ಈಕೆ ನಟಿ ಮಾತ್ರವಲ್ಲ… ರೂಪದರ್ಶಿಯೂ ಹೌದು

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ವಿನಲ್ಲಿ ಬಡ್ಡಿ ಬಂಗಾರಮ್ಮ ಮಗಳು ವಸು ಆಗಿ ಅಭಿನಯಿಸುತ್ತಿರುವ ನಿಶಾ ಹೆಗಡೆ ಬಾಲಕಲಾವಿದೆಯಾಗಿ ಕಿರುತೆರೆಯಲ್ಲಿ ಮಿಂಚಿದ ಪ್ರತಿಭೆ ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರಾವಾಹಿಯಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದ ನಿಶಾ ಮುಂದೆ ಓದಿನ ಸಲುವಾಗಿ ನಟನೆಗೆ ವಿರಾಮ ಹಾಕಿದರು. ಥಿಯೇಟರ್ ಸ್ಟಡೀಸ್ ನಲ್ಲಿ ಪದವಿ ಪಡೆದಿರುವ ನಿಶಾ ಮಾಡೆಲಿಂಗ್ ಜಗತ್ತಿನಲ್ಲಿಯೂ ಸದ್ದು ಮಾಡಿದ ಸುಂದರಿ. ಒಂದಷ್ಟು […]
ಪರಭಾಷೆಯ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಚಂದನವನದ ಚೆಲುವೆಯರು

ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಮೋಡಿ ಮಾಡಿದ ಚೆಲುವೆಯರು ಇಂದು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದ ಆಫರ್ಸ್ ಪಡೆದುಕೊಳ್ಳುತ್ತಿದ್ದಾರೆ. ಭಾಷೆಯ ಗಡಿ ಮೀರಿ ಬೇರೆ ಬೇರೆ ಭಾಷೆಗಳಲ್ಲಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪರಭಾಷೆಯ ಸಿನಿರಂಗದಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ. ಆಶಿಕಾ ರಂಗನಾಥ್ – ಪರಭಾಷೆಗಳಿಂದ ಆಫರ್ಸ್ ಪಡೆಯುತ್ತಿರುವ ಕನ್ನಡ ನಟಿಯರಲ್ಲಿ ಆಶಿಕಾ ಒಬ್ಬರು. ನಟ ಅಥರ್ವ ಅವರಿಗೆ ನಾಯಕಿಯಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಆಶಿಕಾ ಈ ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. […]
ಕನ್ನಡದ ಮಾರ್ಗರೇಟ್ ಇಂಚರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕಿ ಇಂಚರಾ ಆಗಿ ಅಭಿನಯಿಸುತ್ತಿರುವ ಕೌಸ್ತುಭಮಣಿ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದ ಅದೃಷ್ಟವಂತೆ. ಇಂಚರಾ ಆಗಿ ವೀಕ್ಷಕರ ಮನ ಸೆಳೆದಿರುವ ಕೌಸ್ತುಭಮಣಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ ಇದ್ದುದಂತೂ ನಿಜ. ನಟನೆ ಎಂದರೇನು, ಅದರ ರೀತಿ ರಿವಾಜುಗಳೇನು ಎಂಬ ಅರಿವು ಇರದಿದ್ದ ಕಾರಣ ನಟನೆಯಿಂದ ದೂರವಿದ್ದರು ಕೌಸ್ತುಭಮಣಿ. ಆದರೆ ಅದೃಷ್ಟ ದೇವತೆ ಆಕೆಯ ಪರ ಇದ್ದಳೇನೋ? ನಟನೆಗೆ ಕಾಲಿಡುವ ಅವಕಾಶ ತನ್ನಿಂದಾನೇ ಆಕೆಗೆ ದೊರಕಿತು. […]
ಕಿರುತೆರೆಯ ಬಾರ್ಬಿ ಡಾಲ್ ಗಿದೆ ದೊಡ್ಡ ಕನಸು

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸ್ಪರ್ಧಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಇಂದು ಕರುನಾಡಿನಾದ್ಯಂತ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ನ ನಂತರ ರಾಜ ರಾಣಿ ರಿಯಾಲಿಟಿ ಶೋವಿನಲ್ಲಿ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಭಾಗವಹಿಸಿದ್ದ ನಿವೇದಿತಾ ಸದ್ಯ ಗಿಚ್ಚಿ ಗಿಲಿಗಿಲಿ ಎನ್ನುವ ಕಾಮಿಡಿ ಶೋ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ವೆಬ್ ಸಿರೀಸ್ ನಲ್ಲಿ ನಟಿಸುತ್ತಿರುವ ವಿಚಾರವನ್ನು ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಇದೀಗ […]
ಹೆಸರಾಂತ ಶೋ ನಲ್ಲಿ ಪುಷ್ಪ ಜೋಡಿ

ಕರಣ್ ಜೋಹರ್ ನಡೆಸಿ ಕೊಡುತ್ತಿರುವ ಕಾಫಿ ವಿತ್ ಕರಣ್ ಶೋ ನ ಏಳನೇ ಸೀಸನ್ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಕರಣ್ ಶೋ ಮರಳಿ ಬರುತ್ತಿಲ್ಲ ಎಂದು ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ಉಂಟುಮಾಡಿದ್ದರು. ನಂತರ ಹೊಸ ಘೋಷಣೆ ಮಾಡುವ ಮೂಲಕ ಶೋ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಿದ್ದರು. ಮೊದಲ ಸಂಚಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಕಾಣಿಸಿಕೊಳ್ಳಲಿದ್ದು ಮುಂದಿನ ವಾರದಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿನ ವರದಿ ಪ್ರಕಾರ ಪುಷ್ಪ ಖ್ಯಾತಿಯ ನಟ ಅಲ್ಲು […]
ಹೆಚ್ಚು ಫಾಲೋವರ್ಸ್ ಪಡೆದ ಸಂತಸದಲ್ಲಿ ಅನು ಸಿರಿಮನೆ

ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈಗ ಖುಷಿಯಲ್ಲಿದ್ದಾರೆ. ಹೌದು, ಕಿರುತೆರೆಯ ಜನಪ್ರಿಯ ನಟಿಯರಾದ ವೈಷ್ಣವಿ ಗೌಡ, ದೀಪಿಕಾ ದಾಸ್, ಅನುಶ್ರೀ ಅವರ ನಂತರ ಇನ್ಸ್ಟಾ ಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವವರ ಸಾಲಿಗೆ ಸೇರ್ಪಡೆಯಾಗಿದ್ದಾರೆ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ಹೊಸಬರಾಗಿರುವ ಮೇಘಾ ಕಡಿಮೆ ಅವಧಿಯಲ್ಲಿಯೇ ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಮೇಘಾ ಅವರ ಈ ಸಾಧನೆಗೆ ಸಹನಟರು, ಸ್ನೇಹಿತರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಮೂಲಕ ಮೇಘಾ […]
ಶಾರುಖ್ ಖಾನ್ ಜೊತೆಗೆ ನಟಿಸಬೇಕು ಎಂದ ಗೂಗ್ಲಿ ಬೆಡಗಿ

ಕೃತಿ ಕರಬಂಧ ಕನ್ನಡ ಸಿನಿಪ್ರಿಯರಿಗೆ ತುಂಬಾ ಪರಿಚಿತ ಮುಖ. ಚಿರು ಸಿನಿಮಾದ ಮಧು ಆಗಿ ಚಂದನವನದಲ್ಲಿ ಮೋಡಿ ಮಾಡಿದ ಕೃತಿ ಕರಬಂಧ ಗೂಗ್ಲಿ ಸಿನಿಮಾದ ಸ್ವಾತಿ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು. ಗೂಗ್ಲಿ ಸಿನಿಮಾ ತೆರೆ ಕಂಡು ಬರೋಬ್ಬರಿ ಒಂಭತ್ತು ವರ್ಷಗಳೇ ಕಳೆದರೂ, ಕೃತಿ ಕರಬಂಧ ಎಂದಾಗ ನೆನಪಾಗುವುದು ಅದೇ ಸಿನಿಮಾ. ಅಷ್ಟರ ಮಟ್ಟಿಗೆ ಆ ಸಿನಿಮಾ, ಕೃತಿ ಪಾತ್ರ ವೀಕ್ಷಕರನ್ನು ಸೆಳೆದುಬಿಟ್ಟಿತ್ತು. ಚಿರು, ಪ್ರೇಮ್ ಅಡ್ಡಾ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್‌ಪ್ರೆಸ್, ಸೂಪರ್ ರಂಗ, […]
ಕನ್ನಡದ ಸ್ವಂತ ಒಟಿಟಿ ‘ ಹೊಸ ಪ್ರಯತ್ನಕ್ಕೆ ಶಿವಣ್ಣನ ಶುಭಹಾರೈಕೆ.

ಕೊರೋನ ಎಂಬ ಒಂದು ಕಾಯಿಲೆಯಿಂದ ಎಷ್ಟು ಕೆಟ್ಟದಾಯಿತೋ, ಒಳ್ಳೆಯದಾಯಿತೋ ಅವರವರಿಗೆ ಗೊತ್ತು. ಆದರೆ ಕೊರೋನ ಉಂಟು ಮಾಡಿದ ಲಾಕ್ ಡೌನ್ ನಿಂದ ಹೊಸ ಬದಲಾವನೆಗಳೇ ಆಗಿವೆ. ಅದರಲ್ಲಿ ಒಂದು ಹೊಸ ಸಂಚಲನ ‘ಒಟಿಟಿ’. ಕೋರೋನ ಕಾಲದ ನಂತರ ಒಟಿಟಿ ಗಳಲ್ಲಿ ದೊಡ್ಡ ದೊಡ್ಡ ಬದಲಾವನೆಗಳೇ ಆಗಿವೆ. ಚಲನಚಿತ್ರಗಳು, ವೆಬ್ಸೀರೀಸ್ ಗಳು ಮುಂತಾದವು ನೇರವಾಗಿ ಒಟಿಟಿಯಲ್ಲೇ ಬಿಡುಗಡೆಯಗತೊಡಗಿವೆ. ಈಗ ಕನ್ನಡದ ಸ್ವಂತ ಒಟಿಟಿ ಸಂಸ್ಥೆಯೊಂದು ಆರಂಭವಾಗಿದೆ. ‘ಟಾಕೀಸ್’ ಎಂಬ ಈ ಹೊಸ ಒಟಿಟಿ ಕನ್ನಡದ ಕಲೆಗಳು ಹಾಗು ಕಲಾವಿದರಿಗಾಗಿಯೇ […]
ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇದರ ಜೊತೆಗೆ ಸೆಂಚುರಿ ಸ್ಟಾರ್ ಹೊಸದಾಗಿರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅರೇ, ಅದ್ಯಾವ ಹೊಸ ಪ್ರಯತ್ನ ಎಂದು ಆಲೋಚಿಸುತ್ತಿದ್ದೀರಾ? ಅಂದ ಹಾಗೇ ನಿಮ್ಮ ನೆಚ್ಚಿನ ಸೆಂಚುರಿ ಸ್ಟಾರ್ ಇದೀಗ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್ ಕುಮಾರ್ ಅವರ ಮಗಳು ನಿವೇದಿತಾ ಹೊಸ ವೆಬ್ […]
ಭಡ್ತಿ ಪಡೆದ ಚಂದು ಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ನಾಯಕ ವಿಶಾಲ್ ಆಗಿ ನಟಿಸುತ್ತಿರುವ ಚಂದು ಬಿ ಗೌಡ ಸದ್ಯದಲ್ಲೇ ತಂದೆಯಾಗುತ್ತಿದ್ದಾರೆ. ಚಂದು ಗೌಡ ಹಾಗೂ ಅವರ ಪತಿ ಶಾಲಿನಿ ನಾರಾಯಣ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತನ್ನ ಇನ್ಸಾಗ್ರಾಂ ಖಾತೆಯಲ್ಲಿ ಈ ಸಂತಸದ ವಿಷಯವನ್ನು ಹಂಚಿಕೊಂಡಿರುವ ನಟ ತನ್ನ ಪತ್ನಿಯೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ.” ಕುಟುಂಬಕ್ಕೆ ಇನ್ನೊಬ್ಬ ಸದಸ್ಯನನ್ನು ಸ್ವಾಗತಿಸಲು ಎಲ್ಲಾ ಸಿದ್ದವಾಗಿದೆ” ಎಂದು ಬರೆದುಕೊಂಡಿದ್ದಾರೆ. ತನ್ನ ದೀರ್ಘಕಾಲದ ಗೆಳತಿ ಶಾಲಿನಿ ನಾರಾಯಣ್ ಅವರನ್ನು 2020ರಲ್ಲಿ ವರಿಸಿದ್ದರು […]

