ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ

ಕೆ.ಎಸ್. ರಾಮ್ ಜೀ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಿನಾದ್ ಹರಿತ್ಸ ತ್ರಿಶೂಲ್ ಪಾತ್ರದಿಂದ ಹೊರಬಂದಿರುವುದು ಸೀರಿಯಲ್ ವೀಕ್ಷಕರಿಗೆ ಬೇಸರ ನೀಡಿದೆ. ಇದ್ದಕ್ಕಿದ್ದಂತೆ ನಿನಾದ್ ಅವರು ತನ್ನ ಪಾತ್ರಕ್ಕೆ ವಿದಾಯ ಹೇಳಿದ್ದು ಕಾರಣ ಎಲ್ಲೂ ಬಹಿರಂಗಗೊಳಿಸಿಲ್ಲ. ಬಾಲಕಲಾವಿದ ಆಗಿ ಕಿರುತೆರೆ ಪಯಣ ಆರಂಭಿಸಿದ ನಿನಾದ್ […]

ಸೈನಿಕರ ಜೊತೆಗೆ ಕಾಲ ಕಳೆದ ಬಾಲಿವುಡ್ ನಟಿ

ನಟಿ ರಿಚಾ ಚಡ್ಡಾ ಇತ್ತೀಚೆಗೆ ಲಡಾಕ್ ಇಂಟರ್ ನ್ಯಾಷನಲ್ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದಾರೆ. ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಸೈನಿಕರ ಜೊತೆ ಕಾಲ ಕಳೆಯುವ ಅವಕಾಶ ಅವರಿಗೆ ದೊರಕಿದೆ. ರಿಚಾ ಸೈನಿಕರೊಂದಿಗೆ ಕೆಲವು ದಿನಗಳು ಕಳೆದಿದ್ದಾರೆ. ಈ ಅನುಭವವನ್ನು ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.“ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಯುವ ಸೈನಿಕರೊಂದಿಗೆ ಮರೆಯಲಾರದ ದಿನಗಳನ್ನು ಕಳೆದಿದ್ದೇನೆ. ಇದೊಂದು ಜೀವನದಲ್ಲಿ ಮರೆಯಲಾಗದ ಅನುಭವ” ಎಂದಿದ್ದಾರೆ ರಿಚಾ. “ಈ […]

ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಕಾಫಿ ನಾಡಿನ ಕುವರಿ ಆರೋಹಿ ನೈನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿಯ ಅತ್ತಿಗೆ ಶೋಭಾ ಆಗಿ ಅಭಿನಯಿಸುತ್ತಿದ್ದ ಚಿಕ್ಕಮಗಳೂರಿನ ಚೆಲುವೆ ಇದೀಗ ಖಡಕ್ ವಿಲನ್! ತಾಯಿಯಂಥ ಮನಸ್ಸಿನ ಅತ್ತಿಗೆಯೆಲ್ಲಿ , ಖಡಕ್ ವಿಲನ್ ಎಲ್ಲಿ? ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಖಳನಾಯಕಿ ಸಾನಿಯಾ ಆಗಿ ಮೋಡಿ ಮಾಡುತ್ತಿರುವ ಆರೋಹಿ ನೈನಾ ಗೆದ್ದಿದ್ದಾರೆ. ಹೌದು, ಕನ್ನಡತಿ ಧಾರಾವಾಹಿಯಲ್ಲಿ ನಟಿ ರಮೋಲಾ ಅವರು ಸಾನಿಯಾ ಆಗಿ ಅಭಿನಯಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ಅವರು ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗಕ್ಕೆ ಬಂದವರೇ ಚಿಕ್ಕಮಗಳೂರಿನ […]

ಪರಮ್ ವಾಹ್ ಸ್ಟುಡಿಯೋಸ್ ಸೇರಲಿದ್ದಾರೆ ‘ನಮ್ಮನೆ ಯುವರಾಣಿ’.

‘ನಮ್ಮನೆ ಯುವರಾಣಿ’ ಧಾರವಾಹಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ಅದು. ಆರಂಭದಿಂದ ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ಈ ಧಾರಾವಾಹಿ ಪಡೆದಿದೆ. ಇದರಲ್ಲಿನ ನಟರು ಸಹ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ನಾಯಕಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಅಮರ್ ಅವರು ಕನ್ನಡ ಕಿರುತೆರೆಯ ಅಚ್ಚುಮೆಚ್ಚು. ಸದ್ಯ ಅವರು ಹಿರಿತೆರೆಯಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುವತ್ತ ಸಾಗುತ್ತಿದ್ದಾರೆ. ಕನ್ನಡಿಗರ ಕಣ್ಮಣಿಯಾಗಿರುವ ಅಂಕಿತಾ, ಸದ್ಯ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಸಂಸ್ಥೆಯಾದ ‘ಪರಮ್ […]

ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿದ ಅಗ್ನಿಸಾಕ್ಷಿ ಸನ್ನಿಧಿ

ವಿಕ್ರಾಂತ್ ರೋಣ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ಉಂಟು ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಎಲ್ಲರ ಬಾಯಲ್ಲೂ ಅದೇ ಹಾಡು. ಇನ್ನು ರೀಲ್ಸ್ ಮಾಡುವವರಿಗಂತೂ ಹೇಳುವುದೇ ಬೇಡ. ರೀಲ್ಸ್ ಎಂದ ಮೇಲೆ ಅದರಲ್ಲಿ ರಾ ರಾ ರಕ್ಕಮ್ಮ ಹಾಡು ಇರಲೇಬೇಕು. ಇಲ್ಲದಿದ್ದರೆ ರೀಲ್ಸ್ ಮಾಡಿದ್ದ ಸಾರ್ಥಕವಿಲ್ಲ ಎನ್ನುವಷ್ಟರ ಮಟ್ಟಿಗೆ ಆ ಹಾಡು ಹವಾ ಸೃಷ್ಟಿ ಮಾಡಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದು ಅದು ಸಕತ್ ವೈರಲ್ ಆಗಿತ್ತು. ಇದೀಗ ಕಿರುತೆರೆಯ ಗುಳಿಕೆನ್ನೆಯ ಚೆಲುವೆಯ […]

ಮಾಯಾಂಗನೆಯಾಗಿ ಕಿರುತೆರೆಗೆ ಮರಳಿದ ಐಶ್ವರ್ಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ತಂಗಿ ಐಶ್ವರ್ಯ ಆಗಿ ಅಭಿನಯಿಸುತ್ತಿರುವ ಐಶ್ವರ್ಯ ಶಿಂಧೋಗಿ ಹಿರಿತೆರೆ ಮೂಲಕ ನಟನಾ ಪಯಣ ಶುರು ಮಾಡಿದ ಚೆಲುವೆ. ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಐಶ್ವರ್ಯ ಶಿಂಧೋಗಿ ಬಾಲನಟಿ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿರುವ ಐಶ್ವರ್ಯ ಗೆ ಆಗ ಕೇವಲ ಒಂಭತ್ತು ವರ್ಷ. ಮುಂದೆ ಓದಿನ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿರುವ […]

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ

ನಟ ವಿನಯ್ ಗೌಡ ಕನ್ನಡ ಪ್ರೇಕ್ಷಕರಿಗೆ ಹೊಸಬರೇನಲ್ಲ. ಪೌರಾಣಿಕ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವದಲ್ಲಿ ನಟಿಸಿರುವ ವಿನಯ್ ಕಿರುತೆರೆಯ ಖ್ಯಾತ ನಟರಲ್ಲಿ ಒಬ್ಬರು. “ಹರ ಹರ ಮಹಾದೇವ ಧಾರಾವಾಹಿ ನನ್ನ ಬದುಕಿನ ತಿರುವು. ನಾವು ಮನೆಯಲ್ಲಿ ಕಾಲಭೈರವೇಶ್ವರನನ್ನು ಪೂಜಿಸುತ್ತೇವೆ. ನಾನು ಕೈಯಲ್ಲಿ ಕಾಲಭೈರವೇಶ್ವರನ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಆದರೆ ಶಿವನ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಆಕಸ್ಮಿಕ. ನನಗೆ ಶಿವ ದೇವರ ಪಾತ್ರ ಸಿಕ್ಕಿದ್ದು ಆಶೀರ್ವಾದ” ಎಂದು ಹೇಳಿದ್ದಾರೆ. ಶಿವನ ಪಾತ್ರ ಮಾಡುವಾಗ ಇದ್ದ ಸವಾಲುಗಳ ಬಗ್ಗೆ […]

ತೆಲುಗು ಕಿರುತೆರೆಗೆ ಕಾಲಿಟ್ಟ ಕನ್ನಡದ ಹ್ಯಾಂಡ್ ಸಮ್ ನಟ ಇವರೇ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕ ಮಿಥುನ್ ಆಗಿ ಅಭಿನಯಿಸಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಸ್ವಾಮಿನಾಥನ್ ಅನಂತರಾಮನ್. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸ್ವಾಮಿನಾಥನ್ ಗೂ ಮೊದಲಿನಿಂದಲೂ ನಟನಾಗಬೇಕು ಎಂಬ ಹಂಬಲ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆ. ಅದೇ ಕಾರಣದಿಂದ ದೊರೆತ ಕೆಲಸಕ್ಕೆ ವಿದಾಯ ಹೇಳಿ ನಟನೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಈತ ಹೆಣ್ ಮಕ್ಕಳ ಪಾಲಿನ ಚಾಕಲೇಟ್ ಹೀರೋ. ಪದವಿ ಓದುವ ಸಮಯದಲ್ಲಿಯೇ ಟೆಲಿಫಿಲಂಗಳಲ್ಲಿ […]

ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ಶ್ವೇತಾ ಚೆಂಗಪ್ಪ

ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಹಾಗೂ ಕಿರಣ್ ಅಪ್ಪಚ್ಚು ದಂಪತಿಗಳ ಪುತ್ರ ಜಿಯಾನ್ ಅಯ್ಯಪ್ಪನಿಗೆ ಈಗ ಮೂರರ ಹರೆಯ. ಇನ್ ಸ್ಟಾಗ್ರಾಂನಲ್ಲಿ ತನ್ನದೇ ಆದ ಪೇಜ್ ಹೊಂದಿರುವ ಪುಟ್ಟ ಕಂದನ ಫಾಲೋವರ್ಸ್ ಗಳ ಸಂಖ್ಯೆ 25000 ಕ್ಕಿಂತಲೂ ಹೆಚ್ಚು! ಅಂದ ಹಾಗೇ ಮೂರು ವರ್ಷದ ಪೋರ ಹೊಸ ಜರ್ನಿ ಶುರು ಮಾಡಲಿದ್ದಾನೆ. ಜಿಯಾನ್ ಅಯ್ಯಪ್ಪ ಶಾಲೆಗೆ ಸೇರಿದ್ದು ಜೀವನದ ಹೊಸ ಪಯಣವನ್ನು ಆರಂಭಿಸಿದ್ದೇನೆ. ಮಕ್ಕಳು ಶಾಲೆಗೆ ಹೋಗುವ ಮೊದಲು ಸಾಂಪ್ರದಾಯಿಕವಾಗಿ ಅಕ್ಷರಭ್ಯಾಸ ಮಾಡುವ ಕ್ರಮವಿದ್ದು ಶ್ವೇತಾ ಚೆಂಗಪ್ಪ […]

ದೊರೆಸಾನಿ ರೂಪಿಕಾ ಮುಡಿಗೇರಿದ ಪ್ರತಿಷ್ಟಿತ ಪ್ರಶಸ್ತಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಕಯಲ್ಲಿ ನಾಯಕಿ ದೀಪಿಕಾ ಆಗಿ ನಟಿಸುತ್ತಿರುವ ರೂಪಿಕಾ ಅವರು ಸಾಧನೆಗೆ ಗರಿಮೆಯೊಂದು ದೊರೆತಿದೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ಸದ್ಯ ನಾಯಕಿಯಾಗಿ ಮೋಡಿ ಮಾಡುತ್ತಿರುವ ರೂಪಿಕಾ ಆರ್ಯಭಟ ಅಂತರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗಷ್ಟೇ ತಾವು ಆರ್ಯಭಟ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ರೂಪಿಕಾ”ಚಿತ್ರರಂಗದಲ್ಲಿ ನಟಿಯಾಗಿ ನಾನು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಬಾರಿಯ ೪೭ನೇ ಸಾಲಿನ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಪ್ರಶಸ್ತಿಯನ್ನು […]