ಬಾಲಿವುಡ್ ನಟಿ ಮೌನಿ ರಾಯ್ ಮೊನ್ನೆಯಷ್ಟೇ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವರಿಸಿದ್ದರು. ಇದೀಗ ಪತಿಯೊಂದಿಗೆ ಕಾಶ್ಮೀರದ ಗುಲ್ಮರ್ಗ್ ಗೆ ಹನಿಮೂನ್ ಗೆ ತೆರಳಿರುವ ಮೌನಿ ತಮ್ಮ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೌನಿಯ ಈ ಅವತಾರಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಮೌನಿ ಪೂಲ್ ಬಳಿ ನಿಂತುಕೊಂಡಿದ್ದ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು “ಚುಂಬನಗಳು ಸ್ನೋಫ್ಲೇಕ್ ಗಳಾಗಿದ್ದರೆ ನಾನು ನಿಮಗೆ ಹಿಮಪಾತವನ್ನು ಕಳುಹಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಪೋಸ್ಟ್ ನಲ್ಲಿ” ಬೇಬಿ ,ಹೊರಗೆ ತಂಪಾಗಿದೆ” ಎಂದು ಬರೆದುಕೊಂಡಿದ್ದಾರೆ.
ಕಿರುತೆರೆಯಲ್ಲಿ ದೇವೂನ್ ಕಿ ದೇವ್ ಮಹಾದೇವ್ , ನಾಗಿನ್ , ಕಸ್ತೂರಿ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರುವ ಮೌನಿ ರಾಯ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು.
ಗೋಲ್ಡ್ , ಮೇಡ್ ಇನ್ ಚೈನಾ ಚಿತ್ರಗಳಲ್ಲಿ ನಟಿಸಿರುವ ಮೌನಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿರುವ ಮೌನಿ ರಾಯ್ ಸದ್ಯ ಬೋಲ್ಡ್ ಅವತಾರದ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿದ್ದಾರೆ.