ಕಿರುತೆರೆ “ಸುಂದರಿ” ಯ ನಟನಾ ಜರ್ನಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಂದರಿ ಧಾರಾವಾಹಿಯಲ್ಲಿ ನಾಯಕಿ ಸುಂದರಿಯಾಗಿ ಅಭಿನಯಿಸುತ್ತಿರುವ ಐಶ್ವರ್ಯಾ ಪಿಸ್ಸೆ ಕನ್ನಡ ಮಾತ್ರವಲ್ಲದೇ ಕಸ್ತೂರಿಯಾಗಿ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಪುನರ್ ವಿವಾಹ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಐಶ್ವರ್ಯಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಪುನರ್ ವಿವಾಹ ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದ ಈಕೆ ಮುಂದೆ ಸ್ಟಾರ್ ಸುವರ್ಣ ವಾಹಿನಿಯ ಅನುರೂಪ ಧಾರಾವಾಹಿಯಲ್ಲಿ ನಾಯಕಿ ಮೇಘನಾ ಆಗಿ ಕಾಣಿಸಿಕೊಂಡರು. ಮುದ್ದಾದ ನಟಬೆಯ ಮೂಲಕ […]
ವಿಭಿನ್ನ ಪ್ರಯತ್ನದತ್ತ ಮುಖ ಮಾಡಿದ ರಂಗಿತರಂಗ ಬೆಡಗಿ

ರಂಗಿತರಂಗ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ನಾರಾಯಣ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ರಂಗಿತರಂಗದ ನಂತರ ಯೂ ಟರ್ನ್, ಬಿಬಿ5, ಕಾಫಿ ತೋಟ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಅಸತೋಮಾ ಸದ್ಗಮಯ, ಮುಂದಿನ ನಿಲ್ಡಾಣ, ಶಿವಾಜಿ ಸುರತ್ಕಲ್, ಚೇಸ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ರಾಧಿಕಾ ನಾರಾಯಣ್ ಮನೋಜ್ಞ […]
ಸದ್ದು ಮಾಡುತ್ತಿದೆ ಕನ್ನಡದ ಹೊಸ ವೆಬ್ ಸೀರೀಸ್.

ಒಟಿಟಿ ಪರದೆಗಳ ಮೇಲೆ ಕನ್ನಡದ ಸೀರೀಸ್ ಗಳು ಕಡಿಮೆ ಇದೆ ಅನ್ನುವುದು ಝೆಡ್ ಎಲ್ಲ ಕನ್ನಡಿಗನ ಒಂದು ದೂರು. ನಮ್ಮಲ್ಲಿ ಒಟಿಟಿಗೇ ಮಾಡುವಂತ ಸಿನಿಮಾಗಳು ಅಪರೂಪ, ಇನ್ನು ವೆಬ್ ಸೀರೀಸ್ ಗಳನ್ನೂ ಕೇಳುವಂತೆಯೇ ಇಲ್ಲ, ಎಲ್ಲೋ ಬೆರಳೆಣಿಕೆಯಷ್ಟು ಕನ್ನಡದ ಸ್ವಂತ ವೆಬ್ ಸೀರೀಸ್ ಗಳು ಲೆಕ್ಕಕ್ಕೆ ಸಿಗುತ್ತವೆ. ಸದ್ಯ ಕನ್ನಡದಲ್ಲಿ ಒಂದೆರಡು ವೆಬ್ ಸೀರೀಸ್ ಗಳು ಸದ್ದು ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ ಬಿಡುಗಡೆ ಆದಂತಹ ‘ಬೈ ಮಿಸ್ಟೇಕ್’ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಒಂದೇ ಫ್ಲಾಟ್ ನಲ್ಲಿ ವಾಸವಿರುವ ಇಬ್ಬರೂ […]
‘ವೀರಲೋಕ’ ಎಂಬ ಪುಸ್ತಕಪ್ರಪಂಚ; ರಮೇಶ್ ಅರವಿಂದ್, ಸುದೀಪ್ ಸಾಥ್.

ನಮ್ಮ ದೇಶ, ನಮ್ಮ ಜನರು ಭಾಷೆಯ ಭೇದಭಾವವಿಲ್ಲದೆ ಬೆಳೆಯುತ್ತಿದ್ದೇವೆ. ಆದರೂ ಅಲ್ಲಲ್ಲಿ ಕೆಲ ಸಂಧರ್ಭಗಳಲ್ಲಿ ಭಾಷೆಗಳ ಭೇಧಭಾವ ಕಂಡೇ ಕಾಣುತ್ತಿದೆ. ಅದು ಸಿನಿಮಾದಲ್ಲಾಗಲಿ ಸಾಹಿತ್ಯದಲ್ಲಾಗಲಿ. ಈಗಂತೂ ಕನ್ನಡಿಗರೇ ಕನ್ನಡ ಸಾಹಿತ್ಯವನ್ನು, ಪುಸ್ತಕಗಳನ್ನು ಅನುಭವಿಸುತ್ತಿಲ್ಲ, ಗೌರವುಸುತ್ತಿಲ್ಲ ಎಂಬ ದೂರುಗಳನ್ನು ಸ್ವತಃ ಕನ್ನಡಿಗರೇ ನೀಡುತ್ತಿದ್ದೇವೆ.ಈಗ ಎಲ್ಲೆಡೆ ಓದುಗರು ಕಡಿಮೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳಿಗೆ ಹೊಸ ಮಾರುಕಟ್ಟೆಯನ್ನೇ ಸೃಷ್ಟಿ ಮಾಡಿ, ಕನ್ನಡ ಸಾಹಿತ್ಯದ ಪ್ರಾಮುಖ್ಯತೆಯನ್ನು, ವೈಭವವನ್ನೂ ಎಲ್ಲೆಡೆ ಪರಿಚಯಿಸುವುದಕ್ಕೆ ಹೊಸ ಪ್ರಯತ್ನವೊಂದು ಆರಂಭವಾಗಿದೆ. ಅದುವೇ ‘ವೀರಲೋಕ’. ಈ ಬೆಳವಣಿಗೆಗೆ ಕನ್ನಡ […]
ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಒಲವಿನ ನಿಲ್ದಾಣದಲ್ಲಿ ಮಲೆನಾಡ ಹುಡುಗಿ ತಾರಿಣಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಡುತ್ತಿರುವ ಅಮಿತಾ ಕುಲಾಲ್ ಕರಾವಳಿ ಕುವರಿ. ಮಲೆನಾಡ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರಲಿರುವ ಅಮಿತಾ ಕುಲಾಲ್ ಅವರು ಕನ್ನಡ ಕಿರುತೆರೆಗೆ ಹೊಸಬರು ಹೊರತು ಕಿರುತೆರೆಗಲ್ಲ! ಈಗಾಗಲೇ ಜೀ ತೆಲುಗು ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ರೌಡಿ ಗಾರಿ ಪೆಳ್ಳಂ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿರುವ ಅಮಿತಾ ಕುಲಾಲ್ ಈಗ ತಾರಿಣಿಯಾಗಿ […]
ರೂಪದರ್ಶಿಯಾಗಿ ಕರ್ನಾಟಕದ ಕ್ರಶ್

ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿಯಾಗಿ ನಟನಾ ಜಗತ್ತಿಗೆ ಪರಿಚಿತರಾದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕರ್ಣಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲೂ ತನ್ನ ನಟನಾ ಕಂಪನ್ನು ಪಸರಿಸಿರುವ ಮಂಜಿನ ನಗರಿ ಚೆಲುವೆ ಈಗ ಮಗದೊಂದು ಸಿಹಿಸುದ್ದಿ ನೀಡಿದ್ದಾರೆ. ಅರೇ, ಅದೇನಂತೀರಾ.. ಇಲ್ಲಿ ಕೇಳಿ. ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರ ಸಾಲಿಗೆ ಸೇರಿರುವ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ಸಿನಿಮಾ ಕ್ಷೇತ್ರದ ಪಾಕ್ಷಿಕ ಫಿಲಂಫೇರ್ ನ ಮುಖಪುಟದ ರೂಪದರ್ಶಿಯಾಗಿ ಮೋಡಿ ಮಾಡುತ್ತಿದ್ದಾರೆ. […]
ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

ಲೈಫು ಇಷ್ಟೇನೆ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಂಯುಕ್ತಾ ಹೊರನಾಡು ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ. ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಸಂಯುಕ್ತಾ ಹೊರನಾಡು ಇದೀಗ ಸೌಲಭ್ಯ ವಂಚಿತ ಶಾಲಾ ಮಕ್ಕಳಿಗೆ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಹೌದು, ಈಗಾಗಲೇ ರಾಜ್ಯಾದ್ಯಂತ ಶಾಲೆಗಳು ಶುರುವಾಗಿದೆ. ಎರಡು ವರ್ಷಗಳಿಂದ ಶಾಲೆಗೆ ಹೋಗದೇ ಮನೆಯಲ್ಲಿಯೇ ಇರುವ ಮಕ್ಕಳೆಲ್ಲ ಇದೀಗ ಸಂತಸದಿಂದ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಇದರ ನಡುವೆ ಮನೆಯಲ್ಲಿನ […]
ಕಿರುತೆರೆಯ ತೇಜಸ್ವಿನಿ ನಟನೆಗೆ ಬಂದುದು ಬೆಳ್ಳಿತೆರೆಯಿಂದ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಂಚಿಕೆಯೂ ರೋಚಕ ತಿರುವುಗಳಿಂದ ಕೂಡಿದ್ದು ನಾಳಿನ ಸಂಚಿಕೆಯಲ್ಲಿ ಏನಾಗಬಹುದು ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿರುತ್ತದೆ. ಇದೀಗ ಅಗಸ್ತ್ಯನ ತಂಗಿ ಅಶ್ವಿನಿ ಎನ್ನುವ ಹೊಸ ಪಾತ್ರದ ಆಗಮನವೂ ಆಗಿದ್ದು ಮುಂದಿನ ದಿನಗಳಲ್ಲಿ ಕಥೆಗೆ ಮಗದಷ್ಟು ತಿರುವುಗಳು ದೊರೆತರೆ ಆಶ್ಚರ್ಯವೇನಿಲ್ಲ. ನಾಯಕ ನಾಯಕಿಯ ಹೊರತಾಗಿ ನನ್ನರಸಿ ರಾಧೆಯ ಕೇಂದ್ರವಾಗಿದ್ದ ಖಳನಾಯಕಿ ಲಾವಣ್ಯಾ ಆಗಿ ನಟಿಸುತ್ತಿದ್ದ ತೇಜಸ್ವಿನಿ ಪ್ರಕಾಶ್ […]
ಎಕ್ಸ್ ಕ್ಯೂಸ್ ಮೀ.. ಸುದೀರ್ಘ ಗ್ಯಾಪ್ ನಂತರ ಮರಳುತ್ತಿದ್ದಾರೆ ಸುನೀಲ್ ರಾವ್

ಬಾಲ ಕಲಾವಿದ ಆಗಿ ಮೋಡಿ ಮಾಡಿದ್ದ ಸುನೀಲ್ ರಾವ್ ಅವರಿಗೆ ಬ್ರೇಕ್ ನೀಡಿದ್ದು ಎಕ್ಸ್ ಕ್ಯೂಸ್ ಮಿ ಸಿನಿಮಾ. ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸುನೀಲ್ ರಾವ್ ಮತ್ತೆ ನಟನೆಯ ಮೂಲಕ ಸದ್ದು ಮಾಡುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಸುನೀಲ್ ರಾವ್ ತುರ್ತು ನಿರ್ಗಮನ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನದ ವಿಭಿನ್ನ ಕಥಾಹಂದರವನ್ನೊಳಗೊಂಡ ತುರ್ತು ನಿರ್ಗಮನ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರು ಅದನ್ನು ಮೆಚ್ಚಿಕೊಂಡಿದ್ದರು. ಇನ್ನು […]
ಖಳನಾಯಕರಾಗಿ ಅಬ್ಬರಿಸಲಿದ್ದಾರೆ ಜೆಕೆ

ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಆಲಿಯಾಸ್ ಜಯಕೃಷ್ಣ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಹ್ಯಾಂಡ್ ಸಮ್ ಹುಡುಗನ ಹೆಸರು ಜಯರಾಂ ಕಾರ್ತಿಕ್. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಜಯರಾಂ ಕಾರ್ತಿಕ್ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ಅಣ್ಣನಾಗಿ ಕಾಣಿಸಿಕೊಂಡರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಜಯರಾಂ ಕಾರ್ತಿಕ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಜನ […]

