ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮಿ ದೇವಿ ಅವರು ವಯೋಸಹಜ ಕಾಯಿಲೆಯಿಂದ 22 ದಿನಗಳ ಕಾಲ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣ ನಿನ್ನೆ ಕೊನೆ ಉಸಿರೆಳೆದಿದ್ದಾರೆ.ಲಕ್ಷ್ಮಿ ದೇವಿ ಅವರ ಜೊತೆ ಸರ್ಜಾ ಕುಟುಂಬದ ಪ್ರತಿ ಸದಸ್ಯರು ಎಮೋಷನಲ್ ಬಾಂಡ್ ಹೊಂದಿದ್ದಾರೆ. ಕುಟುಂಬಸ್ಥರು ಮಾತ್ರವಲ್ಲದೆ ಮಾಧ್ಯಮ ಮಿತ್ರರನ್ನೂ ಕೂಡ ಲಕ್ಷ್ಮಿ ದೇವಿ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅಗಲಿದ ಅಜ್ಜಿಯನ್ನು ನೆನೆದು ಮೇಘನಾ ರಾಜ್ […]
ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್.
ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಮನ ಹಾಗು ಮನೆಗಳlli ದೇವರಾಗಿ ಉಳಿದುಕೊಂಡಿದ್ದಾರೆ. ಅವರ ಜೀವ ನಮ್ಮನ್ನಗಲಿ ಹೋದರು, ಎಂದೂ ಮಾಸದ ಅವರ ನಗು, ಶಿಖರದೆತ್ತರದ ಅವರ ವ್ಯಕ್ತಿತ್ವ ಎಂದೆಂದಿಗೂ ಅಜರಾಮರ. ಸದ್ಯ ಇದಕ್ಕೆ ಸಾಕ್ಷಿಯಾಗಿ ನಮ್ಮ ನೆರೆರಾಜ್ಯದಲ್ಲಿ ಅಪ್ಪು ಹೆಸರಿನ ಪ್ರಶಸ್ತಿಯೊಂದನ್ನು ನೀಡಲಾಗುತ್ತಿದೆ. ಅಪ್ಪು ಅವರ ಕೀರ್ತಿ ನಮ್ಮಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ಜೀವಂತ ಎಂಬುದನ್ನು ಈ ಘಟನೆ ಸಾರಿ ಹೇಳುತ್ತಿದೆ. ತಮಿಳುನಾಡಿನ ಚಿತ್ರರಂಗದ ಉನ್ನತ ಪ್ರಶಸ್ತಿಯಾದ ‘ದಿ ಗಲ್ಲಾಟ ಕ್ರೌನ್-2022’ ರ […]
ವೈರಲ್ ಆದ ರಾಧಿಕಾ ಪಂಡಿತ್ ಪೋಸ್ಟ್
ಕನ್ನಡ ಚಿತ್ರರಂಗದ ಅದ್ಭುತ ಜೋಡಿಗಳಲ್ಲಿ ಯಶ್ ರಾಧಿಕಾ ಕೂಡ ಒಬ್ಬರು. ಸಿನಿ ಜರ್ನಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಾದರಿ ದಂಪತಿಯಾಗಿ ಬದುಕುತ್ತಿರುವ ಇವರು ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿಯೂ ಹೌದು. ಈಗ ಈ ವಿಷಯ ಯಾಕೆಂದರೆ ನಟಿ ರಾಧಿಕಾ ಪಂಡಿತ್ ತಮ್ಮ ಕುಟುಂಬದ ಜೊತೆಗಿನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಧಿಕಾ ತಮ್ಮ ಕುಟುಂಬದ ಆಗುಹೋಗುಗಳನ್ನು, ಸಂತೋಷದ ಕ್ಷಣಗಳನ್ನು ಸಾಧಾರಣವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ […]
ಟ್ವಿಟರ್ ವಿರುದ್ಧ ಮುನಿಸಿಕೊಂಡ ಅಪ್ಪು ಅಭಿಮಾನಿಗಳು.
ಚಿತ್ರರಂಗ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಹೆಸರು ಮಾಡಿದಂತಹ ‘ಸ್ಟಾರ್’ಗಳನ್ನು ಅವರ ಅಭಿಮಾನಿಗಳಿಗೆ ಹತ್ತಿರುವಾಗಿಸುವ ಸೇತುವೆ ಸೋಶಿಯಲ್ ಮೀಡಿಯಾ. ನಟ-ನಟಿಯರು ತಮ್ಮ ಹೊಸ ಹೊಸ ವಿಚಾರಗಳನ್ನು ಇನ್ಸ್ಟಾಗ್ರಾಮ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕಾಗಿಯೇ ‘ಸ್ಟಾರ್’ಗಳಿಗೆ ಅಥವಾ ಗಮನಾರ್ಹ ವ್ಯಕ್ತಿಗಳಿಗೆ, ಅವರನ್ನು ಗುರುತಿಸಲು ಉಳಿದವರಿಗೆ ಸಹಾಯವಾಗುವಂತೆ ‘ಬ್ಲೂ ಟಿಕ್’ ಕೂಡ ನೀಡಲಾಗುತ್ತದೆ. ಅದು ಆಯಾ ಸೆಲೆಬ್ರಿಟಿಗಳದ್ದೇ ಅಧಿಕೃತ ಖಾತೆ ಎಂದು ಈ ಬ್ಲೂ ಟಿಕ್ ಗಳು ಸಾರಿ ಹೇಳುತ್ತವೆ. ಸದ್ಯ ಇದೇ ವಿಷಯಕ್ಕೆ […]
ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಮಾತು!! ನಂದಕಿಶೋರ್ ಆಕ್ರೋಶ.
‘ಅಭಿನಯ ಚಕ್ರವರ್ತಿ’, ಕನ್ನಡಿಗರ ಮನದ ‘ಬಾದ್ ಶಾಹ್’ ಕಿಚ್ಚ ಸುದೀಪ್ ಅವರು ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಅವರ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಈ ತಿಂಗಳಿನ ಅಂತ್ಯಕ್ಕೆ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಹಾಗು ವಿಡಿಯೋಗಳು ಸಿನಿರಸಿಕರನ್ನು ಚಿತ್ರ ನೋಡಲು ಹಾತೊರೆದು ಕಾಯುವಂತೆ ಮಾಡಿದ್ದು, ಸದ್ಯ ಚಿತ್ರತಂಡ ತನ್ನ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ನಡುವೆ ಹಲವು ಅಭಿಮಾನಿಗಳು ಬಹುಪಾಲು ದೇವರೇ ಎಂದು ಪೂಜಿಸೋ ಕಿಚ್ಚ ಸುದೀಪ್ ಅವರ ಬಗ್ಗೆ ಯುವಕನೊಬ್ಬ ಅದರಲ್ಲೂ ಕನ್ನಡಿಗನೇ ಒಬ್ಬ […]
ಪುನೀತ್ ರಾಜ್ ಕುಮಾರ್ ನನಗೆ ಸ್ಫೂರ್ತಿ : ನಾಗಚೈತನ್ಯ
ಟಾಲಿವುಡ್ ಅಂಗಳದ ಜನಪ್ರಿಯ ನಟ ನಾಗಚೈತನ್ಯ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಫ್ಯಾನ್ ಅಂತೆ. ಅಂದ ಹಾಗೇ ಈ ವಿಚಾರವನ್ನು ಸ್ವತಃ ನಾಗಚೈತನ್ಯ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮಹಾನಗರಿ ಬೆಂಗಳೂರಿಗೆ ಬಂದಿದ್ದ ನಾಗಚೈತನ್ಯ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಮಾತ್ರವಲ್ಲ ಕನ್ನಡ ಸಿನಿಮಾಗಳ ಕುರಿತಾಗಿ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ. “ಪುನೀತ್ ರಾಜ್ ಕುಮಾರ್ ಒಬ್ಬ ಅದ್ಭುತ ಡ್ಯಾನ್ಸರ್. ಮೊದಲಿನಿಂದಲೂ ನಾನು ಅವರ ಡ್ಯಾನ್ಸನ್ನು ಮೆಚ್ಚಿಕೊಂಡವನು. ಪುನೀತ್ ಅವರಂತೆ ಡ್ಯಾನ್ಸ್ ಮಾಡಲು […]
ಕಿರುತೆರೆಯಿಂದ ಹಿರಿತೆರೆಗೆ ಎಡವಟ್ ರಾಣಿ ಪಯಣ
ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ರಾಧಿಕಾ ಪಂಡಿತ್, ಅದಿತಿ ಪ್ರಭುದೇವ, ರಚಿತಾ ರಾಮ್, ಮೇಘಾ ಶೆಟ್ಟಿ ಇವರೆಲ್ಲಾ ಕಿರುತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿ ಇಂದು ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದ್ದಾರೆ ಎಡವಟ್ ರಾಣಿ. ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಎಡವಟ್ ರಾಣಿ ಇದೀಗ ಸಿನಿಮಾದಲ್ಲಿ ನಾಯಕನ ಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ […]
‘ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಹೊಸ ಹೆಜ್ಜೆ
ನಮ್ಮ ಕನ್ನಡ ಚಿತ್ರರಂಗದಲ್ಲಿ, ಕೆಲವು ಚಿತ್ರಗಳಲ್ಲಿ ಹಲವು ಜವಾಬ್ದಾರಿಗಳನ್ನು ಏಕ ಕಾಲಕ್ಕೆ ನಿಭಾಯಿಸಿಕೊಂಡು ಬರುವ ಕಲಾವಿದರಿದ್ದಾರೆ. ನಟನೆ-ನಿರ್ದೇಶನ, ಛಾಯಾಗ್ರಹಣ-ನಿರ್ದೇಶನ,, ಸಂಕಲನ-ನಿರ್ದೇಶನ, ಸಂಗೀತ ಹಾಗು ನಿರ್ದೇಶನ ಹೀಗೆ ಈ ಪ್ರಮುಖ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಸಿನಿಮಾ ಮಾಡುವವರು ನಮ್ಮಲ್ಲಿ ಬಹಳ ಮಂದಿ ಇದ್ದಾರೆ. ಸದ್ಯ ಈ ಸಾಲಿಗೆ ಹೊಸ ಹೆಸರೊಂದು ಸೇರ್ಪಡೆಯಾಗುತ್ತಿದೆ. ಅವರೇ ನಮ್ಮ ಚಂದನವನದ ‘ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರು. ತನ್ನ ಸುಮಧುರ ಸಂಗೀತ ಹಾಗು ಮನಸ್ಸಿಗೆ ಮುದ ನೀಡುವಂತ ಹಾಡುಗಳಿಂದ ಕನ್ನಡಿಗರ […]
ಮದುವೆಯಾದ ಮರುದಿನವೇ ಯಡವಟ್ಟು ಮಾಡಿಕೊಂಡ ನಯನತಾರ!!
ತಮಿಳಿನ ‘ಲೇಡಿ ಸೂಪರ್ ಸ್ಟಾರ್’ ನಯನತಾರ ಮದುವೆಯ ಸಡಗರದಲ್ಲಿದ್ದಾರೆ. ಭಾರತದಾದ್ಯಂತ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಯನತಾರ, ತಮಿಳಿನ ಯಶಸ್ವಿ ನಿರ್ದೇಶಕರಾದ ವಿಗ್ನೇಶ್ ಶಿವನ್ ಅವರೊಂದಿಗೆ ಜೂನ್ 9ರಂದು ಸಪ್ತಪದಿ ತುಳಿದಿದ್ದಾರೆ. ಇದೊಂದು ಪ್ರೇಮಕಲ್ಯಾಣವಾಗಿದ್ದು, ಸನಿಹದ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಈ ಮದುವೆ ನೇರವೇರಿದೆ. ಸದ್ಯ ದಂಪತಿ ದೇಗುಲ ದರ್ಶನಕ್ಕೆ ಹೊರಟಿದ್ದು ಈ ವೇಳೆ ನಯನತಾರ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ವಿಗ್ನೇಶ್ ಶಿವನ್ ಹಾಗು ನಯನತಾರ ದಂಪತಿ ಇತ್ತೀಚಿಗಷ್ಟೇ ತಿರುಪತಿ ದೇವಸ್ಥಾನಕ್ಕೆ ಆಶೀರ್ವಾದಕ್ಕೆಂದು ತೆರಳಿದ್ದರು. […]
ಕನ್ನಡದ ಸ್ವಂತ ‘RRR’
RRR ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ತೆಲುಗಿನ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾವಾಗಿದ್ದ ರಾಜಮೌಳಿ ಅವರ ನಿರ್ದೇಶನದ RRR ಸಿನಿಮಾ. ಎಲ್ಲೆಡೆ ಗುಲ್ಲೆಬ್ಬಿಸಿ, ಚಿತ್ರಮಂದಿರಗಳನ್ನ ಜನರಿಂದ ತುಂಬುವಂತೆ ಮಾಡಿ, ಹಲವು ದಾಖಲೆಗಳನ್ನು ಬರೆದಂತ ಸಿನಿಮಾ ಆಗಿತ್ತು RRR. ನಮ್ಮ ಕನ್ನಡದಲ್ಲೂ ಒಂದು RRR ಇದೆ. ಆದರೆ ಅದು ಸಿನಿಮಾವಲ್ಲ. ಬದಲಾಗಿ ಸಿನಿಮಾ ಮಾಡುವ ಮೂರು ಅತಿ ಚಾಣಾಕ್ಷರು. ಸಿನಿರಸಿಕರು ಸದ್ಯ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಅವರನ್ನು ಕನ್ನಡದ RRR ಎಂದು ಸಂಭೋದಿಸುತ್ತಿದ್ದಾರೆ. […]