ಹೆತ್ತವರು ನೀಡಿದ ಮರೆಯಲಾರದ ಉಡುಗೊರೆ ಎಂದ ಮೇಘನಾ ರಾಜ್… ಏನು ಗೊತ್ತಾ?

ನಟಿ ಮೇಘನಾ ರಾಜ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ನೆಚ್ಚಿನ ಜಡ್ಜ್ ಆಗಿರುವ ಮೇಘನಾ ತನ್ನ ಸ್ಟೈಲ್ ಗೂ ಹೆಸರಾಗಿದ್ದಾರೆ. ವಿವಿಧ ಡಿಸೈನರ್ ಗಳು ರೂಪಿಸಿರುವ ಡ್ರೆಸ್ ಗಳನ್ನು ಧರಿಸಿರುವ ಮೇಘನಾ ಈ ವೀಕೆಂಡ್ ಶೋನಲ್ಲಿ ಧರಿಸಿರುವ ಸೀರೆಯ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ನೇರಳೆ ಬಣ್ಣದ ಅಂಚು ಇರುವ ಹಸಿರು ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅದಕ್ಕೊಪ್ಪುವ ಮ್ಯಾಚಿಂಗ್ ರವಿಕೆ ಹಾಗೂ ಆಭರಣ, ಅಲಂಕಾರದಲ್ಲಿ ಸುಂದರವಾಗಿ […]

ನಿಶ್ಚಿತಾರ್ಥ ಮಾಡಿಕೊಂಡ ನಿಕ್ಕಿ ಗಲ್ರಾನಿ

ನಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಸಿಹಿ ಸುದ್ದಿ ನೀಡಿದ್ದಾರೆ. ನಿಕ್ಕಿ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದು ಇತ್ತೀಚೆಗಷ್ಟೇ ತೆಲುಗು ಹಾಗೂ ತಮಿಳಿನ ಖ್ಯಾತ ನಟ ಆದಿ ಪಿನಿಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎರಡು ವರ್ಷಗಳಿಂದ. ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಬಹಳ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ವಿಶೇಷವೆಂದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರೂ ಎಲ್ಲಿಯೂ ಈ ವಿಚಾರ ಬಹಿರಂಗ ಮಾಡಿರಲಿಲ್ಲ. ಈಗ ತಮ್ಮ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉಂಗುರ […]

ಸಂಚಾರಿ ವಿಜಯ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಮಮ್ಮುಟ್ಟಿ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ತಲೆ ದಂಡ” ವು ಇದೇ ಎಪ್ರಿಲ್ ಒಂದರಂದು ರಿಲೀಸ್ ಆಗಲಿದೆ.ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನೆಲೆಸಿ ಮರ ಹಾಗೂ ಪರಿಸರವನ್ನು ಕಾಪಾಡಲು ಹೋರಾಟ ಮಾಡುವ ಪಾತ್ರವಾಗಿದ್ದು ಮತ್ತೊಮ್ಮೆ ನಟನೆಯ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ವಿಜಯ್ ತಯಾರಾಗಿದ್ದಾರೆ. ಮಲೆಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ಸಂಚಾರಿ ವಿಜಯ್ ಜೊತೆಗಿನ ಭೇಟಿಯ ಸುಂದರ ಘಳಿಗೆಯನ್ನು ನೆನಪಿಸಿಕೊಂಡಿದ್ದು, ತಲೆದಂಡ […]

ಪಾತ್ರ ನೋಡುವ ದೃಷ್ಟಿಕೋನ ಬದಲಾಗಿದೆ – ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ ಚಿತ್ರರಂಗಕ್ಕೆ ಕಾಲಿಟ್ಟು ಹದಿನೈದು ವರ್ಷಗಳೇ ಕಳೆದಿವೆ. 2007ರಲ್ಲಿ ಸಜನಿ ಚಿತ್ರದಲ್ಲಿ ನಾಯಕಿ ಸಜನಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಬೆಡಗಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕೃಷ್ಣ, ನವಗ್ರಹ, ಮಸ್ತ್ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಸ್ವಯಂವರ, ಕರಿಚಿರತೆ, ಗೋವಾ, ಮುಮ್ತಾಜ್, ಆಕೆ, ಮಾಸ್ ಲೀಡರ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಶರ್ಮಿಳಾ ಮಾಂಡ್ರೆ ನಟನೆಯ ಹೊರತಾಗಿ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ […]

ಬಹುಭಾಷಾ ನಟಿ ಮನೆಗೆ ಹೊಸ ಅತಿಥಿಯ ಆಗಮನ

ಬಹುಭಾಷಾ ತಾರೆ ಎಂದು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹರಿಪ್ರಿಯಾ ಅವರಿಗೆ ಪ್ರಾಣಿಗಳೆಂದರೆ ಅಪಾರ ಕಾಳಜಿ. ಕೆಲವು ತಿಂಗಳುಗಳಷ್ಟೇ ತಮ್ಮ ಪ್ರೀತಿಯ ನಾಯಿಯ ಅಗಲುವಿಕೆಯನ್ನು ತಿಳಿಸಿದ್ದ ಹರಿಪ್ರಿಯಾ ದುಃಖತಪ್ತರಾಗಿದ್ದರು. ಆದರೆ ಇದೀಗ ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಈಕೆ ಬರಮಾಡಿಕೊಂಡಿದ್ದು ಮನೆಯ ಹೊಸ ಸದಸ್ಯನನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸದಾಗಿ ಸೇರಿರುವ ಅತಿಥಿ. ಈ ಅತಿಥಿಯ ಹೆಸರು ಕ್ರಿಸ್ಟಲ್. ನೀವು ಇವನನ್ನು ಮೀಟ್ ಮಾಡಲೇಬೇಕು. ನೀಲಿ ಕಂಗಳ ಮೂಲಕ ಮನ ಸೆಳೆಯುವ ಈತನಿಗೆ ಕೇವಲ 3.5 ತಿಂಗಳು.”ಎಂದು […]

ಅಗಲಿದ ಇರ್ಫಾನ್ ಖಾನ್ ನೆನಪಿಸಿಕೊಂಡು ಭಾವನಾತ್ಮಕ ಪತ್ರ ಬರೆದ ಬಿಗ್ ಬಿ

ನಟ ಇರ್ಫಾನ್ ಖಾನ್ ನಮ್ಮನ್ನು ಅಗಲಿ ವರುಷ ಕಳೆದಿದೆ. ಆದರೆ ಅವರ ನೆನಪು ಅಭಿಮಾನಿಗಳು, ಸ್ನೇಹಿತರ ಮನದಲ್ಲಿ ಹಾಗೆಯೇ ಇದೆ. ಇರ್ಫಾನ್ ಅವರ ಹಿರಿಯ ಮಗ ಬಬಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಶೂಟಿಂಗ್ ನಿಂದ ಮನೆಗೆ ಬಂದಿದ್ದಾರೆ.ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಟ ದಿವಂಗತ ಇರ್ಫಾನ್ ಖಾನ್ ಅವರನ್ನು ನೆನಪಿಸಿಕೊಂಡಿದ್ದು ಅವರ ಮಗ ಬಬಿಲ್ ಗೆ ಭಾವನಾತ್ಮಕ ಪತ್ರ ಬರೆದು ಕಳುಹಿಸಿದ್ದಾರೆ. “ಜೀವನವು ಕ್ಷಣಿಕವಾದದ್ದು ಹಾಗೂ ಸಾವು ಅಗ್ರಾಹ್ಯವಾದುದು. ಆದರೆ ಸ್ನೇಹ ಸಾವನ್ನು ಮೀರಿದೆ. ನೆನಪುಗಳನ್ನು […]

ಕಿಚ್ಚ ಸುದೀಪ್ ಕಡೆಯಿಂದ ಬಂತು ವಿಶೇಷ ಉಡುಗೊರೆ… ಯಾರಿಗೆ ಹಾಗೂ ಏನು ಗೊತ್ತಾ?

ಚಲನಚಿತ್ರರಂಗದಲ್ಲಿ ಸ್ನೇಹ ಎಂಬ ವಿಚಾರ ಬಂದಾಗ ನೆನಪಾಗುವ ಹೆಸರು ಕಿಚ್ಚ ಸುದೀಪ್. ಅದಕ್ಕೆ ಕಾರಣವೂ ಇದೆ. ಸ್ನೇಹದ ವಿಷಯಕ್ಕೆ ಬಂದರೆ ಬಿಟ್ಟುಕೊಡುವ ಜಾಯಮಾನದವರು ಅಲ್ಲ ಸುದೀಪ್. ಸ್ನೇಹ ಅಂತ ಬಂದರೆ ಗಟ್ಟಿಯಾಗಿ ನಿಲ್ಲುವ ಅವರು ಸ್ನೇಹಿತರಿಗೆ ಕಷ್ಟ ಎಂದರೆ ಸಾಕು ಏನು ಬೇಕಾದರೂ ಮಾಡುತ್ತಾರೆ. ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿನೆಚ್ಚಿನ ಸ್ನೇಹಿತರಿಗೆ ಏನು ಬೇಕು ಎಂಬುದನ್ನು ಅರಿತುಕೊಂಡು ಅವರಿಗೆ ಅಗತ್ಯವಿರುವಂತಹ ಉಡುಗೊರೆಗಳನ್ನು ನೀಡುತ್ತಾರೆ. ಇದೀಗ ಈ ಮಾತು ಯಾಕೆ ಬಂತು, ಕಿಚ್ಚ ಸುದೀಪ್ ಅವರು ಅದ್ಯಾರಿಗೆ ಉಡುಗೊರೆ ನೀಡಿದ್ದಾರೆ […]

ರಾಧೆಯಾಗಿ ಮೋಡಿ ಮಾಡಿದ ಚಂದನವನದ ಚೆಲುವೆ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅನು ಪ್ರಭಾಕರ್ ಹೃದಯಾ ಹೃದಯಾ ಸಿನಿಮಾದ ಮೂಲಕ ನಾಯಕಿಯಾಗಿ ಭಡ್ತಿ ಪಡೆದರು. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅನು ಪ್ರಭಾಕರ್ ಗರ್ಭಿಣಿಯಾದ ಕಾರಣ ತಾತ್ಕಾಲಿಕವಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಮಗಳು ನಂದನಾ ಳ ಆರೈಕೆ, ಪಾಲನೆ ಪೋಷಣೆ ಒಟ್ಟಾರೆಯಾಗಿ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದ ಅನು ಪ್ರಭಾಕರ್ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಲ್ಲಿ ವಿಲನ್ […]

ಮುಗುಳುನಗೆ ಸುಂದರಿಯ ಗತವೈಭವ

ಕನ್ನಡದಲ್ಲಿ ಬಲುಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಸುನಿ ನಿರ್ದೇಶನದ“ಗತವೈಭವ” ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಈ ಸಿನಿಮಾದಲ್ಲಿ ದುಷ್ಯಂತ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭವಾಗಲಿದೆ. ಆಶಿಕಾ ರಂಗನಾಥ್ ಹಾಗೂ ಶರಣ್ ನಟನೆಯ ಅವತಾರ ಪುರುಷ ಮೇ 6 ರಂದು ರಿಲೀಸ್ ಆಗಲಿದೆ. ಪವನ್ ಒಡೆಯರ್ ನಿರ್ದೇಶನದ ಇಶಾನ್ ನಾಯಕನಾಗಿ ನಟಿಸಿರುವ ರೆಮೋ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಪಿಆರ್ […]

ತೆಲುಗು ಸಿನಿಮಾದ ವಿರುದ್ಧ ಅಸಮಾಧಾನ ವ್ಯಕಪಡಿಸಿದ ಶರ್ಮಿಳಾ ಮಾಂಡ್ರೆ… ಕಾರಣ ಏನು ಗೊತ್ತಾ?

ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದು, ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ವತಿಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ನೀನಾಸಂ ಸತೀಶ್ ಮುಖ್ಯಭೂಮಿಕೆಯಲ್ಲಿರುವ ದಸರ ಸಿನಿಮಾದ ನಿರ್ಮಾಣವನ್ನು ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ಮಾಡುತ್ತಿದೆ. ಸದ್ಯ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಕೂಡಾ ನಡೆಯುತ್ತಿದೆ. ಇದೀಗ ತೆಲುಗು ಸ್ಟಾರ್ ನಟರ ಸಿನಿಮಾದ ಟೀಸರ್ ಕೂಡಾ ರಿಲೀಸ್ ಆಗಿದ್ದು ಅದಕ್ಕೂ ಅವರು ದಸರ ಎಂದು ಹೆಸರಿಟ್ಟಿದ್ದು ಶರ್ಮಿಳಾ ಮಾಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ […]