ಅಬ್ಬರಿಸಲು ತಯಾರಾಗುತ್ತಿದ್ದಾರೆ ಪ್ರಜ್ವಲ್ ದೇವರಾಜ್

ನಟ ಪ್ರಜ್ವಲ್ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ 29ನೇ ಸಿನಿಮಾ ‘ಅಬ್ಬರ’ ತೆರೆಗೆ ಬರಲು ರೆಡಿ ಆಗಿದೆ. ‘ಸಾಗರ್‌’ ಚಿತ್ರದ ನಂತರ ಮತ್ತೊಮ್ಮೆ ಮೂವರು ನಾಯಕಿಯರ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ ಪ್ರಜ್ವಲ್. ‘ಟೈಸನ್’, ‘ಕ್ರ‍್ಯಾಕ್’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಕೆ. ರಾಮ್‌ನಾರಾಯಣ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ‘ಅಬ್ಬರ’ ಚಿತ್ರವನ್ನು ಮಾಡಿದ್ದಾರೆ. ಸಿ & ಎಂ ಮೂವೀಸ್ ಲಾಂಛನದಡಿಯಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, […]

ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ

‘ನ್ಯಾಷನಲ್ ಕ್ರಶ್’ ಎಂದೇ ಎಲ್ಲೆಡೆ ಪ್ರಸಿದ್ದರಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಪಾನ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಕನ್ನಡದಿಂದ ಆರಂಭಿಸಿ, ತೆಲುಗು, ತಮಿಳು ಈಗ ಹಿಂದಿಯಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಅಭಿನಯda ಮೊದಲ ಬಾಲಿವುಡ್ ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.ಅದೇ ‘ಗುಡ್ ಬೈ’ ಸಿನಿಮಾ. ರಕ್ಷಿತ್ ಶೆಟ್ಟಿಯವರ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಆರಂಭವಾದ ರಶ್ಮಿಕಾ ಅವರ ಸಿನಿಪಯಣ, ಸದ್ಯ ಬಾಲಿವುಡ್ ನಲ್ಲಿ ಓಡುತ್ತಿದೆ. ಪ್ರತೀ ಭಾಷೆಯ ಚಿತ್ರರಂಗಗಳಲ್ಲೂ ಅಪಾರ ಅಭಿಮಾನಿ […]

‘ವಿಕ್ರಾಂತ್ ರೋಣ’ನೊಂದಿಗೆ ಬರಲಿದೆಯಾ ‘ಪರಮ್ ವಾಹ್’

ಸದ್ಯ ಭಾರತದಾದ್ಯಂತ ಸಿನಿರಸಿಕರು ಎದುರುಗಾಣುತ್ತಿರುವ ಸಿನಿಮಾಗಳಲ್ಲಿ ಒಂದು ನಮ್ಮ ಕನ್ನಡದ ಪಾನ್ m-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’. ಎಲ್ಲೆಡೆ ಗುಲ್ಲೆಬ್ಬಿಸುತ್ತಿರುವ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ವಿವಿಧ ಕಡೆಗಳಲ್ಲಿ ತೆರೆಕಾಣುತ್ತಿದೆ. ಹಾಡುಗಳು ಹಾಗು ಟ್ರೈಲರ್ ನಿಂದ ತನ್ನ ಮೇಲಿದ್ದ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡ ಈ ಸಿನಿಮಾ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ ಚಿತ್ರದ ಬಗೆಗಿನ ಹೊಸ ಹೊಸ ಸುದ್ದಿಗಳು ಹೊರಬೀಳುತ್ತಿವೆ. ‘ಅಭಿನಯ ಚಕ್ರವರ್ತಿ ‘ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ […]

ಪತ್ನಿಯಿಂದಲೇ ಬಿಡುಗಡೆ ಕಂಡ ಅಪ್ಪು ಹೊಸ ಟೀಸರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷವೇ ಕಳೆಯುತ್ತಾ ಬಂತು. ಆದರೂ ಅವರು ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರ. ಅವರ ನಡತೆ ಹಾಗು ವ್ಯಕ್ತಿತ್ವಗಳಿಂದ ಎಲ್ಲರ ನಡುವೆಯೇ ಜೀವಂತವಾಗಿರುವ ಅವರು, ಕಲೆಯಿಂದ ಇನ್ನೂ ಜೀವಂತ ಎನ್ನಬಹುದು. ಸದ್ಯ ಅಪ್ಪು ಅಭಿನಯಿಸಿರೋ ಹೊಸ ಚಿತ್ರಗಳು ತೆರೆಕಡೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಮರಳಿ ಕೀರ್ತಿ […]

ಹೊಸ ಲುಕ್ ನಲ್ಲಿ ಮೋಡಿ ಮಾಡಲಿದ್ದಾರೆ ರಂಗಿತರಂಗ ನಟಿ

ಚೇಸ್ ಸಿನಿಮಾ ಮುಖಾಂತರ ಎರಡು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ರಾಧಿಕಾ ಚೇತನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ ಹಾಗೂ ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಜುಲೈ 15ರಂದು ಬಿಡುಗಡೆಯಾಗಿದೆ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಧಿಕಾ ನಾರಾಯಣ್”ತರಬೇತಿಯ ಅವಧಿಯಲ್ಲಿರುವ ಒಂದು ಪೋಲಿಸ್ ನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಪೊಲೀಸ್ ಡಿಪಾರ್ಟ್ಮೆಂಟ್ ಗೆ ಸೇರಬೇಕೆನ್ನುವ ಆಸೆ ಇದ್ದರೂ ಕಥೆಯ ತಿರುವು ಯಾವುದೋ ಅರಿಯದ ಊರಿನಡೆಗೆ […]

‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಿಂದ ಬರುತ್ತಿವೆ ಹೊಸ-ಹೊಸ ಸುದ್ದಿಗಳು.

‘ನಟರಾಕ್ಷಸ’ ಡಾಲಿ ಧನಂಜಯ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದರ ಜೊತೆಗೆ ಈಗಾಗಲೇ ನಟಿಸಿ ಮುಗಿಸಿರುವ ಹಲವು ಸಿನಿಮಾಗಳ ಬಿಡುಗಡೆಗೂ ಕಾಯುತ್ತಿದ್ದಾರೆ. ಅವುಗಳಲ್ಲಿ ಒಂದು ಕುಶಾಲ್ ಗೌಡ ಅವರ ನಿರ್ದೇಶನದ ‘ಒನ್ಸ್ ಅಪಾನ್ ಟೈಮ್ ಇನ್ ಜಮಾಲಿಗುಡ್ಡ’ ಕೂಡ ಒಂದು. ಇದೇ ಸೆಪ್ಟೆಂಬರ್ 9ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ, ತನ್ನ ಕಥೆಯ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಿರುವುದು ಒಂದು ಕಡೆಯಾದರೆ, ಇದರ ಜೊತೆಗೆ ತನ್ನ ಮೊದಲ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ತನ್ನ ವಿಭಿನ್ನ ಶೀರ್ಷಿಕೆ […]

ಕನ್ನಡದ ಹೆಮ್ಮೆಯ ಕೆಜಿಎಫ್ ಗೆ 100ದಿನಗಳ ಸಂಭ್ರಮ.

ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’ ಎಂಬ ವ್ಯವಸ್ಥೆ ಎಂದರೆ ತಪ್ಪಾಗದು. ‘ಪಾನ್-ಇಂಡಿಯಾ’ ಮಟ್ಟದಲ್ಲಿ ಸ್ಯಾಂಡಲ್ವುಡ್ ನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆದಿರುವ ಬಹುಪಾಲು ಕೀರ್ತಿ ‘ಕೆಜಿಎಫ್’ ಚಿತ್ರಗಳದ್ದು ಎಂದರೆ ಅಲ್ಲಗಳೆಯುವಂತಿಲ್ಲ. ‘ಕೆಜಿಎಫ್ ಚಾಪ್ಟರ್ 1’, ಹಾಗು ‘ಕೆಜಿಎಫ್ ಚಾಪ್ಟರ್ 2’ ಎರಡೂ ಸಿನಿಮಾಗಳು ಸಹ ಸದ್ಯ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿವೆ. ಇದರ ಎರಡನೇ ಅಧ್ಯಾಯ […]

ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿ ಅಂಬರ್

ಈಗಿರುವ ಬ್ಯುಸಿ ಸ್ಯಾಂಡಲ್‌ವುಡ್‌ ನಟರಲ್ಲಿ ಪೃಥ್ವಿ ಅಂಬರ್ ಕೂಡ ಒಬ್ಬರು. ‘ದಿಯಾ’ ಸಿನಿಮಾದಿಂದ ಶುರುವಾದ ಪೃಥ್ವಿ ಅಂಬರ್ ಅವರ ಯಶಸ್ಸಿನ ಪಯಣ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್ ಅವರ ಜೊತೆಗೆ ಪೃಥ್ವಿ ಅಂಬರ್ ನಟಿಸಿದ್ದ ‘ಬೈರಾಗಿ’ ಸಿನೆಮಾ ರಿಲೀಸ್ ಆಗಿತ್ತು. ನಂತರ ಜುಲೈ 8 ರಂದು ಪೃಥ್ವಿ ಹೀರೋ ಆಗಿದ್ದ ‘ಶುಗರ್‌ಲೆಸ್’ ರಿಲೀಸ್ ಆಯ್ತು. ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ಈ ಸಿನೆಮಾದ ನಂತರ ಈಗ ಪೃಥ್ವಿ ಅಂಬರ್ ಅವರ ಹೊಸ ಸಿನಿಮಾದ ಕುರಿತು ಮಾಹಿತಿ ಹೊರಬಂದಿದೆ. ಅದೇನೆಂದರೆ, […]

ಒಟಿಟಿ ಕನ್ನಡಿಗರಿಗೆ ಈ ವಾರ ಹಬ್ಬವೋ ಹಬ್ಬ.

ಬೆಳ್ಳಿತೆರೆಯ ಮೇಲೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಚಲನಚಿತ್ರಗಳು ಟಿವಿಯ ಕಿರುತೆರೆಮೇಲೂ ಬರಲು ಪ್ರಾರಂಭಿಸಿ ಅದೆಷ್ಟೋ ಕಾಲವಾಯ್ತು. ಇದೀಗ ಅಧಿಕೃತವಾಗಿ ಮೊಬೈಲ್ ಫೋನ್ ಗಳ ಕಿರುಪರದೆ ಮೇಲೂ ಬರಲಾರಂಭಿಸಿವೆ. ಇದಕ್ಕೆ ಮುಖ್ಯ ಕಾರಣ ‘ಒಟಿಟಿ’.ಕೊರೋನ ನಂತರವಂತು ನೇರವಾಗಿ ಒಟಿಟಿ ಮೆಟ್ಟಿಲೇರೋ ಸಿನಿಮಾಗಳು ಬರುತ್ತಿವೆ. ಅಂತೆಯೇ ಈ ವಾರ ಕನ್ನಡದ ಒಟಿಟಿ ಪ್ರೀಯರಿಗೆ ಮನರಂಜನೆಗೆ ಹಲವು ಆಯ್ಕೆಗಳು ಸಿಗುತ್ತಿವೆ. ಥೀಯೇಟರ್ ಗಳಲ್ಲಿ ತಮ್ಮ ಓಟ ಮುಗಿಸಿಕೊಂಡು ಈ ವಾರ ಒಟಿಟಿ ಕಡೆಗೆ ಬರುತ್ತಿರೋ ಹಲವು ಸಿನಿಮಾಗಳು ಕನ್ನಡದಲ್ಲೇ ನೋಡಲು ಸಿಗುತ್ತಿವೆ. […]

ಬಿಡುಗಡೆಗೆ ಮುಹೂರ್ತವಿಟ್ಟ ಮಧುರ ಪ್ರೇಮಕತೆ

“ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ” ಸದ್ಯ ಬಹುಪಾಲು ಕನ್ನಡಿಗರು ದಿನನಿತ್ಯ ಗುನುಗುತ್ತಿರೋ ಸಾಲಿದು.’ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಪ್ರಖ್ಯಾತ ಗಾಯಕ ಸಿಡ್ ಶ್ರೀರಾಮ್ ಅವರ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಕನ್ನಡಿಗರೆಲ್ಲರ ಮನಸೆಳೆದಿತ್ತು. ಕನ್ನಡದ ಯಶಸ್ವಿ ನಿರ್ದೇಶಕರಾದ ಶಶಾಂಕ್ ಅವರ ಸಿನಿಮಾ ‘ಲವ್ 360’ಯ ಹಾಡು ಇದಾಗಿತ್ತು. ಹಾಡಿನಿಂದಲೇ ಪ್ರಸಿದ್ದಿ ಪಡೆದ ಈ ಸಿನಿಮಾ ಇದೀಗ ತನ್ನ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ‘ಕೃಷ್ಣಲೀಲಾ’, ‘ಮುಂಗಾರು ಮಳೆ 2’ ಸೇರಿ ಹಲವು […]