ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ

ಟಾಲಿವುಡ್‌ ನ ಪ್ರಸಿದ್ಧ ನಟ ವಿಜಯ್‌ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದೀಗ ಲೈಗರ್‌ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಂಪೂರ್ಣ ಬೆತ್ತಲೆಯಾಗಿ, ಗುಲಾಬಿ ಹೂವಿನ ಗುಚ್ಛ ಹಿಡಿದು ನಿಂತಿರುವ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ. ವಿಜಯ್ ದೇವರಕೊಂಡ ಅವರ ಬೋಲ್ಡ್‌ ಲುಕ್‌ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಹೆಚ್ಚಿನವರು ಈ ಪೋಸ್ಟ್ ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಅಂತೆಯೇ ಅವರ ಆಪ್ತ ಸ್ನೇಹಿತೆ ರಶ್ಮಿಕಾ […]

ಕಿಚ್ಚ ಸುದೀಪ್ ಅವರ ಅತಿದೊಡ್ಡ ಯಶಸ್ಸಿಗೆ 21 ವರ್ಷ!!

‘ಅಭಿನಯ ಚಕ್ರವರ್ತಿ’, ‘ಬಾದ್ ಶಾಹ್’ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಧೀಮಂತ ನಟ ಕಿಚ್ಚ ಸುದೀಪ್ ಅವರು.ಇಂದು, ಜುಲೈ 6 ಅವರ ಸಿನಿಜೀವನದ ಬಹುಮುಖ್ಯವಾದ ದಿನ. ಇಂದು ಅಭಿಮಾನಿಗಳ ‘ಬಾದ್ ಷಾಹ್’ ಆಗಿರುವ ಇವರು ಒಬ್ಬ ಸಾಮಾನ್ಯ ನಟನಿಂದ ಸೂಪರ್ ಸ್ಟಾರ್ ಎನಿಸಿಕೊಂಡ ಕಾಲದ ನೆನಪಿನ ದಿನ ಇಂದು. ಸುದೀಪ್ ಅವರ ಅಭಿನಯದ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷಗಳು ಕಳೆದಿವೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸುದೀಪ್ ಅವರು ಪಡೆದ ಮೊದಲ ಅತೀ […]

ಬೆಳ್ಳಿತೆರೆಗೆ ಸನಿಹವಾಗುತ್ತಿದೆ ಅಪ್ಪು ಕನಸಿನ ‘ಗಂಧದಗುಡಿ’

“ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.” ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಕೊನೆಯ ಸಾಲುಗಳಿವು. ಈ ಸಾಲು ಬರೆದಿರುವುದು ಅವರ ಕನಸಿನ, ಅವರದೇ ನಿರ್ಮಾಣದ ಸಾಕ್ಷ್ಯ ಚಿತ್ರವಾದ ‘ಗಂಧದಗುಡಿ’ಯ ಬಗ್ಗೆ. ಕನ್ನಡ ನಾಡಿನ ಮಗನಾಗಿ, ಪ್ರಕೃತಿಯ ಮಡಿಲಿನ ಮಗುವಾಗಿ ಮೆರೆದಿದ್ದ ಅಪ್ಪು, ಅದೇ ಹಸಿರಿನ ಬಗ್ಗೆ ವನ್ಯಜೀವನದ ಬಗ್ಗೆ […]

ಲಾಭದ ಸಂತಸವನ್ನು ‘ಹಂಚಿ’ಕೊಳ್ಳುತ್ತಿದೆ 777ಚಾರ್ಲಿ!!

ಭಾರತದಾದ್ಯಂತ ಸಿನಿರಸಿಕರನ್ನ ಭಾವುಕಾರಾಗಿಸಿರುವ ಕೀರ್ತಿ ‘777 ಚಾರ್ಲಿ’ ಸಿನಿಮಾದ್ದು. ಜೂನ್ 10ರಂದು ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ನೋಡುಗರೆಲ್ಲರ ಮನಸೆಳೆದಿದೆ. ಅದರಿಂದಲೇ ಚಿತ್ರತಂಡ ಉತ್ತಮ ಲಾಭವನ್ನು ಪಡೆದುಕೊಂಡಿದೆ. 2022ರಲ್ಲಿ ‘ಜೇಮ್ಸ್’ ಹಾಗು ‘ಕೆಜಿಎಫ್ ಚಾಪ್ಟರ್ 2’ ನಂತರ 100 ಕೋಟಿ ಕ್ಲಬ್ ಸೇರಿಕೊಂಡ ಮೂರನೇ ಕನ್ನಡ ಎನಿಸಿಕೊಂಡಿರುವ ‘777 ಚಾರ್ಲಿ’, ತನ್ನ ಲಾಭಂಶದ ಬಗ್ಗೆ ಉತ್ತಮ ನಿರ್ಧಾರ ಹೊರಹಾಕಿದೆ. ದೇಶದಾದ್ಯಂತ ಸುಮಾರು 450ಕ್ಕೂ ಹೆಚ್ಚು ಕಡೆಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿರುವ ‘777 […]

ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿ ಬರುತ್ತಿದ್ದಾರೆ ಡಾಲಿ.

ಸದ್ಯದ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ, ಸಕ್ರಿಯ ಹಾಗು ಬಹುಬೇಡಿಕೆಯ ನಟರಲ್ಲಿ ಬರುವ ಮೊದಲ ಹೆಸರು ಡಾಲಿ ಧನಂಜಯ. ನಾಯಕನಾದರೂ ಸರಿ, ಖಳನಾಯಕನಾದರೂ ಸರಿ ಪೋಷಕನಾದರೂ ಸರಿ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ರೀತಿಯಲ್ಲಿ ನ್ಯಾಯ ನೀಡುವ ನಟರಿವರು. ಈಗಾಗಲೇ ಈ ವರ್ಷದಲ್ಲಿ ಅತೀ ಹೆಚ್ಚು ಸಿನಿಮಾಗಳು ಬಿಡುಗಡೆ ಕಾಣುತ್ತಿರುವ ಕನ್ನಡದ ನಟ ಎನಿಸಿಕೊಂಡಿರುವ ಇವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಸದ್ಯ ಇವರ ಹೊಸ ಸಿನಿಮಾದಲ್ಲಿನ ಇವರ ಹೊಸ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ‘ಕೆ ಆರ್ […]

ಅಪ್ಪುವನ್ನು ಹಾಡಿ ಹೊಗಳಿದ ಸಾಯಿ ಪಲ್ಲವಿ.

‘ಕರ್ನಾಟಕ ರತ್ನ’ ಪವರ್ ಸ್ಟಾರ್ ಡಾ| ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ಕಡೆಗಳಲ್ಲೂ ಅಭಿಮಾನಿಗಳಿದ್ದಾರೆ. ಇಂದು ನಮ್ಮೊಡನೆ ನಗಲು ಅವರಿಲ್ಲದಿದ್ದರೂ ಸಹ ಅವರ ಆ ಪರಿಶುದ್ಧ ನಗು ಪ್ರತಿಯೊಬ್ಬರ ಮನದಲ್ಲಿ ಎಂದಿಗೂ ಅಜರಾಮರ. ಸದ್ಯ ಅಪ್ಪು ಬಗ್ಗೆ ‘ಪ್ರೇಮಂ’ ಬೆಡಗಿ ಮಾತನಾಡಿದ್ದಾರೆ. ಒಮ್ಮೆಯಷ್ಟೇ ಭೇಟಿಯಾಗಿದ್ದಾದರೂ, ಆ ಭೇಟಿಯನ್ನೇ ನೆನಪಿಸಿಕೊಂಡಿದ್ದಾರೆ ಸಾಯಿ ಪಲ್ಲವಿ. ಜುಲೈ 15ರಂದು ಕನ್ನಡವೂ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ಗಾರ್ಗಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾಯಿ ಪಲ್ಲವಿ ಓಡಾಡುತ್ತಿದ್ದಾರೆ. ಕನ್ನಡ, ತಮಿಳು ಹಾಗು ತೆಲುಗು […]

ಬರ್ತ್ಡೇ ಬಾಯ್ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸರ್ಪ್ರೈಸ್ ಗಳು

ಕನ್ನಡದ ‘ಡೈನಾಮಿಕ್ ಪ್ರಿನ್ಸ್’ ಎಂದೇ ಹೆಸರಾಗಿರುವ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೆ ಇಂದು(ಜುಲೈ 4) ಜನುಮದಿನದ ಸಂಭ್ರಮ. ತಮ್ಮ ಸಿನಿಪಯಣದಲ್ಲಿ ಏಳು ಬೀಳು ಎಲ್ಲವನ್ನು ಕಂಡುಕೊಂಡಂತಹ ಇವರು ಇದೀಗ ಕನ್ನಡದ ಅತ್ಯಂತ ಆಕ್ಟಿವ್ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರ ಮುಂದಿನ ಸಿನಿಮಾ ತಂಡದವರು ಪೋಸ್ಟರ್ ಹಾಗು ಹಾಡುಗಳ ಮೂಲಕ ತಮ್ಮ ನಾಯಕನಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ಸಾಲಿನಲ್ಲಿರುವ ಚಿತ್ರಗಳ ಒಂದು ಮುನ್ನೋಟ ಈ ಕೆಳಗಿದೆ. ಪ್ರಜ್ವಲ್ ದೇವರಾಜ್ ಅವರ ಸದ್ಯದ […]

ಕನ್ನಡಕ್ಕೆ ಹೊಸ ಕೊಡುಗೆ ‘ಟೈಗರ್ ಟಾಕಿಸ್’

ವಿನೋದ್ ಪ್ರಭಾಕರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಟೈಗರ್ ಪ್ರಭಾಕರ್ ಪುತ್ರನಾಗಿ ಮರಿ ಟೈಗರ್ ಅಂತಲೇ ಖ್ಯಾತಿ ಪಡೆದಿರುವವರು. ತಮ್ಮ ಸಿನಿಮಾ ಜರ್ನಿಯಲ್ಲಿ ಹಲವಾರು ಏಳುಬೀಳುಗಳನ್ನು ಕಂಡವರು. ಆದರೂ ವಿನೋದ್ ಪ್ರಭಾಕರ್ ತಮ್ಮದೇ ಆದಂತಹ ಇಮೇಜ್ ಇಟ್ಟುಕೊಂಡಿದ್ದಾರೆ. ಸಾಲು ಸಾಲು ಮಾಸ್ ಸಿನಿಮಾಗಳನ್ನೇ ಮಾಡಿರುವ ವಿನೋದ್ ಪ್ರಭಾಕರ್ ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇದೀಗ ತಮ್ಮ ಸಿನಿ ಜರ್ನಿಯಲ್ಲಿ ಮತ್ತೊಂದು ಹೆಜ್ಜೆಯಿಡಲು ಹೊರಟಿದ್ದಾರೆ. ವಿನೋದ್ ಪ್ರಭಾಕರ್ ನಾಯಕ ನಟ ಎನ್ನುವುದರೊಂದಿಗೆ ನಿರ್ಮಾಪಕನಾಗಲೂ […]

ಔಪಚಾರಿಕ ತರಬೇತಿಯಿಲ್ಲದೆ ನಾನು ಎಂದಿಗೂ ಸಾಹಸದ ಪ್ರಯತ್ನ ಮಾಡುವುದಿಲ್ಲ : ದಿಗಂತ್

ಶಸ್ತ್ರಚಿಕಿತ್ಸೆಯ ನಂತರ ಇದೀಗ ನಟ ದಿಗಂತ್ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ತನ್ನ ಮುಂದಿನ ಪಲ್ಟಿ ತನಕ ಕಾಯಲು ಸಾಧ್ಯವಿಲ್ಲ ಎನ್ನುವ ಮೂಲಕ ಡಾಕ್ಟರ್ ಜೊತೆ ನಗೆ ಚಟಾಕಿ ಸಿಡಿಸಿದ್ದಾರೆ.ಪಲ್ಟಿಯಿಂದ ಗಾಯಗೊಂಡ ಹಿನ್ನೆಲೆಯಲ್ಲಿ ನಟನನ್ನು ಮುಂಬೈನಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆತರಲಾಗಿತ್ತು. ಖಾಸಗಿ ವೆಬ್ ಸೈಟ್ ಜೊತೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡ ಅವರು “ಶಸ್ತ್ರಚಿಕಿತ್ಸೆಯ ಕೆಲವೇ ದಿನಗಳ ನಂತರ ನನ್ನ ವೈದ್ಯರು ನನಗೆ ಈಜಲು ಮತ್ತು ಜಿಮ್ ನಲ್ಲಿ ಲಘು ವ್ಯಾಯಾಮ ಮಾಡಲು ಸಲಹೆ ನೀಡಿದರು, […]

ಸಾಯಿ ಪಲ್ಲವಿ ಹೊಸ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಾಥ್.

ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಚಿತ್ರರಂಗದ ಬ್ಯುಸಿ ನಟಿ ಸಾಯಿ ಪಲ್ಲವಿ ಅವರು ಸಿನಿರಸಿಕರಿಗೆ ಚಿರಪರಿಚಿತ. ‘ಪ್ರೇಮಮ್’ ಚಿತ್ರದ ಮೂಲಕ ಸಿನಿರಸಿಕರ ಕಣ್ಣಿಗೆ ಬಿದ್ದ ಇವರು ತದನಂತರ ತಮ್ಮ ನಟನೆಯಿಂದ ಚಿತ್ರರಂಗದಲ್ಲಿ ಅವರದೇ ಹೊಸ ಜಾಗ ಮಾಡಿಕೊಂಡರು. ಇದೀಗ ಅವರ ಹೊಸ ಸಿನಿಮಾ ‘ಗಾರ್ಗಿ’ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಬಿಡುಗಡೆಯ ದಿನಾಂಕವನ್ನು ಸಹ ಘೋಷಣೆ ಮಾಡಿದೆ. ಕನ್ನಡ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಗೌತಮ್ ರಾಮಚಂದ್ರನ್ ಅವರು […]