ನಮ್ಮೂರ ಮಂದಾರ ಹೂವೆ ನಾಯಕಿಯ ಸಿನಿಮಾತು

90ರ ದಶಕದ ಕನ್ನಡ ಚಿತ್ರರಂಗದ ನಾಯಕಿಯರನ್ನು ಗುರುತಿಸುವುದಾದರೆ ಆ ಸಾಲಿನಲ್ಲಿ ಪ್ರೇಮ ಅವರು ಇದ್ದೇ ಇರುತ್ತಾರೆ. ತದನಂತರ ಮಾಡಿದ ಸಿನಿಮಾಗಳು ಕೂಡ ಉತ್ತಮ ಕಥಾಧಾರಿತ ಚಿತ್ರಗಳೇ ಆಗಿವೆ. ಸಿನೆಮಾಗಳನ್ನು ತುಂಬಾ ಅವಲೋಕಿಸಿ ಒಪ್ಪಿಕೊಳ್ಳುತ್ತಿದ್ದ ಪ್ರೇಮ ಪ್ರದರ್ಶನಾಧಾರಿತ ಚಿತ್ರಗಳನ್ನಷ್ಟೇ ಆಯ್ದುಕೊಂಡವರು. ಚಿತ್ರದ ಕಥೆ, ಹಾಡು ಹಾಗೂ ತಮ್ಮ ನಟನೆ ಇದೆಲ್ಲದರಿಂದಲೂ ಕನ್ನಡ ಜನಮಾನಸದಲ್ಲಿ ಉಳಿದುಕೊಂಡವರು. ಸಿನಿಮಾದ ಹೊರತಾದ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯಲು ಬಯಸುವ ಪ್ರೇಮ ಸಿನಿರಂಗದ ತಮ್ಮ ಜರ್ನಿಯ ಬಗ್ಗೆ ಮಾತನಾಡುತ್ತಾ ” ಓಂ ಹಾಗೂ ನಮ್ಮೂರ […]

ಚಿರಯುವಕ ‘ಚಿಯಾನ್ ವಿಕ್ರಮ್’ ಆರೋಗ್ಯದಲ್ಲಿ ಏರು ಪೇರು.

‘ಚಿಯಾನ್’ ವಿಕ್ರಮ್ ಎಂದೇ ಖ್ಯಾತರಾಗಿರುವ ತಮಿಳಿನ ಖ್ಯಾತ ನಟ ವಿಕ್ರಮ್ ಅವರು ಅತೀ ಚೈತನ್ಯವುಳ್ಳವರು. 56 ವರ್ಷ ವಯಸ್ಸಿನ ಇವರು ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಸಿನಿರಸಿಕರ ನೆಚ್ಚಿನ ನಟರಾದ ಇವರ ಆರೋಗ್ಯದಲ್ಲಿ ಇಂದು ಸಮಸ್ಯೆ ಕಂಡುಬಂದಿದೆ. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು ಕೂಡಲೇ ಚೆನ್ನೈ ನ ‘ಕಾವೇರಿ ಹಾಸ್ಪಿಟಲ್’ಗೆ ದಾಖಲಾಗಿದ್ದಾರೆ. ಸದ್ಯ ಇವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ, ನೆಟ್ಟಿಗರು ಹೇಳುವ ಕಥೆಯೇ ಬೇರೆ. ಸಣ್ಣ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ವಿಕ್ರಮ್ ಅವರಿಗೆ ಹೃದಯಾಘಾತ […]

ರಕ್ಷಿತ್ ಕೊಟ್ಟರು ವಿಶೇಷ ಸುಳಿವು.

ರಿಷಬ್ ಶೆಟ್ಟಿ ಅವರು ಚಂದನವನದ ಅತಿ ಚಾಲಾಕಿ, ಹಾಗು ಭಾರವಸೆಯುಳ್ಳ ಯುವ ನಿರ್ದೇಶಕರಲ್ಲಿ ಒಬ್ಬರು. ಕಿರಿಕ್ ಪಾರ್ಟಿ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹೀಗೆ ಹಲವು ಅದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ಇವರದ್ದು. ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ಜುಲೈ 7ರಂದು ತಮ್ಮ ಜನ್ಮದಿನ ಆಚರಿಸಿಕೊಂಡರು. ಈ ಸಂಧರ್ಭದಲ್ಲಿ ಇವರ ಮುಂದಿನ ಸಿನಿಮಾಗಳಿಂದ ಪೋಸ್ಟರ್ ಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದವು. ಇದೆಲ್ಲದರ ನಡುವೆ ಎದ್ದು ನಿಂತಿದ್ದು ರಕ್ಷಿತ್ ಶೆಟ್ಟಿಯವರ ‘ಪರಮ್ […]

ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅನೂಪ್ ಭಂಡಾರಿ..

‘ರಂಗಿತರಂಗ’ ನಿರ್ದೇಶಕ ಅನೂಪ್ ಭಂಡಾರಿ ಯಾರಿಗೆ ತಾನೇ ಗೊತ್ತಿಲ್ಲ? ಈಗಂತೂ ವಿಕ್ರಾಂತ್ ರೋಣದ ಮೂಲಕ ಎಲ್ಲಾ ಕಡೆ ಸುದ್ದಿಯಲ್ಲಿದ್ದಾರೆ. ಇದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಅನೂಪ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಅನೂಪ್ ಭಂಡಾರಿ ಚಿತ್ರರಂಗಕ್ಕೆ ಕಾಲಿರಿಸಿ ಏಳು ವರ್ಷಗಳೇ ಕಳೆದಿವೆ. ಆದರೆ ಅವರು ಮಾಡಿದ್ದು ಬರೀ ಮೂರು ಸಿನಿಮಾಗಳನ್ನು ಮಾತ್ರ. 2015ರಲ್ಲಿ ತೆರೆಕಂಡ ರಂಗಿತರಂಗ ಅವರಿಗೆ ಚಿತ್ರರಂಗದಲ್ಲಿ ಭದ್ರಬುನಾದಿ ಹಾಕಿ ಕೊಟ್ಟಿತು. ಈಗ ಅವರು ಬಾಲಿವುಡ್ ಗೆ ಹಾರಹೊರಟಿರುವುದಕ್ಕೂ ರಂಗಿತರಂಗವೇ ಕಾರಣ. ಸಂಪೂರ್ಣ ಹೊಸಬರು ಸೇರಿ […]

ಪರಭಾಷೆಗೆ ‘ದ್ವಿತ್ವ’ !!

‘ಲೂಸಿಯ’, ‘ಯು-ಟರ್ನ್’ ರೀತಿಯ ಬುದ್ದಿವಂತ ಸಿನಿಮಾಗಳಿಂದ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನಾವನ್ನು ಪಡೆದಿರೋ ಯುವ ನಿರ್ದೇಶಕರು ಪವನ್ ಕುಮಾರ್ ಅವರು. ಹಲವು ಚಿತ್ರಗಳಲ್ಲಿ ನಟಿಸಿ, ಹಲವು ಚಿತ್ರಗಳ ತೆರೆಹಿಂದೆ ಕೆಲಸ ಮಾಡಿ, ಸದ್ಯ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ನೀಡಿರುವ ಇವರ ನಾಲ್ಕನೇ ಸಿನಿಮಾ ಕನ್ನಡಿಗರನ್ನು ಹುಚ್ಚೆದ್ದು ಕುಣಿಸಿತ್ತು. ಕಾರಣ ಇವರ ನಿರ್ದೇಶನದಲ್ಲಿ ಮೂಡಿಬರುವ ನಾಲ್ಕನೇ ಸಿನಿಮಾ ಘೋಷಣೆಯಾಗಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ.’ಹೊಂಬಾಳೆ ಫಿಲಂಸ್’ ನಿರ್ಮಾಣದಲ್ಲಿ ಮೂಡಿಬರಲಿದ್ದ ಈ […]

ಮನದಲ್ಲಿರೋ ‘ಚಾರ್ಲಿ ಮತ್ತು ಧರ್ಮ’ ಮನೆಗಳಿಗೆ ಬರೋ ದಿನಾಂಕ ಫಿಕ್ಸ್.

ಸಿನಿಮಾ ನೋಡಿದವರಲ್ಲಿ ಬಹುಪಾಲು ಪ್ರತಿಯೊಬ್ಬರ ಕಣ್ಣಿನಲ್ಲೂ ನೀರು ಕೂರಿಸಿದಂತಹ ಕೀರ್ತಿ ‘777 ಚಾರ್ಲಿ’ಯದು. ‘ಧರ್ಮ ಹಾಗು ಚಾರ್ಲಿ’ ಸೇರಿ ಒಬ್ಬ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿ ನಾಯಿಯೊಂದರ ಪಾತ್ರ ಎಂತದ್ದು ಎಂದು ತೆರೆಮೇಲೆ ತೋರಿಸಿದ್ದಾರೆ. ನಿರ್ದೇಶಕರು ಕಿರಣ್ ರಾಜ್ ಹಾಗು ನಿರ್ಮಾಪಕ, ‘ಧರ್ಮ’ ಪಾತ್ರದಾರಿ ರಕ್ಷಿತ್ ಶೆಟ್ಟಿಗೆ ಜೊತೆಗೆ ‘ಚಾರ್ಲಿ’ ನಾಯಿ ಹಾಗು ಅದನ್ನ ಸಿದ್ದಗೊಳಿಸಿದ ಪ್ರಮೋದ್ ಅವರಿಗೆ ದೇಶದ ಮೂಲೆಮೂಲೆಗಳಿಂದ ಪ್ರಶಂಸೆಗಳು ಹರಿದುಬರುತ್ತಿವೆ. ಇದೀಗ ಈ ಚಿತ್ರ ಒಟಿಟಿ ಪರದೆಯ ಮೂಲಕ ಮನೆಮನೆಗಳಿಗೆ ಹೆಜ್ಜೆ ಇಡಲು ದಿನಾಂಕ […]

ಟಿವಿ ಪರದೆ ಮೇಲೆ ಬರುತ್ತಿದೆ ‘ಜೇಮ್ಸ್’

ಬೆಳ್ಳಿತೆರೆ ಮೇಲೆ ನಮ್ಮ ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾಯಕನಾಗಿ ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಕನ್ನಡಿಗರ ಮನೆ-ಮನಗಳ ರಾಜಕುಮಾರ ಅಪ್ಪು ನಮ್ಮನ್ನ ಅಗಲಿ ಇಂದಿಗೆ ವರುಷವೇ ಕಳೆಯುತ್ತ ಬಂದರೂ, ನಮ್ಮ ನಡುವೆಯೇ ಅವರಿದ್ದಾರೆ ಎಂಬ ನಂಬಿಕೆ ಎಷ್ಟೋ ಜನರ ಮನದಲ್ಲಿದೆ. ‘ಜೇಮ್ಸ್’ ಸಿನಿಮಾ ಕೂಡ ಹಾಗೆಯೇ. ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಅದರ ಮೇಲಿದ್ದ ಕ್ರೇಜ್ ಹಾಗೆಯೇ ಇದೆ. 2022ರ ಮೊದಲ ನೂರು ಕೋಟಿ ಕ್ಲಬ್ ನ ಚಿತ್ರ […]

‘ಥೋರ್’ ಜೊತೆಗೆ ತೆರೆಮೇಲೆ ಕಾಣಿಸಿಕೊಳ್ಳಲಿರುವ ‘ವಿಕ್ರಾಂತ್ ರೋಣ’!!

ಕನ್ನಡದ ಮಡಿಲಿನಿಂದ ಹುಟ್ಟಿ ಬರುತ್ತಿರುವ ಮತ್ತೊಂದು ಬಹು-ನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ ‘ವಿಕ್ರಾಂತ್ ರೋಣ’.ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಟಿಸಿರೋ ಈ ಸಿನಿಮಾ ತನ್ನ ಬಿಡುಗಡೆಯ ದಿನಾಂಕಕ್ಕೆ ಸನ್ನಿಹಿತವಾಗುತ್ತಿದೆ. ‘ವಿಕ್ರಾಂತ್ ರೋಣ’ನ ಲೋಕವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರೆ, ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆರಂಭದಿಂದಲೂ ಭುರ್ಜ್ ಖಲಿಫದಲ್ಲಿ ಟೀಸರ್ ಬಿಡುಗಡೆಗೋಳಿಸೋ ಮೂಲಕ ದೊಡ್ಡಮಟ್ಟದಲ್ಲೇ ಸುದ್ದಿಯಾಗುತ್ತಿರುವ ಈ ಚಿತ್ರತಂಡ ಮತ್ತೊಂದು ಹೊಸ, ದೊಡ್ಡ ಕೆಲಸಕ್ಕೆ ಕೈ ಹಾಕಿದೆ. ಪ್ರಪಂಚದಾದ್ಯಂತ ಪ್ರಸಿದ್ದರಾಗಿರುವ, ಅಪಾರ […]

ಅದೃಷ್ಟ ತಂದ ಚಾರ್ಲಿ…ಶ್ವಾನಗಳಿಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

777 ಚಾರ್ಲಿ ಎಂದರೆ ಬಹುಶಃ ಈಗ ತಿಳಿಯದವರಿಲ್ಲ. ತನ್ನ ಮುಗ್ಧ ಅಭಿನಯದಿಂದ ಎಲ್ಲೆಡೆ ಮನೆಮಾತಾಗಿರುವ ಚಾರ್ಲಿ ಈಗಂತೂ ಎಲ್ಲರ ನೆಚ್ಚಿನ ಹೀರೋಯಿನ್. ಎಲ್ಲ ಶ್ವಾನಪ್ರಿಯರ ಆಕರ್ಷಣಾ ಕೇಂದ್ರಬಿಂದುವಾಗಿರುವ ಚಾರ್ಲಿಗೆ ನೆರೆರಾಜ್ಯಗಳಿಂದಲೂ ಸಿನಿಮಾದಲ್ಲಿ ಅಭಿನಯಿಸುವಂತೆ ಡಿಮ್ಯಾಂಡ್ ಸೃಷ್ಟಿಯಾಗಿದೆ ಎಂದರೆ ನೀವು ನಂಬಲೇಬೇಕು. ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ777’ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹೊಸದಾದ ಅಲೆ ಸೃಷ್ಟಿಸಿದೆ. ಶ್ವಾನದ ಸುತ್ತ ಹೆಣೆದಿರುವ ನಿಷ್ಕಲ್ಮಶ ಪ್ರೀತಿಯ ಈ ಕಥೆ ಬೆಸ್ಟ್ ಫ್ಯಾಮಿಲಿ ಎಂಟರ್ಟೈನರ್ ಅನ್ನುವುದರಲ್ಲಿ ಸಂಶಯವಿಲ್ಲ. ಅಂದಹಾಗೆ 777 ಚಾರ್ಲಿಯಲ್ಲಿ […]

‘ಪುಷ್ಪ’ನ ಎದುರು ನಿಲ್ಲಲಿದ್ದಾರ ಸೇತುಪತಿ??

ದಕ್ಷಿಣ ಭಾರತದ ನೆಚ್ಚಿನ ನಟ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ’. ಎರಡು ಭಾಗಗಳಲ್ಲಿ ಬರುತ್ತಿರುವ ಈ ಸಿನಿಮಾ ದಿನಕ್ಕೊಂದು ಹೊಸ ವಿಷಯಕ್ಕೆ ಸುದ್ದಿಯಲ್ಲಿರುತ್ತಿದೆ. ‘ಪುಷ್ಪ: ದಿ ರೈಸ್’ ಎಂಬ ಹೆಸರಿನಿಂದ ತೆರೆಕಂಡಿದ್ದ ಮೊದಲನೇ ಭಾಗ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿ ಉತ್ತಮ ಲಾಭವನ್ನು ಕಂಡಿತ್ತು. ಇದೀಗ ಎರಡನೇ ಭಾಗದ ಸಿದ್ಧತೆಗಳು ನಡೆಯುತ್ತಿದ್ದೂ, ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತಯಾರು ಮಾಡಲು ಚಿತ್ರತಂಡ ಪರಿಶ್ರಮ ಪಡುತ್ತಿದೆ. ಅಲ್ಲು ಅರ್ಜುನ್ ಅವರ ಜೊತೆಗೆ ಡಾಲಿ ಧನಂಜಯ, ರಶ್ಮಿಕಾ […]