ಹೃತಿಕ್ ರೋಷನ್ ಗೆ ಧನ್ಯವಾದ ಹೇಳಿದ ಪ್ರೀತಿ ಝಿಂಟಾ.. ಕಾರಣ ಏನು ಗೊತ್ತಾ?

ಅವರ ಪೋಸ್ಟ್ ನಲ್ಲಿ ಹೃತಿಕ್ ರಂತಹ ನಿಜವಾದ ಸ್ನೇಹಿತರು ಹೃದಯದಲ್ಲಿ ಹೇಗೆ ಸ್ಥಾನ ಗಳಿಸುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ” ಜೀವನದಲ್ಲಿ ಹಲವು ಜನರು ಹೋಗುತ್ತಾರೆ ಬರುತ್ತಾರೆ. ಆದರೆ ನಿಜವಾದ ಸ್ನೇಹಿತರು ಮಾತ್ರ ನಿಮ್ಮ ಹೃದಯದಲ್ಲಿ ಅಚ್ಚೊತ್ತುತ್ತಾರೆ‌. ಈ ಲಾಂಗ್ ಫ್ಲೈಟ್ ನಲ್ಲಿ ಜೈ ಹಾಗೂ ಗಿಯಾ ಗೆ ಸಹಾಯ ಮಾಡಿರುವುದಕ್ಕೆ ಹೃತಿಕ್ ರೋಷನ್ ನಿಮಗೆ ಧನ್ಯವಾದಗಳು. ಈಗ ನಾನು ಏಕೆ ನೀವು ಉತ್ತಮ ತಂದೆ ಆಗಿದ್ದೀರಿ ಎಂಬುದನ್ನು ನೋಡುತ್ತಿರುವೆ. ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದು […]

ಕೆಜಿಎಫ್ 2 ಮೋಡಿ ಮಾಡಿದ ರಾಕಿ ಭಾಯ್

ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಹವಾ ಎಬ್ಬಿಸಿದೆ. ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿರುವ ಈ ಚಿತ್ರದಿಂದ ಯಶ್ ಅವರಿಗೂ ಬೇಡಿಕೆ ಹೆಚ್ಚಿದೆ. ಜಾಹೀರಾತುಗಳಲ್ಲಿ ನಟಿಸಲು ಆಫರ್ಸ್ ಬರುತ್ತಿವೆ. ಈ ಮಧ್ಯೆ ಹಾಲಿನ ಉತ್ಪನ್ನಗಳನ್ನು ಹಾಗೂ ಐಸ್ ಕ್ರೀಮ್ ಮಾರಾಟ ಮಾಡುವ ಅಮೂಲ್ ಕಂಪೆನಿ ಕೆಜಿಎಫ್ ಸಿನಿಮಾ ಶೈಲಿಯಲ್ಲಿ ಜಾಹೀರಾತು ಮಾಡಿದ್ದು ಇದು ಈಗ ವೈರಲ್ ಆಗುತ್ತಿದೆ. ಅಮೂಲ್ ತನ್ನ ಪ್ರೊಡಕ್ಟ್ ಗಳ ಮಾರಾಟಕ್ಕೆ ಹಲವು ತಂತ್ರಗಳನ್ನು ಬಳಸುತ್ತದೆ. ಟ್ರೆಂಡ್ ಗೆ ತಕ್ಕಂತೆ ಜಾಹೀರಾತು ಸಿದ್ಧಪಡಿಸುತ್ತದೆ. ಕ್ರೀಡೆ, ಸಿನಿಮಾ,ರಾಜಕೀಯ […]

ದಾಖಲೆಗಳನ್ನೆಲ್ಲ ಧ್ವಂಸಗೊಳಿಸುತ್ತಿದೆ ಕೆಜಿಎಫ್ ಚಾಪ್ಟರ್ 2

“ಇದಿನ್ನು ಆರಂಭ, ಕಥೆ ಈಗ ಶುರುವಾಗ್ತಿದೆ” ಎಂದು ಕುತೂಹಲ ಹುಟ್ಟಿಸಿ ಕೊನೆಯಾಗಿತ್ತು ಕೆಜಿಎಫ್ ಚಾಪ್ಟರ್ 1. ಆ ಮಾತು ಪ್ರಾಯಷಃ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮಾಡಿದಂತ ದಾಖಲೆಗಳಿಗೂ ಕೂಡ ಸರಿಹೊಂದುವಂತೆ ಬರೆಯಲಾಗಿತ್ತೇನೋ. ಇಡೀ ಪ್ರಪಂಚವೇ ಚಾಪ್ಟರ್ 2ಗೆ ಕಾಯುವಂತೆ ಮಾಡಿತ್ತು ಮೊದಲಾರ್ಧ. ಆ ಎಲ್ಲ ನಿರೀಕ್ಷೆಗಳ ಉತ್ತರವಾಗಿ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಿದೆ. ಪ್ರಪಂಚದ ವಿವಿಧ ಕಡೆಗಳಲ್ಲಿ ಬಿಡುಗಡೆ ಕಂಡಿರುವ ಚಿತ್ರ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿದೆ. ಎಲ್ಲ […]

ಮಗನ ಸಾಧನೆಯನ್ನು ಕೊಂಡಾಡಿದ ಮಾಧವನ್

ನಟ ಮಾಧವನ್ ಅವರ ಪುತ್ರ ವೇದಾಂತ್ ಸಾಧನೆಯ ಹಾದಿಯಲ್ಲಿದ್ದಾರೆ. ಹದಿನಾರನೇ ವಯಸ್ಸಿನ ವೇದಾಂತ್ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದರು. ಈಗ ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗಳಿಸಿದ್ದಾರೆ. ಡೆನ್ಮಾರ್ಕ್ ನ ಕೋಪನ್ ಹೇಗನ್ ನಲ್ಲಿ ನಡೆಯುತ್ತಿರುವ ಡ್ಯಾನಿಶ್ ಓಪನ್ ಈಜುಕೂಟದಲ್ಲಿ ಮಾಧವನ್ ಭಾಗವಹಿಸಿದ್ದಾರೆ. 15 ನಿಮಿಷ 57.86 ಸೆಕೆಂಡ್ ನಲ್ಲಿ ಗುರಿ ತಲುಪಿದ್ದಾರೆ. ಇದಲ್ಲದೇ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ […]

ಯಶ್ ಬಳಿ ಕಬ್ಬಿನಹಾಲು ಕೊಡಿಸುವ ಸಮಯ ಎಂದ ಕೃತಿ ಕರಬಂಧ..‌ ಯಾಕೆ ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಕೆಜಿಎಫ್ 2 ಚಿತ್ರವನ್ನು ಇಡೀ ದೇಶವೇ ಹೊಗಳುತ್ತಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ನಟನೆಯ ಈ ಚಿತ್ರ ವಿಶ್ವಾದ್ಯಂತ ಕಮಾಲ್ ಮಾಡುತ್ತಿದೆ. ಬಾಕ್ಸ್ ಆಫೀಸಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಚಿತ್ರವನ್ನು ಪರಭಾಷೆಯ ಸ್ಟಾರ್ ಗಳು ಕೂಡಾ ಹೊಗಳುತ್ತಿದ್ದಾರೆ. ನಟಿ ಕೃತಿ ಕರಬಂಧ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ. ಡಿಫರೆಂಟ್ ಆಗಿ ವಿಶ್ ಮಾಡಿರುವ ಕೃತಿ ಯಶ್ ಅವರೊಂದಿಗೆ ಗೂಗ್ಲಿ […]

ಕಿರುತೆರೆಗೆ ಸೆಂಚುರಿ ಸ್ಟಾರ್

ಸೆಂಚುರಿ ಸ್ಟಾರ್ ಬಿರುದಾಂಕಿತ ನಟ ಶಿವರಾಜ್ ಕುಮಾರ್ ದೊಡ್ಡ ಗ್ಯಾಪ್ ನ ನಂತರ ಕಿರುತೆರೆಗೆ ಮರಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಹೊಸ ಸೀಸನ್ ಇದೇ ಶನಿವಾರ ಶುರುವಾಗಲಿದ್ದು ಅದರಲ್ಲಿ ತೀರ್ಪುಗಾರರಾಗಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ಕಿಕ್ ” ಎಂಬ ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ “ನಾನು ಇಷ್ಟು ವರ್ಷಗಳಲ್ಲಿ ನಟನೆಯ ಕಾರಣದಿಂದಾಗಿ ಪೂರ್ಣ ಪ್ರಮಾಣದ ತೀರ್ಪುಗಾರನಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ […]

ಮುಂಗಡ ಬುಕಿಂಗ್ ನಲ್ಲಿ ಬಾಹುಬಲಿಯನ್ನೇ ಹಿಂದಿಕ್ಕಿತು ಕೆಜಿಎಫ್!!

ಕೆಜಿಎಫ್ ಹಾಗು ಬಾಹುಬಲಿ, ನಿಸ್ಸಂದೇಹವಾಗಿ ಭಾರತ ಚಿತ್ರರಂಗದ ಎರಡು ದಿಗ್ಗಜ ಹೆಸರುಗಳು. ಕೆಜಿಎಫ್ ಗು ಬಲುಮುನ್ನವೇ ಬಂದಂತಹ ಬಾಹುಬಲಿ ಚಿತ್ರ ಮಾಡಿದಂತ ರೆಕಾರ್ಡ್ ಗಳಿಗೆ ಲೆಕ್ಕವೇ ಇಲ್ಲ. ಆ ರೆಕಾರ್ಡ್ ಗಳನ್ನು ಮುರಿಯಲು ಮತ್ತೊಂದು ಬೃಹತ್ ಚಿತ್ರವೇ ಬರಬೇಕು ಎಂಬ ಮಾತು ಇಡೀ ದೇಶದಾದ್ಯಂತ ಹಬ್ಬಿತ್ತು. ಈಗ ಆ ರೆಕಾರ್ಡ್ ಗಳು ಒಂದೊಂದಾಗಿ ತಲೆಕೆಳಗಾಗುತ್ತಿವೆ. ಕಾರಣ ಇಂದು(ಏಪ್ರಿಲ್ 14) ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 2. ಏಪ್ರಿಲ್ 10ರಿಂದ ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಂಗಡ […]

ಸತ್ಯಜೀತ್ ರೇ ಅವರೊಂದಿಗೆ ನಾನು ನಟಿಸಬೇಕಿತ್ತು ಎಂದ ಬಾಲಿವುಡ್ ಬೆಡಗಿ

ಹದಿನಾರರ ಹುಡುಗಿ ತನ್ನ ನೆಚ್ಚಿನ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ರಹಸ್ಯವಾಗಿ ಪತ್ರ ಬರೆದಿದ್ದಳು. ಅವಳು ಪೋಸ್ಟ್ ಮಾಡಿರಲಿಲ್ಲ. ಅವರು ನಿಧನ ಹೊಂದಿದಾಗ ಅವಳಿಗೆ ಹಲವು ಕಾರಣಗಳಿಂದ ಶಾಕ್ ಆಯಿತು. ಅವಳು ಬೇರ್ಯಾರು ಅಲ್ಲ. ಈಗ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಾಯಕಿ ವಿದ್ಯಾ ಬಾಲನ್. ಸತ್ಯಜಿತ್ ರೇ ಅವರೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಹಾಗೂ ಬೆಂಗಾಲಿ ಸಿನಿಮಾ ಅವರಿಗೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. “ನನಗೆ ಇವತ್ತಿಗೂ ಅವರೊಂದಿಗೆ ಕೆಲಸ ಮಾಡಲು ಇಷ್ಟವಿದೆ. ಎಲ್ಲರೂ ಅವರ […]

ಬಾಲ್ಯದ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಹೇಳಿದ್ದೇನು ಗೊತ್ತಾ?

ಕಿರುತೆರೆ ನಟಿ ಪ್ರಥಮಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಇನ್ಸ್ಟಾಗ್ರಾಮ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುವ ನಟಿ ಅಪ್ ಡೇಟ್ ಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ತನ್ನ ತಾಯಿ ವಿನಯಾ ಪ್ರಸಾದ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ಪ್ರಥಮಾ ಅವರೊಂದಿಗೆ ಅವರ ಪ್ರೀತಿಯ ನಾಯಿ ಕೂಡಾ ಬಳಿ ಇದೆ. ಫೋಟೋ ಶೇರ್ ಮಾಡಿ ಬರೆದುಕೊಂಡಿರುವ ಪ್ರಥಮಾ “ನನಗೆ ಪ್ರೀತಿಯ ನೆನಪುಗಳನ್ನು ಹಂಚಿಕೊಳ್ಳಲು ಇಷ್ಟ. […]

ನನ್ನ ಬದುಕಿನ ಬಲಶಾಲಿ ಮಹಿಳೆ ಅಮ್ಮ ಎಂದ ಕಿರಿಕ್ ಹುಡುಗಿ

ಕಿರಿಕ್ ಪಾರ್ಟಿಯ ಆರ್ಯ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ ಕನ್ನಡದ ಜೊತೆಗೆ ತಮಿಳು, ತೆಲುಗು ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದ ಪ್ರತಿಭೆ. ನಟಿ ಸಂಯುಕ್ತ ಹೆಗ್ಡೆ ತಮ್ಮ ತಾಯಿಯ ಜನ್ಮದಿನಕ್ಕೆ ಶುಭ ಹಾರೈಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ನಾನು ಬದುಕಿನಲ್ಲಿ ತುಂಬಾ ಪ್ರೀತಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಸಂಭ್ರಮ. ಹ್ಯಾಪಿ 60 ಅಮ್ಮ. ನನಗೆ ಗೊತ್ತು ನೀವು ನಿಮ್ಮ ಬರ್ತ್ ಡೇ ಆಚರಿಸುವುದಿಲ್ಲ. ಆದರೆ ನಾನು ನಿಮ್ಮ 60 ವರ್ಷಗಳನ್ನು ಆಚರಿಸುತ್ತೇನೆ. […]