ನಮ್ಮನೆ ಯುವರಾಣಿಗೆ ಸಾವಿರ ಸಂಭ್ರಮ.. ಸಂತಸ ಹಂಚಿಕೊಂಡ ರಘು ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯು ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ಇತ್ತೀಚೆಗೆ ಧಾರಾವಾಹಿ ತಂಡ ಈ ಸಂಭ್ರಮವನ್ನು ಸಂತಸದಿಂದಲೇ ಆಚರಿಸಿದೆ. ಇದರ ಜೊತೆಗೆ ನಮ್ಮನೆ ಯುವರಾಣಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಆಗಿ ಅನಟಿಸುತ್ತಿರುವ ರಘು ಗೌಡ ಈ ಸಂತಸದ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ತಮ್ಮ ಎಂಟ್ರೀ ಸೀನ್ ನ ವಿಡಿಯೋ ಹಂಚಿಕೊಂಡಿರುವ ರಘು ಗೌಡ “ನಮ್ಮನೆ ಯುವರಾಣಿ ಧಾರಾವಾಹಿ ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ಸಾಕೇತ್ […]

ನೆಗೆಟಿವ್ ಪಾತ್ರದಲ್ಲಿ ನಟನೆಗೆ ಅವಕಾಶ ಜಾಸ್ತಿ – ಅನಿರುದ್ಧ್ ವೇದಾಂತಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಗೆಳೆಯ ಪ್ರಖ್ಯಾತ್ ಆಗಿ ಅಭಿನಯಿಸುತ್ತಿರುವ ಅನಿರುದ್ಧ್ ವೇದಾಂತಿ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. ಶ್ವೇತಾಳ ಆದೇಶದಂತೆ ಕೆಲಸ ಮಾಡುವ ಪ್ರಖ್ಯಾತ್ ಪಾತ್ರ ಧಾರಾವಾಹಿಯುದ್ದಕ್ಕೂ ಇರಲಿದೆಯಾ ಅಥವಾ ಕೇವಲ ಅದು ಅತಿಥಿ ಪಾತ್ರವೋ ಎಂಬುದು ತಿಳಿಯಬೇಕಾಗಿದೆ. ಸತತ ಮೂರನೇ ಬಾರಿ ಖಳನಾಯಕ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಅನಿರುದ್ಧ್ “ನೆಗಟಿವ್ ರೋಲ್ ಮಾಡವುದಕ್ಕೆ ನಿಜಕ್ಕೂ ಒಂದು ರೀತಿಯ ಖುಷಿ. ಮುಖ್ಯವಾಗಿ ನೆಗೆಟಿವ್ ಪಾತ್ರ ನೋಡಿದ ವೀಕ್ಷಕರು ಯಾಕೆ ನಾಯಕ ನಾಯಕಿಗೆ […]

ಮಾಜಿ ಪತ್ನಿಗೆ ಗೆಲುವನ್ನು ಅರ್ಪಿಸಿದ ಅಮೀರ್ ಖಾನ್.. ಯಾಕೆ ಗೊತ್ತಾ?

ಬಾಲಿವುಡ್ ನಟ ಅಮೀರ್ ಖಾನ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ್ದು ಲಗಾನ್ ಸಿನಿಮಾ. ಆ ಸಿನಿಮಾ ಬಿಡುಗಡೆಯಾಗಿ ಇಪ್ಪತ್ತೊಂದು ವರ್ಷ ಕಳೆದಿದೆ. ತನ್ನನ್ನು ಸೂಪರ್ ಸ್ಟಾರ್ ಮಾಡಿರುವ ಈ ಚಿತ್ರ ಇಪ್ಪತ್ತೊಂದು ವರ್ಷ ಪೂರೈಸಿದ ಸಂತಸದಲ್ಲಿರುವ ಅಮೀರ್ ಖಾನ್ ಈ ಗೆಲುವನ್ನು ತನ್ನ ಮಾಜಿ ಪತ್ನಿ ರೀನಾ ದತ್ತ ಅವರಿಗೆ ಅರ್ಪಿಸಿದ್ದಾರೆ. ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡಿರುವ ಲಗಾನ್ ಸಿನಿಮಾ ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಸಿನಿಮಾ ಎಂದರೆ ತಪ್ಪಾಗಲಾರದು. ಜೂನ್ 15, 2001 […]

ಬಾಡಿಶೇಮಿಂಗ್ ನ ವಿರುದ್ದ ಗುಡುಗಿದ ಕಿರುತೆರೆಯ ಪಾಚು

ಪಾಪಾ ಪಾಂಡು ಪಾಚು ಎಂದೇ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಶಾಲಿನಿ ಸತ್ಯನಾರಾಯಣ ಅವರ ನಿಜವಾದ ಹೆಸರು ಏನೆಂಬುದೇ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಪಾಚು ಆಲಿಯಾಸ್ ಶ್ರೀಮತಿ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಶಾಲಿನಿಯನ್ನು ಜನ ಇಂದಿಗೂ ನೆನಪಿಸಿಕೊಳ್ಳುವುದು ಅದೇ ಪಾತ್ರದ ಮೂಲಕ. ಧಾರಾವಾಹಿ ಮುಗಿದು ದಶಕಗಳು ಕಳೆದರೂ ಅವರ ಪಾತ್ರ ಜನರ ಮನಸ್ಸಿಂದ ಮಾಸಿಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ಮೋಡಿ ಮಾಡಿದೆ. ನಟನೆ ಮಾತ್ರವಲ್ಲದೇ ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಶಾಲಿನಿ ಸತ್ಯನಾರಾಯಣ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ […]

ಪಾತ್ರ ಯಾವುದೇ ನೀಡಿ, ನಟಿಸಲು ಸುಷ್ಮಾ ರೆಡಿ

ಸುಷ್ಮಾ ಶೇಖರ್ ಮತ್ತೆ ಮರಳಿದ್ದಾರೆ… ಅರೇ ಯಾವ ಸುಷ್ಮಾ ಎಂದು ಕನ್ ಫ್ಯೂಸ್ ಆಗ್ತಿದ್ದೀರಾ? ಹಾಗಿದ್ರೆ ಇಲ್ಲಿ ಕೇಳಿ… ಕಿರುತೆರೆ ವೀಕ್ಷಕರ ಪಾಲಿನ ಮನೆ ಮಗಳು, ನಿಮ್ಮ ನೆಚ್ಚಿನ ಬೆಳ್ಳಿ ಮತ್ತೆ ಕಿರುತೆರೆಯತ್ತ ಮರಳಿದ್ದಾಳೆ. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಾಯಕಿ ಬೆಳ್ಳಿ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸುಷ್ಮಾ ಶೇಖರ್ ಇದೀಗ ನೇಹಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ಕಥೆಯನ್ನೊಳಗೊಂಡ ಗಿಣಿರಾಮ ಧಾರಾವಾಹಿಯಲ್ಲಿ ನಾಯಕ ಶಿವರಾಮ ನ ಮಾಜಿ […]

ಜೊತೆಜೊತೆಯಲಿ ನನ್ನ ಜೀವನ ಬದಲಾಯಿಸಿದ ಪಯಣ – ಮಾನಸ ಮನೋಹರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದೆ. ಯಶಸ್ವಿ 700 ಸಂಚಿಕೆ ಪೂರೈಸುತ್ತಿರುವ ಜೊತೆಜೊತೆಯಲಿ ಧಾರಾವಾಹಿಯು ಸಾವಿರ ಸಂಚಿಕೆಯತ್ತ ದಾಪುಗಾಲು ಹಾಕುತ್ತಿದೆ. ಈ ಸಂತಸದ ವಿಚಾರವನ್ನು ಮಾನಸ ಮನೋಹರ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರ ಪರ್ಸನಲ್ ಅಸಿಸ್ಟೆಂಟ್ ಮೀರಾ ಆಗಿ ಅಭಿನಯಿಸುತ್ತಿರುವ ಮಾನಸ ಮನೋಹರ್ ಅವರು ಈ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ್ದಾರೆ. ಮೀರಾ ಪಾತ್ರದ ಫೋಟೋ ಹಂಚಿಕೊಂಡಿರುವ ಮಾನಸ ಮನೋಹರ್ “ಜೊತೆ ಜೊತೆಯಲಿ […]

ನಿರೂಪಣೆಯಿಂದ ನಟನೆವರೆಗೆ ಮಂಗಳಗೌರಿ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ನಾಯಕಿ ಮಂಗಳಗೌರಿಯಾಗಿ ಅಭಿನಯಿಸಿ ಕರುನಾಡಿನಾದ್ಯಂತ ಕೋಟ್ಯಾಂತರ ಮನಸ್ಸು ಸೆಳೆದಿರುವ ಕಾವ್ಯಶ್ರೀ ಒಂದು ಕಾಲದಲ್ಲಿ ನಿರೂಪಕಿಯಾಗಿದ್ದರು ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಿರುತೆರೆ ವೀಕ್ಷಕರ ಮನೆ ಮಗಳಾಗಿರುವ ಕಾವ್ಯಶ್ರೀಗೆ ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು ಎಂಬುದೊಂದೇ ಕನಸು. ಕಿರುತೆರೆ, ಹಿರಿತೆರೆಯಲ್ಲಿ ಮಿನುಗಬೇಕು ಎಂಬ ಮಹಾದಾಸೆ ಹೊಂದಿದ್ದ ಕಾವ್ಯಶ್ರೀಗೆ ಮನೆಯವರ ಪ್ರೋತ್ಸಾಹ ಇರಲೇ ಇಲ್ಲ. ಅದಕ್ಕೆ ಮನೆಯಲ್ಲಿ ಇದ್ದ ಸಾಂಪ್ರದಾಯಿಕ ವಾತಾವರಣವೇ ಕಾರಣ. ಪತ್ರಿಕೋದ್ಯಮ ಪದವಿ ಪಡೆದಿರುವ ಈಕೆಗೆ ಯಾವಾಗಲೂ ಬಣ್ಣದ ಲೋಕದ್ದೇ ಕನವರಿಕೆ. ನಟಿಯಾಗುವ ಅವಕಾಶ […]

ಡಾ. ದೇವ್ ಪಾತ್ರಕ್ಕೆ ವಿದಾಯ ಹೇಳಿದ ವಿಜಯ್ ಕೃಷ್ಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಕನ್ನಡತಿಯೂ ಒಂದು. ವಿಭಿನ್ನ ಕಥಾ ಹಂದರದ ಜೊತೆಗೆ ಉತ್ತಮ ಕಲಾವಿದರುಗಳನ್ನೊಳಗೊಂಡ ಕನ್ನಡತಿ ಧಾರಾವಾಹಿಯು ಕಡಿಮೆ ಅವಧಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟಿದೆ. ಇಂತಿಪ್ಪ ಕನ್ನಡತಿ ಯಲ್ಲಿ ಇದೀಗ ಮತ್ತೊಂದು ಪಾತ್ರದ ಬದಲಾವಣೆ ಆಗಿದೆ. ಹೌದು, ಈಗಾಗಲೇ ಕನ್ನಡತಿಯಲ್ಲಿ ಸಾನಿಯಾ ಪಾತ್ರಧಾರಿಯ ಬದಲಾವಣೆ ಆಗಿರುವುದು ವೀಕ್ಷಕರಿಗೆ ಗೊತ್ತೇ ಇದೆ. ಇದೀಗ ದೇವ್ ಪಾತ್ರವೂ ಬದಲಾವಣೆಯಾಗಿದ್ದು ವಿಜಯ್ ಕೃಷ್ಣ ಅವರು ಕಾರಣಾಂತರಗಳಿಂದ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ರಂಗಭೂಮಿ ನಟನಾಗಿ […]

ಬಾಲ್ಯದ ಕನಸು ನನಸಾಗಿದೆ – ರಕ್ಷಿತ್ ಅರಸ್ ಗೋಪಾಲ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಮಣಿಗಳು ಧಾರಾವಾಹಿಯಲ್ಲಿ ನಾಯಕ ಶಿವು ಆಲಿಯಾಸ್ ಗೌರವ್ ಆಗಿ ಅಭಿನಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್ ಚಿಕ್ಕ ವಯಸ್ಸಿನಿಂದಲೂ ನಟನಾಗಬೇಕು, ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡ ಹುಡುಗ. ಪೋಷಕ ಪಾತ್ರಗಳ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಇದೀಗ ನಾಯಕನಾಗಿ ಭಡ್ತಿ ಪಡೆದು ಗುರುತಿಸಿಕೊಂಡಿರುವ ರಕ್ಷಿತ್ ಅರಸ್ ಗೋಪಾಲ್ ಸಾಂಸ್ಕೃತಿಕ ನಗರಿ ಮೈಸೂರಿನವರು. ನಟನಾಗಬೇಕು ಎಂಬ ಒಂದೇ ಉದ್ದೇಶ ಇದ್ದುದರಿಂದಲೋ ಏನೋ, ಪದವಿ ಮುಗಿದದ್ದೇ ತಡ, ಮಂಡ್ಯ ರಮೇಶ್ […]

ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಡಗಿನ ಕುವರಿ

ಮಜಾಟಾಕೀಸ್ ನ ರಾಣಿಯಾಗಿ ಕಿರುತೆರೆ ಎಂಬ ಪುಟ್ಟ ಪ್ರಪಂಚದಲ್ಲಿ ದೊಡ್ಡ ಹವಾವನ್ನೇ ಸೃಷ್ಟಿ ಮಾಡಿದ್ದ ಕೊಡಗಿನ ಬೆಡಗಿ ಶ್ವೇತಾ ಚೆಂಗಪ್ಪ ಎರಡು ವರ್ಷಗಳ ಬಳಿಕ ಮತ್ತೆ ಮರಳಿದ್ದಾರೆ. ಮಜಾಟಾಕೀಸ್ ನ ರಾಣಿ ಪಾತ್ರದ ಮೂಲಕ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಮಜಾ ನೀಡಿ ನಗೆಗಡಲಲ್ಲಿ ತೇಲಿಸುತ್ತಿದ್ದ ಶ್ವೇತಾ ಗರ್ಭಿಣಿಯಾದ ಕಾರಣ ಮಜಾ ಟಾಕೀಸ್ ನಿಂದ ಹೊರಬಂದಿದ್ದರು. ನಂತರ ಮಗ ಜಿಯಾನ್ ಅಯ್ಯಪ್ಪ ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ಶ್ವೇತಾ ಮಗನ ಸಲುವಾಗಿ ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ […]