ವಿಲನ್ ರೋಲ್ ಮಾಡುವ ಆಸೆ – ರಣಬೀರ್ ಕಪೂರ್

ಜುಲೈ 22ರಂದು ತೆರೆ ಕಾಣಲಿರುವ ಸಂಶೀರ ಸಿನಿಮಾದ ಮೂಲಕ ರಣಬೀರ್ ಕಪೂರ್ ತನ್ನ ನಟನೆಯ ಹೊಸ ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಟ್ರೇಲರ್ ಮೂಲಕವೇ ಎಲ್ಲರ ಮನ ಗೆದ್ದಿರುವ ಸಂಶೀರ ಇನ್ನೇನು ಥಿಯೇಟರ್ ನಲ್ಲಿ ಎಲ್ಲರನ್ನು ಮನರಂಜಿಸಲು ಕೆಲವೇ ದಿನ ಉಳಿದಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ವಿರುದ್ಧ ಕಣಕ್ಕಿಳಿದಿರುವ ರಣಬೀರ್ ಕಪೂರ್ ರನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ‘ಆರ್ ಕೆ ಟ್ಯಾಪ್ಸ್’ ನ ಮೂರು ಎಪಿಸೋಡ್ ಗಳ ಕ್ಯಾಂಡಿಡ್ ವೀಡಿಯೋದಲ್ಲಿ ಮೂರನೇ ವೀಡಿಯೋದಲ್ಲಿ ವಿಲನ್ […]
ಗ್ಲಾಮರ್ ಗೊಂಬೆ ಎನಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದ ತ್ರಿವಿಕ್ರಮ ಬೆಡಗಿ

ಜೂನ್ 24ರಂದು ತೆರೆಕಂಡ ಸಹನಾಮೂರ್ತಿ ನಿರ್ದೇಶನದ ‘ತ್ರಿವಿಕ್ರಮ’ ಸಿನಿಮಾ, ಹೀರೋ ಹೀರೋಯಿನ್ ಇಬ್ಬರ ಪಾಲಿಗೂ ಸವಾಲಿನ ಚಿತ್ರವೇ ಸರಿ. ರವಿಚಂದ್ರನ್ ಪುತ್ರ ವಿಕ್ರಂ ಅವರ ಕನ್ನಡ ಇಂಡಸ್ಟ್ರಿ ಪಯಣ ಈ ಸಿನಿಮಾದ ಮೂಲಕ ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ವಿಕ್ರಂರ ಜೊತೆಗೆ ನಾಯಕಿಯಾಗಿ ಅಭಿನಯಿಸಿದ ಆಕಾಂಕ್ಷ ಶರ್ಮಾರಿಗೂ ಈ ಸಿನಿಮಾ ಅದೃಷ್ಟ ಪರೀಕ್ಷೆ ಇದ್ದಂತೆ. ರಿಲೀಸ್ ಡೇಗಿಂತ ಮೊದಲು ಎಲ್ಲಾ ಸೆಲೆಬ್ರಿಟಿಗಳ ಮನಸ್ಸಿನಲ್ಲಿರುವ ತಳಮಳ, ಕುತೂಹಲ,ಭಯ ಎಲ್ಲವೂ ಆಕಾಂಕ್ಷ ಅವರ ಮನಸ್ಸಿನಲ್ಲೂ ಇತ್ತು ಎನ್ನುತ್ತಾರೆ […]
ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕರ್ತೃ ಕ್ರಿಯಾ ಕರ್ಮ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರು 1980ರ ನಂತರ ಮತ್ತೊಮ್ಮೆ ನಿರ್ದೇಶಕ ರಾಜ್ ಕಿರಣ್ ಜೋಸೆಫ್ ಅವರೊಂದಿಗೆ ಜೊತೆಯಾಗಲಿದ್ದಾರೆ. ಈ ಮೊದಲು ‘ಉಗ್ರಾವತಾರ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕ ಉಪೇಂದ್ರ “ನಾನು ಪೊಲೀಸ್ ವಿಭಾಗದ ಉನ್ನತ ಇಲಾಖೆಯಲ್ಲಿ ಕೆಲಸ ಮಾಡುವ ವಿಶೇಷ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರವು ತುಂಬ ಸವಾಲಿನಿಂದ ಕೂಡಿದೆ. ನಾನು ಸಮವಸ್ತ್ರವನ್ನು ಧರಿಸುವುದಿಲ್ಲ ಮತ್ತು ಮೇಕಪ್ […]
‘777 ಚಾರ್ಲಿ’ಗೆ ಎಲ್ಲೆಡೆಯಿಂದ ಬಂತು ಬಹುಬೇಡಿಕೆ.

ಸದ್ಯ ಹಲವೆಡೆ ಚಿತ್ರಮಂದಿರಗಳನ್ನೂ, ಚಿತ್ರ ನೋಡಿದ ಪ್ರೇಕ್ಷಕರ ಮನಸ್ಸನ್ನು ತುಂಬುತ್ತಿರುವ ಸಿನಿಮಾ ‘777 ಚಾರ್ಲಿ’. ಮಾನವ ಹಾಗು ಶ್ವಾನದ ನಡುವಿನ ಕಥೆ ಹೇಳುವ ಈ ಸಿನಿಮಾವನ್ನು ಕಿರಣ್ ರಾಜ್ ಕೆ ಅವರು ರಚಿಸಿ ನಿರ್ದೇಶಸಿದ್ದು, ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿ ನಟಿಸಿದ್ದಾರೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾಗೆ ಹಾಗು ಸಿನಿತಂಡದ ಸದಸ್ಯರಿಗೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಿಂದ ಬೇಡಿಕೆಗಳು ಬರುತ್ತಿವೆ. ‘777 ಚಾರ್ಲಿ’ ಸಿನಿಮಾ ಪಂಚ ಭಾಷೆಗಳಲ್ಲೂ ದೇಶ ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಲ್ಲೂ […]
ಆತ್ಮವಿಶ್ವಾಸ ಹೆಚ್ಚಾಗಲು ಈ ಗೆಲುವೇ ಕಾರಣ ಎಂದ ಕಿರಣ್ ರಾಜ್… ಯಾವುದು ಗೊತ್ತಾ?

ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ಅಭಿನಯಿಸುತ್ತಿರುವ ಕಿರಣ್ ರಾಜ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಸಕ್ರಿಯರಾಗಿರುವ ಪ್ರತಿಭೆ. ಕಿರಣ್ ರಾಜ್ ಅಭಿನಯದ ಬಡ್ಡೀಸ್ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಭಿನ್ನ ಕಥಾ ಹಂದರವುಳ್ಳ ಬಡ್ಡೀಸ್ ಸಿನಿಮಾವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಕ್ಕಾಗಿ ಕಿರಣ್ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. “ಬಡ್ಡೀಸ್ ಸಿನಿಮಾ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನು ಐಎಂಡಿಬಿ ಹಾಗೂ ಬುಕ್ ಮೈ ಶೋಗಳಲ್ಲಿ ನಮ್ಮ ಸಿನಿಮಾಕ್ಕೆ ಉತ್ತಮ ರೇಟಿಂಗ್ ಕೂಡಾ ದೊರಕಿದೆ. ಈ […]
ಒಟಿಟಿ ಪರದೆ ಏರಿದ ಮತ್ತೊಂದು ಸಿನಿಮಾ

ಕೃಷ್ಣ ಎಂದೇ ಕನ್ನಡ ನಾಡಿನಲ್ಲಿ ಪ್ರಸಿದ್ದರಾಗಿರುವ ಅಜಯ್ ರಾವ್ ಅವರು ನಟಿಸಿ ಇದೇ ಏಪ್ರಿಲ್ 29ರಂದು ಬಿಡುಗಡೆಯಾಗಿದ್ದ ಸಿನಿಮಾ ‘ಶೋಕಿವಾಲ’.ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಸೆಳೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದ ಈ ಸಿನಿಮಾ ಒಂದಷ್ಟರ ಮಟ್ಟಿಗೆ ಒಳ್ಳೆಯ ಓಟವನ್ನೇ ಪಡೆದಿತ್ತು. ಕೃಷ್ಣ ಅಜಯ್ ರಾವ್ ಅವರಿಗೆ ಸಂಜನಾ ಆನಂದ್ ಜೋಡಿಯಾಗಿ ನಟಿಸಿದ್ದ ಈ ಚಿತ್ರ ಇದೀಗ ಒಟಿಟಿ ಪರದೆ ಏರಲು ಸಿದ್ಧವಾಗಿದೆ. ಜಾಕಿ ಅವರು ನಿರ್ದೇಶಿಸಿ ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಟಿ ಆರ್ ಚಂದ್ರಶೇಖರ್ ಅವರು ನಿರ್ಮಾಣ […]
ಬಿಡುಗಡೆಗೆ ಮುಹೂರ್ತವಿಟ್ಟ ‘ತೋತಾಪುರಿ’

ವರುಷಗಳ ಹಿಂದೆ ತೆರೆಕಂಡಂತಹ ‘ನೀರ್ದೋಸೆ’ ಸಿನಿಮಾ ಒಂದು ಹೊಸ ವರ್ಗದ ಅಭಿಮಾನಿಗಳನ್ನು ಹುಟ್ಟುಹಾಕಿತ್ತು ಎಂದರೆ ತಪ್ಪಾಗದು. ಹಾಸ್ಯಮಾಯವಾಗಿಯೇ ಸೂಕ್ಷ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಿದ್ದ ee ಸಿನಿಮಾ ಜನಮನ್ನಣೆ ಪಡೆದಿತ್ತು. ಇದೀಗ ಬಹುಪಾಲು ಅದೇ ತಂಡದವರೇ ಮಾಡಿರುವ ಹೊಸ ಸಿನಿಮಾ ‘ತೋತಾಪುರಿ’. ವಿಜಯ್ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರ ಇದೀಗ ತನ್ನ ಬಿಡುಗಡೆ ದಿನಾಂಕವನ್ನು ಹೊರಹಾಕಿದೆ. ‘ತೋತಾಪುರಿ’ ಸಿನಿಮಾದ ಟ್ರೈಲರ್ ಹಾಗು ಹಾಡೊಂದು ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ನೀರ್ದೋಸೆ’ಯಂತದ್ದೇ ಅಂಶಗಳು ಇದರಲ್ಲೂ ಇರುತ್ತವೆ ಎಂದು […]
ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕಥೆಯನ್ನ ಆಧಾರವಾಗಿಟ್ಟುಕೊಂಡು ಮಾಡಿದಂತಹ ಚಿತ್ರ ‘ಮೇಜರ್’. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದಾಗ ವೀರಮರಣವನ್ನಪ್ಪಿ ’26/11ರ ಹೀರೋ’ ಎಂದೇ ಭಾರತೀಯರ ಮನದಲ್ಲಿ ಉಳಿದುಕೊಂಡವರು ಸಂದೀಪ್ ಉನ್ನಿಕೃಷ್ಣನ್. ಆ ದಿನದ ಘಟನೆಯನ್ನಷ್ಟೇ ಅಲ್ಲದೇ ಅವರ ಜೀವನದ ಮುಖ್ಯ ಅಂಶಗಳನ್ನೆಲ್ಲ ಸೇರಿಸಿಕೊಂಡು ಮಾಡಿದ ಈ ಸಿನಿಮಾ ಇದೇ ಜೂನ್ 3ರಂದು ಚಿತ್ರಮಂದಿರಗಳ ಮೆಟ್ಟಿಲೇರಿತ್ತು. ಭಾರತದಾದ್ಯಂತ ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ […]
ಲಾಲಿ ಹಾಡಲಿದ್ದಾರೆ ‘ವಿಕ್ರಾಂತ್ ರೋಣ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’.’ರಂಗಿತರಂಗ’ ಎಂಬ ಅದ್ಭುತ ಚಿತ್ರವೊಂದನ್ನು ಕನ್ನಡಿಗರಿಗೆ ನೀಡಿದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾಗೆ ಪ್ರಪಂಚದಾದ್ಯಂತ ಅಸಂಖ್ಯ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರತಂಡ ಹಲವು ಟೀಸರ್ ವಿಡಿಯೋಗಳನ್ನೂ, ಒಂದು ಹಾಡನ್ನು ಜೊತೆಗೆ ಇತ್ತೀಚಿಗಷ್ಟೇ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪ್ರತಿಯೊಂದು ‘ವಿಕ್ರಾಂತ್ ರೋಣ’ನ ಅಂಶಕ್ಕೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಚಿತ್ರದ ಬಿಡುಗಡೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ತನ್ನ ಇನ್ನೊಂದು […]
ಅರ್ಜುನ್ ಸರ್ಜಾ ತಂದೆ ಮಾತ್ರವಲ್ಲ, ನನ್ನ ನಿರ್ದೇಶಕ ಹಾಗೂ ಗುರು – ಐಶ್ವರ್ಯ

‘ಪ್ರೇಮ ಬರಹ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತಳಾದ ನಟಿ ಐಶ್ವರ್ಯ ಅರ್ಜುನ್ ಇದೀಗ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಭಾರತೀಯ ಸಿನಿಮಾರಂಗದ ಖ್ಯಾತ ನಟ ಹಾಗೂ ತಮ್ಮ ತಂದೆ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಐಶ್ವರ್ಯ ನಟಿಸುತ್ತಿರುವುದು ವಿಶೇಷ. ನಟ ವಿಶ್ವಾಕ್ ಸೇನ್ ಅಭಿನಯದ ಸಿನಿಮಾ ಇದಾಗಿದ್ದು ಬರೋಬ್ಬರಿ ನಾಲ್ಕು ವರ್ಷಗಳ ಗ್ಯಾಪ್ ನ ನಂತರ ಐಶ್ವರ್ಯ ಮತ್ತೆ ಬಣ್ಣ ಹಚ್ಚಲಿದ್ದಾರೆ. ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ‘ನಾನು […]

