‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ.

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಹೊಸತನ ಕೇವಲ ಚಿತ್ರದ ಮೇಕಿಂಗ್ ನಲ್ಲಿರದೆ, ಕಥೆಗಳಲ್ಲೂ ಕಾಣುತ್ತಿರುವುದು ಸಂತೋಷ. ಹಲವು ಸಮಾಜಸ್ನೇಹಿ ವಿಚಾರಗಳನ್ನು ಕೂಡ ನಮ್ಮ ಕನ್ನಡದ ಸಿನಿಮಾಗಳು ಹೊತ್ತು ತಂದಿರೋ ಉದಾಹರಣೆಗಳಿವೆ. ಅದರಲ್ಲೊಂದು ಇತ್ತೀಚೆಗೆ ಬಂದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸದ್ಯ ಈ ಸಿನಿಮಾ ಒಟಿಟಿ ಪರದೆ ಏರಿದೆ. ಮಧು ಚಂದ್ರ ಅವರು ಬರೆದು ನಿರ್ದೇಶಿಸಿರೋ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾದಲ್ಲಿ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಹಾಗು ಮೇಘನಾ ರಾಜ್ […]
ಚಿತ್ರಮಂದಿರಗಳಲ್ಲಿ ನೋಡಲು ಸಿಗದ ಇನ್ನೊಂದು ದೃಶ್ಯವನ್ನ ಬಿಡುಗಡೆ ಮಾಡಿದ ‘777 ಚಾರ್ಲಿ’.

‘777 ಚಾರ್ಲಿ’ ಈ ಹೆಸರು ಯಾರಿಗೇ ತಾನೇ ತಿಳಿದಿಲ್ಲ. ಚಾರ್ಲಿ ಎಂದ ತಕ್ಷಣ ಹೆಸರಾಂತ ಚಾರ್ಲಿ ಚಾಪ್ಲಿನ್ ಅವರನ್ನು ನೆನೆಯುತ್ತಿದ್ದ ಜನ, ಇದೀಗ ನಾಯಿಯೊಂದನ್ನ ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅವರ ಅಭಿನಯದ ‘777 ಚಾರ್ಲಿ’ ಸಿನಿಮಾ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಒಟಿಟಿ ಪರದೆ ಮೇಲೆ ಬರಲು ಕೂಡ ಸಜ್ಜಾಗಿದೆ. ಈ ನಡುವೆ ಥಿಯೇಟರ್ ಗಳಲ್ಲಿ ನೋಡಲು ಸಿಗದಿರುವಂತಹ ಸಿನಿಮಾದ ಅಂತಿಮ ಹಂತದಲ್ಲಿ ಡಿಲೀಟ್ ಮಾಡಲಾದ ದೃಶ್ಯವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. […]
ಸದ್ಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎನ್ನುತ್ತಿದೆ ಒಟಿಟಿ!!

ಬೆಳ್ಳಿತೆರೆ ಮೇಲೆ ತೆರೆಕಂಡ ಸಿನಿಮಾಗಳಿಗೆ ಯಶಸ್ಸು ಎಷ್ಟು ಸಿಗುತ್ತದೋ, ಆದರೆ ಪ್ರೇಕ್ಷಕರನ್ನು ತಲುಪಲು ಎರಡೆರಡು ಅವಕಾಶ ದೊರೆಯುತ್ತದೆ ಎನ್ನಬಹುದು. ಚಿತ್ರಮಂದಿರಗಳಲ್ಲಿ ಒಂದಿಷ್ಟು ಕಾಲ ಓಟ ನಡೆಸಿ ನಂತರ ಇನ್ನೊಮ್ಮೆ ‘ಒಟಿಟಿ’ಯ ಮೂಲಕ ಕಿರುತೆರೆ ಪರದೆ ಮೇಲೆ ಸುದ್ದಿಯಲ್ಲಿರಬಹುದು. ಒಟಿಟಿಗೆ ಹೊಸ ಸಿನಿಮಾಗಳ ಸೇರ್ಪಡೆಗಳು ಆಗುತ್ತಲೇ ಇರುತ್ತವೆ. ಸದ್ಯ ಕನ್ನಡಿಗರ ಮನಸ್ಸಿಗೆ ಮುದ ನೀಡಿದ್ದ ಸಿನಿಮಾ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತನ್ನ ಒಟಿಟಿ ಪಯಣ ನಡೆಸಿದೆ. ಇದೇ ಏಪ್ರಿಲ್ 29ರಂದು ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಿದ್ದ ‘ಕ್ಷಮಿಸಿ […]
‘ಕ್ರಾಂತಿ’ಗೆ ಧ್ವನಿಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಬಹುನಿರೀಕ್ಷಿತ ‘ಕ್ರಾಂತಿ’, ಬಹುವೇಗದಲ್ಲಿ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಚಿತ್ರ ಸದ್ಯ ಚಿತ್ರೀಕರಣದ ಘಟ್ಟದಲ್ಲಿದೆ. ಇತ್ತೀಚಿಗಷ್ಟೇ ಹೊರದೇಶವಾದ ಪೋಲ್ಯಾಂಡ್ ನಲ್ಲಿ ತಮ್ಮ ಒಂದು ಹಂತದ ಚಿತ್ರೀಕರಣವನ್ನು ‘ಕ್ರಾಂತಿ’ ಮುಗಿಸಿಕೊಂಡಿದ್ದು, ಅದರ ಸಂಭಂದಿತ ಫೋಟೋ ಒಂದು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ ಡಬ್ಬಿಂಗ್ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಪಡೆದಿರೋ ನಟರುಗಳಲ್ಲಿ ಒಬ್ಬರಾದ ದಾಸ ದರ್ಶನ್ ಅವರ 55ನೇ […]
‘ವಿಕ್ರಾಂತ್ ರೋಣ’ನ ಕಾರ್ಯಕ್ರಮದಲ್ಲಿ ಅಚ್ಚರಿ ಮೂಡಿಸಿದ ಸುದೀಪ್!!

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಜುಲೈ 28ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಸುದೀಪ್ ಅವರನ್ನು ಹೊಸ ರೀತಿಯ ಪಾತ್ರದಲ್ಲಿ ನೋಡಲು, ಅದರಲ್ಲೂ 3ಡಿ ಯಲ್ಲಿ ಕಾಣಲು ಎಲ್ಲೆಡೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸದ್ಯ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಗಳು ನಡೆಯುತ್ತಿದ್ದು, ಇಂತದ್ದೇ ಒಂದು ಕಾರ್ಯಕ್ರಮದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಹಾಡನ್ನು ಹಾಡಿದ್ದಾರೆ ಕಿಚ್ಚ. ‘ವಿಕ್ರಾಂತ್ […]
ಸ್ಯಾಂಡಲ್ ವುಡ್ ಮೂಲಕ ಮತ್ತೆ ನಟನೆಗೆ ಹಾಜರ್ ಭರತ್ ಬೋಪಣ್ಣ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯ ನಾಯಕ ಲಕ್ಕಿ ಆಲಿಯಾಸ್ ಲಕ್ಷ್ಮಣ್ ಆಗಿ ಅಭಿನಯಿಸುತ್ತಿದ್ದ ಭರತ್ ಬೋಪಣ್ಣ ಇದೀಗ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಾದಂಬರಿ ಆಧಾರಿತ ಚಿತ್ರ ‘ಚಿಕ್ಕಿಯ ಮೂಗುತಿ” ಸಿನಿಮಾಗೆ ಭರತ್ ಬೋಪಣ್ಣ ಸಹಿ ಹಾಕಿದ್ದಾರೆ. ದೇವಿಕಾ ಜಾನಿತ್ರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಗ್ಗೆ ಮಾತನಾಡಿದ ಭರತ್ “ನಾನು ಸ್ಟೈಲಿಶ್ ಮತ್ತು ಭಾವೋದ್ರಿಕ್ತ ವನ್ಯಜೀವಿ ಛಾಯಾಗ್ರಾಹಕ ಜೋಸೆಫ್ ನ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಕೆಲಸಕ್ಕಾಗಿ ಯಾವುದೇ […]
ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’.

ಇಂದು(ಜುಲೈ 28) ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೇಲೆ ಪ್ರತಿಯೊಬ್ಬ ಸಿನಿಪ್ರೇಮಿಗೂ ಮುಗಿಲಿನೆತ್ತರದ ನಿರೀಕ್ಷೆಯಿದೆ. ಅನೂಪ್ ಭಂಡಾರಿ ಅವರ ಸೃಷ್ಟಿಯಾದ ಈ ‘ವರ್ಲ್ಡ್ ಆಫ್ ಫಾಂಟಮ್’ ಅನ್ನು ನೋಡಲು ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ಹೀಗಿರುವಾಗ ‘ವಿಕ್ರಾಂತ್ ರೋಣ’ ತಂಡ ತನ್ನ ಕಥೆಯ ಪ್ರಮುಖ ಪಾತ್ರಗಳ ಪರಿಚಯ ನೀಡಿದೆ. ವಿಭಿನ್ನವಾಗಿ ವಿಶೇಷವಾಗಿರುವ ಹೆಸರು ಹಾಗು ಪ್ರಯತ್ನಗಳಿಂದ ಈಗಾಗಲೇ ಗಮನ ಸೆಳೆದಿರುವ ಚಿತ್ರ ಇದು. ಈಗ ಹೊರಬಿದ್ದಿರುವ ಪಾತ್ರಗಳ ಹೆಸರಿಗೂ ಅಷ್ಟೇ ತೂಕವಿರುವುದು ಗಮನಾರ್ಹ. ನಮಗೆಲ್ಲರಿಗೂ ತಿಳಿದಿರುವ ಹಾಗೇ […]
‘ಲಕ್ಕಿ ಮ್ಯಾನ್’ ಅಪ್ಪುವಿಗೆ ಇರಲಿದೆಯಾ ಅವರದೇ ಧ್ವನಿ!!

ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಿರುವ ಮುಂದಿನ ಸಿನಿಮಾ ‘ಲಕ್ಕಿ ಮ್ಯಾನ್’. ‘ಜೇಮ್ಸ್’ ಸಿನಿಮಾದಲ್ಲಿ ಅವರು ಕೊನೆಯ ಬಾರಿ ನಾಯಕರಾಗಿ ನಟಿಸಿದ್ದರೆ, ‘ಲಕ್ಕಿ ಮ್ಯಾನ್’ನಲ್ಲಿ ವಿಶೇಷ ಪಾತ್ರವೊಂದಾಗಿ ದೇವರಾಗಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ನಿನ್ನೆ (ಜುಲೈ 25) ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಪ್ಪುವನ್ನು ಇನ್ನೊಮ್ಮೆ ತೆರೆಮೇಲೆ ಕಾಣಬಹುದು ಎಂಬ ಅಂಶವೇ ಅದೆಷ್ಟೋ ಕನ್ನಡಿಗರಿಗೆ ಸಂತಸ ನೀಡುತ್ತಿದೆ, ಇನ್ನೂ ಈ ಚಿತ್ರದ ಬಗೆಗಿನ ಇನ್ನಷ್ಟು […]
ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ

‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ ಥೀಮ್ ವಿಡಿಯೋ ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಈ ಸಂಭ್ರಮಕ್ಕೆ ಚಿತ್ರತಂಡ ರಾಗ ಸುಧಾ ಮೇಕಿಂಗ್ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಈ ಹಾಡಲ್ಲಿ ಬೈರಾಗಿ ಖ್ಯಾತಿಯ ಯಶಾ ಹಾಕಿರೋ ಸ್ಟೆಪ್ಸ್ ಈಗ ಸಖತ್ ಟ್ರೆಂಡಿಗಲ್ಲಿದೆ. ಜತೆಗೆ ಈ ಹಾಡಿನ ಕವರ್ ವರ್ಶನ್ಸ್ ಬರ್ತಿದ್ದು, ಹಾಡಿನಷ್ಟೇ ಕವರ್ ವರ್ಶನ್ಸ್ ಕೂಡ ಸದ್ದು ಮಾಡುತ್ತಿದೆ. ವಿಖ್ಯಾತ್ ಅವರ ನಿರ್ಮಾಣ , ಪುಷ್ಪಕ ವಿಮಾನ ರವೀಂದ್ರನಾಥ್ ಅವರ ನಿರ್ದೇಶನ, ಡಾಲಿ […]
ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ?

‘ಗಾಳಿಪಟ’, ಹಲವು ಕನ್ನಡಿಗರ ಮನದಲ್ಲಿ ಸದಾ ಉಳಿಯುವ ಸಿನಿಮಾ ಇದು. ದಶಕಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಮೂರು ಸ್ನೇಹಿತರ ಕಥೆ ಹೇಳುತ್ತಾ, ಪರಿಶುದ್ಧ ಪ್ರೇಮವನ್ನ ಕನ್ನಡಿಗರಿಗೆ ತೋರಿಸಿತ್ತು. ಸದ್ಯ ‘ಗಾಳಿಪಟ’ದ ಪ್ರಮುಖ ರೂವಾರಿಗಳಾದ ಯೋಗರಾಜ್ ಭಟ್ ಹಾಗುD ಗಣೇಶ್ ಅವರು ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಜೋಡಿಯ ‘ಗಾಳಿಪಟ 2 ಸಿನಿಮಾ ಸಿದ್ದವಾಗಿದ್ದು ಬಿಡುಗಡೆಗೂ ಸನ್ನಿಹಿತವಾಗುತ್ತಿದೆ. ಈ ನಡುವೆ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದೂ, ‘ಗಾಳಿಪಟ 2’ನಲ್ಲಿನ ಗಣೇಶ್ ಅವರ ಪಾತ್ರದ ಕ್ಯಾರೆಕ್ಟರ್ ಟೀಸರ್ […]

