ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’.
ಎಡೆಬಿಡದೆ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ ತಮ್ಮದೇ ಒಂದು ಪುಟ್ಟ ಜಗತ್ತನ್ನು ಸೃಷ್ಟಿಸಿ ಬದುಕುವವರು ಮಕ್ಕಳು. ಅವರ ಕುತೂಹಲ, ಅವರ ಚುರುಕುತನ ವಿವರಿಸಲಸಾಧ್ಯ. ಅವರ ಬುದ್ದಿಗೆ ಹೊಳೆವ ಪ್ರಶ್ನೆಗಳೇಷ್ಟೋ, ಅದಕ್ಕೆ ಅವರಿಗೆ ಸಿಗುವ ಉತ್ತರಗಳೆಷ್ಟೋ! ಅದರಲ್ಲೂ ಈಗಿನ ಮಕ್ಕಳಂತು ಸದಾ ಕುತೂಹಲದ ಕೊನೆಯಂಚಿನಲ್ಲಿರುತ್ತಾರೆ. ಇಂತಹ ಮಕ್ಕಳ ಕುತೂಹಲಕಾರಿ ಜಗತ್ತನ್ನು ತೋರಿಸಲು ಬರುತ್ತಿರುವ ಹೊಸ ಸಿನಿಮಾವೇ ‘ರೂಬಿಕ್ಸ್’. ” ‘ರೂಬಿಕ್ಸ್’ ಎಂಬ ಹೆಸರೇ ಒಂದು ಒಗಟನ್ನು ಬಿಂಬಿಸುತ್ತದೆ. ಆದ್ದರಿಂದಲೇ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ. ಮಕ್ಕಳು ಬುದ್ದಿವಂತರಗಲಿ ಎಂದು ಪೋಷಕರು […]
ಸೀರಿಯಲ್ ಸೆಟ್ನಿಂದ ಅನೂಪ್ ಭಂಡಾರಿಗೆ ಆಫರ್
ಸೀರಿಯಲ್ ಸೆಟ್ನಿಂದ ಅನೂಪ್ ಭಂಡಾರಿಗೆ ಆಫರ್
ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.
ಹಲವಾರು ಕನ್ನಡಿಗರ ನೆಚ್ಚಿನ ನಟ, ಆರಾಧ್ಯದೈವದಂತಿರುವ, ಅಪಾರ ಅಭಿಮಾನಿಗಳ ಸರದಾರ ‘ಡಿ ಬಾಸ್’ ದರ್ಶನ್ ಅವರು. ಇವರ ಸಿನಿಮಾ ಎಂದರೆ ಕನ್ನಡ ನಾಡಿನಲ್ಲೆಲ್ಲ ಹಬ್ಬದಂತೆ. ಇಂತಹ ನಾಯಕನಟರ ಮುಂದಿನ ಸಿನಿಮಾ ಸೆಟ್ಟೇರಲು ಸಿದ್ದವಾಗಿ ನಿಂತಿದೆ. ಸದ್ಯ ‘ಕ್ರಾಂತಿ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಡಿ ಬಾಸ್ ಅವರ ಮುಂದಿನ ಸಿನಿಮಾದ ಮುಹೂರ್ತಕ್ಕೆ ದಿನಾಂಕ ಗೊತ್ತಾಗಿದೆ. ಸದ್ಯ ಸುದ್ದಿಯಲ್ಲಿರುವ ಈ ಸಿನಿಮಾ ಬೇರಾವುದು ಅಲ್ಲದೇ ಎಲ್ಲೆಡೆ ಬಹುನಿರೀಕ್ಷೆ ಹುಟ್ಟಿಸಿರುವ ತರುಣ್ ಸುಧೀರ್ ಹಾಗು ದರ್ಶನ್ ಮತ್ತೊಮ್ಮೆ ಜೊತೆಯಾಗುತ್ತಿರುವ ಸಿನಿಮಾ. ಈಗಾಗಲೇ […]
ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ನೆಚ್ಚಿನ ನಟ. ಅಕಾಲದಲ್ಲಿ ನಮ್ಮನ್ನೆಲ್ಲ ಅಗಲಿದ್ದರೂ ಸಹ , ಅವರು ಹಾಗು ಅವರ ನೆನಪು ಎಂದಿಗೂ ಅಜರಾಮರ. ನಾಯಕನಟನಾಗಿ ಮಾತ್ರವಲ್ಲದೆ, ಅತಿಥಿ ಪಾತ್ರಗಳಲ್ಲಿ ವಿಶೇಷತೆಯಿಂದ ಬಂದು ಅಪ್ಪು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಾಲಿಗೆ ಹಲವು ಹೊಸಬರ ಸಿನಿಮಾ ಕೂಡ ಸೇರುತ್ತದೆ. ಸದ್ಯ ಅವರು ನಟಿಸಬೇಕಿದ್ದ, ನಟಿಸಲಾಗದ ಹೊಸ ಸಿನಿಮಾ, ಭಾರವಾದ ಹೃದಯದಿಂದಲೇ ತನ್ನ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರ ಬೇರಾವುದು ಅಲ್ಲದೇ, ಚಂದನವನದ ದಿಗ್ಗಜ ನಟರಾದ ರಂಗಾಯಣ […]
ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸಿನಿಮಾ ಮಾಡಿದವರು, ಮಾಡುತ್ತಲಿದ್ದಾರೆ ಕೂಡ. ಸದ್ಯ ಅವರ ಇಬ್ಬರೂ ಪುತ್ರರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಯಶಸ್ಸಿನ ಆರಂಭ ಕೂಡ ಪಡೆಯುತ್ತಿದ್ದಾರೆ. ಈಗ ಸುದ್ದಿಯಲ್ಲಿರುವುದು ರವಿಮಾಮನ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್. ಇತ್ತೀಚಿಗಷ್ಟೇ ತೆರೆಕಂಡ ಅವರ ಮೊದಲ ಸಿನಿಮಾ ‘ತ್ರಿವಿಕ್ರಮ’ ಇದೀಗ ಕಿರುತೆರೆಗೆ ಬರಲು ಸಜ್ಜಾಗಿ ನಿಂತಿದೆ. ಇದೇ ಜೂನ್ 24ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದ ‘ತ್ರಿವಿಕ್ರಮ’ ಚಿತ್ರ, ತನ್ನ ಹಾಡುಗಳು ಹಾಗು ಪ್ರೀ-ರಿಲೀಸ್ ಕಾರ್ಯಕ್ರಮಗಳಿಂದ ಎಲ್ಲೆಡೆ ಸುದ್ದಿಯಲ್ಲಿತ್ತು. […]
ನಟನೆಯಿಂದ ಬ್ರೇಕ್ ತೆಗೆದುಕೊಂಡ ನಿತ್ಯಾ ಮೆನನ್… ಕಾರಣ ಏನು ಗೊತ್ತಾ?
ಸ್ಟಾರ್ ನಟಿ ನಿತ್ಯಾ ಮೆನನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಮೆನನ್ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು. ಮಾತ್ರವಲ್ಲ ಮದುವೆ ಆಗಲೆಂದೇ ಅವರು ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೆ ಅವರು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹೌದು, ನಿತ್ಯಾ ಮೆನನ್ ಅವರು ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈಗ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ಅನೇಕ ವಿಚಾರಗಳ […]
ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ??
ಕನ್ನಡದ ನಟಿಮಣಿಯರು ಬೇರೆ ಭಾಷೆಯ ಚಿತ್ರರಂಗದಲ್ಲಿ ಹೋಗಿ ಮಿಂಚುವುದು ನಮಗೇನು ಹೊಸತಲ್ಲ. ಹಲವು ಕನ್ನಡದ ಹೀರೋಯಿನ್ ಗಳು ತಮಿಳು, ತೆಲುಗು ಜೊತೆಗೆ ಬಾಲಿವುಡ್ ನಲ್ಲೂ ಮೂಡಿ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಸದ್ಯ ಈ ಸಾಲಿಗೆ ಕನ್ನಡದ ಯುವನಟಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು, ‘ಪೆಳ್ಳಿ ಸಂದ ಡಿ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ, ಇದೀಗ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಹೊಸ ಸುದ್ದಿಯೆಂದರೆ ಕನ್ನಡತಿ ಶ್ರೀಲೀಲಾ ಅವರು […]
‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ.
‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸದ್ಯ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದೆ. ಅದ್ಭುತ ಓಪನಿಂಗ್ ಕಂಡಂತಹ ಈ ಸಿನಿಮಾ ಎಲ್ಲಾ ಕಡೆಯಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ, ಪಂಚ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ನಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಿದ್ದು, 3ಡಿಯಲ್ಲಿಯೂ ತೆರೆಕಂಡಿರುವುದು ಚಿತ್ರದ ಇನ್ನೊಂದು ವಿಶೇಷ. ಸದ್ಯ ಈ ಸಿನಿಮಾದ ಜೊತೆ ಕನ್ನಡದ ಇನ್ನೊಂದು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ ಕೈ ಜೋಡಿಸಿದೆ. ಆಗಸ್ಟ್ 12ರಂದು […]
ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್.
ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗಾಳಿಪಟ 2’ ತನ್ನ ಬಿಡುಗಡೆಯ ದಿನಾಂಕಕ್ಕೆ ಸನಿಹವಾಗುತ್ತಾ ಸಾಗುತ್ತಿದೆ. ನಿನ್ನೆಯಷ್ಟೇ(ಜುಲೈ 26) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಹೊಟ್ಟೆಹುಣ್ಣಾಗಿಸುವಷ್ಟು ಈ ಸಿನಿಮಾ ನಗಿಸುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ‘ವಿಕಟಕವಿ’ ಯೋಗರಾಜ್ ಭಟ್ ಅವರಿಗೆ ಮರಳಿ ತಮ್ಮ ಯಶಸ್ಸು ಸಿಗಬಹುದೇನೋ ಎಂಬ ಆಸೆಯೂ ಒಂದಷ್ಟು ಜನರಲ್ಲಿದೆ. ಚುಟುಕಾಗಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರೋ ಚಿತ್ರತಂಡ, ತನ್ನ ಟ್ರೈಲರ್ ಬಿಡುಗಡೆಯ ದಿನಾಂಕ ಹೊರಹಾಕಿದೆ. ‘ಗಾಳಿಪಟ’ ಯೋಗರಾಜ್ ಭಟ್ ಹಾಗು ಗಣೇಶ್ […]
ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ
ಕನ್ನಡ ಕಿರುತೆರೆಯಲ್ಲಿ ಜೆಕೆ ಅಭಿನಯದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಪ್ರಸಾರ ಕಂಡು ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿಕ್ಕಾಪಟ್ಟೆ ಫೇಮಸ್ ಆದರು. ನಂತರದಲ್ಲಿ ಸ್ಯಾಂಡಲ್ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಹಿಂದಿ ಕಿರುತೆರೆ ಕಡೆ ಮುಖ ಮಾಡಿದ ಜೆಕೆ, ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ಇದೀಗ ಮತ್ತೆ ಹಿಂದಿ ಸೀರಿಯಲ್ ನತ್ತ ಮತ್ತೆ […]