ಮುಂದಿನ‌ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲ್ವಂತೆ ರಶ್ಮಿಕಾ

ಸಿನಿಮಾರಂಗದ ನ್ಯಾಷನಲ್ ಕ್ರಶ್ ಎಂದೇ ಪ್ರಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ…ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಗೆ ಹಾರಿದ ನಂತರ ಎಲ್ಲೆಲ್ಲೂ ರಶ್ಮಿಕಾ ಅವ್ರದ್ದೆ ಸುದ್ದಿ … ಇನ್ನು ರಶ್ಮಿಕಾ ಪಾಸಿಟಿವ್ ಆಗಿ ಮಾತನಾಡಿದ್ರೂ ಸುದ್ದಿ ನೆಗೆಟಿವ್ ಆಗಿ ಮಾತನಾಡಿದರು ಸುದ್ದಿ… ಟ್ರೋಲ್ ಮಾಡುವವರಂತೂ ರಶ್ಮಿಕಾ ಏನ್ ಮಾತಾಡ್ತಾರೆ ಅಂತನೆ ಕಾದಿರುತ್ತಾರೆ ..ಇನ್ನು ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರಶ್ಮಿಕಾ ತಾವು ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.. […]

ಮೂರು ವರ್ಷಗಳ ಪಯಣ ಮುಕ್ತಾಯವಾಯಿತು ಎಂದ ಕಿರುತೆರೆ ನಟ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ “ಮಿಥುನ ರಾಶಿ”ಯು ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಧಾರಾವಾಹಿಯಲ್ಲಿ ಮಿಥುನ್ ಪಾತ್ರದಲ್ಲಿ ಗಮನ ಸೆಳೆದಿದ್ದ ಸ್ವಾಮಿನಾಥನ್ ಅನಂತ್ ರಾಮನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಧಾರಾವಾಹಿಯ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. “ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ. ಎಂದಿಗೂ ಕೊನೆಗೊಳ್ಳದ ಅಪ್ಪುಗೆಗಳು , ಎಂದಿಗೂ ಹರಿಯುವ ಸಂತೋಷದ ಕಣ್ಣೀರು ಹಾಗೂ ಪುನರಾವರ್ತಿತ ವಿದಾಯಗಳೊಂದಿಗೆ ಮುಕ್ತಾಯವಾಯಿತು. ಮೂರು ವರ್ಷಗಳ ಪಯಣ ಈಗ ಕುಟುಂಬವನ್ನು ಮೀರಿದ ಸ್ನೇಹಿತರೊಂದಿಗೆ ಅಂತ್ಯಗೊಂಡಿದೆ” ಎಂದು ಬರೆದುಕೊಂಡಿದ್ದಾರೆ […]

ಜೀ ಕನ್ನಡದಲ್ಲಿ ‘ಡ್ರಾಮಾ’ ಆಡಿಸಲಿರೋ ರಚಿತಾ ರಾಮ್

ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋಗಳದ್ದು ವಿಶೇಷ ಪಾತ್ರ. ಹಾಗೇ ಈ ರಿಯಾಲಿಟಿ ಶೋಗಳಲ್ಲಿ ಜೀ ಕನ್ನಡ ವಾಹಿನಿಯದು ಒಂದು ವಿಶೇಷ ಸ್ಥಾನ. ತಮ್ಮ ವಿಭಿನ್ನ ರಿಯಾಲಿಟಿ ಶೋಗಳು ಹಾಗು ಅದರ ನಿರ್ವಹಣೆಯಿಂದ ಕರುನಾಡ ಜನರ ಮನದಲ್ಲಿ ಸಧೃಡವಾಗಿ ನೆಲೆಸಿದ್ದಾರೆ. ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿ ರಿ ಗ ಮ ಪ ಇವೆ ಮುಂತಾದವು. ಇದೀಗ ಇವರ ಖ್ಯಾತ ಶೋ ‘ಡ್ರಾಮಾ ಜೂನಿಯರ್ಸ್’ ನ ಯಶಸ್ಸಿಗೆ ಹೊಸ ಬಣ್ಣ ತುಂಬೋ ಬರದಲ್ಲಿದ್ದಾರೆ ಜೀ ಕನ್ನಡ. ಮಾಸ್ಟರ್ ಆನಂದ್ […]

ದಾಖಲೆ ಸೃಷ್ಟಿಸಿದ ಎಡವಟ್ಟು ರಾಣಿ… ಅದೇನು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನು ಇಷ್ಟಪಡದವರಿಲ್ಲ. ಎಡವಟ್ಟು ಲೀಲಾ ಹಾಗೂ ಪರ್ಫೆಕ್ಟ್ ಎಜೆ ಜೋಡಿ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಇಂತಿಪ್ಪ ಹಿಟ್ಲರ್ ಕಲ್ಯಾಣದ ಎಟವಟ್ಟು ಲೀಲಾ ಹೆಸರು ಮಲೈಕಾ ವಸುಪಾಲ್. ಮೂಲತಃ ದಾವಣಗೆರೆಯವರಾದ ಮಲೈಕಾ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಥಿಯೇಟರ್ ನಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಲೈಕಾ ಅವರ ನಟನಾ ಕೆರಿಯರ್ ಗೆ ಮನೆಯವರೆಲ್ಲರ ಪ್ರೋತ್ಸಾಹ ಇದೆ. ದಾವಣಗೆರೆಯ ಬೆಡಗಿ ಹಲವು ಆಡಿಷನ್ ಗಳ ನಂತರ ಸೆಲೆಕ್ಟ್ […]

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್

ಕ್ರೇಜಿಸ್ಟಾರ್ ರವಿಚಂದ್ರನ್ ಸದ್ಯ ಯಾವುದೇ ಸಿನಿಮಾಗಳನ್ನ ಬಿಟ್ಟು ಕಿರುತೆರೆ ಕಡೆ ಗಮನ ಹರಿಸುತ್ತಿದ್ದಾರೆ…ಕೋವಿಡ್ ಮುನ್ನ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿಕೊಟ್ಟಿರುವ ರವಿಚಂದ್ರನ್ ಸದ್ಯ ರಿಯಾಲಿಟಿ ಶೋ ನತ್ತ ಮುಖ ಮಾಡಿದ್ದಾರೆ.. ಹೌದು ಇದೇ ಮೊದಲ ಬಾರಿಗೆ ರವಿಚಂದ್ರನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ … ಜೀ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಜಡ್ಜ್ ಆಗಿ ಭಾಗಿಯಾಗಲಿದ್ದಾರೆ… ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ವಿಜಯ ರಾಘವೇಂದ್ರ, ಟಿ ಎನ್ ಸೀತಾರಾಂ, ಯೋಗರಾಜ್ ಭಟ್, ಲಕ್ಷ್ಮೀ ತೀರ್ಪುಗಾರರಾಗಿ ಭಾಗಿಯಾಗಿದ್ದರು… […]

ತೂಕ ಇಳಿಸಲು ಟಿಪ್ಸ್ ಕೊಟ್ಟ ಬೆಣ್ಣೆ ನಗರಿ ಬೆಡಗಿ… ಅದೇನು ಗೊತ್ತಾ?

ಇಂದಿನ ಆಧುನಿಕ ಯುಗದಲ್ಲಿ ತೂಕ ಇಳಿಸುವಿಕೆ ತುಂಬಾ ಕಷ್ಟದ ಕೆಲಸ. ಇನ್ನು ಹೀರೋಯಿನ್ ಗಳು ಸದಾ ಫಿಟ್ ಆಗಿ ಕಾಣಲು ಪ್ರಯತ್ನಿಸುತ್ತಲೇ ಇರುತ್ತಾರೆ. ಡಯಟ್ , ಪ್ರೊಟೀನ್ ಶೇಕ್ ಮುಂತಾದವನ್ನು ತಯಾರಿಸಿ ಕುಡಿಯುತ್ತಾರೆ. ಚಂದನವನದ ಬೆಡಗಿ ಅದಿತಿ ಪ್ರಭುದೇವ ತೂಕ ಇಳಿಸಲು ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಕೆಲ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಮೊದಲನೆಯದು ನಿಂಬೆ ಮತ್ತು ಜೇನುತುಪ್ಪ. ಬೆಚ್ಚಗಿನ ನೀರಿಗೆ ಒಂದು ಹನಿ ನಿಂಬೆರಸ ಒಂದು […]

ಶಾಕುಂತಲೆಯಾಗಿ ಸದ್ದು ಮಾಡುತ್ತಿರುವ ಸುಕೃತಾ ನಾಗ್…

ಬಾಲಕಲಾವಿದೆಯಾಗಿ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಫೇಮಸ್ ಆಗಿದ್ದು ಅಂಜಲಿಯಾಗಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ತಂಗಿ ಅಂಜಲಿ ಆಗಿ ಕರುನಾಡಿನ ಮನೆ ಮನ ಗೆದ್ದ ಹುಡುಗಿ ಸುಕೃತಾ ನಾಗ್ ಈಗ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಆಗಿ ಮೋಡಿ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಜೀವ ತುಂಬಿರುವ ಸುಕೃತಾ ಅವರ ಹೊಸ ಲುಕ್ ಗೆ ಪ್ರೇಕ್ಷಕ ಪ್ರಭು ಈಗಾಗಲೇ ಫಿದಾ ಆಗಿದ್ದಾಗಿದೆ. ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ಸುಕೃತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ […]

ಶ್ರೀಸಾಯಿ ಆಂಜನೇಯ ಚಿತ್ರ ಪ್ರೊಡಕ್ಷನ್ ಹೌಸ್ ಗೆ ಒಂದು ವರ್ಷ… ಸಂತಸ ಹಂಚಿಕೊಂಡ ರಕ್ಷ್

ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ನಟಿಸುತ್ತಿರುವ ನಟ ರಕ್ಷ್ ಈಗ ಸಂಭ್ರಮದ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣವೂ ಇಲ್ಲಿದೆ! ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿ ರಕ್ಷ್ ಭಡ್ತಿ ಪಡೆದಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ. ಇದೀಗ ನಿರ್ಮಾಪಕರಾಗಿ ಒಂದು ವರ್ಷ ಪೂರೈಸಿರುವ ರಕ್ಷ್ ಈಗ ಯಶಸ್ಸಿನ ಸಡಗರದಲ್ಲಿದ್ದಾರೆ. “ಶ್ರೀ ಸಾಯಿ ಆಂಜನೇಯ ಚಿತ್ರ” ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ರಕ್ಷ್ ಶುರು ಮಾಡಿದ್ದು, ಅದರ ಮುಖಾಂತರವೇ ಗಟ್ಟಿಮೇಳ ಧಾರಾವಾಹಿಯನ್ನು ರಕ್ಷ್ ಅವರು ನಿರ್ಮಾಣ ಮಾಡುತ್ತಿದ್ದರು. ನಿರ್ಮಾಪಕರಾಗಿ […]

ಬೋಲ್ಡ್ ಲುಕ್ ಮೂಲಕ ಸದ್ದು ಮಾಡುತ್ತಿದ್ದಾರೆ ಮೀರಾ ಜಾಸ್ಮಿನ್

ಮಲೆಯಾಳಂ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಮೀರಾ ಜಾಸ್ಮಿನ್ ಕೂಡಾ ಒಬ್ಬರು. ಮಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದ ಮೀರಾ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದರು. ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಈಗ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಜನವರಿ 20ರಂದು ಇನ್ಸ್ಟಾಗ್ರಾಂ ಖಾತೆ ತೆರೆದಿರುವ ನಟಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಾತ್ರವಲ್ಲ ಖಾತೆ ತೆರೆದ ಮೊದಲ ದಿನವೇಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದ ಮೀರಾ ಜಾಸ್ಮಿನ್ ಸಾಕಷ್ಟು […]

ಕಾಮಿಡಿ ಕಿಲಾಡಿ ಮನೆಗೆ ಬರಲಿದೆ ಪುಟ್ಟ ಕಂದಮ್ಮ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ‌ ಜನಮಾನಸದಲ್ಲಿ ಉಳಿದುಕೊಂಡಿದ್ದ ಕಲಾವಿದ ಜಿಜಿ…ಅವ್ರಂತೆಯೇ ಕಾಮಿಡಿ‌ಕಿಲಾಡಿಯಲ್ಲಿ ಅಭಿನಯದ ಮೂಲಕ‌ ಮ್ಯಾಜಿಕ್ ಮಾಡಿದ‌ ಕಲಾವಿದೆ ವಿದ್ಯಾಶ್ರೀ…ಕಾಮಿಡಿ‌ಕಿಲಾಡಿ ಮೂಲಕವೇ ಪರಿಚಯವಾಗಿ ನಂತ್ರ ಮದುವೆ ಮಾಡಿಕೊಂಡ ಈ ಜೋಡಿ ಈಗಗುವಿನ ನಿರೀಕ್ಷೆಯಲ್ಲಿದೆ… ಹೌದು ಗೋವಿಂದೇ ಗೌಡ ಹಾಗೂ ವಿದ್ಯಶ್ರೀ ಇನ್ನು ಕೆಲವೇ ದಿನಗಳಲ್ಲಿ ತಂದೆ- ತಾಯಿಯಾಗಲಿದ್ದಾರೆ…ಇತ್ತೀಚಿಗಷ್ಟೇ ಈ ಜೋಡಿ ಮೆಟರ್ನೆಟಿ ಫೋಟೋ ಶೂಟ್ ಮಾಡಿಸೋ ಮೂಲಕ ಕೆಲವೇ‌ದಿನದಲ್ಲಿ ಪೋಷಕರಾಗುವ ಸಂತಸವನ್ನ ಹಂಚಿಕೊಂಡಿದ್ದಾರೆ… ಹಳ್ಳಿ ಸೊಗಡಿನಲ್ಲಿ ದೇಸಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿರೋದು ಎಲ್ಲರ ಗಮನ ಸೆಳೆಯುತ್ತಿದೆ…ಸದ್ಯ […]