ಇತ್ತೀಚಿನ ದಿನಗಳಲ್ಲಿ ಹಲವರ ಚಿತ್ರಗಳು OTT ಯಲ್ಲಿ ಬಿಡುಗಡೆಯಾಗುವುದು ಸಾಮಾನ್ಯ.ಸ್ಟಾರ್ ನಟರ ಸಿನಿಮಾಗಳೂ ಕೂಡ OTT ಯಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ ಕೋಟಿಗೊಬ್ಬ 3 ಚಿತ್ರ ಸಹ OTT ಯಲ್ಲಿ ರಿಲೀಸ್ ಆಗಲಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಈ ಚಿತ್ರ ಇದೀಗ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಅನಿವಾರ್ಯ ಕಾರಣಗಳಿಂದ ಇದೇ 23 ರಂದು ಒಟಿಟಿ ಯಲ್ಲಿ ತೆರೆಕಾಣಬೇಕಿದ್ದ ಸಿನಿಮಾ ಈಗ ನವೆಂಬರ್ 29 ರಂದು ಒಟಿಟಿ ಯಲ್ಲಿ ಬಿಡುಗಡೆಗೊಳ್ಳಲಿದೆ.