ಹೆಸರಾಂತ ಶೋ ನಲ್ಲಿ ಪುಷ್ಪ ಜೋಡಿ

ಕರಣ್ ಜೋಹರ್ ನಡೆಸಿ ಕೊಡುತ್ತಿರುವ ಕಾಫಿ ವಿತ್ ಕರಣ್ ಶೋ ನ ಏಳನೇ ಸೀಸನ್ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಕರಣ್ ಶೋ ಮರಳಿ ಬರುತ್ತಿಲ್ಲ ಎಂದು ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ಉಂಟುಮಾಡಿದ್ದರು. ನಂತರ ಹೊಸ ಘೋಷಣೆ ಮಾಡುವ ಮೂಲಕ ಶೋ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಿದ್ದರು. ಮೊದಲ ಸಂಚಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ಅಲಿಯಾ ಭಟ್ ಕಾಣಿಸಿಕೊಳ್ಳಲಿದ್ದು ಮುಂದಿನ ವಾರದಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿನ ವರದಿ ಪ್ರಕಾರ ಪುಷ್ಪ ಖ್ಯಾತಿಯ ನಟ ಅಲ್ಲು […]

ವಿಚ್ಛೇದನದ ಬೆನ್ನಲ್ಲೇ ಗರ್ಭಿಣಿಯಾದ ಸುದ್ದಿ ನೀಡಿದ ಸಮಂತಾ

ಸಮಂತಾ ರುತು ಪ್ರಭು ನಟನೆಯ ಯಶೋಧಾ ಚಿತ್ರದ ಮೊದಲ ಝಲಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಮಂತಾ ಯಶೋಧಾ ಎಂಬ ಗರ್ಭಿಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಈ ವಿಡಿಯೋ ತುಣುಕು ಉತ್ತಮ ಹಿನ್ನೆಲೆ ಸಂಗೀತ ಹೊಂದಿದ್ದು ವೀಕ್ಷಕರಿಗೆ ಕುತೂಹಲಕಾರಿ ವಿಶುವಲ್ ಹೊಂದಿದೆ. ಮಹಿಳಾ ಪ್ರಧಾನ ಚಿತ್ರದಂತೆ ಕಾಣುತ್ತಿರುವ ಈ ಚಿತ್ರ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರವನ್ನು ಹರೀಶ್ ಶಂಕರ್ ಹಾಗೂ ಹರೀಶ್ ನರನ್ ಬರೆದು ನಿರ್ದೇಶಿಸಿದ್ದಾರೆ. ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಮಲೆಯಾಳಂ […]

ಶಾರುಖ್ ಖಾನ್ ಜೊತೆಗೆ ನಟಿಸಬೇಕು ಎಂದ ಗೂಗ್ಲಿ ಬೆಡಗಿ

ಕೃತಿ ಕರಬಂಧ ಕನ್ನಡ ಸಿನಿಪ್ರಿಯರಿಗೆ ತುಂಬಾ ಪರಿಚಿತ ಮುಖ. ಚಿರು ಸಿನಿಮಾದ ಮಧು ಆಗಿ ಚಂದನವನದಲ್ಲಿ ಮೋಡಿ ಮಾಡಿದ ಕೃತಿ ಕರಬಂಧ ಗೂಗ್ಲಿ ಸಿನಿಮಾದ ಸ್ವಾತಿ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು. ಗೂಗ್ಲಿ ಸಿನಿಮಾ ತೆರೆ ಕಂಡು ಬರೋಬ್ಬರಿ ಒಂಭತ್ತು ವರ್ಷಗಳೇ ಕಳೆದರೂ, ಕೃತಿ ಕರಬಂಧ ಎಂದಾಗ ನೆನಪಾಗುವುದು ಅದೇ ಸಿನಿಮಾ. ಅಷ್ಟರ ಮಟ್ಟಿಗೆ ಆ ಸಿನಿಮಾ, ಕೃತಿ ಪಾತ್ರ ವೀಕ್ಷಕರನ್ನು ಸೆಳೆದುಬಿಟ್ಟಿತ್ತು. ಚಿರು, ಪ್ರೇಮ್ ಅಡ್ಡಾ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್‌ಪ್ರೆಸ್, ಸೂಪರ್ ರಂಗ, […]

ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರಾಗಿ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಈ ಬಾರಿ ಕೇನ್ಸ್ ಚಲನಚಿತ್ರೋತ್ಸವಕ್ಕೆ ಈ ಬಾರಿ ತೀರ್ಪುಗಾರರಾಗಿ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಫೆಸ್ಟಿವಲ್ ಡಿ ಕೇನ್ಸ್ ನ ಅಧಿಕೃತ ಟ್ವಿಟ್ಟರ್ ಖಾತೆ ಈ ಸುದ್ದಿಯನ್ನು ಹಂಚಿಕೊಂಡಿದೆ. ಎಂಟು ತೀರ್ಪುಗಾರರ ಸದಸ್ಯರೊಂದಿಗೆ 75ನೇ ಫೆಸ್ಟಿವಲ್ ಡಿ ಕೇನ್ಸ್ ನ ತೀರ್ಪುಗಾರರ ಅಧ್ಯಕ್ಷರಾಗಿ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರನ್ನು ಘೋಷಿಸಿದ್ದಾರೆ. ದೀಪಿಕಾ ಪಡುಕೋಣೆ ಅವರಲ್ಲದೇ ರೆಬೆಕಾ ಹಾಲ್, ಅಸ್ಗರ್ ಫರ್ಹಾದಿ, ಲಾಡ್ಜ್ ಲೈ , ಜೆಫ್ ನಿಕೋಲ್ಸ್, ಜೋಕಿಮ್ ಟ್ರೈಯರ್ ,ನೂಮಿ ರಾಪೇಸ್, […]

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇದರ ಜೊತೆಗೆ ಸೆಂಚುರಿ ಸ್ಟಾರ್ ಹೊಸದಾಗಿರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅರೇ, ಅದ್ಯಾವ ಹೊಸ ಪ್ರಯತ್ನ ಎಂದು ಆಲೋಚಿಸುತ್ತಿದ್ದೀರಾ? ಅಂದ ಹಾಗೇ ನಿಮ್ಮ ನೆಚ್ಚಿನ ಸೆಂಚುರಿ ಸ್ಟಾರ್ ಇದೀಗ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್ ಕುಮಾರ್ ಅವರ ಮಗಳು ನಿವೇದಿತಾ ಹೊಸ ವೆಬ್ […]

ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿ ಕೆಲವು ವರ್ಷಗಳೇ ಕಳೆದಿವೆ. ಸಿನಿಮಾ ನಟನೆಯಿಂದ ದೂರ ಉಳಿದಿರುವ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಮ್ಯಾ ಸಿನಿ ಕೆರಿಯರ್ ಆರಂಭಿಸಿ ಎಪ್ರಿಲ್ 25ಕ್ಕೆ 19 ವರ್ಷಗಳು ಕಳೆದಿವೆ. ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ ಮುಂದೆ ಸ್ಟಾರ್ ನಟಿಯಾಗಿ ಬೆಳೆದರು. ನಟಿಸಿದ ಮೊದಲ ಸಿನಿಮಾ ಅಭಿ ಹಿಟ್ ಆಗಿತ್ತು. ಹೀಗಾಗಿ ಚಂದನವನದಲ್ಲಿ ಅವರಿಗೆ ಬೇಡಿಕೆ ಹೆಚ್ಚಾಯಿತು. […]

ತೆಲುಗು ಸ್ಟಾರ್ ನೊಂದಿಗೆ ಕೈಜೋಡಿಸಿದ ‘777 ಚಾರ್ಲಿ’

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ಬಿಡುಗಡೆಯ ದಿನಾಂಕವನ್ನು ಹೊರಹಾಕಿದೆ. ಇದೇ ಜೂನ್ 10ರಂದು ದೇಶದಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪಾನ್ ಇಂಡಿಯನ್ ಸಿನಿಮಾ ಇದಾಗಿರಲಿದ್ದು, ಎಲ್ಲ ಭಾಷೆಗಳಲ್ಲೂ ಒಂದೇ ದಿನದ ಬಿಡುಗಡೆಗೆ ಚಿತ್ರತಂಡದಿಂದ ಭರದ ಸಿದ್ಧತೆ ಸಾಗಿದೆ. ಈ ನಡುವೆ ‘777 ಚಾರ್ಲಿ’ ಚಿತ್ರತಂಡ ತೆಲುಗಿನ ಸ್ಟಾರ್ ನಟರಾದ ರಾಣ ದಗ್ಗುಬಾಟಿ ಅವರ […]

ಹಿಂದಿ ಇಂಗ್ಲೀಷ್ ಅಧಿಕೃತ ಭಾಷೆ ಹೊರತು ರಾಷ್ಟ್ರೀಯ ಭಾಷೆಯಲ್ಲ – ಸಿಂಪಲ್ ಸುಂದರಿ

ರಾಷ್ಟ್ರೀಯ ಭಾಷೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಭಾಷೆಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಕಲಾವಿದರಾಗಿ ನಮ್ಮ ಬ್ರಾಂಡ್, ಕೆಲಸದ ಮೂಲಕ ನಮ್ಮ ಭಾಷೆ, ರಾಷ್ಟ್ರೀಯತೆ , ಮಾನವೀಯತೆಯನ್ನು ಪ್ರತಿನಿಧಿಸುವ ಜವಾಬ್ದಾರಿಯಿದೆ. ಪ್ರತಿಯೊಂದು ಭಾಷೆಗೂ ಅವರ ಜನರು ಹೆಮ್ಮೆ ಪಡಲು ಅದರದ್ದೇ ಆದ ಶ್ರೀಮಂತ ಇತಿಹಾಸವಿದೆ. ನನ್ನ ಅಭಿಪ್ರಾಯದಂತೆ ನಮ್ಮ ವಿಚಾರಗಳು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ನಂಬುತ್ತೇನೆ” ಎನ್ನುತ್ತಾರೆ ಸಿಂಪಲ್ ಸುಂದರಿ. “ದೇಶದ […]

ಆ ಸಿನಿಮಾದಿಂದ ಕಾಜಲ್ ಔಟ್…ಕಾರಣ ಏನು ಗೊತ್ತಾ?

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಕಳೆದ 18 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ಇಂತಿಪ್ಪ ಕಾಜಲ್ ಚಿರಂಜೀವಿ ಅವರ ಬಹು ನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ ಇದೀಗ ಅವರು ನಟಿಸಿರುವ ಪಾತ್ರವನ್ನು ಸಿನಿಮಾದಿಂದ ತೆಗೆಯಲಾಗಿದೆ. ಇದರ ಬಗ್ಗೆ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ “ಕಮರ್ಷಿಯಲ್ ಸಿನಿಮಾ ಎಂದಾಗ ನಾಯಕನ ಜೊತೆ ನಾಯಕಿ ಇರುತ್ತಾರೆ. ಈ ಸಿನಿಮಾಗಾಗಿ ತಮಾಷೆಯಾದ ನಾಯಕಿ ಪಾತ್ರ ಬರೆದಿದ್ದೆ. ಹೀಗಾಗಿ ಕಾಜಲ್ ಅವರನ್ನು ಕರೆಸಿ ಮೂರ್ನಾಲ್ಕು ದಿನ ಶೂಟಿಂಗ್ […]

ಹೊಸ ಇನ್ನಿಂಗ್ಸ್ ಶುರುಮಾಡಿದ ತುಪ್ಪದ ಹುಡುಗಿ

ಲವ್ ಗುರು, ಗಾನ ಬಜಾನಾ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಶಾಂತ್ ರಾಜ್ ನಿರ್ದೇಶನದ ಮೊದಲ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. ಸಂತಾನಂ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತಾನ್ಯಾ ಹೋಪ್ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ” ಈ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ಉತ್ಸುಕಳಾಗಿದ್ದೇನೆ. ಪ್ರಶಾಂತ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ‌. ಇಲ್ಲಿ ಸಂತಾನಂ ಅವರ ಜೊತೆ ನಟಿಸುತ್ತಿದ್ದೇನೆ. ಅವರು ಒಬ್ಬ ಪ್ರತಿಭಾವಂತ ನಟ. ನಾನು ಇಲ್ಲಿ ಗ್ಲಾಮರಸ್ ಪಾತ್ರ ಮಾಡುತ್ತಿದ್ದೇನೆ. ಇದು ಸಿನಿಮಾಕ್ಕೆ ಸ್ಟೈಲಿಶ್ ಟಚ್ ಕೊಡುತ್ತದೆ. […]