ ದಿನಗಳ ಬಗ್ಗೆ ಮಾತನಾಡುವುದೇ ಈ ಕಾರ್ಯಕ್ರಮದ ಉದ್ದೇಶ ..
ಈಗಾಗಲೇ ಮೂರ್ನಾಲ್ಕು ಎಪಿಸೋಡ್ ಗಳ ಪ್ರದರ್ಶನವಾಗಿರುವ ಗೋಲ್ಡನ್ ಗ್ಯಾಂಗ್ ಈಗ್ಯಾಕೋ ಹೆಸರಿಗೆ ತಕ್ಕಂತೆ ಕಾರ್ಯಕ್ರಮ ಪ್ರಸಾರವಾಗುತ್ತಿಲ್ಲ… ಎಲ್ಲೋ ಹಾದಿ ತಪ್ಪಿದ ರೀತಿ ಎನ್ನಿಸುತ್ತಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ
ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ಉದ್ದೇಶ ಸ್ನೇಹಿತರನ್ನು ಕರೆಸಿ ಮಾತನಾಡಿಸುವುದು ಆದರೆ ಅದು ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದಂತಹ ವೀಕೆಂಡ್ ವಿತ್ ರಮೇಶ್ ರೀತಿಯಲ್ಲೇ ಬರುತ್ತಿದೆಯೆಂದು ನೆಟ್ಟಿಗರ ಅಭಿಪ್ರಾಯ ವಾಗಿದೆ ..
ಆರಂಭದಲ್ಲಿ ಸ್ನೇಹಿತರನ್ನು ಕರೆಸಿ ನಂತರ ಅವರ ಮನೆಯವರು, ಸಿನೆಮಾದವರು,ತಂತ್ರಜ್ಞರು ಅವರ ಹೆಂಡತಿ ಹೀಗೆ ಸಾಕಷ್ಟು ಜನರನ್ನು ಕರೆಸಿ ಮಾತುಕತೆ ನಡೆಸುತ್ತಿರುವುದು ಹಾಗೂ ಅವರ ಶಾಲೆಯ ಗುರುಗಳನ್ನು ಕರೆಸಿ ಮಾತನಾಡಿಸುತ್ತಿರುವುದು ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ .
ಒಟ್ಟಾರೆ ಅದೇನೇ ಇರ್ಲಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ವಾರಾಂತ್ಯದಲ್ಲಿ ನೋಡೋದಕ್ಕೆ ಮಜವಾಗಿದೆ…ಎನ್ನುವುದು ಮತ್ತಷ್ಟು ಪ್ರೇಕ್ಷಕರ ಅಭಿಪ್ರಾಯವಾಗಿದೆ