ಮೇಘಾ ಶೆಟ್ಟಿ… ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಅರೇ ಹೇಳದೇ ಕೇಳದೇ ಮೇಘಾ ಶೆಟ್ಟಿ ಹಸೆಮಣೆ ಏರುತ್ತಿದ್ದಾರಾ? ಯಾರಪ್ಪ ಹುಡುಗ ಎಂದು ಕನ್ ಫ್ಯೂಸ್ ಆಗಬೇಡಿ.ಯಾಕೆಂದರೆ ಮದುವೆಯೇನೂ ಆಗುತ್ತಿರುವುದು ನಿಜ. ಆದರೆ ಮದುವೆಯಾಗುತ್ತಿರುವವರು ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ.

ಅಕ್ಕನ ಮದುವೆಯ ಸಂಭ್ರಮದಲ್ಲಿ ಇರುವ ಮೇಘಾ ಶೆಟ್ಟಿ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹಂದಿ ಶಾಸ್ತ್ರದ ವಿಡಿಯೋ ಹಾಗೂ ಫೋಟೋಗಳನ್ನು ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ಸ್ವತಃ ಅನು ಸಿರಿಮನೆ ಪಾತ್ರಕ್ಕೆ ಮೇಕಪ್ ಮಾಡುವುದು ಅವರೇ ಎನ್ನುವುದು ವಿಶೇಷ. ವಿನೋದ್ ಜಿ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಸುಷ್ಮಾ. ಒಟ್ಟಿನಲ್ಲಿ ಈ ಸಂಭ್ರಮದ ಕ್ಷಣಕ್ಕೆ ಬಂಧುಮಿತ್ರರು, ಸ್ನೇಹಿತರು ಕೂಡಾ ಹಾಜರಾಗಿದ್ದು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.


- ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’.
- ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆಗೈದು ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪತಿ
- ಸೀರಿಯಲ್ ಸೆಟ್ನಿಂದ ಅನೂಪ್ ಭಂಡಾರಿಗೆ ಆಫರ್
- ದಿನಭವಿಷ್ಯ
- ಬೆತ್ತಲೆ ಸ್ನಾನ ಮಾಡಿಸಲು ಮುಂದಾದ ಪತಿ
- ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.
- ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’
- ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’.
- ಪ್ರಾದೇಶಿಕ ಭಾಷೆ ಕಲಿಯುತ್ತಿರುವ ಕಿರುತೆರೆಯ ರಾಧಾ ಮಿಸ್
- ನಟನೆಯಿಂದ ಬ್ರೇಕ್ ತೆಗೆದುಕೊಂಡ ನಿತ್ಯಾ ಮೆನನ್… ಕಾರಣ ಏನು ಗೊತ್ತಾ?

