ಮೊದಲ ಮಗುವಿನ ನಿರೀಕ್ಷೆಯಲ್ಲಿ

ಗಂಡ ಹೆಂಡತಿ ಸಿನಿಮಾದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸಂಜನಾ ಗಲ್ರಾನಿ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುದ್ದು ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿರುವ ಸಂಜನಾ ಇತ್ತೀಚೆಗಷ್ಟೇ ಮೆಟರ್ನಿಟಿ ಫೋಟೋಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. “ನಾನು ಹದಿನೆಂಟು ವರ್ಷ ಆದಾಗಿನಿಂದ ನಗರಗಳ ನಡುವೆ ವಾಸಿಸುತ್ತಿದ್ದೇನೆ. ಐವತ್ತಕ್ಕೂ ಹೆಚ್ಚು ಸಿನಿಮಾ ಹಾಗೂ ಹಲವು ಟಿವಿ ಶೋಗಳು, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಹಲವು ಇವೆಂಟ್ಸ್ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು, ರಾಷ್ಟ್ರೀಯ […]

ಕಾಫಿ ವಿತ್ ಕರಣ್ ಶೋ ಮತ್ತೆ ಬರಲಿದ್ಯಾ???

ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಾಕ್ ಶೋ ಮತ್ತೊಮ್ಮೆ ಆರಂಭವಾಗಲಿದೆ. ಹಾಸ್ಯ, ತಮಾಷೆ, ವಿವಾದಗಳಿಗೆ ಹೆಸರಾಗಿದ್ದ ಈ ಶೋ ಬಗ್ಗೆ ವೀಕ್ಷಕರಿಗೆ ಮಿಶ್ರ ಭಾವವಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಈ ಶೋ ನಲ್ಲಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ. ಇದುವರೆಗೂ ಕಾಫಿ ವಿತ್ ಕರಣ್ ಶೋನ ಆರು ಸೀಸನ್ ಗಳು ಪ್ರಸಾರವಾಗಿದೆ. 2020ರಲ್ಲಿ ಈ ಶೋ ಅನ್ನು ಮುಂದೆ ನಿಲ್ಲಿಸಲಾಗುತ್ತದೆ ಎನ್ನಲಾಗಿತ್ತು. ಮುಂದೆ […]

ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ

ಬಾಲಿವುಡ್ ನ ಖ್ಯಾತ ನಟಿ ,ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದ್ದು ಕಳೆದ ತಿಂಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಐದು ತಿಂಗಳ ಗರ್ಭಿಣಿ ಆಗಿರುವ ಸೋನಂ ಗರ್ಭಾವಸ್ಥೆಯ ಕಷ್ಟಕರ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. “ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಕಷ್ಟಗಳ ಕುರಿತು ಯಾರೂ ಮಾತನಾಡುವುದಿಲ್ಲ. ನನಗೆ ಸುಖವಾಗಿ […]

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಯಾಮಿ ಗೌತಮ್ ಕೂಡಾ ಒಬ್ಬರು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ದಾಸ್ವಿ ಸಿನಿಮಾದ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ” ವಿಕ್ಕಿ ಡೋನರ್” ಸಿನಿಮಾ ರಿಲೀಸ್ ಆಗಿ ದಶಕಗಳು ತುಂಬಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕರಾಗಿ ನಟಿಸಿದ್ದ ಈ ಚಿತ್ರವನ್ನು ಶೂಜಿತ್ ಸರ್ಕಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಹತ್ತನೇ ವರ್ಷದಂದು ಯಾಮಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ […]

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು…

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್ ನಲ್ಲಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ರಶ್ಮಿ ನೃತ್ಯ ಪ್ರದರ್ಶನಕ್ಕೆ ಕಾರ್ಯಕ್ರಮಕ್ಕೆ ಹೋದಾಗ ಇಬ್ಬರಿಗೂ ಪರಿಚಯವಾಗಿ ಗೆಳೆತನಕ್ಕೆ ತಿರುಗಿತು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಸಾಮಾಜಿಕ ಕೆಲಸ ಮಾಡಿದ್ದರು. ನಂತರ […]

ಸೆಲೆಬ್ರೇಶನ್ ಮೂಡ್ ನಲ್ಲಿದ್ದಾರೆ ಕಿರಣ್ ರಾಜ್.. ಕಾರಣ ಏನು ಗೊತ್ತಾ?

ಕಿರುತೆರೆ ನಟ ಕಿರಣ್ ರಾಜ್ ಈಗ ಸೆಲೆಬ್ರೇಶನ್ ಮೂಡಿನಲ್ಲಿ ದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಖುಷಿಯಲ್ಲಿದ್ದಾರೆ ಕನ್ನಡತಿಯ ಪ್ರೀತಿಯ ಹರ್ಷ. ಫ್ಯಾನ್ಸ್ ತೋರುತ್ತಿರುವ ಪ್ರೀತಿಗೆ ಖುಷಿಯಾಗಿರುವ ಕಿರಣ್ ರಾಜ್ ಇನ್ಸ್ಟಾಗ್ರಾಮ್ ನಲ್ಲಿ ವಿಶೇಷ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಒಂದು ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಕಿರಣ್ ರಾಜ್ ತಮಗೆ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ದಾರೆ. ತಮ್ಮ ಫೋಟೋ ಹಂಚಿಕೊಂಡಿರುವ ಕಿರಣ್ ರಾಜ್ ಕಪ್ಪು ವರ್ಣದ ಟುಕ್ಸೆಡೊ ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. […]

ಟ್ರೋಲ್ ಗೆ ಒಳಗಾದ ನ್ಯಾಷನಲ್ ಕ್ರಶ್… ಯಾಕೆ ಗೊತ್ತಾ?

ಸೆಲೆಬ್ರಿಟಿಗಳನ್ನು ಮಾದರಿ ಆಗಿ ತೆಗೆದುಕೊಳ್ಳುವ ಜನ ಅವರು ಹೇಳುವ ಮಾತನ್ನು ನಂಬುತ್ತಾರೆ. ಹೀಗಾಗಿ ಅವರು ಜವಾಬ್ದಾರಿಯುತವಾಗಿರಬೇಕು. ಅವರು ಕೆಟ್ಟದ್ದನ್ನು ಸೂಚಿಸಿದರೆ ಅದನ್ನೇ ಪಾಲಿಸುತ್ತಾರೆ. ನಟಿ ರಶ್ಮಿಕಾ ಈಗ ಅದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಜಾಹೀರಾತುಗಳನ್ನು ಒಪ್ಪಿಕೊಳ್ಳುವ ಮೂಲಕ ಆದಾಯವನ್ನು ಪಡೆದುಕೊಳ್ಳುವ ಸೆಲೆಬ್ರಿಟಿಗಳು ಸಿಕ್ಕಸಿಕ್ಕ ಜಾಹೀರಾತುಗಳನ್ನು ಒಪ್ಪಿಕೊಂಡರೆ ಟ್ರೋಲ್ ಆಗುವುದು ಪಕ್ಕಾ. ಈ ಹಿಂದೆ ಶ್ರೀನಿಧಿ ಅಗರ್ವಾಲ್, ಅಕ್ಷಯ್ ಕುಮಾರ್ ಟೀಕೆಗಳಿಗೆ ಗುರಿಯಾಗಿದ್ದರು. ಈಗ ನಟಿ ರಶ್ಮಿಕಾ ಮಧ್ಯದ ಕಂಪೆನಿ ಕಿಂಗ್ ಫಿಶರ್ ಜಾಹೀರಾತಿನಲ್ಲಿ ನಟಿಸಿರುವುದು ಫ್ಯಾನ್ಸ್ ಕೆಂಗಣ್ಣಿಗೆ […]

ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್‌ ನಟನೆಯಲ್ಲಿ ಬ್ಯುಸಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ದೊರೆಸಾನಿಯಲ್ಲಿ ನಾಯಕ ಬ್ಯುಸಿನೆಸ್ ಮ್ಯಾನ್ ವಿಶ್ವನಾಥನ್ ಆನಂದ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಪೃಥ್ವಿರಾಜ್‌. ಮೊದಲ ಧಾರಾವಾಹಿಯಲ್ಲಿಯೇ ನಾಯಕ ಆಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಪೃಥ್ವಿರಾಜ್‌ ಹುಟ್ಟಿ ಬೆಳೆದಿದ್ದೆಲ್ಲಾ ಮಹಾನಗರಿ ಬೆಂಗಳೂರಿನಲ್ಲಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್‌ ವಿದ್ಯಾಭ್ಯಾಸದ ಬಳಿಕ ಐಟಿ ಕಂಪೆನಿಯೊಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡರು. ನಟನೆಯತ್ತ ವಿಶೇಷ ಒಲವು ಹೊಂದಿರುವ ಪೃಥ್ವಿರಾಜ್‌ ಮಾಡೆಲಿಂಗ್ ಮೂಲಕ ಬಣ್ಣದ ಲೋಕದ […]

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಸಾಧು ಕೋಕಿಲ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಮನರಂಜನೆ ನೀಡಲು ತಯಾರಾಗಿರುವ ಶೋ ವಿಶೇಷ ಅತಿಥಿಯನ್ನು ಸ್ವಾಗತಿಸಲು ಸಜ್ಜಾಗಿದೆ. ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ವಿಶೇಷ ಅತಿಥಿಯಾಗಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಮುಂದಿನ ಸಂಚಿಕೆಗಳ ಪ್ರೊಮೋಗಳನ್ನು ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಈ ಪ್ರೊಮೋದಲ್ಲಿ ಸಾಧು ಕೋಕಿಲ ಸ್ಪರ್ಧಿಗಳೊಂದಿಗೆ ಮಾತನಾಡಿದ್ದಾರೆ. ನಿವೇದಿತಾ ಗೌಡ ಅವರಿಗೆ ಡೈಲಾಗ್ ಡೆಲಿವರಿಯನ್ನು ಕಲಿಸುತ್ತಿದ್ದಾರೆ. ಇದಲ್ಲದೇ […]

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾವ್ಯ ಪಯಣ

ಕಿರುತೆರೆ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಅನೇಕರು ಇಂದು ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆ ಪೈಕಿ ವಿಜಯನಗರದ ಕಾವ್ಯ ರಮೇಶ್ ಕೂಡಾ ಒಬ್ಬರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯವಲ್ಲಭನ ತಂಗಿ ಅದಿತಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಾವ್ಯ ರಮೇಶ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿ. ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಕಾವ್ಯ ರಮೇಶ್ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಮುಂದೆ ನಟನೆಯತ್ತ ಮುಖ ಮಾಡಿದ ಕಾವ್ಯ ರಮೇಶ್ […]