ಒಟಿಟಿಯಲ್ಲಿ ಪಾಠ ಹೇಳಲಿದ್ದಾರೆ ‘ಫಿಸಿಕ್ಸ್ ಟೀಚರ್’

ಕನ್ನಡ ಚಿತ್ರರಂಗ ಮುಂದುವರಿಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳಿಗೆ ತವರಾಗುತ್ತಿದೆ. ದೊಡ್ಡ ಬಜೆಟ್ ನ ಪಾನ್-ಇಂಡಿಯನ್ ಸಿನಿಮಾಗಳಿಂದ ಹಿಡಿದು, ಸಣ್ಣ ಮಟ್ಟದ ಹೊಸ ವಿಚಾರಗಳನ್ನೊಳಗೊಂಡ ಸಿನಿಮಾಗಳ ವರೆಗೆ ಎಲ್ಲವೂ ನಮ್ಮಲ್ಲಿದೆ. ಇದೇ ರೀತಿಯ ಹೊಸ ರೀತಿಯ ಸಿನಿಮಾಗಳಲ್ಲಿ ಒಂದು ‘ಫಿಸಿಕ್ಸ್ ಟೀಚರ್’. ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸನ್ನು ಕಾಣದೆ ಇದ್ದರೂ ಸಹ, ಸಿನಿವಿಮರ್ಶಕರ ಮೆಚ್ಚುಗೆ ಪಡೆದ ಈ ಸಿನಿಮಾ ಇದೀಗ ಒಟಿಟಿ ಪರದೆ ಕಡೆಗೆ ಹೊರಟಿದೆ. ಸುಮುಖ ಎಂಬ ಹೊಸ ಯುವಪ್ರತಿಭೆ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ವಿಜ್ಞಾನ ಹಾಗು […]

ಕನ್ನಡದಲ್ಲೂ ಬರುತ್ತಿದೆ ಆರ್ ಮಾಧವನ್ ಅವರ ‘ರಾಕೆಟ್ರಿ’.

ಭಾರತ ಚಿತ್ರರಂಗದ ಪ್ರಖ್ಯಾತ ನಟ, ಭಾಷೆಗಳ ಭೇದಭಾವವಿಲ್ಲದ ಅನೇಕ ಅಭಿಮಾನಿಗಳನ್ನು ಪಡೆದಿರುವ ನಟರಾದ ಆರ್ ಮಾಧವನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ‘ರಾಕೆಟ್ರಿ’. ಭಾರತದ ಬಾಹ್ಯಕಾಶ ಸಂಸ್ಥೆ ‘ಇಸ್ರೋ’ನ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದಂತಹ ನಂಬಿ ನಾರಾಯಣ್ ಅವರ ಜೀವನದಾರಿತ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು, ಕಿರುತೆರೆಯ ಮೇಲೆ ಕನ್ನಡದಲ್ಲೂ ಬರುತ್ತಿದೆ ‘ರಾಕೆಟ್ರಿ’. ಸ್ವತಃ ಆರ್ ಮಾಧವನ್ ಅವರೇ ಬರೆದು, ನಿರ್ದೇಶಿಸಿ, ನಟಿಸಿರುವ […]

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ.

ಭಾರತ ಚಿತ್ರರಂಗದ ಸಿನಿಮಾಗಳಿಗೆ ನಮ್ಮ ದೇಶದ ಮಟ್ಟದಲ್ಲಿ ದಕ್ಕುವಂತಹ ಅತೀ ಶ್ರೇಷ್ಠ ಪ್ರಶಸ್ತಿಯೆಂದರೆ ಅದು ‘ರಾಷ್ಟ್ರ ಪ್ರಶಸ್ತಿ’. ಸದ್ಯ 68ನೇ ರಾಷ್ಟ್ರಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದಿದ್ದು, ಕನ್ನಡದ ಎರಡು ಸಿನಿಮಾಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಸೂರ್ಯ ಅವರ ನಟನೆಯ ತಮಿಳಿನ ಪ್ರಖ್ಯಾತ ಸಿನಿಮಾ ‘ಸೂರರೈ ಪೋಟ್ರು’ ಈ ಬಾರಿ ಅತೀ ಹೆಚ್ಚು ಅವಾರ್ಡ್ ಗಳನ್ನು ತಮ್ಮದಾಗಿಸಿಕೊಂಡಿದೆ. ಸುಮಾರು ಮೂವತ್ತು ಭಾಷೆಗಳಿಂದ ಒಟ್ಟು, 305 ಸಿನಿಮಾಗಳನ್ನು ಪ್ರಶಸ್ತಿಯ ಪೈಪೋಟಿಗೆ ಪರಿಗಣಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ಪರಿಸರದ ಬಗೆಗಿನ ಚಿತ್ರ ಎಂದು ಸಂಚಾರಿ […]

ಎವೆರಿಥಿಂಗ್ ಈಸ್ ಪಾಸಿಬಲ್ ಅಂಥ ಹೇಳ್ತಿದ್ದಾರೆ ಖುಷಿ

ದಿಯಾ ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲಿ ಬರುವ ದಿಯಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಖುಷಿ ರವಿಗೆ ಆನಂತರ ಸಾಲು, ಸಾಲು ಆಫರ್ ಗಳು ಬರಲಾರಂಬಿಸಿದವು. ದಿಯಾ ಸಿನಿಮಾದಿಂದ ಖ್ಯಾತಿ ಪಡೆದ ಖುಷಿ ರವಿ ಈಗ ಕಿರು ಚಿತ್ರದಲ್ಲೂ ನಟಿಸಿದ್ದಾರೆ. ಎಂ.ಕೆ ಮಠ ನಟನೆಯ ‘ಎವೆರಿಥಿಂಗ್ ಈಸ್ ಪಾಸಿಬಲ್ ‘ ಎನ್ನುವ ಕಿರುಚಿತ್ರವನ್ನು ಮಾಡಿದ್ದಾರೆ. ರಂಗಭೂಮಿ ಕಲಾವಿದರು ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಜೀವನದಿ ಸೀರಿಯಲ್ […]

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

ರಕ್ಷಿತ್ ಶೆಟ್ಟಿ ಅವರ ನೇತೃತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನ ನೀಡಿರುವಂತಹ ಸಿನಿಮಾ ನಿರ್ಮಾಣ ಸಂಸ್ಥೆ. ಹಲವು ಹೊಸ ಪ್ರತಿಭೆಗಳಿಗೆ ಮೆಟ್ಟಿಲಾಗಿ, ಹೊಸ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ ಹೊಸದೊಂದು ಚಿತ್ರಕ್ಕೆ ‘ಪರಮ್ ವಾಹ್ ಸ್ಟುಡಿಯೋಸ್’ ಕೈ ಹಾಕಿದ್ದು ಚಿತ್ರದ ನಾಯಕ ಹಾಗು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಬರವಣಿಗೆ ತಂಡವಾದ ‘ಸೆವೆನ್ ಓಡ್ಸ್’ ಹಲವು ಉತ್ತಮ ಕಥೆಗಳಿಗೆ ಕಾರಣವಾಗಿದ್ದಾರೆ. ಸದ್ಯ ಅದೇ ತಂಡದ ಸದಸ್ಯರು ಸಿನಿಮಾ ನಿರ್ದೇಶನದತ್ತ […]

ಬ್ಯೂಟಿಷಿಯನ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಕಾರುಣ್ಯಾ ರಾಮ್

2019ರಲ್ಲಿ ತೆರೆಕಂಡ ‘ಮನೆ ಮಾರಾಟಕ್ಕಿದೆ’ ಸಿನಿಮಾದ ಮೂಲಕ ಕೊನೆಯ ಬಾರಿ ತೆರೆಯಲ್ಲಿ ಕಾಣಿಸಿಕೊಂಡಿದ್ದ ನಟಿ ಕಾರುಣ್ಯ ರಾಮ್ ಇದೀಗ ಹಾಸ್ಯ ಚಿತ್ರ ‘ಪೆಟ್ರೋಮ್ಯಾಕ್ಸ್’ ಮೂಲಕ ಮತ್ತೆ ಸಿನಿರಂಗಕ್ಕೆ ಮರಳಿದ್ದಾರೆ.ಎರಡೂವರೆ ವರ್ಷಗಳ ನಂತರ ತಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ ನಟಿ ಕಾರುಣ್ಯ. ಜುಲೈ 15ರಂದು ತೆರೆ ಕಾಣಲು ಸಿದ್ಧವಾಗಿರುವ ಪೆಟ್ರೋಮ್ಯಾಕ್ಸ್ ಬಗ್ಗೆ ಮಾತನಾಡಿದ ಅವರು ”ಯುನಿಸೆಟ್ ಸಲೂನ್ ಒಂದರಲ್ಲಿ ಬ್ಯೂಟಿಷಿಯನ್ ಆಗಿರುವ ಕವಿತಾ ಕೃಷ್ಣಮೂರ್ತಿ ಎಂಬ ಪಾತ್ರವನ್ನು ನಾನು ನಿಭಾಯಿಸುತ್ತಿದ್ದೇನೆ. ಇದು ನನ್ನ ವೃತ್ತಿ ಜೀವನದಲ್ಲಿ […]

ಹಿರಿತೆರೆ ಏರಿರೋ ‘ಪೆಟ್ರೋಮ್ಯಾಕ್ಸ್’ನ ಕಿರುತೆರೆ ಪ್ರವೇಶ!!

‘ನೀರ್ದೋಸೆ’ ಎಲ್ಲರ ಮೆಚ್ಚುಗೆಯ ಮೇಲೆಯೇ ಸೂಪರ್ ಹಿಟ್ ಆದ ಸಿನಿಮಾ. ಹಲವು ತರಲೆಯುಳ್ಳ ಮಾತುಗಳ ಮೂಲಕ ಜೀವನದ ಕೆಲವು ಮುಖ್ಯ ನೀತಿಗಳನ್ನ ಹೇಳುವಂತಹ ಪ್ರಯತ್ನ ‘ನೀರ್ದೋಸೆ’ಯ ಮೂಲಕ ಮಾಡಲಾಗಿತ್ತು. ಅದೇ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ಮಾಡಿದ ಮುಂದಿನ ಸಿನಿಮಾ ‘ಪೆಟ್ರೋಮ್ಯಾಕ್ಸ್’. ಸತೀಶ್ ನೀನಾಸಂ ನಾಯಕರಾಗಿ ನಟಿಸಿರುವ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಇದೀಗ ಸಿನಿಮಾದ ಡಿಜಿಟಲ್ ಹಾಗು ಸಾಟೆಲೈಟ್ ಹಕ್ಕುಗಳ ಮಾರಾಟದ ಬಗೆಗೆ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಚಿತ್ರ ಯಾವ […]

ಕಿರುತೆರೆಯ ಕಡೆಗೆ ಹೊರಟಿದೆ ‘ಕೆಜಿಎಫ್ ಚಾಪ್ಟರ್ 2’.

‘ಕೆಜಿಎಫ್’ ಈ ಹೆಸರು ಯಾರಿಗೇ ಗೊತ್ತಿಲ್ಲ? ನಾಡಿನ ಚಿನ್ನದ ಗಣಿ ಒಂದು ಕಡೆಯಾದರೆ, ನಾಡಿನ ಚಿತ್ರರಂಗಕ್ಕೇ ಚಿನ್ನದಂತ ಸಿನಿಮಾಗಳಾದ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಸರಣಿ ಇನ್ನೊಂದು ಕಡೆ. ಸದ್ಯ ಚಿತ್ರಮಂದಿರಗಳಲ್ಲಿ ತನ್ನ ರಾಜ್ಯಭಾರ ನಡೆಸಿ ಮುಗಿಸಿರುವ ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ಪರದೆ ಮೇಲೆ ಸುದ್ದಿ ಮಾಡುತ್ತಿದೆ. ಇದೀಗ ‘ಕೆಜಿಎಫ್ ಚಾಪ್ಟರ್ 2’ ಕಿರುತೆರೆ ಪರದೆ ಮೇಲೆ ಬರಲು ಸಿದ್ಧವಾಗಿದೆ. ಏಪ್ರಿಲ್ 14ರಂದು ಥೀಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಎಲ್ಲಾ ಧಾಖಲೆಗಳನ್ನು ಮುರಿದು ಯಶಸ್ಸಿನ ಶಿಖರದ […]

ಒಂಬತ್ತು ವರ್ಷಗಳ ಸಂಭ್ರಮಕ್ಕೆ ರೀಮೇಕ್ ಆಗುತ್ತಿದೆ ಯಶ್ ಹಿಟ್ ಸಿನಿಮಾ.

ನಮ್ಮ ದೇಶದಾದ್ಯಂತ ‘ರಾಕಿ ಭಾಯ್’ ಎಂದೇ ಖ್ಯಾತರಾಗಿರುವ ನಮ್ಮ ಕನ್ನಡದ ‘ರಾಕಿಂಗ್ ಸ್ಟಾರ್’ ಯಶ್ ಅವರು ಕೆಜಿಎಫ್ ಚಿತ್ರದಿಂದ ಪ್ರಪಂಚದಾದ್ಯಂತ ಪ್ರಸಿದ್ದರಾದವರು. ಆದರೆ ಇದಕ್ಕಿಂತಲೂ ಮೊದಲು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನ ಯಶ್ ಅವರು ನೀಡಿದ್ದಾರೆ. ಅದರಲ್ಲಿ ಒಂದು ‘ಗೂಗ್ಲಿ’ ಸಿನಿಮಾ. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡಿಗರ ಮನಗೆದ್ದು ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇದೀಗ ಒಂಬತ್ತು ವರ್ಷಗಳ ಸಂಭ್ರಮದಲ್ಲಿರೋ ಈ ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಪವನ್ ಒಡೆಯರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ […]

ಕಿರುತೆರೆಗೆ ಕಾಲಿಡುತ್ತಿದ್ದಾನೆ ‘ಸಲಗ’.

ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರನ್ನು ನಿರ್ದೇಶಕನಾಗಿ ಗೆಲ್ಲಿಸಿದ ಸಿನಿಮಾ ‘ಸಲಗ’. ಮಂದಗತಿಯಲ್ಲಿ ಓಡುತ್ತಿದ್ದ ಅವರ ಸಿನಿಪಯಣಕ್ಕೆ ಅತೀವ ಚೈತನ್ಯ ತಂದುಕೊಟ್ಟ ಸಿನಿಮಾ ಇದು. ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಗೆದ್ದು, ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಇದೀಗ ಕಿರುತೆರೆಯ ಮೇಲೆ ಬರಲು ಸಜ್ಜಾಗಿದೆ. ಬಿಡುಗಡೆಯಾಗಿ ಸುಮಾರು ಒಂದು ವರ್ಷವೇ ಕಳೆಯುತ್ತಾ ಬಂದಮೇಲೆ ಇದೀಗ ಚಿತ್ರದ ಒಟಿಟಿ ಹಾಗು ಕಿರುತೆರೆ ಬಿಡುಗಡೆಯ ಬಗ್ಗೆ ಮಾತುಗಳು ಕೇಳುತ್ತಿದ್ದು, ಸಿನಿಮಾ ಕನ್ನಡದ ‘ಉದಯ ಟಿವಿ’ಯಲ್ಲಿ ಪ್ರದರ್ಶನ ಕಾಣಲಿರೋ ದಿನಾಂಕ […]