Man forces wife : ಉದ್ಯಮಿಯೊಬ್ಬರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಲೇಶ್ವರ ಜಲಪಾತದ ಕೆಳಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತ್ನಿಗೆ ಪೀಡಿಸಿದ ಘಟನೆಯೊಂದು ವರದಿಯಾಗಿದೆ.

ಮಹಾರಾಷ್ಟ್ರ : bath naked in public : ಗಂಡು ಮಗು ಬೇಕೆಂಬ ಆಸೆಯಿಂದ 38 ವರ್ಷದ ಉದ್ಯಮಿಯೊಬ್ಬರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಲೇಶ್ವರ ಜಲಪಾತದ ಕೆಳಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತ್ನಿಗೆ ಪೀಡಿಸಿದ ಘಟನೆಯೊಂದು ವರದಿಯಾಗಿದೆ. ಮಾಂತ್ರಿಕರೊಬ್ಬರು ಈ ರೀತಿ ಮಾಡಿದರೆ ಗಂಡು ಮಗು ಜನಿಸುತ್ತೆ ಎಂದು ಹೇಳಿದ್ದನ್ನು ನಂಬಿಕೊಂಡ ಉದ್ಯಮಿಯೊಬ್ಬರು ಪತ್ನಿಗೆ ಬೆತ್ತಲೆಯಾಗಿ ಜಲಪಾತದಲ್ಲಿ ಸ್ನಾನ ಮಾಡುವಂತೆ ಪೀಡಿಸಿದ್ದಾರೆ ಎನ್ನಲಾಗಿದೆ.
ಪತಿಯ ಕಾಟವನ್ನು ತಡಯಾಲಾರದ ಪತ್ನಿಯು ಭಾರತಿ ವಿದ್ಯಾಪೀಠ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಪತಿ, ಆತನ ತಂದೆ ಹಾಗೂ ಮಾಂತ್ರಿಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
2013ರಿಂದಲೇ ತನಗೆ ವರದಕ್ಷಿಣೆ ಹಾಗೂ ಗಂಡು ಮಗು ಬೇಕೆಂದು ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯು ಭಾರತಿ ವಿದ್ಯಾಪೀಠ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯು ನೀಡಿರುವ ದೂರಿನ ಪ್ರಕಾರ, ಆಕೆಯ ಪತಿ ಹಾಗೂ ಪೋಷಕರು ಆಕೆಯನ್ನು ಕೊಲ್ಹಾಪುರದ ಜಯಸಿಂಗ್ಪುರದಲ್ಲಿರುವ ಸ್ವಯಂಘೋಷಿತ ದೇವಮಾನವನ ಬಳಿ ಕರೆದೊಯ್ದಿದ್ದರು. ಆಕೆಯನ್ನು ಮಾಟ ಮಂತ್ರದ ಪ್ರಭಾವಕ್ಕೆ ಒಳಪಡಿಸಿದ ಮಾಂತ್ರಿಕ ಪೂಜೆ ಮಾಡುವಂತೆ ಮಹಿಳೆಯನ್ನು ಕೇಳಿದ್ದಾನೆ. ಮಾಂತ್ರಿಕ ಹೇಳಿಕೆಯಂತೆ ಶಿರೋಲ್ ಹಾಗೂ ಇಂದಾಪುರ ತಹಸಿಲ್ನ ಸುರ್ವಾದ್ ಗ್ರಾಮದಲ್ಲಿರುವ ಕಚೇರಿಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದೆಲ್ಲದರ ಬಳಿಕ ನನಗೆ ಜಲಪಾತದ ಕೆಳಗೆ ಸಾರ್ವಜನಿಕವಾಗಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ಈ ರೀತಿ ಮಾಡಿದರೆ ನಿನಗೆ ಗಂಡು ಮಗುವಾಗುತ್ತೆ ಎಂದು ಮಾಂತ್ರಿಕ ಹೇಳಿದ್ದಾನೆ ಎನ್ನಲಾಗಿದೆ.
ಇದು ಮಾತ್ರವಲ್ಲದೇ ಪತಿಯು ವ್ಯಾಪಾರದ ನೆಪವೊಡ್ಡಿ ತನ್ನ ಆಸ್ತಿಯನ್ನು ಅಡಮಾನವಿಟ್ಟು 75 ಲಕ್ಷ ರೂಪಾಯಿ ಸಾಲ ಪಡೆದಿದ್ದಾಳೆ. ಅಲ್ಲದೇ ನನ್ನ ಆಭರಣಗಳನ್ನು ಹೊತ್ತುಕೊಂಡು ಹೋಗಿದ್ದಾನೆ ಎಂದು ದೂರಿದ್ದಾರೆ.
ಪೊಲೀಸರು ಸೆಕ್ಷನ್ 498 ಎ, 323, 420 , 504, 406ನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದರ ಜೊತೆಯಲ್ಲಿ ಮಹಾರಾಷ್ಟ್ರದ ದುಷ್ಟ ಮತ್ತು ಅಘೋರಿ ಆಚರಣೆಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಆ್ಯಕ್ಟ್ಗಳ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

