ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಜನವರಿ ತಿಂಗಳಲ್ಲಿ ತಮಗೆ ಹೆಣ್ಣು ಮಗು ಜನನವಾಗಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಇದೀಗ ಮೂರು ತಿಂಗಳ ಬಳಿಕ ತಮ್ಮ ಮುದ್ದು ಮಗಳ ಹೆಸರನ್ನು ಬಹಿರಂಗಗೊಳಿಸಿದ್ದಾರೆ ಪ್ರಿಯಾಂಕಾ ನಿಕ್ ದಂಪತಿ. ಅಂದ ಹಾಗೇ ಈ ದಂಪತಿ “ಮಾಲ್ತಿ ಮೇರಿ ಚೋಪ್ರಾ ಜೋನಸ್ ” ಎಂದು ಹೆಸರಿಟ್ಟಿದ್ದಾರೆ.
ಇನ್ನು ಸರೋಗಸಿ ಮೂಲಕ ಹೆಣ್ಣು ಮಗುವನ್ನು ಪ್ರಿಯಾಂಕಾ ನಿಕ್ ದಂಪತಿ ಪಡೆದಿದ್ದರು. ಜನವರಿ 15ರಂದು ರಾತ್ರಿ ಎಂಟು ಗಂಟೆಗೆ ಸ್ಯಾನ್ ಡಿಯಾಗೋ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಾಲ್ತಿ ಎನ್ನುವುದು ಸಂಸ್ಕೃತ ಮೂಲದ ಪದವಾಗಿದ್ದು ಇದಕ್ಕೆ ಹೂವಿನ ಸುವಾಸನೆ, ಬೆಳದಿಂಗಳು ಎಂಬರ್ಥವಿದೆ. ಮೇರಿ ಎಂದರೆ ಸಮುದ್ರದ ತಾರೆ, ಫ್ರೆಂಚ್ ನಲ್ಲಿ ಜೀಸಸ್ ನ ತಾಯಿ ಎಂಬರ್ಥವಿದೆ.
ಮಗಳ ಆಗಮನವಾದ ವಿಚಾರವನ್ನು ಜನವರಿ 22ರಂದು ಬಹಿರಂಗಗೊಳಿಸಿದ್ದು ಸರೋಗಸಿ ಮೂಲಕ ಮಗಳನ್ನು ಪಡೆದಿದ್ದೇವೆ ಎಂದು ಹೇಳಿದ್ದರು. ಮಗಳು ಜನಸಿ ಮೂರು ತಿಂಗಳು ಕಳೆದಿದ್ದರೂ ಎಲ್ಲಿಯೂ ಮಗಳ ಫೋಟೋವನ್ನು ಇವರು ಹಂಚಿಕೊಂಡಿರಲಿಲ್ಲ. ಇನ್ನು ಪ್ರಿಯಾಂಕಾ ಕುಟುಂಬದ ಕಡೆಗೆ ಗಮನ ಕೊಡಬೇಕಾಗಿರುವುದರಿಂದ ಪ್ರೈವೆಸಿ ಬೇಕು ಎಂದು ಹೇಳಿಕೊಂಡಿದ್ದರು.