ಹ್ಯಾಟ್ರಿಕ್ ಹೀರೋಗಿದೆ ಇನ್ನೊಂದು ಹೆಸರು

ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅವರನ್ನು ತಿಳಿಯದವರಿಲ್ಲ. ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಪರಿಚಿತರಾಗಿರುವ ನಟ. ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಬಾರಿಸಿ ಕರುನಾಡ ಚಕ್ರವರ್ತಿ ಎನಿಸಿಕೊಂಡವರು ಅವರೇ. ಜೊತೆಯಾಗಿ ಮೂರು ಸಿನಿಮಾಗಳಲ್ಲಿ ಯಶಸ್ಸು ಪಡೆದು ಹ್ಯಾಟ್ರಿಕ್ ಹೀರೋ ಅನಿಸಿಕೊಂಡದ್ದೂ ಅವರೇ, ಅಣ್ಣಾವ್ರ ಮಗನಾಗಿ ಪ್ರೀತಿಯಿಂದ ಎಲ್ಲರ ಕೈಯಿಂದ ಶಿವಣ್ಣ ಎಂದು ಕರೆಸಿಕೊಂಡಿದ್ದೂ ಇವರೇ. ಆದರೆ ಅಸಲಿಗೆ ಇವರಿಗೆ ಇನ್ನೊಂದು ಹೆಸರಿದೆಯಂತೆ. ಅದೇ ಅವರ ನಿಜವಾದ ಹೆಸರು ಕೂಡ. ಸಾಧಾರಣವಾಗಿ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳಿಗೆ […]
ಪವರ್ ಸ್ಟಾರನ್ನು ನೆನೆದ ಪ್ರಿಯಾ ಆನಂದ್

ಇನ್ನು ಕೂಡ ಅದೆಷ್ಟೋ ಅಭಿಮಾನಿಗಳು ತಮ್ಮ ಪ್ರೀತಿಯ ಪವರ್ ಸ್ಟಾರ್ ನಿಧನದಿಂದ ಹೊರಬಂದಿಲ್ಲ. ಅವರು ನಿಧನ ಹೊಂದಿ ಒಂದು ವರ್ಷವಾಗಲು ಹತ್ತಿರವಿದ್ದರೂ ಯಾರೂ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಪುನೀತ್ ರಾಜಕುಮಾರ್ ಅವರು ಜನಮಾನಸದಲ್ಲಿ ಮೂಡಿಸಿದ ಪ್ರೀತಿ ಮತ್ತು ವಾತ್ಸಲ್ಯ ಅಂತದ್ದು. ಜನರಿಗಾಗಿ ಮಾಡಿದ ಸಾಮಾಜಿಕ ಸೇವೆಯಿಂದ ಎಲ್ಲರ ದಿನಚರಿಯಲ್ಲಿ ಯಾವುದೋ ಒಂದು ರೀತಿಯಲ್ಲಿ ಅವರು ನೆನಪಾಗುತ್ತಲೇ ಇರುತ್ತಾರೆ. ಇನ್ನು ಪುನೀತ್ ಅವರನ್ನು ಹತ್ತಿರದಿಂದ ಬಲ್ಲ ಮತ್ತು ಅವರೊಂದಿಗೆ ಒಡನಾಡಿದ ತಾರೆಯರೆಲ್ಲಾ ಅವರ ಬಗ್ಗೆ ಏನಾದರೂ ನೆನಪನ್ನು […]
777 ಚಾರ್ಲಿಯ ಕಿರಣ್ ರಾಜ್ ರ ನನಸಾಗದ ಆ ಒಂದು ಕನಸು

ಸದ್ಯ ಕನ್ನಡಿಗರಿಂದ ಹಿಡಿದು ಭಾರತದಾದ್ಯಂತ ಮನೆಮಾತಾಗಿರುವವರು ಕಿರಣ್ ರಾಜ್. ‘777 ಚಾರ್ಲಿ’ ಸಿನಿಮಾದ ಮೂಲಕ ತಮ್ಮ ಮೊದಲ ನಿರ್ದೇಶನದಲ್ಲೇ ಜನಮಾನಸದ ಮನಗಳಲ್ಲಿ ಜಾಗ ಮಾಡಿಕೊಂಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ಸತತ ಮೂರು ವರ್ಷಗಳ ಕಾಲ ಒಂದೇ ಸಿನಿಮಾದ ಮೇಲೆ ಗಮನ ಹರಿಸಿ, ‘777 ಚಾರ್ಲಿ’ಯಂತಹ ಮನತುಂಬೋ ಸಿನಿಮಾವನ್ನ ಚಿತ್ರರಂಗಕ್ಕೆ ನೀಡಿದವರು ಕಿರಣ್ ರಾಜ್. ‘777 ಚಾರ್ಲಿ’ಯ ಯಶಸ್ಸಿನ ಸಂತಸದಲ್ಲಿರುವ ಇವರು, ತಮ್ಮ ಕನಸೊಂದರ ಬಗೆಗೆ ಹೇಳಿಕೊಂಡಿದ್ದಾರೆ. ಧರ್ಮ ಹಾಗು ಚಾರ್ಲಿಯ ಕಥೆಯನ್ನು […]
ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಅದೂ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರೊಂದಿಗೆ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ರಶ್ಮಿಕಾ ಇದೀಗ ಬಾಲಿವುಡ್ ನತ್ತ ಚಿತ್ತ ನೆಟ್ಟಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗಾಗಲೇ ರಶ್ಮಿಕಾ ಹಿಂದಿಯಲ್ಲಿ ಅಧಿಕೃತವಾಗಿ ಮೂರು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. […]
ಬರಲಿದೆ ಲಾಯರ್ ‘ಬೀರಬಲ್’ನ ಎರಡನೇ ಕೇಸ್!!

ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕ್ರೈಂ ಥ್ರಿಲರ್ ಕಥೆಗಳು ಸಿನಿಮಾವಾಗಿ ಬಂದು ಪ್ರೇಕ್ಷಕರ ಮನಗೆದ್ದಿವೆ. ಅಂತ ಸಿನಿಮಾಗಳಲ್ಲಿ ‘ಬೀರಬಲ್’ ಕೂಡ ಒಂದು. ಎಂ ಜಿ ಶ್ರೀನಿವಾಸ್ ಅವರು ರಚಿಸಿ, ನಟಿಸಿ ನಿರ್ದೇಶಸಿರುವ ಈ ಸಿನಿಮಾ ಸಿನಿಪ್ರೇಮಿಗಳನ್ನು ತುದಿಗಲಿನಲ್ಲಿ ನಿಂತು ನೋಡುವ ಹಾಗೇ ಮಾಡಿತ್ತು. ಸಿನಿಮಾ ‘ತಿಮ್ಮಾರಸು’ ಎಂಬ ಹೆಸರಿನಲ್ಲಿ ತೆಲುಗಿಗೂ ಸಹ ರಿಮೇಕ್ ಆಗಿತ್ತು. ಇದೊಂದು ಟ್ರೈಲಾಜಿ ಕಥೆ. ಅಂದರೆ ಒಂದೇ ಕತೆ ಮುಂದುವರೆದು ಮೂರು ಸಿನಿಮಾಗಳಲ್ಲಿ ಮೂರು ಭಾಗಗಳಾಗಿ ಬರುತ್ತದೆ. 2019ರಲ್ಲಿ ತೆರೆಕಂಡ ‘ಬೀರಬಲ್’ ಮೊದಲ […]
ಬರಲಿದ್ದಾನೆ ‘ಲಂಕಾಸುರ’ ಅತಿ ಶೀಘ್ರದಲ್ಲಿ

‘ಯಂಗ್ ಟೈಗರ್’ ಎಂದೇ ಖ್ಯಾತರಾಗಿರುವ ವಿನೋದ್ ಪ್ರಭಾಕರ್ ಕನ್ನಡದ ಯುವನಟರಲ್ಲಿ ಒಬ್ಬರು. ಪಕ್ಕ ಮಾಸ್ ಆಕ್ಷನ್ ಹೀರೋ ಆಗಿ ಹೊರಹೊಮ್ಮಿರುವ ಇವರು, ಸಿನಿರಂಗದಲ್ಲಿ ಹೊಸ ಹೆಜ್ಜೆಯನ್ನ ಇಡುತ್ತಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದ ಕಡೆಗೂ ಹೆಜ್ಜೆ ಹಾಕುತ್ತಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ‘ಟೈಗರ್ ಟಾಕೀಸ್’ ಎಂದು ಈ ಸಂಸ್ಥೆಗೆ ಹೆಸರಿಡಲಾಗಿದ್ದು, ಇದರಡಿಯಲ್ಲಿನ ಮೊದಲ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅದುವೇ ‘ಲಂಕಾಸುರ’. ‘ಟೈಗರ್ ಟಾಕೀಸ್’ ಬ್ಯಾನರ್ ನಿರ್ಮಿಸುತ್ತಿರುವ ಮೊದಲ ಸಿನಿಮಾಗೆ ವಿನೋದ್ ಪ್ರಭಾಕರ್ ಅವರೇ ನಾಯಕನಟರು. […]
ಮತ್ತೆ ಬರಲಿದ್ದಾನೆ ಸೂಪರ್ ಹೀರೋ ‘ಶಕ್ತಿಮಾನ್’

90ರ ದಶಕದಲ್ಲಿ ತೆರೆಕಂಡ ಹಿಂದಿಯ ಸುಪ್ರಸಿದ್ಧ ಧಾರಾವಾಹಿ ‘ಶಕ್ತಿಮಾನ್’ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಧಾರಾವಾಹಿಯೆಂದರೂ ತಪ್ಪಾಗಲಾರದು. ಇದೊಂಥರಾ ಭಾರತದ ಸೂಪರ್ ಹೀರೋ ಕಾನ್ಸೆಪ್ಟ್ ನ ಮೊದಲ ಧಾರಾವಾಹಿ. ದೂರದರ್ಶನ ವಾಹಿನಿಯಲ್ಲಿ 1997ರಿಂದ 2005 ರವರೆಗೆ ಪ್ರಸಾರವಾದ ಈ ಧಾರಾವಾಹಿಯನ್ನು ಎಲ್ಲ ವಯಸ್ಕರೂ ಮೆಚ್ಚಿಕೊಂಡಿದ್ದರು. ಈಗ ವಿಷಯ ಏನಪ್ಪಾ ಅಂದರೆ ಈ ಧಾರಾವಾಹಿ ಸಿನಿ ರೂಪವನ್ನು ಪಡೆದುಕೊಳ್ಳುತ್ತಿದೆ. ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಶಕ್ತಿಮಾನ್ ಆಗಲು ಹೊರಟಿದ್ದಾರೆ. ಹಿಂದೊಮ್ಮೆ ಮುಖೇಶ್ ಖನ್ನಾ ಅವರೇ ಈ […]
ಶಿವಣ್ಣನ ಬರ್ತ್ಡೇಗೆ ವಿಶೇಷ ಉಡುಗೊರೆ ನೀಡುತ್ತಿರೋ ‘ಜೀ’

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ವಯಸ್ಸಾದಷ್ಟೂ ಯುವಕರಾಗುವವರು. ಸದ್ಯ ನಾಯಕನಟರಾಗಿ ತಮ್ಮ 125ನೇ ಸಿನಿಮಾದ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿ ಆಗಿದ್ದು, ಅಭಿಮಾನಿಗಳು ಇವರ ಜನುಮದಿನದ ಸಂಭ್ರಮದ ಸಿದ್ಧತೆಯಲ್ಲಿದ್ದಾರೆ. ಇದೇ ಜುಲೈ 12kke ಶಿವಣ್ಣನವರಿಗೆ 60 ವರ್ಷ ತುಂಬುತ್ತದೆ. ಈ ಸಂಧರ್ಭ ಜನ್ಮದಿನದ ಶುಭಾಶಯ ತಿಳಿಸಲು ಅಭಿಮಾನಿಗಳು ಹಲವು ಕನ್ನಡ ಮಾಧ್ಯಮಗಳು ವಿವಿಧ ರೀತಿಯ ತಯಾರಿ ನಡೆಸಿವೆ. ಸದ್ಯ ಈ ಬಗ್ಗೆ ‘ಜೀ ಪಿಚ್ಚರ್’ ನೀಡಿದ ಘೋಷಣೆ ಎಲ್ಲರ ಮನಸೆಳೆದಿದೆ. ಶಿವಣ್ಣನವರ 60ನೇ ಜನುಮದಿನದ ಪ್ರಯುಕ್ತ ಸತತ 60ಗಂಟೆಗಳ […]
ಐದು ವರ್ಷಗಳ ನಂತರ ಮರಳಿ ಸಿನಿಮಾ ಕಡೆಗೆ ಎಸ್ ನಾರಾಯಣ್.

ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗವನ್ನ ಉತ್ತುಂಗಕ್ಕೇರಿಸಿದ್ದ ನಟ-ನಿರ್ದೇಶಕರುಗಳಲ್ಲಿ ಒಬ್ಬರು ಎಸ್ ನಾರಾಯಣ್ ಅವರು. ಕಥೆ ಚಿತ್ರಕತೆಯಿಂದ ಹಿಡಿದು, ನಟನೆ, ನಿರ್ದೇಶನ ಎಲ್ಲದರಲ್ಲೂ ಎತ್ತಿದ ಕೈ ಇವರು. ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಇದೀಗ ಐದು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಎಸ್ ನಾರಾಯಣ್ ಅವರು ಹಲವು ಧೀಮಂತ ಕಲಾವಿದರ ಜೊತೆಗೆ ಸಿನಿಮಾ ಮಾಡಿದವರು. ರಾಜಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ಅವರಿಂದ ಶಿವರಾಜಕುಮಾರ್, ಗಣೇಶ್ ಸುದೀಪ್ ಅವರವರೆಗೆ […]
‘ಪೊನ್ನಿಯಿನ್ ಸೆಲ್ವನ್’ ಜೊತೆ ಕೈ ಜೋಡಿಸಿದ ರಕ್ಷಿತ್ ಶೆಟ್ಟಿ.

ಭಾರತ ಚಿತ್ರರಂಗಕ್ಕೆ ‘ಪಾನ್-ಇಂಡಿಯಾ ಸಿನಿಮಾ’ ಅನ್ನೋದು ತಮ್ಮದೇ ಒಂದು ಶಬ್ದವಾದಂತಾಗಿದೆ. ಹೊಸ-ಹೊಸ ಸಿನಿಮಾಗಳು ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿವೆ. ಇದೀಗ ತಮಿಳು ಚಿತ್ರರಂಗದಿಂದ ದೊಡ್ಡ ಚಿತ್ರವೊಂದು ಪಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಖ್ಯಾತ ನಿರ್ದೇಶಕರಾದ ಮನಿರತ್ನಮ್ ಅವರು ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವ ಈ ಸಿನೆಮಾ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ತಾರಾಗಣ ಹಾಗು ಪೋಸ್ಟರ್ ಗಳಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಮಣಿರತ್ನಮ್ ಅವರ ‘ಮದ್ರಾಸ್ ಟಾಕೀಸ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಸೇರಿ ನಿರ್ಮಿಸುತ್ತಿರುವ […]

