ಮತ್ತೆ ಪ್ರಶಸ್ತಿ ಪಡೆದುಕೊಂಡ ರಿಕ್ಕಿ

ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಿಕ್ಕಿ ಕೇಜ್ ಹಾಗೂ ಸ್ಟೀವರ್ಟ್ ಕೋಪ್ ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂಗೆ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ರಿಕ್ಕಿ ಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಲಭಿಸಿದೆ. ಇದನ್ನು ಲಹರಿ ಸಂಸ್ಥೆ ನಿರ್ಮಿಸಿತ್ತು. ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್ ನಲ್ಲಿ ಪ್ರತಿಷ್ಠಿತ 2022ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿತ್ತು. ಇನ್ನು ಈ ಖುಷಿಯನ್ನು ರಿಕ್ಕಿ ಕೇಜ್ ಸೋಶಿಯಲ್ ಮೀಡಿಯಾದಲ್ಲಿ […]

ಕಿರುತೆರೆಯ ಬಾರ್ಬಿ ಡಾಲ್ ಹೊಸ ಪ್ರಯೋಗ

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕರುನಾಡಿನಾದ್ಯಂತ ಮನೆ ಮನೆಮಾತಾದ ನಿವೇದಿತಾ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋವಿನಲ್ಲಿ ತಮ್ಮ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಭಾಗವಹಿಸಿದ್ದರು. ಇದೀಗ ನಿವೇದಿತಾ ಗೌಡ ಮತ್ತೆ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿದ್ದು ಗಿಚ್ಚಿ ಗಿಲಿಗಿಲಿ ಎನ್ನುವ ಕಾಮಿಡಿ ಶೋ ನಲ್ಲಿ ಭಾಗವಹಿಸಲಿದ್ದಾರೆ. ಅಂದ ಹಾಗೇ ಕಿರುತೆರೆಯಲ್ಲಿ ಇದು ಅವರ ಮೂರನೇ ಶೋ ಆಗಿದೆ. “ಜನರಿಂದ ದೊರಕಿದ ಪ್ರೀತಿ ಟಿವಿಯ ಮೇಲೆ ಪ್ರೀತಿ ಬರುವಂತೆ ಮಾಡಿದೆ. […]

ಕಾಮಿಡಿಯನ್ ಮಂಜು ಪಾವಗಡ ಹೊಸ ಪ್ರಯತ್ನ

ಬಿಗ್ ಬಾಸ್ ಸೀಸನ್ ಎಂಟರ ವಿಜೇತ ಹಾಗೂ ಕಾಮಿಡಿಯನ್ ಮಂಜು ಪಾವಗಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಆದರೆ ಅದರಲ್ಲಿ ಒಂದು ಸಣ್ಣ ಬದಲಾವಣೆಯಿದೆ. ಅದೇನೆಂದರೆ ಮಂಜು ಪಾವಗಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದೇನೂ ನಿಜ, ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ನಿರೂಪಕರಾಗಿ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಒಂದಷ್ಟು ವಿಶೇಷ ಶೋಗಳನ್ನು ನಡೆಸಿ ಕೊಟ್ಟಿದ್ದ ಮಂಜು ಈಗ ಪೂರ್ಣ ಪ್ರಮಾಣದ ನಿರೂಪಕನಾಗಿ ಬರುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಹೊಸ ಹೊಸ ಶೋ “ಗಿಚ್ಚಿ ಗಿಲಿಗಿಲಿ”ಯ ನಿರೂಪಣೆಯನ್ನು […]

ಮೊದಲ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡ ನೀನಾಸಂ ಸತೀಶ್

ನೀನಾಸಂ ಸತೀಶ್ ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರು. ನೀನಾಸಂ ನಲ್ಲಿ ನಾಟಕ ತರಬೇತಿ ಪಡೆದ ನಂತರ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ ಸತೀಶ್ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಿನಿಮಾರಂಗ ಹಾಗೂ ಕಿರುತೆರೆ ಪ್ರವೇಶಕ್ಕಾಗಿ ಫೋಟೋ ಶೂಟ್ ಮಾಡಿಸಿ ಅಂತ ಗೆಳೆಯರು ಕೊಟ್ಟ ಸಲಹೆಯಂತೆ ಸಿನಿಮಾ ಫೋಟೋ ಜರ್ನಲಿಸ್ಟ್ ಡಿ.ಸಿ ನಾಗೇಶ್ ಅವರು ಮೊದಲ ಬಾರಿಗೆ ಸತೀಶ್ ಅವರ ಫೋಟೋ ಶೂಟ್ ಮಾಡಿ ವಿಧವಿಧದ ಛಾಯಾ ಚಿತ್ರಗಳನ್ನು ಸೆರೆ ಹಿಡಿದುಕೊಟ್ಟಿದ್ದರು. […]

ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಮನ ಸೆಳೆದ ಸೋನಂ ಕಪೂರ್

ಬಾಲಿವುಡ್ ನಟಿ ಸೋನಂ ಕಪೂರ್ ಮೊನ್ನೆಯಷ್ಟೇ ತಾವು ತಾಯಿ ಆಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟಿ ಜಾನ್ವಿ ಕಪೂರ್ ಸೇರಿದಂತೆ ಹಲವರು ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸಿದ್ದರು. ಈಗ ಸೋನಂ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಸೀರೆ ಉಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಸೋನಂ. ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿಯಾಗಿರುವ ಸೋನಂ 2007ರಲ್ಲಿ ತೆರೆ ಕಂಡ ಸಾವರಿಯಾ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಸುಮಾರು 20 […]

ಲಿವ್ ಇನ್ ರಿಲೇಷನ್ ಬಗ್ಗೆ ಮಾತನಾಡಿದ ನಟಿ

ಬಾಲಿವುಡ್ ನಲ್ಲಿ ತಮ್ಮ ವಿಭಿನ್ನ ಪಾತ್ರಗಳಿಗೆ ಹೆಸರಾದವರು ವಿದ್ಯಾ ಬಾಲನ್. ಮಹಿಳಾ ಪ್ರಧಾನ ಪಾತ್ರಗಳಿಂದಲೇ ಗುರುತಿಸಿಕೊಂಡ ನಟಿ ಡರ್ಟಿ ಪಿಕ್ಚರ್, ಶಕುಂತಲಾ ದೇವಿ , ಮಿಷನ್ ಮಂಗಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ಹಲವು ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಾರೆ. ಆದರೆ ವಿದ್ಯಾ ಬಾಲನ್ ಇದಕ್ಕೆ ಅಪವಾದ. ಸದಾ ಬಾಡಿ ಶೇಮಿಂಗ್, ಫಿಟ್ ನೆಸ್ ಕುರಿತು ಮಾತನಾಡಿರುವ ವಿದ್ಯಾ ತಮ್ಮ ವೈಯಕ್ತಿಕ ಜೀವನದ […]

ವಿಭಿನ್ನ ರೀತಿಯಲ್ಲಿ ದೇವರಿಗೆ ಕೃತಜ್ಞತೆ ಹೇಳಿದ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದು ಫೋಟೋವನ್ನು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಸಂಜನಾ ಜೀವನದ ಹೊಸ ಹಂತದಲ್ಲಿದ್ದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಫೋಟೋ ಹಂಚಿಕೊಂಡಿರುವ ಸಂಜನಾ“ಸೌಂದರ್ಯ ನೋಡುಗರ ದೃಷ್ಟಿಯಲ್ಲಿ ಅಡಗಿದೆ. ಅದಕ್ಕಾಗಿ ನಾನು ನನ್ನ ಕೂದಲನ್ನೆಲ್ಲಾ ತ್ಯಾಗ ಮಾಡಿದ್ದೇನೆ. ತುಂಬಾ ಕಷ್ಟಗಳನ್ನು ಅನುಭವಿಸಿದ ನಂತರ ನಾನು ದೇವರಲ್ಲಿ ಜಾರಿಗೊಳಿಸಿದ ಮನ್ನತ್ ನ್ನು ಪೂರ್ಣಗೊಳಿಸಲು ಕೂದಲನ್ನು ನೀಡಿದ್ದೇನೆ. ಜೀವನವು ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದ ಈ ಹಂತಕ್ಕಾಗಿ […]

ಕನ್ನಡದ ಜೊತೆ ಪರಭಾಷಾ ಕಿರುತೆರೆಯಲ್ಲಿಯೂ ಬ್ಯುಸಿ ಚಂದನಾ

ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದೆ. ಧಾರಾವಾಹಿ ಪ್ರಸಾರವಾದ ವಾರದಿಂದಲೂಟಿ ಆರ್ ಪಿ ಯಲ್ಲಿ ಸಕತ್ ಸದ್ದು ಮಾಡುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಪಾತ್ರವರ್ಗದ ಮೂಲಕವೂ ವೀಕ್ಷಕರ ಗಮನ ಸೆಳೆದಿರುವುದು ನಿಜ.‌ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕ ಕಂಠಿಯ ಸೋದರಮಾವನ ಮಗಳು ಪೂರ್ವಿಯಾಗಿ ಅಭಿನಯಿಸುತ್ತಿರುವ ಚಂದನಾ ಮಹಾಲಿಂಗಯ್ಯ ಅವರಿಗೆ ಕಿರುತೆರೆ ಹೊಸದೇನಲ್ಲ. ಖಳನಾಯಕಿಯಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟ […]

ಮೊದಲ ಬಾರಿಗೆ ವೈದ್ಯೆಯಾಗಿ ರಂಜನಿ ರಾಘವನ್

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ನಟಿಸಿ ಕರ್ನಾಟಕದ ಮನೆ ಮಗಳು ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ರಂಜನಿ ಸದ್ಯ ಕನ್ನಡತಿಯಾಗಿ ಕನ್ನಡಿಗರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದಾರೆ. ಮಾತು, ನಟನೆ, ನಡೆ, ನುಡಿ ಹೀಗೆ ಕರುನಾಡಿನಾದ್ಯಂತ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ರಂಜನಿ ರಾಘವನ್ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಸಕತ್ ಬ್ಯುಸಿ. ರಾಜಹಂಸ, ಟಕ್ಕರ್, ಸತ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿರುವ ರಂಜನಿ ರಾಘವನ್ ಇದೀಗ […]

ಕಿರುತೆರೆಯ ನಟನಾ ಮಣಿಯರ ವಿಶೇಷ ವಿಷಯಗಳೇನು ಗೊತ್ತಾ…

ರಿಯಾಲಿಟಿ ಶೋ ಎಂದ ಮೇಲೆ ಅಲ್ಲಿ ನಿರೂಪಕ ನಿರೂಪಕಿಯಿರಲೇಬೇಕು. ನಿರೂಪಕಿಯರು ಎಂದ ಕೂಡಲೇ ನೆನಪಾಗುವ ಹೆಸರು ಅನುಶ್ರೀ, ಶಾಲಿನಿ ಸತ್ಯನಾರಾಯಣ, ಸುಷ್ಮಾ ರಾವ್. ಪಟಪಟನೆ ಮಾತನಾಡುತ್ತಾ ವೀಕ್ಷಕರನ್ನು ಸ್ವಾಗತಿಸುವ ನಿರೂಪಕಿಯರು ರಿಯಾಲಿಟಿ ಶೋ ವಿನ ಶೋಭೆ ಹೌದು. ಅನುಶ್ರೀ, ಶಾಲಿನಿ, ಸುಷ್ಮಾ ಹೊರತಾಗಿ ನಿರೂಪಕಿಯರಾಗಿ ಮೋಡಿ ಮಾಡಿರುವ ಚೆಲುವೆಯರು ಇದ್ದಾರೆ. ಹೌದು, ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚಿದ ಈ ನಟನಾಮಣಿಯರು ನಿರೂಪಕಿಯರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಅವರೆಲ್ಲಾ ಯಾರು ಎಂಬುದರ ಸಣ್ಣ ಝಲಕ್ ಇಲ್ಲಿದೆ. ಅನುಪಮಾ ಗೌಡಸದ್ಯ ಕಿರುತೆರೆಯಲ್ಲಿ […]