ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ

ಬಾಲಿವುಡ್ ನ ಖ್ಯಾತ ನಟಿ ,ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದ್ದು ಕಳೆದ ತಿಂಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಐದು ತಿಂಗಳ ಗರ್ಭಿಣಿ ಆಗಿರುವ ಸೋನಂ ಗರ್ಭಾವಸ್ಥೆಯ ಕಷ್ಟಕರ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. “ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಕಷ್ಟಗಳ ಕುರಿತು ಯಾರೂ ಮಾತನಾಡುವುದಿಲ್ಲ. ನನಗೆ ಸುಖವಾಗಿ […]
ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಯಾಮಿ ಗೌತಮ್ ಕೂಡಾ ಒಬ್ಬರು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ದಾಸ್ವಿ ಸಿನಿಮಾದ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ” ವಿಕ್ಕಿ ಡೋನರ್” ಸಿನಿಮಾ ರಿಲೀಸ್ ಆಗಿ ದಶಕಗಳು ತುಂಬಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕರಾಗಿ ನಟಿಸಿದ್ದ ಈ ಚಿತ್ರವನ್ನು ಶೂಜಿತ್ ಸರ್ಕಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಹತ್ತನೇ ವರ್ಷದಂದು ಯಾಮಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ […]
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು…

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್ ನಲ್ಲಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ರಶ್ಮಿ ನೃತ್ಯ ಪ್ರದರ್ಶನಕ್ಕೆ ಕಾರ್ಯಕ್ರಮಕ್ಕೆ ಹೋದಾಗ ಇಬ್ಬರಿಗೂ ಪರಿಚಯವಾಗಿ ಗೆಳೆತನಕ್ಕೆ ತಿರುಗಿತು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಸಾಮಾಜಿಕ ಕೆಲಸ ಮಾಡಿದ್ದರು. ನಂತರ […]
ರಾಕಿ ಭಾಯ್ ನ ಭೇಟಿಯಾಗ ಬಯಸಿದ ಬಾಲಕ, ಪ್ರತಿಕ್ರಿಯಿಸಿದ ಯಶ್.

ಕೆಜಿಎಫ್ ಒಂದು ಸಿನಿಮಾವಾಗಿ ಉಳಿದಿಲ್ಲ, ಬದಲಾಗಿ ಅದು ಎಷ್ಟೋ ಪ್ರೇಕ್ಷಕರ ಜೀವನದ ಒಂದು ಭಾಗವಾಗಿ ಸೇರಿಕೊಂಡಿದೆ. ಅದರಲ್ಲಿ ಬರೋ ಪಾತ್ರಗಳು ಅಷ್ಟೇ. ಅಭಿಮಾನಿಗಳೆಲ್ಲರ ಮನದಲ್ಲಿ ಮನೆಮಾಡಿ ಕುಳಿತಿದ್ದಾರೆ ಇಲ್ಲಿನ ರಾಕಿ ಭಾಯ್, ಅಧೀರ, ಗರುಡ, ರಮಿಕ ಸೇನ್ ಮುಂತಾದವರು. ಅದರಲ್ಲೂ ರಾಕಿ ಭಾಯ್ ಯುವಪೀಳಿಗೆಗೆ ಆರಾಧ್ಯ ದೈವವಾದಂತಾಗಿದೆ. ಇಂತಹ ಅಭಿಮಾನವೊಂದು ಒಬ್ಬ ಪುಟ್ಟ ಹುಡುಗನಲ್ಲಿ ಕಾಣಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಬಿಡುಗಡೆ ಕಂಡಿದೆ. ಪ್ರಪಂಚದಾದ್ಯಂತ ಹಲವರು, ಹಲವು ಕುಟುಂಬಗಳು ಚಿತ್ರಮಂದಿರದೆಡೆಗೆ ಓಡಿ ಚಿತ್ರವನ್ನ […]
ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ.

‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಾತಿದೆ. ಕಷ್ಟ ಪಟ್ಟರೇನೇ ಕೊನೆಗೆ ಯಶಸ್ಸು ಸಿಗೋದು. ಈ ಮಾತಿಗೆ ಸರಿಹೊಂದುವಂತ ಒಂದು ನಿದರ್ಶನ ನಮ್ಮ ರವಿ ಬಸ್ರುರು. ಸದ್ಯ ‘ಕೆಜಿಎಫ್’ ಎಂಬ ಯಶೋಗಾಥೆಯ ಒಂದು ಪ್ರಮುಖ ಅಂಗವಾಗಿರೋ ಇವರು, ಒಂದು ಕಾಲದಲ್ಲಿ ಒಂದೋತ್ತಿನ ಊಟಕ್ಕೂ ಒದ್ದಾಡಿದವರು. ಇಂದು ಯಶಸ್ಸಿನ ಸಾಗರದಲ್ಲಿ ತೇಲುತ್ತಿದ್ದರೆ, ಹಿಂದೊಂದು ದಿನ ಅವರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಬಹುದು. ನಮ್ಮ ಕರಾವಳಿಯ ಕುಂದಾಪುರ ತಾಲೂಕಿನ ಬಸ್ರುರಿನ ಒಂದು ಬಡಕುಟುಂಬದಲ್ಲಿ ‘ಕಿರಣ್’ ಎಂಬ ಹೆಸರಿನಿಂದ ಜನಿಸಿದವರು […]
ಒಂದಳ್ಳೆ ಆಫರ್ ಗೆ ನೋ ಎಂದ ಅಲ್ಲು ಅರ್ಜುನ್

ಪುಷ್ಪ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಟ ಅಲ್ಲು ಅರ್ಜುನ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿಯೂ ಅವರಿಗೆ ಬೇಡಿಕೆ ಹೆಚ್ಚಿದ್ದು ಸಿನಿಮಾ ಮಾತ್ರವಲ್ಲ ಜಾಹೀರಾತು ಕಂಪೆನಿಗಳು ಕೂಡಾ ಅವರ ಹಿಂದೆ ಬಿದ್ದಿವೆ. ಆದರೆ ಅರ್ಜುನ್ ಸಿನಿಮಾ ಹಾಗೂ ಜಾಹೀರಾತುಗಳನ್ನು ಆಯ್ಕೆ ಮಾಡುವಾಗ ಜಾಗರೂಕತೆ ವಹಿಸುತ್ತಾರೆ. ಇತ್ತೀಚೆಗೆ ತಂಬಾಕು ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿ ಸುದ್ದಿಯಾಗಿದ್ದಾರೆ. ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆ ತಂಬಾಕು ಕಂಪೆನಿಯೊಂದು ದೊಡ್ಡ ಆಫರ್ ನೀಡಿತ್ತು. ಆದರೆ ಆತ ಜಾಹೀರಾತಿಗೆ ಅರ್ಜುನ್ […]
ಪ್ರಸವದ ನಂತರದ ಕ್ಷಣ ಸುಂದರವಾದುದು – ಕಾಜಲ್ ಅಗರ್ ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಮೊನ್ನೆ 19ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಾಜಲ್ ಅವರ ಪತಿ ಗೌತಮ್ ಕಿಚ್ಲು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಹೆಸರನ್ನು ನೀಲ್ ಎಂಬುದಾಗಿ ಹಂಚಿಕೊಂಡಿದ್ದಾರೆ. ಮಗುವಿನ ಜನನದ ಕೆಲವು ದಿನಗಳ ನಂತರ ತನ್ನ ಹೊಸ ಪಯಣದ ಬಗ್ಗೆ ಬರೆದುಕೊಂಡಿದ್ದಾರೆ. ಪ್ರಗ್ನೆನ್ಸಿ ಫೋಟೋ ಶೂಟ್ ನ ಫೋಟೋ ಹಂಚಿಕೊಂಡಿರುವ ಕಾಜಲ್ ” ನನ್ನ ಬೇಬಿ ನೀಲ್ ನ್ನು ಈ ಜಗತ್ತಿಗೆ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ನಮ್ಮ ಮುದ್ದು ಕಂದನ ಜನನವು ಉಲ್ಲಾಸದಾಯಕವಾಗಿತ್ತು […]
ಡಾಕ್ಟರೇಟ್ ಪದವಿ ಪಡೆದ ದೇವಿದಾಸ್ ಕಾಪಿಕಾಡ್

ತುಳು ರಂಗಭೂಮಿಯ ಖ್ಯಾತ ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಯ 40ನೇ ಘಟಿಕೋತ್ಸವದಲ್ಲಿ ದೇವದಾಸ್ ಕಾಪಿಕಾಡ್ , ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ತುಳು ರಂಗಭೂಮಿ ಹಾಗೂ ಸಿನಿಮಾದಲ್ಲಿ ಪ್ರಸಿದ್ಧರಾಗಿರುವ ದೇವದಾಸ್ ಕಾಪಿಕಾಡ್ ಬರಹಗಾರ, ನಿರ್ದೇಶಕ, ಕಥೆಗಾರ , ಗೀತರಚನೆಕಾರ, ಗಾಯಕ, ನಿರ್ಮಾಪಕ , […]
ಹೊಸ ವಿಷಯ ಬಹಿರಂಗಗೊಳಿಸಿದ ಪ್ರಿಯಾಂಕಾ – ನಿಕ್ ದಂಪತಿ

ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಜನವರಿ ತಿಂಗಳಲ್ಲಿ ತಮಗೆ ಹೆಣ್ಣು ಮಗು ಜನನವಾಗಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಇದೀಗ ಮೂರು ತಿಂಗಳ ಬಳಿಕ ತಮ್ಮ ಮುದ್ದು ಮಗಳ ಹೆಸರನ್ನು ಬಹಿರಂಗಗೊಳಿಸಿದ್ದಾರೆ ಪ್ರಿಯಾಂಕಾ ನಿಕ್ ದಂಪತಿ. ಅಂದ ಹಾಗೇ ಈ ದಂಪತಿ “ಮಾಲ್ತಿ ಮೇರಿ ಚೋಪ್ರಾ ಜೋನಸ್ ” ಎಂದು ಹೆಸರಿಟ್ಟಿದ್ದಾರೆ. ಇನ್ನು ಸರೋಗಸಿ ಮೂಲಕ ಹೆಣ್ಣು ಮಗುವನ್ನು ಪ್ರಿಯಾಂಕಾ ನಿಕ್ ದಂಪತಿ ಪಡೆದಿದ್ದರು. ಜನವರಿ 15ರಂದು ರಾತ್ರಿ ಎಂಟು ಗಂಟೆಗೆ ಸ್ಯಾನ್ ಡಿಯಾಗೋ ಆಸ್ಪತ್ರೆಯಲ್ಲಿ […]
ಸಿನಿಮಾ ಕಡೆಗೆ ಮರಳಲಿದ್ದಾರಾ ಐಶ್ವರ್ಯ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಹಿಂದಿ ಸಿನಿಮಾ ನಿರ್ದೇಶನ ಮಾಡಲು ಅವರಿಗೆ ಆಫರ್ಸ್ ಬರುತ್ತಿರುವ ಬಗ್ಗೆ ಮಾತನಾಡಿದ್ದಾರೆ. “ನನಗೆ ಹಿಂದಿ ಸಿನಿಮಾ ನಿರ್ದೇಶನ ಮಾಡುವ ಆಫರ್ಸ್ ಬರುತ್ತಲೇ ಇದ್ದವು.ಬಆದರೆ ನಾನು ಆಗ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ” ಎಂದಿರುವ ಐಶ್ವರ್ಯಗೆ ಭವಿಷ್ಯದಲ್ಲಿ ಹೃತಿಕ್ ರೋಷನ್ ಹಾಗೂ ರಣವೀರ್ ಸಿಂಗ್ ಅವರೊಂದಿಗೆ ಕೆಲಸ ಮಾಡಲು ಮನಸ್ಸಿದೆ. ಐಶ್ವರ್ಯ ಅವರ ಸಿನಿಮಾದಲ್ಲಿ ರಜನಿಕಾಂತ್ ನಟಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಐಶ್ವರ್ಯ […]

