‘ರಾಘವೇಂದ್ರ ಸ್ಟೋರ್ಸ್’ ತೆರೆಮೇಲೆ ಸದ್ಯಕ್ಕಿಲ್ಲ

ಸದ್ಯ ಕನ್ನಡದ ಮುಂಚೂಣಿ ಸಿನಿಮಾ ನಿರ್ಮಾಣ ಸಂಸ್ಥೆ ಎಂದರೆ ಅದು ‘ಹೊಂಬಾಳೆ ಫಿಲಂಸ್’. ಕೆಜಿಎಫ್ ಸಿನಿಮಾದಿಂದ ತಮ್ಮ ಪ್ರಯತ್ನಕ್ಕೆ ಅತೀವ ಯಶಸ್ಸು ಪಡೆದ ಈ ಸಂಸ್ಥೆ ಸದ್ಯ ತಮ್ಮ ಕೈಯಲ್ಲಿ ಹಲವು ಸಿನಿಮಾಗಳನ್ನು ಇಟ್ಟುಕೊಂಡಿದೆ. ಅದರಲ್ಲಿ ಪಾನ್-ಇಂಡಿಯನ್ ಸಿನಿಮಾಗಳು ಮಾತ್ರವೇ ಅಲ್ಲದೇ ಏಕಭಾಷೆಯ ಸಿನಿಮಾಗಳು ಇವೆ. ಈ ಬಗೆಯ ಅಪ್ಪಟ ಕನ್ನಡ ಸಿನಿಮಾಗಳಲ್ಲಿ ಒಂದು ನವರಸ ನಾಯಕ ಜಗ್ಗೇಶ್ ಅವರ ಅಭಿನಯದ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್ಸ್’. ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಧಾರ ಮಾಡಿದ್ದ […]
ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.

‘ಡೈನಾಮಿಕ್ ಪ್ರಿನ್ಸ್’ ಎಂದೇ ಖ್ಯಾತರಾಗಿರುವ ದೇವರಾಜ್ ಅವರ ಪುತ್ರ ಖ್ಯಾತ ನಟ ಪ್ರಜ್ವಲ್ ದೇವರಾಜ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೆ ಒಂದರಂತೆ ಹೊಸ ಸಿನಿಮಾಗಳ ಮೂಲಕ ಬೆಳ್ಳಿತೆರೆ ಏರುತ್ತಿರುವ ಇವರ ಮುಂದಿನ ಸಿನಿಮಾವೊಂದು ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆ ಸಿನಿಮಾವೇ ‘ಅಬ್ಬರ’. ಕೆ ರಾಮನಾರಾಯಣ್ ಅವರು ನಿರ್ದೇಶಿಸಿರುವ ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಮೂರು ವಿಭಿನ್ನ ರೀತಿಯ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು(ಜುಲೈ 18) […]
ಅಪ್ಪು ಅಭಿಮಾನಿಗಳಿಗೆ ಸಂತಸ ನೀಡಿದ ಟ್ವಿಟರ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬ ಕನ್ನಡಿಗರ ಮನದ ಮಗ. ಅವರು ನಮ್ಮನ್ನಗಲಿ ವರುಷವೇ ಕಳೆದರೂ ಅವರ ವ್ಯಕ್ತಿತ್ವದ ಜೊತೆಗೆ ಅವರೇ ನಮ್ಮೆಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಹೀಗಿರುವಾಗ ಮಾಡಿದ್ದ ಒಂದು ಕೆಲಸದಿಂದ ಕನ್ನಡಿಗರ ಅಸಮಾಧಾನಕ್ಕೆ ‘ಟ್ವಿಟರ್’ ಸಂಸ್ಥೆ ಒಳಗಾಗಿತ್ತು. ಪುನೀತ್ ರಾಜಕುಮಾರ್ ಅವರ ಓಫೀಷಿಯಲ್ ಟ್ವಿಟರ್ ಖಾತೆಯಲ್ಲಿದ್ದ ‘ಪರಿಶೀಲನೆ’ಯ ಪ್ರತೀಕವಾದ ಬ್ಲೂ ಟಿಕ್ ಅನ್ನು ತೆಗೆದಿತ್ತು. ಸದ್ಯ ಈ ಬ್ಲೂ ಟಿಕ್ ಮರಳಿ ಬಂದಿದೆ. ಟ್ವಿಟರ್ ನಲ್ಲಿ ಯಾವುದೇ ‘ವೆರಿಫೈಡ್’ ಯಾನೆ ‘ಬ್ಲೂ ಟಿಕ್’ […]
“ರಕ್ಷಿತ್ ಶೆಟ್ಟಿಯವರ ತಂಡ ಸೇರಿರುವುದು ಅತೀವ ಸಂತಸ ತಂದಿದೆ”:ವಿಹಾನ್.

ಕನ್ನಡ ಚಿತ್ರರಂಗದಲ್ಲಿ ಸದ್ಯ ಹಲವು ಯುವನಟರು ಯಾವುದೇ ಹಿನ್ನೆಲೆಯಿಲ್ಲದೇ, ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಅಂತವರಲ್ಲಿ ‘ಪಂಚತಂತ್ರ’ ಸಿನಿಮಾ ಖ್ಯಾತಿಯ ವಿಹಾನ್ ಗೌಡ ಕೂಡ ಒಬ್ಬರು. ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಮೂಲಕ ನಾಯಕನಾಗಿ ಚಂದನವನಕ್ಕೆ ಬಂದ ಇವರು, ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣದೇ ಇದ್ದರೂ, ತಮ್ಮ ನಟನೆಯಿಂದ ಕನ್ನಡಿಗರ ಮನಗೆದ್ದರು. ಇದೀಗ ಇದೇ ವಿಹಾನ್ ಕನ್ನಡದ ಖ್ಯಾತ ಸಿನಿ ನಿರ್ಮಾಣ ಸಂಸ್ಥೆಯಾದ ರಕ್ಷಿತ್ ಶೆಟ್ಟಿಯವರ ‘ಪರಮ್ ವಾಹ್ ಸ್ಟುಡಿಯೋಸ್’ನ ಮುಂದಿನ ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರೆ. […]
‘ಗುಮ್ಮ’ನನ್ನೇ ಕರೆಯುತ್ತಿದ್ದಾನೆ ‘ವಿಕ್ರಾಂತ್ ರೋಣ’!!

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಅಭಿನಯದ ಅತೀ ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಮೇಲೆ ಬರೋ ದಿನಾಂಕkke ದಿನಗಣನೆ ನಡೆಯುತ್ತಿದೆ. ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ಭರದಲ್ಲಿದೆ ಚಿತ್ರತಂಡ. ಅದೇ ನಿಟ್ಟಿನಲ್ಲಿ ಸುದ್ದಿಗೋಷ್ಠಿಗಳು, ಯೂಟ್ಯೂಬ್ ಇಂಟರ್ವ್ಯೂಗಳು, ಹಾಡುಗಳು ಮುಂತಾದವು ನಡೆಯುತ್ತಿವೆ. ಇದೀಗ ಹೊಸ ಹಾಡೊಂದನ್ನು ಬಿಡಲು ಚಿತ್ರತಂಡ ನಿರ್ಧರಿಸಿದ್ದು, ‘ಗುಮ್ಮ ಬಂದ ಗುಮ್ಮ’ ಎಂಬ ಈ ಹಾಡು ಸಿನಿಮಾದಿಂದ ಹೊರಹೋಮ್ಮವ ಬಹುನಿರೀಕ್ಷಿತ ಹಾಡುಗಳಲ್ಲಿ ಒಂದಾಗಿತ್ತು. ‘ವಿಕ್ರಾಂತ್ ರೋಣ’ ಸಿನಿಮಾ […]
ಶಿವಣ್ಣನ ‘ಘೋಸ್ಟ್’ ತಂಡ ಸೇರಿದ ಕೆಜಿಎಫ್ ತಂತ್ರಜ್ಞ.

ಚಂದನವನದ ಚಿರಯುವಕ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅವರ 128ನೇ ಸಿನಿಮಾವಾಗಿ ಘೋಷಣೆಯಾಗಿರುವ ‘ಘೋಸ್ಟ್’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವಣ್ಣನ ಜನ್ಮದಿನದಂದು ಹೊರಬಿಟ್ಟಂತಹ ಪೋಸ್ಟರ್ ಒಂದು ಪಕ್ಕ ಮಾಸ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡುತ್ತಿದೆ. ಇನ್ನೂ ಚಿತ್ರೀಕರಣ ಆರಂಭವಾಗದ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ‘ಬೀರಬಲ್’ ಸಿನಿಮಾ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅವರು. ಹಾಗಾಗಿ ಶಿವಣ್ಣ-ಶ್ರೀನಿ ಕಾಂಬಿನೇಶನ್ ಗೆ ಕನ್ನಡ ಸಿನಿರಸಿಕರು ಹಾತೊರೆದು ಕಾಯುತ್ತಿದ್ದಾರೆ. ಈ ನಡುವೆ ‘ಘೋಸ್ಟ್’ ತನ್ನ ತಂಡದ ಪರಿಚಯವನ್ನು […]
‘ರವಿ ಬೋಪಣ್ಣ’ ತೆರೆಮೇಲೆ

ಚಂದನವನದ ‘ಕನಸುಗಾರ’, ‘ಪ್ರೇಮಲೋಕ’ದ ಸರದಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ದಶಕಗಳಿಂದ ಕನ್ನಡಿಗರಿಗೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿರುವ ಇವರು, ಇದೀಗ ತಮ್ಮ ಹೊಸ ಚಿತ್ರದ ಜೊತೆಗೆ ಚಿತ್ರಮಂದಿರಕ್ಕೇ ಕಾಲಿಡುತ್ತಿದ್ದಾರೆ. ಅದು ಕೂಡ ಅವರದೇ ನಿರ್ದೇಶನದಲ್ಲಿ. ರವಿಮಾಮ ಸಿನೆಮಾ ನಿರ್ದೇಶನ ಮಾಡದೆ ವರ್ಷಗಳೇ ಕಳೆದಿವೆ. ಸದ್ಯ ಇವರ ನಿರ್ದೇಶನದಲ್ಲಿ ತಯಾರಾಗಿರುವ ‘ರವಿ ಬೋಪಣ್ಣ’ನ ಮೇಲೆ ಸಿನಿರಸಿಕರೆಲ್ಲರ ಕಣ್ಣುಗಳಿವೆ. ರವಿಚಂದ್ರನ್ ಅವರದೇ ನಿರ್ಮಾಣ ಸಂಸ್ಥೆಯಾದ ‘ಈಶ್ವರಿ ಪ್ರೊಡಕ್ಷನ್ಸ್’ ಕಡೆಯಿಂದ ಬರುತ್ತಲಿರೋ ಐವತ್ತನೇ […]
ಅಭಿಮಾನಿಗಳ ಮುಂದೆ ‘ಕ್ರಿಟಿಕಲ್ ಕೀರ್ತನೆಗಳು’

ಚಂದನವನದಲ್ಲಿ ಹಲವು ವಿಭಿನ್ನ ರೀತಿಯ ಸಿನಿಮಾಗಳು ಬರುತ್ತಿವೆ. ಹೊಸ ತಲೆಮಾರಿನ ಸಿನಿಕರ್ಮಿಗಳು, ಹಾಗು ಸಿನಿಪ್ರೇಮಿಗಳು ಸೇರಿ ಹೊಸ ಹೊಸ ವಿಚಾರಗಳನ್ನು ಇಟ್ಟುಕೊಂಡ ಸಿನಿಮಾಗಳನ್ನು ಮಾಡುತ್ತಾ ನೋಡುತ್ತಾ ಹೊಸ ಪರಿಯನ್ನು ಆರಂಭಿಸಿದ್ದಾರೆ. ಇಂತಹದ್ದೇ ಒಂದು ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’. ಕುಮಾರ್ ಎಲ್ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು ಇದೀಗ ಒಟಿಟಿ ಪರದೆ ಏರುತ್ತಿದೆ. ಮೇ 13ರಂದು ತೆರೆಕಂಡಿದ್ದಂತಹ ಈ ಚಿತ್ರದಲ್ಲಿ ತಬಲಾ ನಾಣಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಸುಚೆಂದ್ರ ಪ್ರಸಾದ್, ರಾಜೇಶ್ […]
‘ವಿಕ್ರಾಂತ್ ರೋಣ’ನ ವಿವಿಧ ವಿತರಕರು.

ಸ್ಯಾಂಡಲ್ವುಡ್ ನಿಂದ ಬರುತ್ತಿರುವ ಮುಂದಿನ ಪಾನ್-ಇಂಡಿಯನ್ ಸಿನಿಮಾ, ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ,’ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದ ಮೇಲೆ ಮುಗಿಲೆತ್ತರದ ನಿರೀಕ್ಷೆಗಳು ಸಿನಿರಸಿಕರಲ್ಲಿವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಹಾಗು ಹಾಡುಗಳು ಎಲ್ಲರನ್ನೂ ‘ವಿಕ್ರಾಂತ್ ರೋಣ’ನ ಲೋಕಕ್ಕೆ ಹೋಗಲು ಸಿದ್ದಪಡಿಸಿವೆ. ಇದೀಗ ಚಿತ್ರತಂಡ ಒಂದೊಂದೇ ಹೊಸ ಅಪ್ಡೇಟ್ ಗಳನ್ನು ಬಿಡುತ್ತಿದೆ. ಇದೊಂದು ಪಾನ್-ಇಂಡಿಯನ್ ಸಿನಿಮಾ ಆದ್ದರಿಂದ ವಿವಿಧ ಭಾಷೆಗಳಲ್ಲಿನ ಚಿತ್ರದ ವಿತರಕರ ಪಟ್ಟಿ ಹೊರಬಿದ್ದಿದೆ. […]
ನಟ ರಿಷಿ ಅವರ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.

ಚಂದನವನದ ಸಿಂಪಲ್ ಡೈರೆಕ್ಟರ್ ‘ಸಿಂಪಲ್’ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದಂತಹ ಹಿಟ್ ಸಿನಿಮಾ ‘ಆಪರೇಷನ್ ಅಲಮೇಲಮ್ಮ’ದಲ್ಲಿನ ತಮ್ಮ ವಿಭಿನ್ನ ಅಭಿನಯದಿಂದ ಕನ್ನಡಿಗರ ಮನದ ಮನೆಮಾತಾದ ನಟ ರಿಷಿ ಅವರು. ನಂತರ ‘ಕವಲುದಾರಿ’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನ ಭರವಸೆಯ ನಟ ಎನಿಸಿಕೊಂಡಿದ್ದರು. ಇದೀಗ ಅವರ ಮುಂದಿನ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ. ಅದು ಕೂಡ ಸೀದಾ ಒಟಿಟಿ ಪರದೆ ಮೇಲೆ. ರಿಷಿ ನಟಿಸಿರುವ ಮುಂದಿನ ಸಿನಿಮಾ ‘ನೋಡಿ ಸ್ವಾಮಿ ಇವನು ಇರೋದೇ […]

