ಲವರ್ ಬಾಯ್ ಆಗಿ ತೆರೆ ಮೇಲೆ ಬರಲಿದ್ದಾರೆ ಕಿರುತೆರೆಯ ರಣಧೀರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ಖಳನಾಯಕ ರಣಧೀರ ಆಗಿ ಅಭಿನಯಿಸುತ್ತಿರುವ ರಾಮ್ ಪವನ್ ಶೇಟ್ ಅವರು ಇದೀಗ ಲವರ್ ಬಾಯ್ ಆಗಿ ರಂಜಿಸಲು ತಯಾರಾಗಿದ್ದಾರೆ. ಇಷ್ಟು ದಿನಗಳ ಕಾಲ ಖಡಕ್ ವಿಲನ್ ಆಗಿ ತೆರೆ ಮೇಲೆ ಅಬ್ಬರಿಸುತ್ತಿದ್ದ ರಾಮ್ ಪವನ್ ಶೇಟ್ ಇದೇ ಮೊದಲ ಬಾರಿಗೆ ಲವರ್ ಬಾಯ್ ಆಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಅಂದ ಹಾಗೇ ರಾಮ್ ಪವನ್ ಶೇಟ್ ಲವರ್ ಬಾಯ್ ಆಗಿ ನಟಿಸುತ್ತಿರುವುದು ಕಿರುತೆರೆಯಲ್ಲಿ ಅಲ್ಲ, […]

ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಸಿನಿಮಾ ಕಲಾವಿದರು ರೀಲ್ಸ್ ಮಾಡುವುದು ಹಳೆಯ ವಿಷಯ. ನಟಿಮಣಿಯರಂತೂ ಹೇಳುವುದು ಬೇಡ, ಆಗಾಗ ತಮ್ಮ ನೆಚ್ಚಿನ ಹಾಡಿಗೋ, ಡೈಲಾಗ್ ಗೋ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ನಟರ ವಿಷಯಕ್ಕೆ ಬಂದರೆ ಅವರು ಇದರಲ್ಲಿ ಕಾಣಿಸಿಕೊಳ್ಳವುದು ಕಡಿಮೆಯೇ ಅರ್ಥಾತ್ ಬಹಳ ಅಪರೂಪ. ಇದೀಗ ನಿಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರು ರೀಲ್ಸ್ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುದೀಪ್ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ಸಕತ್ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ […]

ಹರ್ಷಿಕಾ ಪೂಣಚ್ಚಗೆ ಅಭಿನಂದನೆ ಸಲ್ಲಿಸಿದ ಜೂಹಿ ಚಾವ್ಲಾ… ಯಾಕೆ ಗೊತ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಿನಿಮಾಗಳ ಪೈಕಿ ಪ್ರೇಮಲೋಕವೂ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿಯಾಗಿ ಅಭಿನಯಿಸಿದ್ದ ಪ್ರೇಮಲೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿದ್ದು ಇದೀಗ ಇತಿಹಾಸ. ಸಿನಿಮಾ ಒಂದು ರೀತಿಯಲ್ಲಿ ಹಿಟ್ ಆದರೆ ಅದರ ಹಾಡುಗಳಂತೂ ಎವರ್ ಗ್ರೀನ್. ಈಗಲೂ ಪ್ರೇಮಲೋಕದ ಹಾಡುಗಳನ್ನು ಸಂಗೀತ ಪ್ರಿಯರು ಗುನುಗುನಿಸದೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಆ ಸಿನಿಮಾ, ಅದರ ಹಾಡುಗಳು ಜನಪ್ರಿಯತೆ ಪಡೆದಿತ್ತು. ಅಂದ ಹಾಗೇ […]

ಹೊಸ ಜರ್ನಿ ಶುರು ಮಾಡಿದ ನಟ ರಕ್ಷ್

ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ ವಸಿಷ್ಠ ಆಗಿ ನಟಿಸುತ್ತಿರುವ ರಕ್ಷ್ ಅವರು ಪ್ರೊಡಕ್ಷನ್ ಹೌಸ್ ಶುರು ಮಾಡಿ ಒಂದು ವರುಷ ಕಳೆದಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ರಕ್ಷ್ ಸ್ಟುಡಿಯೋವೊಂದನ್ನು ಕೂಡಾ ಓಪನ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ಸ್ಟುಡಿಯೋವನ್ನು ಶಾಸ್ತ್ರೋಕ್ತವಾಗಿ ರಕ್ಷ್ ದಂಪತಿ ಉದ್ಘಾಟನೆ ಮಾಡಿದ್ದಾರೆ. ಗಟ್ಟಿ ಮೇಳ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿರುವ ರಕ್ಷ್ ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿದ್ದರು. ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಎನಿಸಿಕೊಂಡಿರುವ ಈ ಧಾರಾವಾಹಿಯ ಪ್ರತಿ ಸಂಚಿಕೆಯೂ ಕುತೂಹಲಕಾರಿಯಾಗಿ […]

ಮದುವೆ ಪೋಟೋಗಳ ಮೂಲಕ ಸದ್ದು ಮಾಡಿದ ನಿನಾದ್ ಹರಿತ್ಸ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳತಿ ರಮ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯ ನಂತರ ಈ ಜೋಡಿ ಬಹಳ ಸುಂದರವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಮುದ್ದು ಜೋಡಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಗುರು ಹಿರಿಯರ, ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಿನಾದ್ ಹಾಗೂ ರಮ್ಯಾ ಸದ್ದಿಲ್ಲದೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ […]

ಹುಟ್ಟುಹಬ್ಬಕ್ಕೆ ಹಲವು ಚಿತ್ರಗಳ ಹೆಸರು ಸೇರಿಸಿದ ನವೀನ್ ಶಂಕರ್.

2018ರ ‘ಗುಲ್ಟೂ’ ಚಿತ್ರ ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸೈಬರ್ ಕ್ರೈಂ ಗೆ ಸಂಭಂದಿಸಿದ ಈ ಚಿತ್ರ ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಜನಾರ್ಧನ್ ಚಿಕ್ಕಣ್ಣ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ನವೀನ್ ಶಂಕರ್, ಸೋನು ಗೌಡ, ರಂಗಾಯಣ ರಘು, ಅವಿನಾಶ್, ಪವನ್ ಕುಮಾರ್ ಮುಂತಾದ ನಟರು ಬಣ್ಣ ಹಚ್ಚಿದ್ದರು. ನಾಯಕನಟನ ಪಾತ್ರವಹಿಸಿದ್ದ ನವೀನ್ ಶಂಕರ್ ಅವರು ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಮೊದಲ ಚಿತ್ರದಿಂದಲೇ ಗುರುತಿಸುವಂತೆ ಮಾಡಿದ್ದರು. ‘ಗುಲ್ಟೂ’ ಚಿತ್ರದ […]

ರವಿ ಬಸ್ರೂರ್ ಕೈಚಳಕದಲ್ಲಿ ಮೂಡಿಬಂತು ವೀರಭದ್ರ ದೇವರ ಬೆಳ್ಳಿ ಬಾಗಿಲು

ರವಿ ಬಸ್ರೂರು ಸಿನಿಮಾ ಮಂದಿಗೆ ತೀರಾ ಪರಿಚಿತ ಹೆಸರು. ಕೆಜಿಎಫ್ ಸಿನಿಮಾದ ಮೂಲಕ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರವಿ ಬಸ್ರೂರು ತಮ್ಮ ಸ್ವಂತ ಪರಿಶ್ರಮದ ಮೂಲಕವೇ ಗುರುತಿಸಿಕೊಂಡಿರುವ ಅತ್ಯದ್ಭುತ ಪ್ರತಿಭೆ. ಸಂಗೀತ ನಿರ್ದೇಶಕ ಆಗಿ ಸದ್ಯ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಪಟ್ಟಿರುವ ರವಿ ಅವರು ಇಂದು ಯಶಸ್ಸನ್ನು ಸಾಧಿಸಿದ ಸಂತಸದಲ್ಲಿದ್ದಾರೆ. ಇನ್ನು ಇದರ ಜೊತೆಗೆ ಅವರೊಬ್ಬರು ಶಿಲ್ಪಿ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ಹೌದು, […]

ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿರುವ ಇಬ್ಬನಿ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಭಾಗವಹಿಸಿದ್ದ ಹಿರಿತೆರೆ ನಟ ಪ್ರಮೋದ್ ಶೆಟ್ಟಿ ಹಾಗೂ ಕಿರುತೆರೆ ನಟಿ ಸುಪ್ರೀತಾ ಶೆಟ್ಟಿ ಮಗಳು ಇಬ್ಬನಿ ಶೆಟ್ಟಿ ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಪುಟ್ಟ ಹುಡುಗಿ ಇಬ್ಬನಿ ತನ್ನ ಕೂದಲನ್ನು ದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ಮಾಡಿರುವ ಈ ಪುಟಾಣಿ ಉಳಿದ ಹೆಣ್ಮಕ್ಕಳಿಗೂ ಮಾದರಿಯಾಗಿ ಬಿಟ್ಟಿದ್ದಾಳೆ. ಮಾತ್ರವಲ್ಲ […]

ಮುಕ್ತಾಯಗೊಂಡ ಸೂಪರ್ ಹಿಟ್ ಸೀರಿಯಲ್…

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಘರ್ಷ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ವಿಭಿನ್ನ ಕಥಾಹಂದರದ ಸಂಘರ್ಷ ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣಕ್ಕೆ ವಿದಾಯ ಹೇಳಿದೆ. ಸಂಘರ್ಷದಲ್ಲಿ ನಾಯಕಿ ಜಿಲ್ಲಾಧಿಕಾರಿ ಇಂದಿರಾ ಆಗಿ ಅಭಿನಯಿಸಿರುವ ತೇಜಸ್ಬಿನಿ ಶೇಖರ್ ಅವರು ಧಾರಾವಾಹಿಯ ಕುರಿತು ಭಾವುಕ ಪತ್ರ ಹಂಚಿಕೊಂಡಿದ್ದಾರೆ. “ಸಂಘರ್ಷವು ಕೇವಲ ಒಂದು ಸ್ಮರಣೀಯ ಪ್ರಯಾಣ ಅಲ್ಲ ಅದು ಒಂದು ಉತ್ತಮವಾದ ಜೀವನಾನುಭವ. ಇಂತಹ ಸುಂದರ ಪ್ರಯಾಣವು ಕೊನೆಗೊಂಡಿದೆ ಎಂದು ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ. ನಮ್ಮ ‘ಸಂಘರ್ಷ’ ಧಾರವಾಹಿ ತಂಡವು […]

ತಾಯ್ತನದ ಹೊಸ ಹಂತಕ್ಕೆ ಉತ್ಸಾಹುಕಳಾಗಿದ್ದೇನೆ – ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. “ನನ್ನ ಮಗು ದೊಡ್ಡದಾಗಿದೆ. ಹೀಗಾಗಿ ನಾರ್ಮಲ್ ಹೆರಿಗೆಗೆ ಹೋಗುವುದು ಅಪಾಯವಾಗಿದೆ ಎಂದು ಹೇಳಿದೆ. ಸಿಸೇರಿಯನ್ ಆಗಿತ್ತು ,ನನ್ನ ಕುಟುಂಬ ಸರಿಯಾದ ದಿನ ಹಾಗೂ ಸಮಯವನ್ನು ಆಯ್ಕೆ ಮಾಡಿದೆ. ಗುರುವಾರ ಮುಂಜಾನೆ ಅವನಿಗೆ ಜನ್ಮ ನೀಡಿದೆ. ತಾಯ್ತನದ ಹೊಸ ಹಂತಕ್ಕೆ ಉತ್ಸುಕಳಾಗಿದ್ದೇನೆ. ಮಗನನ್ನು ಉತ್ತಮವಾಗಿ ತಿಳಿಯಲು ಕಾಯಲು ಸಾಧ್ಯವಿಲ್ಲ” ಎಂದಿದ್ದಾರೆ. ಸಂಜನಾ ಅವರಿಗೆ ಅವರ ಸ್ನೇಹಿತರ ಹಾಗೂ ಹೈದರಾಬಾದ್ ನ ಗೈನಕಾಲಜಿಸ್ಟ್ ಡಾ. […]