ಪ್ರಸಿದ್ದ ಮಾಡೆಲ್ ಗುಂಗುನ್ ಉಪಾಧ್ಯಾಯ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ. ಉದಯಪುರದಿಂದ ಜೋಧ್ ಪುರಕ್ಕೆ ಆಗಮಿಸಿದ ಗುಂಗುನ್,ಅಲ್ಲಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.
ನಂತರ ತಮ್ಮ ತಂದೆಗೆ ಕಾಲ್ ಮಾಡಿದ ಈಕೆ ‘ಕೊನೆಯದಾಗಿ ನನ್ನ ಮುಖ ನೋಡಿಬಿಡಿ ಡ್ಯಾಡಿ.ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಅವರ ತಂದೆ ಮಾತನಾಡುವ ಮುನ್ನವೇ ಕಾಲ್ ಕಟ್ ಆಗಿದೆ.
ಇದರಿಂದ ಭಯಗೊಂಡ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಗಳು ಎಲ್ಲಿ ಉಳಿದುಕೊಂಡಿದ್ದಾಳೆ ಎಂಬ ಸುಳಿವು ಕೂಡ ಅವರಿಗೆ ಇರಲಿಲ್ಲ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಫೋನ್ ಟ್ರೇಸ್ ಮಾಡಿ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕಾಲು ಮತ್ತು ಎದೆಯ ಭಾಗದ ಮೂಳೆಗಳು ಮುರುದು ಹೋಗಿರುವ ಕಾರಣ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ವಿಪರೀತ ರಕ್ತಸ್ರಾವವಾಗಿದ್ದರಿಂದ ವೈದ್ಯರು ರಕ್ತ ಕೊಡುತ್ತಿದ್ದಾರೆ. ಆದರೆ ಈಗಲೇ ಏನು ಹೇಳುವುದು ಕಷ್ಟ ಎಂದಿದ್ದಾರೆ ವೈದ್ಯರು. ಗುಂಗುನ್ ಸಾಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಪ್ರಜ್ಞೆ ಬಂದರೆ ವಿಷಯ ತಿಳಿಯಬೇಕಿದೆ. ಈಕೆ ಈ ಭಾಗದಲ್ಲಿ ಖ್ಯಾತ ಮಾಡೆಲ್ ಎಂದು ಗುರುತಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.