ಪರಭಾಷೆಯ ದೊಡ್ಡ ಸಿನಿಮಾದ ಪಾತ್ರವೊಂದನ್ನ ತಿರಸ್ಕರಿಸಿದ್ದಾರಾ ಡಿ ಬಾಸ್!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೆ ಗೊತ್ತಿಲ್ಲ. ಕರುನಾಡ ಸ್ಟಾರ್ ನಟರಲ್ಲಿ ಅತಿ ದೊಡ್ಡ ಅಭಿಮಾನಿ ಬಳಗದ ‘ಒಡೆಯ’ ದರ್ಶನ್ ಅವರು ಎಂದರೆ ತಪ್ಪಾಗಲಾಗದು. ದರ್ಶನ್ ಅವರ ಹೊಸ ಸಿನಿಮಾ ಯಾವುದಾದರೂ ಬಿಡುಗಡೆಯಾದಲ್ಲಿ ಅಭಿಮಾನಿ ಸಾಗರವೇ ಹರಿದು ಬಂದು ಚಿತ್ರಮಂದಿರವನ್ನ ತುಂಬುತ್ತದೆ. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲೂ ‘ದಾಸ’ನ ಅಭಿಮಾನಿ ಬಳಗವೇನು ಚಿಕ್ಕದಲ್ಲ. ಆದರೂ ದರ್ಶನ್ ಅವರು ಒಂದೇ ಒಂದು ಪರಭಾಷ ಚಿತ್ರದಲ್ಲೂ ಈ ವರೆಗೆ ನಟಿಸಿಲ್ಲ. ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಡಿ ಬಾಸ್ ತಮ್ಮನ್ನೇ ಹುಡುಕಿಕೊಂಡು ಬಂದ […]
ಅಪ್ಪು ಅಭಿಮಾನಿಗಳಿಗೆ ಯುಗಾದಿ ಶುಭಾಶಯ ಕೋರಿದ ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಬರೋಬ್ಬರಿ 5 ತಿಂಗಳುಗಳೇ ಕಳೆದಿವೆ. ಅವರ ನಿಧನದ ನಂತರ ಪತ್ನಿ ಅಶ್ವಿನಿ ಅಪ್ಪು ಮೇಲಿನ ಅಭಿಮಾನಿಗಳಿಗೆ ಇರುವ ವಿಶೇಷ ಅಭಿಮಾನಕ್ಕೆ ಧನ್ಯವಾದ ಸಲ್ಲಿಸಲು ಟ್ವೀಟ್ ಮಾಡಿದ್ದರು. ಅಂದ ಹಾಗೇ ಅಪ್ಪು ಮೇಲೆ ಇಟ್ಟಿರುವ ಪ್ರೀತಿಗೆ ಈ ಬಾರಿಯೂ ಅಶ್ವಿನಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. “ಅಭಿಮಾನಿ ದೇವರುಗಳೇ ನಾನು ನಿಮಗೆ ಆಭಾರಿಯಾಗಿದ್ದೇನೆ” ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಅಶ್ವಿನಿ […]
ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಸೋನಾಲಿ ಬೇಂದ್ರೆ

ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆ ತುತ್ತಾಗಿದ್ದರು. ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿರುವ ಸೋನಾಲಿ ಬೇಂದ್ರೆ ಈಗ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕ್ಯಾನ್ಸರ್ ನಿಂದ ಬಳಲುವ ಹಲವು ಮಂದಿಗೆ ಸ್ಪೂರ್ತಿ ಆಗಿರುವ ಸೋನಾಲಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ 5 ಶೋನ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಸೋನಾಲಿ 2018ರಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ರಿಯಾಲಿಟಿ ಶೋ ನಿಂದ ಹೊರನಡೆದಿದ್ದರು. ನಾಲ್ಕು ವರ್ಷಗಳ ಬಳಿಕ ಈಗ ಮತ್ತೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ […]
ಮದುವೆಯ ದಿನ ವಿಶೇಷ ಕೆಲಸ ಮಾಡಲು ನಿರ್ಧರಿಸಿರುವ ನಟಿ…ಆ ಕೆಲಸ ಏನು ಗೊತ್ತಾ…

ನಟಿ ಹಾಗೂ ಲೈಫ್ ಸ್ಟೈಲ್ ಕೋಚ್ ಆಗಿರುವ ಕಾವ್ಯಾ ಶಾ ಇದೇ ಏಪ್ರಿಲ್ 18ರಂದು ನಿರ್ಮಾಪಕ ವರುಣ್ ಕುಮಾರ್ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು , ಸ್ನೇಹಿತರು ಹಾಗೂ ಇಂಡಸ್ಟ್ರಿಯ ಮಂದಿ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. “ವರುಣ್ ನನಗೆ 11 ವರ್ಷಗಳಿಂದ ಪರಿಚಯ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಬ್ಯೂಟಿ ಪೆಜೆಂಟ್ ಸ್ಪರ್ಧೆಯಲ್ಲಿ. ನಾನು ಸ್ಪರ್ಧಿಯಾಗಿ ಭಾಗವಹಿಸಿದ್ದರೆ ಅವರು ಆಯೋಜನೆಯ ತಂಡದಲ್ಲಿದ್ದರು. ಮೊದಲು ಸ್ನೇಹಿತರಾಗಿದ್ದ ನಾವು ನಂತರ ಪರಸ್ಪರ ಇಷ್ಟ ಪಡಲು […]
ಆ ಸಿನಿಮಾ ನನ್ನ ಕೆರಿಯರ್ ಗೆ ತಿರುವು ನೀಡಿತ್ತು ಎಂದ ಮೇಘನಾ ರಾಜ್

ಮೇಘನಾ ರಾಜ್ ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಬಹುಭಾಷಾ ತಾರೆಯಾಗಿಯೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಮೇಘನಾ ರಾಜ್ ತಮ್ಮ ಮುದ್ದಾದ ನಟನೆಯ ಮೂಲಕ ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಮೋಡಿ ಮಾಡಿದ್ದಾರೆ. ಯಕ್ಷಿಯುಮ್ ಜಾನುಮ್ ಹಾಗೂ ಬ್ಯೂಟಿಫುಲ್ ಎನ್ನುವ ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. 2011ರಲ್ಲಿ ತೆರೆ ಕಂಡ ಮಲೆಯಾಳಂ ಸಿನಿಮಾ “ಬ್ಯೂಟಿಫುಲ್” ಹೇಗೆ ಅವರನ್ನು ಬ್ಯೂಟಿಫುಲ್ ಮಾಡಿತು ಎಂಬುದನ್ನು ಇತ್ತೀಚೆಗೆ […]
ಒಟಿಟಿಗೆ ಕಾಲಿಡಲಿರುವ ವರಣ್ ಧವನ್ ಗೆ ಒಟಿಟಿ ಫ್ಲಾಟ್ ಫಾರ್ಮ್ ಇಷ್ಟ

ಒಟಿಟಿ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ಹೀಗಾಗಿ ತಾರೆಯರು ಈಗ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಪಟ್ಟಿಗೆ ನಟ ವರುಣ್ ಧವನ್ ಸೇರ್ಪಡೆಯಾಗಿದೆ. ದೊಡ್ಡ ವೆಬ್ ಸಿರೀಸ್ ನಲ್ಲಿ ನಟಿಸಲಿರುವ ವರುಣ್ ಪ್ರಿಯಾಂಕ ಚೋಪ್ರ ಅಥವಾ ಸಮಂತಾ ಅವರೊಂದಿಗೆ ಒಟಿಟಿಯಲ್ಲಿ ಡೆಬ್ಯುಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ವರುಣ್ ಕೂಡಾ ತಾನು ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ವರುಣ್ ” ನನಗೆ ಒಟಿಟಿ ಪ್ಲಾಟ್ ಫಾರ್ಮ್ ಇಷ್ಟ. ಸದ್ಯದಲ್ಲಿಯೇ […]
ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಕನಸಿನ ರಾಣಿ

ಕನ್ನಡದ ಸಿನಿಮಾ ರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.ಪತಿ ರಾಮು ನಿಧನದ ನಂತರ ಒಪ್ಪಿಕೊಂಡಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶನ ಮಾಡಲಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮಾಲಾಶ್ರೀ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದತ್ತ ಮರಳಿರುವ ಮಾಲಾಶ್ರೀ ಈ ಸಿನಿಮಾದಲ್ಲಿ ಸೇನಾ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯ ಪಾತ್ರ ನಿರ್ವಹಿಸಲಿದ್ದಾರೆ. ಅವರ ಕೆರಿಯರ್ ನಲ್ಲಿ ಎರಡನೇ ಬಾರಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ […]
ತೇಜಸ್ವಿನಿ ಪ್ರಕಾಸ್ ರಿಸೆಪ್ಶನ್ ನಲ್ಲಿ ಚಾಲೆಂಜಿಗ್ ಸ್ಟಾರ್…

ನಟಿ ತೇಜಸ್ವಿನಿ ಪ್ರಕಾಶ್ ಅವರು ಮೊನ್ನೆಯಷ್ಟೇ ತನ್ನ ಬಾಲ್ಯದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ರಿಸೆಪ್ಷನ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು ಈ ಸಂಭ್ರಮದಲ್ಲಿ ತಾರೆಯರು ಪಾಲ್ಗೊಂಡಿದ್ದು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಈ ಸಂಭ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಭಾಗವಹಿಸಿದ್ದಾರೆ. ನವದಂಪತಿಗಳೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ತೇಜಸ್ವಿನಿ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು “ನಿಮಗೆ ಧನ್ಯವಾದ ತಿಳಿಸಲು ಪದಗಳೇ ಇಲ್ಲ. ನಿಮ್ಮ ಆಗಮನವೇ ಆಶೀರ್ವಾದ. ನಾವು ತುಂಬಾ ಖುಷಿಯಾಗಿದ್ದೇವೆ. ಹಾಗೂ ಕೃತಜ್ಞತೆ […]
ಅಪ್ಪು ಎಕ್ಸ್‌ಪ್ರೆಸ್ ಶುರು ಮಾಡಿದ ಪ್ರಕಾಶ್ ರಾಜ್… ಅದೇನು ಗೊತ್ತಾ?

ನಟ ಪ್ರಕಾಶ್ ರಾಜ್ ಏನೇ ಮಾಡಿದರೂ, ಏನೇ ಹೇಳಿದರೂ ವಿವಾದವಾಗಿ ಬಿಡುತ್ತದೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ವಿವಾದಗಳನ್ನು ಹುಟ್ಟು ಹಾಕುವ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರಣ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪ್ರಕಾಶ್ ರಾಜ್ ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಬಾರಿ ಪ್ರಕಾಶ್ ಉತ್ತಮವಾದ ವಿಚಾರ ಹಂಚಿಕೊಂಡಿದ್ದಾರೆ. ಅಪ್ಪು ಹೆಸರಿನಲ್ಲಿ ಹೊಸ ಯೋಜನೆ ಒಂದನ್ನು ಕೈಗೊಂಡಿದ್ದು ಹುಟ್ಟು ಹಬ್ಬದ ಅಂಗವಾಗಿ ಈ […]
ಇಪ್ಪತ್ತು ವರ್ಷಗಳಲ್ಲಿ ಕಲಿಯಲಾಗದ್ದನ್ನು ಎರಡು ವರ್ಷದಲ್ಲಿ ಕಲಿತೆ – ಸಂಯುಕ್ತಾ ಹೊರನಾಡು

ರಾಷ್ಟ್ರೀಯ ಲಾಕ್ ಡೌನ್ ಘೋಷಣೆ ಆಗಿ ಎರಡು ವರ್ಷಗಳೇ ಕಳೆದಿವೆ. ಇದರ ಬಳಿಕ ಎಲ್ಲರ ಬದುಕು ಬದಲಾಗಿದೆ. ಹಲವು ಪಾಠಗಳನ್ನು ಕಲಿಸಿದೆ. ನಟಿ ಸಂಯುಕ್ತ ಹೊರನಾಡು ಅವರ ಬದುಕು ಹೇಗೆ ಬದಲಾಗಿದೆ ಹಾಗೂ ಲಾಕ್ ಡೌನ್ ಅವರಿಗೆ ಏನೇನೆಲ್ಲಾ ಕಲಿಸಿದೆ ಎಂಬುದರ ಕುರಿತಾಗಿ ಹೇಳಿದ್ದಾರೆ. “ಈ ಎರಡು ವರ್ಷಗಳಲ್ಲಿ ನಾನು ತುಂಬಾ ಬದಲಾಗಿದ್ದೇನೆ ಎಂದು ಅನಿಸುತ್ತದೆ. ಕೋವಿಡ್ ನಿಂದಾಗಿ ನಾನು ಹೊಸ ವ್ಯಕ್ತಿ ಆಗಿದ್ದೇನೆ. ಜನರು, ಜೀವನ ಮತ್ತು ಪರಸ್ಪರ ಹೇಗೆ ಇರಬೇಕು ಎಂಬುದನ್ನು 20 ವರ್ಷಗಳಲ್ಲಿ […]

