ಕನ್ನಡ ಮಾತನಾಡುವುದು ಖುಷಿ ತಂದಿದೆ – ಸಾಯಿ ಪಲ್ಲವಿ

ಪ್ರೇಮಂ ಖ್ಯಾತಿಯ ನಟಿ ಸಾಯಿ ಪಲ್ಲವಿ ತಮ್ಮ ಮುಂದಿನ ಚಿತ್ರ ಗಾರ್ಗಿ ಗಾಗಿ ಕನ್ನಡ ಕಲಿತು ಸುದ್ದಿಯಲ್ಲಿದ್ದಾರೆ. ಗಾರ್ಗಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹೀಗಾಗಿ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡಿದ್ದು ಈ ದೃಶ್ಯವನ್ನು ಚಿತ್ರ ತಂಡ ಹಂಚಿಕೊಂಡಿತ್ತು. ಕನ್ನಡ ಕಲಿತ ಅನುಭವವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. “ತಮಿಳು ಮಾತನಾಡುವ ಹುಡುಗಿಯೊಬ್ಬಳು ಕನ್ನಡ ಮಾತನಾಡುವಂತೆ ಇದು ಇರುವುದಿಲ್ಲ. ಅಪ್ಪಟ ಕನ್ನಡ ಹುಡುಗಿಯಂತೆ ಡಬ್ ಮಾಡಿದ್ದೇನೆ. ಕನ್ನಡ ಮಾತನಾಡುವುದು ಖುಷಿ ನೀಡುತ್ತದೆ. ಲ,ಣ,ನ ಅಕ್ಷರಗಳನ್ನು ಉಪಯೋಗಿಸುವಾಗ ಸವಾಲೆನಿಸಿತು. […]
21 ಅವರ್ಸ್’ಗೆ ಅಭಿನಯ ಚಕ್ರವರ್ತಿಯ ಆತಿಥ್ಯ.

ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರುವ ನಟ ಯಾರು ಎಂದು ಯಾವುದೇ ಕನ್ನಡ ಸಿನಿಮಾಭಿಮಾನಿಯಲ್ಲಿ ಕೇಳಿದರೆ, ಅವರು ನೀಡೋ ಹೆಸರುಗಳ ಪಟ್ಟಿಯಲ್ಲಿ ಮೊದಲು ಕಾಣೋ ಹೆಸರು ಡಾಲಿ ಅಲಿಯಾಸ್ ಧನಂಜಯ. ಒಂದರ ಬೆನ್ನಿಗೆ ಇನ್ನೊಂದರಂತೆ ಹಲವು ಅದ್ಭುತ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಧನಂಜಯ್ ಅವರು ಇದೀಗ ತಮ್ಮ ಮುಂದಿನ ಚಿತ್ರ ’21 ಅವರ್ಸ್’ ಬಿಡುಗಡೆಯ ಭರದಲ್ಲಿದ್ದಾರೆ. ಟ್ರೈಲರ್ ನಿಂದ ಕನ್ನಡಿಗರಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್ ಅವರಿಂದ ಆತಿಥ್ಯ ದೊರಕಿದೆ. ಜೈ ಶಂಕರ್ […]
ಅಕ್ಷಯ್ ಕುಮಾರ್ ಗೆ ಮತ್ತೊಮ್ಮೆ ಕೊರೊನಾ ಪಾಸಿಟಿವ್

ನಟ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು ತನಗೆ ಕೋವಿಡ್ ತಗುಲಿರುವ ಬಗ್ಗೆ ತಿಳಿಸಿದ್ದಾರೆ. ಟ್ವೀಟ್ ನಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ವಿಚಾರವನ್ನು ಹೇಳಿದ್ದಾರೆ. ” ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಮ್ಮ ಸಿನಿಮಾವನ್ನು ಬೇರೂರಿಸಲು ಎದುರು ನೋಡುತ್ತಿದ್ದೆ. ಆದರೆ ಕೋವಿಡ್ ಪಾಸಿಟಿವ್ ಬಂದಿದೆ. ವಿಶ್ರಾಂತಿ ಮಾಡಬೇಕಿದೆ. ಅನುರಾಗ್ ಠಾಕೂರ್ ಅವರೇ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಆಲ್ ದಿ ಬೆಸ್ಟ್ “ಎಂದು ಟ್ವೀಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ […]
ಅಕಾಲಿಕ ಮೃತ್ಯು ತಡೆಯುವ ಕೇಂದ್ರಕ್ಕೆ ಪುನೀತ್ ಹೆಸರು

ಅಕಾಲಿಕ ಮೃತ್ಯು ತಡೆಯುವ ಸಲುವಾಗಿ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ದೀರ್ಘಾಯುಷ್ಯ ಕೇಂದ್ರವನ್ನು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಐಟಿಬಿಟಿ ಇಲಾಖೆಯ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಬೆಂಬಲದ ಮೂಲಕ ನವೋದ್ಯಮಗಳು ಅಭಿವೃದ್ಧಿ ಪಡಿಸಿರುವ 6 ಜೀವವಿಜ್ಞಾನ ಸಾಧನೆಗಳನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಮಲ, ಕಫ, ಮೂತ್ರ ಮುಂತಾದವುಗಳನ್ನು ಸಂಗ್ರಹಿಸಲು ಸೂಕ್ತ […]
ತೆಲುಗಿನಲ್ಲಿ ಖುಷಿ ರವಿ ಮೋಡಿ

ಖುಷಿ ರವಿ… ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ದಿಯಾ ಸಿನಿಮಾದಲ್ಲಿ ನಾಯಕಿ ದಿಯಾ ಸ್ವರೂಪ್ ಆಗಿ ನಟಿಸಿದ್ದ ಖುಷಿ ರವಿ ಮನೋಜ್ಞ ಅಭಿನಯಕ್ಕೆ ಫಿದಾ ಆಗದವರಿಲ್ಲ. ಮೊದಲ ಸಿನಿಮಾದಲ್ಲಿಯೇ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಖುಷಿ ರವಿ ತೆಲುಗು ಸಿನಿರಂಗದಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಭಾರ್ಗವ ನಿರ್ದೇಶನದ ರುದ್ರಂ ಸಿನಿಮಾದಲ್ಲಿ ನಟಿಸುವ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಖುಷಿ ರವಿ ಸಕತ್ ಖುಷಿಯಲ್ಲಿದ್ದಾರೆ. “ಇದು ನನ್ನ ಸಿನಿಮಾ ಕೆರಿಯರ್ ನಲ್ಲಿಯೇ ನಿರ್ವಹಿಸದೇ ಇರುವಂತಹ ಪಾತ್ರ. […]
ಬುಲ್ ಬುಲ್ ಬೆಡಗಿ ನಟನಾ ಜರ್ನಿ

ಚಂದನವನದ ಡಿಂಪಲ್ ಕ್ವೀನ್ ರಚಿತ ರಾಮ್ ಮೈಲಿಗಲ್ಲು ಸಾಧಿಸಿದ ಸಂಭ್ರಮದಲ್ಲಿ ಇದ್ದಾರೆ. ಗುಳಿ ಕೆನ್ನೆಯ ಬೆಡಗಿ ಚಿತ್ರರಂಗದಲ್ಲಿ ಒಂಭತ್ತು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಚಿತಾ ರಾಮ್. ತನ್ನ ಮೊದಲ ಚಿತ್ರ ಬುಲ್ ಬುಲ್ ನ ಪೋಸ್ಟರ್ ನ್ನು ಹಂಚಿಕೊಳ್ಳುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ ರಚಿತಾ ರಾಮ್. ಬುಲ್ ಬುಲ್ ನಲ್ಲಿ ನಾಯಕಿ ಕಾವೇರಿಯಾಗಿ ನಟಿಸಿದ್ದ ರಚಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು. “ಸುದೀರ್ಘ ಪಯಣದಲ್ಲಿ ಮೊದಲ ಹೆಜ್ಜೆ. […]
ಅಭಿಮಾನಿಗಳಿಗೆ ವಿಶೇಷ ವಿಷಯ ತಿಳಿಸಿದ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ 2019ರಲ್ಲಿ ಸಿನಿ ಕೆರಿಯರ್ ಆರಂಭಿಸಿದ್ದು ಬಾಲಿವುಡ್ ನಲ್ಲಿ ತನ್ನದೇ ಸ್ಥಾನ ಪಡೆದಿದ್ದಾರೆ. *ಸ್ಟುಡೆಂಟ್ ಆಫ್ ದಿ ಇಯರ್ 2″ ಚಿತ್ರದ ಮೂಲಕ ಕೆರಿಯರ್ ಆರಂಭಿಸಿದ ಅನನ್ಯಾ ಅವರು ಬಾಲಿವುಡ್ ಪ್ರವೇಶಿಸಿ ಮೂರು ವರ್ಷಗಳಾಗಿವೆ. ಈ ಸಂಭ್ರಮದಲ್ಲಿ ಅನನ್ಯ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತನ್ನ ಇನ್ಸ್ಟಾ ಗ್ರಾಂ ಸ್ಟೋರಿಯಲ್ಲಿ ಬರೆದಿರುವ ಅನನ್ಯ “ಮೂರು ವರ್ಷಗಳ ಹಿಂದೆ ಸ್ಟುಡೆಂಟ್ ಆಫ್ ದಿ ಇಯರ್ 2 ರಿಲೀಸ್ ಆಗಿದೆ. ನನ್ನ ಮೂರು […]
ಮುನ್ನಾಭಾಯಿ ನಟನಾ ಜರ್ನಿ

ಬಾಲಿವುಡ್ ನಟ ಸಂಜಯ್ ದತ್ ಇದೀಗ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಸಂಜಯ್ ದತ್ ಅವರು ತಮ್ಮ ಸಿನಿ ಕೆರಿಯರ್ ನಲ್ಲಿ 41 ವರ್ಷಗಳನ್ನು ಪೂರೈಸಿದ್ದಾರೆ. ಹೌದು, 1981ರಲ್ಲಿ ತೆರೆ ಕಂಡ ರಾಕಿ ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಸಂಜಯ್ ದತ್ ಅಭಿಮಾನಿಗಳಿಂದ ಸಂಜು ಎಂದೇ ಕರೆಸಿಕೊಳ್ಳುತ್ತಾರೆ. ತಮ್ಮ ವೃತ್ತಿ ಜೀವನ 41 ವಸಂತಗಳನ್ನು ಪೂರೈಸಿರುವ ಸಂತಸದಲ್ಲಿರುವ ಮುನ್ನಾಭಾಯಿ ತಮ್ಮ ಚೊಚ್ಚಲ ಚಿತ್ರದ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾ್ಗ್ರಾಂ […]
ಪರಭಾಷೆಯ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಚಂದನವನದ ಚೆಲುವೆಯರು

ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಮೋಡಿ ಮಾಡಿದ ಚೆಲುವೆಯರು ಇಂದು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದ ಆಫರ್ಸ್ ಪಡೆದುಕೊಳ್ಳುತ್ತಿದ್ದಾರೆ. ಭಾಷೆಯ ಗಡಿ ಮೀರಿ ಬೇರೆ ಬೇರೆ ಭಾಷೆಗಳಲ್ಲಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪರಭಾಷೆಯ ಸಿನಿರಂಗದಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ. ಆಶಿಕಾ ರಂಗನಾಥ್ – ಪರಭಾಷೆಗಳಿಂದ ಆಫರ್ಸ್ ಪಡೆಯುತ್ತಿರುವ ಕನ್ನಡ ನಟಿಯರಲ್ಲಿ ಆಶಿಕಾ ಒಬ್ಬರು. ನಟ ಅಥರ್ವ ಅವರಿಗೆ ನಾಯಕಿಯಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಆಶಿಕಾ ಈ ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. […]
ಭಾವುಕ ಮಾತುಗಳನ್ನಾಡಿದ ಅಧೀರ ಹೇಳಿದ್ದೇನು ಗೊತ್ತಾ?

ತಾಯಂದಿರಲ್ಲಿ ಸೂಪರ್ ಪವರ್ ಇರುತ್ತದೆ. ಸಮಸ್ಯೆಗಳಿಗೆ ಸ್ಪಂದಿಸುವ ಅವಳು ಮಕ್ಕಳಿಗೆ ಸ್ಪೂರ್ತಿ ಆಗಿರುತ್ತಾಳೆ. ಬಾಲಿವುಡ್ ತಾರೆಯರಿಗೂ ಅಮ್ಮನೇ ಸ್ಪೂರ್ತಿ. ಅವರ ಬದುಕಿನಲ್ಲಿ ತಾಯಿ ಮಹತ್ವದ ಪಾತ್ರ ವಹಿಸಿದ್ದಾಳೆ. ವಿಶ್ವ ತಾಯಂದಿರ ದಿನದ ವಿಶೇಷದಂದು ಬಾಲಿವುಡ್ ನಟ ಸಂಜಯ್ ದತ್ ತಮ್ಮ ತಾಯಿ ನರ್ಗೀಸ್ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಟ್ವಿಟರ್ ನಲ್ಲಿ ತಂದೆ ತಾಯಿ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡು ಪತ್ರ ಬರೆದಿದ್ದಾರೆ. ತಾಯಿಯಿಂದ ಪರಿಶ್ರಮ, ತಾಳ್ಮೆ, ಮಾನವೀಯತೆ, ಹೊಂದಾಣಿಕೆ ಎಲ್ಲವನ್ನೂ ಹೇಗೆ ಕಲಿತೆ ಎಂಬುದನ್ನು ಹಂಚಿಕೊಂಡಿದ್ದಾರೆ. […]

