ವಿಭಿನ್ನವಾದ ನಿರ್ಧಾರ ಮಾಡಿದ ನಟಿ ಸುಶ್ಮಿತಾ ಗೌಡ

ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾ ಗೌಡಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಹೌದು. ಇದೀಗ ಅವರು ಪ್ರೀತಿಯಿಂದ ಬೆಳೆಸಿದ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ನೂರಾರು ಜನರಿಗೆ ಮಾದರಿ ಆಗಿದ್ದಾರೆ. ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟಿ, ಹೆಣ್ಣಿಗೆ ಕೂದಲು ಎಷ್ಟು ಮುಖ್ಯವಾಗುತ್ತದೆ ಮತ್ತು ಇಷ್ಟು ಉದ್ದವಾದ ಕೂದಲು ಬೆಳೆಸಲು ಎಷ್ಟು ಸಮಯ ಬೇಕಾಯಿತು ಎಂದು ಬರೆದುಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ನನಗೆ ಅತಿ ಹೆಚ್ಚು ಅಮೂಲ್ಯವಾದದ್ದು ನನ್ನ ಕೂದಲು. ಅದು […]
‘ವಿಕ್ರಮ್’ ಸಿನಿಮಾ ಹಾಡಿಹೊಗಳಿದ ಪ್ರಶಾಂತ್ ನೀಲ್.

ತಮಿಳಿನ ಖ್ಯಾತ ನಟ, ಭಾರತ ಚಿತ್ರರಂಗದ ಸ್ವಂತರಾಗಿರುವ ಕಮಲ್ ಹಾಸನ್ ಅವರ ನಟನೆಯ ಸಿನಿಮಾ ‘ವಿಕ್ರಮ್’ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. ತೆರೆಕಂಡು ಒಂದು ತಿಂಗಳು ಕಳೆದರೂ, ಒಟಿಟಿ ಪರದೆ ಮೇಲೆ ಬಂದಮೇಲೂ ಕೂಡ ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಚಿತ್ರ ಹಾಲಿವುಡ್ ಮಟ್ಟದಲ್ಲಿದೆ ಎಂಬಂತಹ ಮಾತುಗಳನ್ನೂ ಸೇರಿ, ಎಲ್ಲೆಡೆಯಿಂದ ಪ್ರಶಂಸೆ ಪಡೆಯುತ್ತಿರುವ ‘ವಿಕ್ರಮ್’ ಸಿನಿಮಾದ ಬಗೆಗೆ, ಕನ್ನಡಿಗ, ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅವರು ಮೆಚ್ಚುಗೆಯ ಮಾತುಗಳನ್ನು ಹೊರಹಾಕಿದ್ದಾರೆ. ಲೋಕೇಶ್ ಕಣಗರಾಜ್ ಅವರ ನಿರ್ದೇಶನದ ‘ವಿಕ್ರಮ್’ […]
ಹೊಯ್ಸಳ ಶೂಟಿಂಗ್ ಸೆಟ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ನಟಿ. ಆದರೆ ನಂತರ ಸಿನಿಮಾ ರಂಗದಿಂದ ದೂರವಾದ ನಟಿ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದ್ದರು. ಆದರೂ ತಮ್ಮ ನೆಚ್ಚಿನ ನಟಿ ಮತ್ತೆ ಅಭಿನಯಕ್ಕೆ ಮರಳುವ ಆಸೆಯೊಂದಿಗೆ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸಿನಿಮಾ ರಂಗದಿಂದ ದೂರವಾದ ನಂತರ ರಾಜಕೀಯದಲ್ಲಿ ಬ್ಯುಸಿ ಆದ ನಟಿ ನಂತರ ಅಲ್ಲಿಂದಲೂ ಹೊರಬಂದರು. ಆದರೆ ಇದೀಗ ಮತ್ತೆ ಶೂಟಿಂಗ್ ಸೆಟ್ ನಲ್ಲಿ ಪ್ರತ್ಯಕ್ಷವಾಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಹೌದು, […]
ಘೋಷಣೆಗೆ ಕಾಯುತ್ತಿವೆ ಶಿವಣ್ಣನ ಸಾಲು ಸಾಲು ಸಿನಿಮಾಗಳು.

ಸದಾ ಚೈತನ್ಯದಿಂದ ತುಂಬಿತುಳುಕುವ, ಚಂದನವನದ ಚಿರಯುವಕ ಶಿವರಾಜಕುಮಾರ್ ಅವರು ಸದಾ ಬ್ಯುಸಿಯಾಗಿರುವವರು. ತಮ್ಮ 125ನೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಶಿವಣ್ಣನವರಿಗೆ ನಾಳೆ(ಜುಲೈ 12) ಜನುಮದಿನದ ಸಂಭ್ರಮ. 60ನೇ ವರ್ಷ ತುಂಬಲಿರೋ ಇವರು ನಾಯಕರಾಗಿ ನಟಿಸಲು ಸಾಲು ಸಾಲು ಸಿನಿಮಾಗಳು ಸಿದ್ದವಿವೆ. ಇವರ ಜನುಮದಿನದ ಪ್ರಯುಕ್ತ ಸಿನಿಮಾದ ಬಗೆಗಿನ ಅಧಿಕೃತ ಘೋಷಣೆಗಳನ್ನು ಮಾಡಲು ಚಿತ್ರತಂಡಗಳು ಕಾಯುತ್ತಿವೆ. ಸದ್ಯ ತಮ್ಮ 125ನೇ ಸಿನಿಮಾವಾದ ಹರ್ಷ ಅವರ ನಿರ್ದೇಶನದ ‘ವೇದಾ’ದ ಚಿತ್ರೀಕರಣದಲ್ಲಿರುವ ಶಿವಣ್ಣ ನಂತರ ‘ಬೀರಬಲ್’ ಖ್ಯಾತಿಯ ಎಂ ಜಿ […]
ರೆಸಿಡೆನ್ಷಿಶಿಯಲ್ ವೃತ್ತಕ್ಕೆ ಶಿವಣ್ಣನ ಹೆಸರು.

ರಾಜ್ ಕುಟುಂಬದ ಮೇಲೆ ಕನ್ನಡ ನಾಡಿನಲ್ಲಿ ಅಪಾರ ಅಭಿಮಾನವಿದೆ. ಅವರ ಕಲೆಗೆ ಹಾಗು ಸಮಾಜಸೇವೆಗೆ ಪ್ರತೀ ಕನ್ನಡಿಗನ ಮನೆಗಳೂ ತಲೆದೂಗುತ್ತವೆ. ಅವರ ಹೆಸರು ಶಾಶ್ವತವಾಗಿ ಉಳಿಯಲು, ರಸ್ತೆಗಳಿಗೆ, ವೃತ್ತಗಳಿಗೆ ಅವರ ಹೆಸರಿನಿಂದ ನಾಮಕರಣ ಮಾಡುವುದು ವಾಡಿಕೆ. ಅಂದು ರಾಜಕುಮಾರ್ ಅವರ ಹೆಸರನ್ನು ಕರ್ನಾಟಕದ ಹಲವೆಡೆ ಇಟ್ಟಿದ್ದರು. ಇತ್ತೀಚಿಗಷ್ಟೇ ಬೆಂಗಳೂರಿನ ರಸ್ತೆಯೊಂದನ್ನು ಅಧಿಕೃತವಾಗಿ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಘೋಷಣೆ ಮಾಡಲಾಯಿತು. ಈಗ ಈ ಸಾಲಿಗೆ ಶಿವಣ್ಣನವರ ಹೆಸರು ಸೇರಿಕೊಳ್ಳುತ್ತಿದೆ. ಬೆಂಗಳೂರಿನ ಮಾನ್ಯತಾ ರೆಸಿಡೆನ್ಷಿಶಿಯಲ್ ಸರ್ಕಲ್ ನಲ್ಲಿ ವರುಷಗಳಿಂದ […]
ಶಿವಣ್ಣನ ಜನುಮದಿನಕ್ಕೆ ಒಂದಾದ ನಾಲ್ಕು ಸ್ಟಾರ್ ನಟರು.

ಚಂದನವನದ ಚಿರಯುವಕ ಶಿವಣ್ಣನವರ ಜನ್ಮದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ತಮ್ಮ ಅರವತ್ತನೇ ವಸಂತಕ್ಕೆ ಕಾಲಿಡುತ್ತಿರುವ ಶಿವಣ್ಣನ ಕೈಯಲ್ಲಿ ಆರಕ್ಕಿಂತಲೂ ಹೆಚ್ಚು ಸಿನಿಮಾಗಳಿವೆ. ಈಗಾಗಲೇ 125 ಸಿನಿಮಾಗಳನ್ನು ಮಾಡಿ ಮುಗಿಸಿರುವ ಇವರು ಬಿಡುವಿಲ್ಲದೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅರ್ಜುನ್ ಜನ್ಯ ಅವರ ಜೊತೆಗೆ ಇವರು ಮಾಡಲಿರುವ ಹೊಸ ಸಿನಿಮಾದ ಬಗೆಗೆ ಹೊಸ ಸುದ್ದಿಯಿಂದು ಹೊರಬಿದ್ದಿದೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಮೊದಲನೇ ಬಾರಿಗೆ ನಿರ್ದೇಶನಕ್ಕೆ ಕೈ ಹಾಕುತ್ತಿರುವ ಸಿನಿಮಾದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿದ್ದಾರೆ. ಸ್ವತಃ ಅರ್ಜುನ್ ಜನ್ಯ […]
‘ವಿಕ್ರಾಂತ್ ರೋಣ’ನಿಂದ ಹೊಸ ಹಾಡು.

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಗಪ್ಪಳಿಸೋ ದಿನಕ್ಕೆ ದಿನಗಣನೆ ಆರಂಭವಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಇದೇ ಜುಲೈ 28ಕ್ಕೆ ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಜೊತೆಗೆ ಇಂಗ್ಲೀಷ್ ನಲ್ಲಿ ಕೂಡ 3ಡಿಯಲ್ಲಿ ಬಿಡುಗಡೆಯಗುತ್ತಿರೋ ಈ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದರ ಅಂಗವಾಗಿಯೇ ಹೊಸ ಹಾಡೊಂದನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಈಗಾಗಲೇ ಬಿಡುಗಡೆಯಾಗಿರೋ ಸಿನಿಮಾದ ಟ್ರೈಲರ್ ಎಲ್ಲಾ ಭಾಷೆಗಳಲ್ಲೂ ಮಿಲಯನ್ ಗಟ್ಟಲೆ […]
ಕನ್ನಡ ಸಿನಿಮಾ ಮಾಡುವುದರ ಬಗ್ಗೆ ಸಾಯಿ ಪಲ್ಲವಿ ಮಾತು.

ದಕ್ಷಿಣ ಭಾರತದ ಸಿನಿ ಅಭಿಮಾನಿಗಳ ನೆಚ್ಚಿನ ನಟಿ, ‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ ಸದ್ಯ ತಮ್ಮ ಮುಂದಿನ ಸಿನಿಮಾ ‘ಗಾರ್ಗಿ’ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ‘ಗಾರ್ಗಿ’ ಇದೇ ಜುಲೈ 15ರಂದು ಎಲ್ಲೆಡೆ ತೆರೆಕಾಣುತ್ತಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಸಿನಿಮಾ ಮಿಡಲ್ ಕ್ಲಾಸ್ ಮಹಿಳೆಯೊಬ್ಬಳು ನ್ಯಾಯಕ್ಕಾಗಿ ಹೋರಾಡೋ ಕಥೆಯನ್ನ ತೆರೆಮೇಲೆ ತರಲಿದೆ. ಈ ನಡುವೆ ಸಾಯಿ ಪಲ್ಲವಿ ಕನ್ನಡದ ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ […]
ಮತ್ತೆ ತಮಿಳಿಗೆ ಬಂದ ಐಶ್ವರ್ಯಾ ರೈ

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ಮತ್ತೆ ತಮಿಳು ಸಿನಿಮಾಗೆ ಮರಳಲಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ಪಜುವೂರಿನ ರಾಜಮನೆತನದ ರಾಜಕುಮಾರಿ ನಂದಿನಿಯ ಪಾತ್ರವನ್ನು ಮಾಡಲಿದ್ದಾರೆ.ಜುಲೈ 6ರಂದು ಚಿತ್ರ ತಂಡ ಐಶ್ವರ್ಯಾ ಅವರ ಫಸ್ಟ್‌ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ರಾಣಿಯಂತೆ ಮಿಂಚುತ್ತಿರುವ ಐಶ್ವರ್ಯಾ ಅಭಿನಯದ ಪೊನ್ನಿಯಿನ್ ಸೆಲ್ವನ್ ಭಾಗ 1 ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ ದೇವದಾಸ್ ನಟಿ ಐಶ್ವರ್ಯಾ ದ್ವಿಪಾತ್ರವನ್ನು ನಿರ್ವಹಿಸಲಿದ್ದಾರೆ. ಪಜುವೂರಿನ […]
ಡಿಲೀಟ್ ಆಗಿದ್ದ ದೃಶ್ಯವನ್ನು ಬಿಡುಗಡೆ ಮಾಡಿದ ಕಿರಣ್ ರಾಜ್

ಚಿಕ್ಕ ಬಜೆಟ್ ನಲ್ಲಿ ನಿರ್ಮಾಣ ಮಾಡಿದ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸಿ ಈ ಸಿನಿಮಾ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಮಾಡಿರುವುದು ಅಕ್ಷರಶಃ ಸುಳ್ಳಲ್ಲ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಯಶಸ್ವಿ ಚಿತ್ರ ಎನಿಸಿಕೊಳ್ಳುವುದರೊಂದಿಗೆ 777 ಚಾರ್ಲಿ ಈಗಾಗಲೇ 25 ದಿನಗಳನ್ನು ಪೂರ್ತಿಗೊಳಿಸಿ 50 ದಿನಗಳನ್ನು ಪೂರ್ತಿಗೊಳಿಸುವತ್ತ ದಾಪುಗಾಲಿಡುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್ ಕಲೆಕ್ಷನ್ ಮಾಡಿದೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ತಂಡ ಸಿನಿಮಾದಲ್ಲಿ ಇಲ್ಲದ ದೃಶ್ಯವನ್ನು […]

