ಕರಣ್ ಜೋಹರ್ ನಡೆಸಿ ಕೊಡುತ್ತಿರುವ ಕಾಫಿ ವಿತ್ ಕರಣ್ ಶೋ ನ ಏಳನೇ ಸೀಸನ್ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಕರಣ್ ಶೋ ಮರಳಿ ಬರುತ್ತಿಲ್ಲ ಎಂದು ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ಉಂಟುಮಾಡಿದ್ದರು. ನಂತರ ಹೊಸ ಘೋಷಣೆ ಮಾಡುವ ಮೂಲಕ ಶೋ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಿದ್ದರು. ಮೊದಲ ಸಂಚಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಕಾಣಿಸಿಕೊಳ್ಳಲಿದ್ದು ಮುಂದಿನ ವಾರದಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಪುಷ್ಪ ಖ್ಯಾತಿಯ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಪುಷ್ಪ ಸಿನಿಮಾದ ಮೂಲಕ ವೀಕ್ಷಕರ ಮನ ಸೆಳೆದಿರುವ ಈ ಜೋಡಿ ಮತ್ತೆ ಶೋ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈಗಾಗಲೇ ಶೋನ ತಂಡ ಈ ಇಬ್ಬರನ್ನೂ ಸಂಪರ್ಕಿಸಿದ್ದು ಈಗಾಗಲೇ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಸೌತ್ ನ ಪ್ರೇಕ್ಷಕರನ್ನು ಸೆಳೆಯುವಂತೆ ಶೋ ಬರಲಿದೆ. ಈ ಸೀಸನ್ ನ ಲಿಸ್ಟ್ ನೋಡಿ ವೀಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಕರಣ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. “ಕಾಫಿ ವಿತ್ ಕರಣ್ ಟಿವಿಯಲ್ಲಿ ಮರಳಿ ಬರುತ್ತಿಲ್ಲ. ಯಾಕೆಂದರೆ ಎಲ್ಲಾ ವಿಶೇಷ ಕಥೆಗಳು ಉತ್ತಮ ತಿರುವು ಹೊಂದಿದೆ. ಕಾಫಿ ವಿತ್ ಕರಣ್ ಸೀಸನ್ 7 ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಭಾರತದ ದೊಡ್ಡ ನಟರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಗೇಮ್ಸ್ ಇರಲಿದೆ , ಇಲ್ಲಿ ಪ್ರೀತಿ , ನಷ್ಟ ,ಕಳೆದೆರಡು ವರ್ಷಗಳಿಂದ ಎದುರಿಸಿದ ಕಷ್ಟಗಳ ಕುರಿತು ಸಂಭಾಷಣೆ ಇರಲಿದೆ” ಎಂದಿದ್ದಾರೆ.

Share via
Copy link
Powered by Social Snap