ಕಿರುತೆರೆ ವೀಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ..

ಹಿಂದಿ, ತೆಲುಗು ಕಿರುತೆರೆಯ ಹಲವು ಧಾರಾವಾಹಿಗಳು ಕನ್ನಡ ಭಾಷೆಗೆ ಡಬ್ ಆಗುತ್ತಿರುವುದು ಹಳೆಯ ವಿಚಾರ. ಆದರೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯೊಂದು ಇದೀಗ ಕನ್ನಡ ಭಾಷೆಗೆ ಡಬ್ ಆಗುತ್ತಿದೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯು ಹಿಂದಿ ಭಾಷೆಗೆ ಡಬ್ ಆಗಲಿದೆ. ಹಿಂದಿಯ ಜನಪ್ರಿಯ ವಾಹಿನಿ ಜಿಇಸಿಯಲ್ಲಿ ‘ಕನ್ನಡತಿ ಧಾರಾವಾಹಿಯ ಡಬ್ಡ್ ವರ್ಷನ್ ಪ್ರಸಾರ ಕಾಣಲಿದೆ. ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಕನ್ನಡತಿ ಧಾರಾವಾಹಿ ಹಿಂದಿಯಲ್ಲಿ ಪ್ರಸಾರವಾಗಲಿದ್ದು, ಧಾರಾವಾಹಿಯ ಪ್ರೋಮೋ ಕೂಡಾ […]
ಮತ್ತೆ ಜರ್ನಲಿಸ್ಟ್ ಆಗ ಬಯಸುತ್ತೇನೆ ಎಂದ ಮಂಗಳಗೌರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳ ಗೌರಿಯಾಗಿ ಅಭಿನಯಿಸುತ್ತಿರುವ ಕಾವ್ಯಶ್ರೀ ನಟನಾ ಪಯಣದಲ್ಲಿ ಯಶಸ್ಸು ಸಾಧಿಸಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದಿರುವ ಕಾವ್ಯಶ್ರೀ ಕಿರುತೆರೆ ವೀಕ್ಷಕರ ಪಾಲಿನ ಮಂಗಳ ಗೌರಿ. ಇಂತಿಪ್ಪ ಕಾವ್ಯ ತಮ್ಮ ಕೆರಿಯರ್ ಆರಂಭಿಸಿದ್ದು ಜರ್ನಲಿಸ್ಟ್ ವೃತ್ತಿ ಮೂಲಕ. ತಮ್ಮ ಕೆರಿಯರ್ ನ ಆರಂಭದ ದಿನಗಳಲ್ಲಿ ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆ ಸಮಯದಲ್ಲಿ ಆಕೆ ಹಲವು ಆಡಿಷನ್ ಗಳಲ್ಲಿ […]
ಕಾವ್ಯಾ ಶಾ ಮದುವೆಗೆ ವಿಘ್ನ

ನಟಿ, ನಿರೂಪಕಿ ಕಾವ್ಯಾ ಶಾ ಅವರು ನಿರ್ಮಾಪಕ ವರುಣ್ ಕುಮಾರ್ ಗೌಡ ಅವರೊಂದಿಗೆ ಅದ್ದೂರಿಯಾಗಿ ವಿವಾಹ ಮಾಡಿಕೊಳ್ಳಬೇಕಿತ್ತು. ಮೊನ್ನೆ 18 ರಂದು ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆಯಬೇಕಿದ್ದ ಈ ಮದುವೆ ವರುಣ್ ಅವರ ತಂದೆಯ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ. ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾವ್ಯ ಶಾ “ಭಾವಿ ಪತಿ ವರುಣ್ ಅವರ ತಂದೆ ನಿಧನದ ಕಾರಣ ನಮ್ಮ ಮದುವೆಯನ್ನು ಸ್ವಲ್ಪ ಕಾಲ ಮುಂದೂಡಲಾಗಿದೆ”ಎಂದು ಬರೆದುಕೊಂಡಿದ್ದಾರೆ. ಇನ್ನು ಮದುವೆಯ ಸಡಗರದಲ್ಲಿದ್ದ ಕಾವ್ಯ ಶಾ ಇತ್ತೀಚೆಗಷ್ಟೇ ತನ್ನ […]
ಟ್ರಾವೆಲಿಂಗ್ ಮೂಡ್ ನಲ್ಲಿದ್ದಾರೆ ರಾಧಾ ಮಿಸ್

ನಟಿ ಶ್ವೇತಾ ಆರ್ ಪ್ರಸಾದ್ ಈಗ ಪ್ರವಾಸದ ಮೂಡ್ ನಲ್ಲಿ ಇದ್ದಾರೆ. ಉತ್ತರ ಭಾರತದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ಗೆ ತೆರಳಿದ್ದಾರೆ. “ನಾನು ಪ್ಯಾಂಡೆಮಿಕ್ ನಲ್ಲಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದೆ. ಇವುಗಳು ಸೌಂದರ್ಯವನ್ನು ಹೊಂದಿವೆ. ಪ್ರವಾಸಿಗರು ಅನೇಕ ಕಾರಣಗಳಿಗಾಗಿ ಈ ಪ್ರದೇಶಗಳಿಗೆ ಬರಲು ಉತ್ಸುಕತೆ ತೋರುತ್ತಿಲ್ಲ. ಹೀಗಾಗಿ ಇವುಗಳಿಗೆ ಧಕ್ಕೆಯಾಗಿಲ್ಲ. ಈ ಟ್ರೆಂಡ್ ಬದಲಾಗುತ್ತದೆ ಎಂಬ ಭರವಸೆ ನನಗಿದೆ. ಜನ ಈ ಪ್ರದೇಶಗಳ ಬಗ್ಗೆ ತಿಳಿಯುತ್ತಾರೆ. ಇವುಗಳು ತನ್ನದೇ ಆದ ಲಕ್ಷಣಗಳನ್ನು […]
ಭಾವಿ ಪತಿಯ ಮೊದಲ ಭೇಟಿ ಬಗ್ಗೆ ಹೇಳಿದ ಐಶ್ವರ್ಯ ಸಾಲಿಮಠ್

ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಹಾಗೂ ನಟ ವಿನಯ್ ಯುಜೆ ಇತ್ತೀಚೆಗೆ ಬಂಧುಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಇವರಿಬ್ಬರೂ ಇದುವರೆಗೂ ತಮ್ಮ ಗೆಳೆತನದ ಆರಂಭದ ದಿನಗಳನ್ನು ಬಹಿರಂಗ ಪಡಿಸಿರಲಿಲ್ಲ. ಈಗ ಐಶ್ವರ್ಯ ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮಿ ಕ್ವೆಶ್ಚನ್ ನಲ್ಲಿ ವಿನಯ್ ಅವರನ್ನು ಭೇಟಿಯಾದ ಸಂದರ್ಭದ ಬಗ್ಗೆ ತಮ್ಮ ಫಾಲೋವರ್ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.”2016ರ ಜೂನ್ ಏಳರಂದು ನಮ್ಮ ಮೊದಲ ಧಾರಾವಾಹಿಯ ಪ್ರೋಮೋ ಶೂಟಿಂಗ್ ನಲ್ಲಿ ನಾವು […]
ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ – ನಾಯಕಿ ಈಗೇನು ಮಾಡ್ತಿದ್ದಾರೆ ಗೊತ್ತಾ?

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಧಾರಾವಾಹಿಗಳ ಪೈಕಿ ಅಗ್ನಿಸಾಕ್ಷಿ ಕೂಡಾ ಒಂದು. ಎಂಟು ವರ್ಷಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ವಿಭಿನ್ನ ಕಥೆಯ ಜೊತೆಗೆ ತಾರಾಗಣದ ಮೂಲಕ ವೀಕ್ಷಕರನ್ನು ಸೆಳೆದಿತ್ತು. ಇದೀಗ ಧಾರಾವಾಹಿ ಮುಗಿದು ವರ್ಷ ಎರಡು ಕಳೆಯುತ್ತಾ ಬಂತು. ಅಂದ ಹಾಗೇ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ – ನಾಯಕಿ ಈಗೇನು ಮಾಡುತ್ತಿದ್ದಾರೆ ಎಂದು ನಿಮಗೆ ತಿಳಿಯಬೇಕಾಗಿದೆಯೇ? ಹಾಗಿದ್ದರೆ ನೀವಿದನ್ನು ಓದಲೇ ಬೇಕು. ವಿಜಯ್ ಸೂರ್ಯನಾಯಕ ಸಿದ್ದಾರ್ಥ್ ಆಗಿ ಹೆಣ್ಮಕ್ಕಳ ಹೃದಯಕ್ಕೆ […]
ಕಿರುತೆರೆ ಜಗತ್ತಿನ ಸ್ಟೈಲಿಶ್ ವಿಲನ್ ಇವರೇ ನೋಡಿ

ಪ್ರಿಯಾಂಕಾ ಶಿವಣ್ಣ.. ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಈಕೆಯ ಹೆಸರು ಸೀರಿಯಲ್ ಪ್ರಿಯರಿಗೆ ಕೊಂಚ ಅಪರಿಚಿತ ಎಂದೆನಿಸಿದರೆ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ಕಿರುತೆರೆ ಎಂಬ ಪುಟ್ಟ ಪ್ರಪಂಚದಲ್ಲಿ ಆಕೆ ಚಂದ್ರಿಕಾ ಆಗಿ ಫೇಮಸ್ಸು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರೋಬ್ಬರಿ ಎಂಟು ವರ್ಷಗಳ ಕಾಲ ಪ್ರಸಾರವಾಗಿ ವೀಕ್ಷಕರನ್ನು ರಂಜಿಸುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕಿ ಚಂದ್ರಿಕಾ ಆಗಿ ಅಭಿನಯಿಸಿರುವ ಪ್ರಿಯಾಂಕಾ ಇಂದು ಕರುನಾಡಿನಾದ್ಯಂತ ಮನೆ ಮಾತಾಗಿದ್ದಾರೆ. ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ […]
ಕಿರುತೆರೆ ಖಳನಾಯಕಿಯ ಬಣ್ಣದ ಪಯಣ ಶುರುವಾಗಿದ್ದು ಹಿರಿತೆರೆಯಿಂದ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ ಮಂಗಳ ಗೌರಿ ಮದುವೆ ಕೂಡಾ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ಮಂಗಳ ಗೌರಿ ಮದುವೆ ಧಾರಾವಾಹಿಯು ಕಥೆಯ ಹೊರತಾಗಿ ಪಾತ್ರವರ್ಗದ ಮೂಲಕವೂ ಮನೆ ಮಾತಾಗಿದೆ ಎಂದರೆ ತಪ್ಪಲ್ಲ. ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ತನಿಷಾ ಕುಪ್ಪಂಡಗೆ ಎಳವೆಯಿಂದಲೂ ನಟನೆಯತ್ತ ವಿಶೇಷ ಒಲವು. ಬಾಲ್ಯದಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ತನ್ನ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು […]
ಮತ್ತೆ ಬರಲಿದೆ ಮಜಾಟಾಕೀಸ್… ಯಾವಾಗ ಗೊತ್ತಾ?

ಸದ್ಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಸೃಜನ್ ಲೋಕೇಶ್ ಅವರಿಗೆ ಪ್ರತಿ ಬಾರಿಯೂ ಮಜಾ ಟಾಕೀಸ್ ಶೋ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೃಜನ್ ಅವರ ಮಜಾ ಟಾಕೀಸ್ ಶೋ ನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಜಾ ಟಾಕೀಸ್ ಶೋನ ಬಗ್ಗೆ ಮಾತನಾಡಿರುವ ಸೃಜನ್ “ಹೊಸ ಸಿನಿಮಾಗಳ ಪ್ರಚಾರ ಮಜಾ ಟಾಕೀಸ್ ನ ಭಾಗವಾಗಿದೆ. ಇದು ಶೋನ ಪ್ರಮುಖ ಕೇಂದ್ರಬಿಂದು. ಸೆಲೆಬ್ರಿಟಿಗಳನ್ನು ಆಹ್ವಾನಿಸುವುದು ಮಾತ್ರ ಈ ಶೋನ ಸಿದ್ದಾಂತ ಆಗಿಲ್ಲ. […]
ಬ್ಯಾಚುಲರ್ ಪಾರ್ಟಿಯಲ್ಲಿ ಬ್ಯುಸಿ ಮಮತಾ ರಾಹುತ್

ನಟಿ ಮಮತಾ ರಾಹುತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಾ. ಸುರೇಶ್ ಜೊತೆ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮಮತಾ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಖಾಸಗಿ ರೆಸಾರ್ಟ್ ನಲ್ಲಿ ನಡೆದ ಈ ಪಾರ್ಟಿಯಲ್ಲಿ ಬಾಲ್ಯದ ಗೆಳತಿಯರು, ಸಿನಿಮಾ ರಂಗದ ಸ್ನೇಹಿತರು ಪಾಲ್ಗೊಂಡಿದ್ದರು. ಮೊನ್ನೆಯಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮೇ 10 ಹಾಗೂ 11ರಂದು ಇವರ ವಿವಾಹ ನಡೆಯಲಿದೆ. “ನಮ್ಮದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬದವರು ಸೇರಿ ನಮ್ಮ ಮದುವೆಯನ್ನು ನಿಶ್ಚಯ ಮಾಡಿದೆ. ಮನೆಯವರ ನಿರ್ಧಾರದಂತೆ […]

