ಚಾರ್ಲಿ ಸೀನ್ ರಿಕ್ರಿಯೇಟ್ ಮಾಡಿದ ಕನ್ನಡ ನಟ ದಂಪತಿ

ಅಮೃತಾ ರಾಮಮೂರ್ತಿ ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ನಟಿ. ಸದ್ಯ ಮನೆ, ಮಗು ಹಾಗೂ ಸೋಶಿಯಲ್ ಮೀಡಿಯಾಗಷ್ಟೇ ಮೀಸಲಾಗಿದ್ದಾರೆ. ಮುಂದೆ ಮತ್ತೆ ನಟನಿಗೆ ಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಅಮೃತ ರಾಮಮೂರ್ತಿಯವರ ಪೋಸ್ಟ್ ಒಂದು ಸಕ್ಕತ್ ವೈರಲ್ ಆಗಿದೆ. ಅಮೃತಾ ರಾಮಮೂರ್ತಿ ಅವರಿಗೆ ಕುಲವಧು ಸೀರಿಯಲ್ ಖ್ಯಾತಿಯನ್ನು ತಂದುಕೊಟ್ಟಿತ್ತು. ಇದಲ್ಲದೇ ‘ಮಿಸ್ಟರ್‌ ಆಂಡ್‌ ಮಿಸ್ಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ನಟಿಸಿದ್ದ ಇವರು ರಾಘವೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿ […]

ಮತ್ತೆ ಖಾಕಿ ಧರಿಸಲಿದ್ದಾರೆ ರಘು ಮುಖರ್ಜಿ

ನಟ ರಘು ಮುಖರ್ಜಿ ಅವರು ಇನ್ಸ್‌ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಕೊನೆಯ ಬಾರಿಗೆ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಇನ್ನೂ ಹೆಸರಿಡದ ಚಲನಚಿತ್ರ ಒಂದರಲ್ಲಿ ಪೋಲೀಸ್ ಆಗಲು ಹೊರಟಿದ್ದಾರೆ. ಸ್ಯಾಂಡಲ್‌ವುಡ್‌ ಗೆ ಹೊಸಬರಾದ ವಚನ್ ನಿರ್ದೇಶನದ ಚೊಚ್ಚಲ ಚಿತ್ರಕ್ಕಾಗಿ ಅವರು ಮತ್ತೊಮ್ಮೆ ಖಾಕಿ ಧರಿಸಲಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿರುವ ರಘು, ‘ಪೊಲೀಸ್ ಆಫೀಸರ್‌ ಪಾತ್ರ ನನಗೆ ಹೊಸದೇನಲ್ಲ. ಆದರೆ ಈ ಸಿನಿಮಾದ ಪಾತ್ರ ಹೊಸ ದೃಷ್ಟಿಕೋನವನ್ನು ಹೊಂದಿದೆ ಎಂದು ಭಾವಿಸಿದ್ದೇನೆ. ಅದು ಕ್ಲೈಮ್ಯಾಕ್ಸ್‌ನಲ್ಲಿ […]

ಸುದೀಪ್ ಅವರೊಂದಿಗೆ ಸಿನಿಮಾ ಮಾಡುವುದು ನನ್ನ 26 ವರ್ಷಗಳ ಕನಸು – ಅನೂಪ್ ಭಂಡಾರಿ

ಜುಲೈ 28 ರಂದು ತೆರೆ ಕಾಣಲಿರುವ ವಿಕ್ರಾಂತ್ ರೋಣಾ ಚಿತ್ರಕ್ಕಾಗಿ ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಬಹು ವರ್ಷದ ಕನಸಿನ ಕೂಸಾದ ವಿಕ್ರಾಂತ್ ರೋಣಾದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಸುದೀಪ್ ಅವರೊಂದಿಗೆ ಒಂದು ಸಿನಿಮಾವನ್ನಾದರೂ ಮಾಡಬೇಕೆನ್ನುವುದು ಅದೆಷ್ಟೋ ನಿರ್ದೇಶಕರ ಕನಸಾಗಿರುತ್ತದೆ. ಆದರೆ ಅನೂಪ್ ಭಂಡಾರಿ ಅವರು ಸುದೀಪ್ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದು ಇಂದು ನಿನ್ನೆಯಲ್ಲ, ಬರೋಬ್ಬರಿ 26 ವರ್ಷಗಳ ಹಿಂದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ಅನೂಪ್ ಭಂಡಾರಿ […]

ವೈರಲ್ ಆದ ರಾಧಿಕಾ ಪಂಡಿತ್ ಪೋಸ್ಟ್

ಕನ್ನಡ ಚಿತ್ರರಂಗದ ಅದ್ಭುತ ಜೋಡಿಗಳಲ್ಲಿ ಯಶ್ ರಾಧಿಕಾ ಕೂಡ ಒಬ್ಬರು. ಸಿನಿ ಜರ್ನಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಾದರಿ ದಂಪತಿಯಾಗಿ ಬದುಕುತ್ತಿರುವ ಇವರು ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿಯೂ ಹೌದು. ಈಗ ಈ ವಿಷಯ ಯಾಕೆಂದರೆ ನಟಿ ರಾಧಿಕಾ ಪಂಡಿತ್ ತಮ್ಮ ಕುಟುಂಬದ ಜೊತೆಗಿನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಧಿಕಾ ತಮ್ಮ ಕುಟುಂಬದ ಆಗುಹೋಗುಗಳನ್ನು, ಸಂತೋಷದ ಕ್ಷಣಗಳನ್ನು ಸಾಧಾರಣವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ […]

‘ಲಕ್ಕಿಮ್ಯಾನ್’ನಿಂದ ‘ಅಪ್ಪು’ ಎಂಬ ದೇವರ ಮರುದರ್ಶನ.

‘ಕರ್ನಾಟಕ ರತ್ನ’, ಪವರ್ ಸ್ಟಾರ್, ನಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮನ್ನಗಲಿ ವರುಷವೇ ಕಳೆಯುತ್ತಾ ಬಂತು. ಆದರು ಅವರ ನೆನಪುಗಳು ಎಂದಿಗೂ ಅಜರಾಮರ. ಅವರ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜೇಮ್ಸ್’ ಅನ್ನು ಜನಸಾಗರವೇ ಹರಿದುಹೋಗಿ ಚಿತ್ರಮಂದಿರಗಳಲ್ಲಿ ಕಂಡದ್ದಾಯ್ತು. ಅವರನ್ನ ಪ್ರತಿಕ್ಷಣ ಸಂಭ್ರಮಿಸುತ್ತಿರೋ ಕನ್ನಡಿಗರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಅಪ್ಪು ನಟಿಸಿರೋ ಇನ್ನೊಂದು ಸಿನಿಮಾ ತೆರೆಮೇಲೆ ಬರಲು ಸಿದ್ದವಾಗಿದ್ದು, ಆ ಚಿತ್ರದಲ್ಲಿನ ಅಪ್ಪುವಿನ ಮೊದಲ ನೋಟ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅಪ್ಪು ಕನ್ನಡಿಗರ ಮನದಲ್ಲಿ ಎಂದಿಗೂ […]

ಅರ್ಜುನ್ ಜನ್ಯ ನಿರ್ದೇಶನಕ್ಕೆ ವಿಭಿನ್ನ ಶೀರ್ಷಿಕೆ.

‘ಸಂಗೀತ ಮಾಂತ್ರಿಕ’ ಎಂದೇ ಖಾತ್ರಿಯಾಗಿರುವವರು ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ. ತಮ್ಮ ಸುಮಧುರ ಹಾಡುಗಳು ಹಾಗು ಸಂಗೀತದಿಂದ ಕನ್ನಡಿಗರ ಮನದಲ್ಲಿ ಮನೆ ಮಾಡಿಕೊಂಡಿರುವವರು ಇವರು. ಸುಮಾರು ಒಂದು ದಶಕದಿಂದ ಕನ್ನಡಕ್ಕೆ ಹಲವು ಅದ್ಭುತ ಸಂಗೀತದ ಕಾಣಿಕೆಗಳನ್ನು ನೀಡಿರುವ ಇವರು ಇದೀಗ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಇವರ ಮೊದಲ ಚಿತ್ರಕ್ಕೆ ‘ಹ್ಯಾಟ್ರಿಕ್ ಹೀರೋ’ ಶಿವಣ್ಣ ನಾಯಕರು. ಇಂದು ಶಿವಣ್ಣನ ಜನ್ಮದಿನದ ಪ್ರಯುಕ್ತ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ. ‘ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಎಂ ರಮೇಶ್ ರೆಡ್ಡಿ […]

ದುಲ್ಕರ್ ಸಲ್ಮಾನ್ ಜೊತೆ ನಟಿಸಲಿರುವ ಬಹುಭಾಷಾ ನಟಿ

ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದುಲ್ಕರ್ ಸಲ್ಮಾನ್ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ರಶ್ಮಿಕಾ ಪಾತ್ರ ಪಾತ್ರ ಮುಖ್ಯವಾಗಿರಲಿದೆಯಂತೆ. ‘ಚಲೋ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ನಟನೆಯ ಮೂಲಕವೇ ಇದೀಗ ಸೌತ್ನ ಟಾಪ್ ನಟಿಯರ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರ ನಡುವೆ ಮಲಯಾಳಂ ಕಡೆ ಮುಖ ಮಾಡಿರುವ ರಶ್ಮಿಕಾ ಮಂದಣ್ಣ ಇದೀಗ ಸೀತಾ ರಾಮಂ […]

ಹಿರಿತೆರೆಯತ್ತ ಅರ್ಜುನ್ ಯೋಗಿ ಚಿತ್ತ

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ನಟರಲ್ಲಿ ಅರ್ಜುನ್ ಯೋಗಿ ಕೂಡ ಒಬ್ಬರು. ಜುಲೈ 15ರಂದು ತೆರೆಕಾಣಲಿರುವ ವಿಲೋಕ್ ಶೆಟ್ಟಿ ನಿರ್ದೇಶನದ ‘ಚೇಝ್’ ಸಿನಿಮಾದಲ್ಲಿ ಅರ್ಜುನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅರ್ಜುನ್ ಯೋಗಿ ”ಇದರಲ್ಲಿ ನಾನು ಪ್ಲೇಬಾಯ್ ಆಗಿರುವ ಯಶ್ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಪಕ್ಕಾ ಕ್ರಿಕೆಟ್ ಅಭಿಮಾನಿಯೊಬ್ಬನ ಪಾತ್ರ ಇದಾಗಿದ್ದು, ಆರ್‌ಸಿಬಿ ಕ್ರಿಕೆಟ್ ಟೀಮ್ ನ್ನು ಹುಚ್ಚನಂತೆ ಪ್ರೀತಿಸುವ ಈತ ಕ್ರಿಕೆಟ್ ಬೆಟ್ಟಿಂಗ್ ನಲ್ಲೂ ಭಾಗವಹಿಸುತ್ತಾನೆ. ಹೀಗೋ ಹಾಗೋ ಸಾಗುತ್ತಿದ್ದ […]

ಮತ್ತೆ ನಿರ್ದೇಶನಕ್ಕಿಳಿದ ದಿನಕರ್ ತೂಗುದೀಪ.

ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ದಿನಕರ್ ತೂಗುದೀಪ ಅವರು ಎಲ್ಲರಿಗೂ ಪರಿಚಿತರು. ‘ಸಾರಥಿ’, ‘ನವಗ್ರಹ’ ಮುಂತಾದ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ ಗೆ ನೀಡಿರುವ ಇವರು ಕನ್ನಡಿಗರು ಭರವಸೆ ಇಟ್ಟಿರುವ ನಿರ್ದೇಶಕರುಗಳಲ್ಲಿ ಒಬ್ಬರು. ಮಾಡಿರುವ ಕೆಲವೇ ಕೆಲವು ಸಿನಿಮಾಗಳಲ್ಲಿ ಪ್ರತಿಯೊಂದರಲ್ಲೂ ಯಶಸ್ಸು ಕಂಡಿರುವ ಇವರು, ಇದೀಗ ಮತ್ತೆ ನಿರ್ದೇಶನ ಮಾಡಲಿದ್ದಾರೆ. ಸುಮಾರು ನಾಲ್ಕು ವರ್ಷಗಳ ನಂತರ ಸಿನಿಮಾ ಮಾಡುತ್ತಿರುವ ಇವರ ಮುಂದಿನ ಚಿತ್ರda ಮುಹೂರ್ತ ನೆರವೇರಿದೆ. 2018ರಲ್ಲಿ ಬಿಡುಗಡೆಯಾದ ಪ್ರೇಮ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ಹಾಗು ಸುಧಾರಾಣಿ ಅವರು […]

ಧರ್ಮನ ‘ಜೀವನ ಗೀತೆ’ ಅಭಿಮಾನಿಗಳ ಬಳಿಗೆ.

‘777 ಚಾರ್ಲಿ’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಎಲ್ಲಾ ರಂಗದ, ಎಲ್ಲಾ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಸಡಗರದ ಒಂದು ತಿಂಗಳು ಕಂಡಿರುವ ಚಿತ್ರ 50ದಿನಗಳತ್ತ ದಾಪುಗಲು ಇಡುತ್ತಿದೆ. ಈ ಸಮಯದಲ್ಲಿ ಚಿತ್ರತಂಡ ಹೊಸ ಹಾಡೊಂದನ್ನು ಅಭಿಮಾನಿಗಳಿಗೆ ನೀಡಲು ನಿರ್ಧರಿಸಿದ್ದಾರೆ. ‘777 ಚಾರ್ಲಿ’ ಸಿನಿಮಾದ ಯಶಸ್ಸಿನಲ್ಲಿ ಅದರ ಸಂಗೀತಕ್ಕೂ ದೊಡ್ಡ ಪಾಲಿದೆ. ಮನವನ್ನು ಮುದಗೊಳಿಸೋ ಹಿನ್ನೆಲೆ ಸಂಗೀತ, ಸನ್ನಿವೇಶದ ಜೊತೆಗೆ ಪ್ರೇಕ್ಷಕರನ್ನು ಸರಿಹೊಂದುವ ಹಾಡುಗಳು ಚಿತ್ರದ […]