ಚಂದನವನದ “ಸಿಂಪಲ್ ನಟಿ” ಎಂದೇ ಜನಪ್ರಿಯತೆ ಪಡೆದಿರುವ ಶ್ವೇತಾ ಶ್ರೀವಾತ್ಸವ್ ಸಣ್ಣ ಗ್ಯಾಪ್ ನ ನಂತರ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಟನೆ ಮಾತ್ರವಲ್ಲದೇ ಸಮಾಜಸೇವೆಯಲ್ಲಿಯೂ ಸಿಂಪಲ್ ಸುಂದರಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಶ್ವೇತಾ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ದಯೆ ಒಂದು ಆಯ್ಕೆಯಾಗಿದೆ. ದಯೆ ಯಾವಾಗಲೂ ಮುಖ್ಯ. ಹೊಸ ಯೋಜನೆ, ಹೊಸ ಸ್ನೇಹ , ಹೊಸ ಪ್ರಾರಂಭ”ಎಂದು ತಮ್ಮ ಹೊಸ ಯೋಜನೆ ಕುರಿತು ತಿಳಿಸಿದ್ದಾರೆ.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅನ್ನ ದಾಸೋಹ ಮಾಡಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ತಮ್ಮ ಹೊಸ ಯೋಜನೆಯನ್ನು ತಿಳಿಸಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಚಂದನವನದಲ್ಲಿ ಬ್ಯುಸಿಯಾಗಿರುವ ಸಿಂಪಲ್ ಸುಂದರಿ ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್ಸ್” ಸಿನಿಮಾದಲ್ಲಿ ನಟಿಸುತ್ತಿದ್ದಾರೆ.