ನಟನಾಗಿ ಮಿಂಚಲಿರುವ ಕೊರಿಯೋಗ್ರಾಫರ್ ಸುಶಾಂತ್ ಪೂಜಾರಿ

ಬಾಲಿವುಡ್ ನಲ್ಲಿ ಕೊರಿಯೋಗ್ರಾಫರ್ ಆಗಿ ನಂತರ ನಟನಾಗಿ ಬದಲಾದ ಸುಶಾಂತ್ ಪೂಜಾರಿ ಇದೀಗ ಜುಲೈನಲ್ಲಿ ತೆರೆಕಾಣಲಿರುವ ‘ಚೇಸ್’ ಸಿನಿಮಾ ಮುಖಾಂತರ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ. ಈ ಚಿತ್ರವನ್ನು ವಿಲೋಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ಉಡುಪಿ ಮೂಲದವರಾದ ಸುಶಾಂತ್ ಚಿತ್ರದ ಬಗ್ಗೆ ಮಾತನಾಡುತ್ತಾ ‘ಕೆಜಿಎಫ್ ಯಶಸ್ಸು ಗಳಿಸುವುದಕ್ಕಿಂತ ಮೊದಲೇ ನಾನು ಕನ್ನಡ ಸಿನಿಮಾಗಳ ದೊಡ್ಡ ಪ್ರೇಮಿ. ಕನ್ನಡ ಸಿನಿಮಾದಲ್ಲಿ ನಟಿಸುವುದು ನನ್ನ ಬಹುದೊಡ್ಡ ಆಸೆಯಾಗಿತ್ತು. ಅದು ಈಗ ಚೇಸ್ ನ ಮೂಲಕ ನೆರವೇರುತ್ತಿದೆ’ ಎಂದರು. ಚೇಸ್ ಸಿನಿಮಾದಲ್ಲಿ ತಮ್ಮ […]

ವೆಡ್ಡಿಂಗ್ ಗಿಫ್ಟ್ ಜೊತೆ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ನಿಶಾನ್ ನಾಣಯ್ಯ

ಜುಲೈ ಎಂಟರಂದು ತೆರೆ ಕಾಣಲಿರುವ ಕನ್ನಡದ ಹೊಸ ಸಿನಿಮಾ ‘ವೆಡ್ಡಿಂಗ್ ಗಿಫ್ಟ್’ ನಲ್ಲಿ ಬಹುಭಾಷಾ ನಟ ನಿಶಾನ್ ನಾಣಯ್ಯ ಅಭಿನಯಿಸಲಿದ್ದಾರೆ. ವಿಕ್ರಂ ಪ್ರಭು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಪ್ರೇಮ ಹಾಗು ಸೋನು ಗೌಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲತಃ ಮಡಿಕೇರಿಯವರಾಗಿರುವ ನಿಶಾನ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ನನಗೆ ಮೊದಲನೆಯದಾಗಿ ಸ್ಕ್ರಿಪ್ಟ್ ತುಂಬಾ ಇಷ್ಟವಾಯಿತು. ವಿಕ್ರಂ ಪ್ರಭು ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುತ್ತಿದ್ದಾರೆ. ಅವರಿಗೆ ಚಿತ್ರರಂಗದ ಬಗ್ಗೆ ಇರುವ ಒಲವು ಮತ್ತು ವಿವರಣೆಯ ಸಾಮರ್ಥ್ಯ ನನಗೆ ತುಂಬಾ […]

ಮನೆಮನೆಗೆ ಬರಲಿದೆ ಬಹುಬೇಡಿಕೆಯ ಸಿನಿಮಾ ‘ವಿಕ್ರಮ್’.

ಭಾರತೀಯ ಚಿತ್ರರಂಗಕ್ಕೆ ಸ್ವಂತವಾಗಿರುವ ನಟ ಕಮಲ್ ಹಾಸನ್ ಅವರು. ವಿವಿಧ ಭಾಷೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಈ ದಿಗ್ಗಜನ 232ನೇ ಸಿನಿಮಾ ‘ವಿಕ್ರಮ್’. ಜೂನ್ 3ನೇ ತಾರೀಕಿನಂದು ತೆರೆಕಂಡಂತಹ ಈ ಚಿತ್ರ ಪ್ರಪಂಚದಾದ್ಯಂತ ಸಿನಿರಸಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆಕ್ಷನ್-ಡ್ರಾಮಾ ರೀತಿಯ ಈ ಸಿನಿಮಾ ಈಗಲೂ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಲೋಕೇಶ್ ಕಣಗರಾಜ್ ಅವರ ಸೃಷ್ಟಿಯಾಗಿರೋ ಈ ‘ವಿಕ್ರಮ್’ ಸಿನಿಮಾ ಇದೀಗ ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಂತಹ ನಿರ್ಧಾರವನ್ನ ತೆಗೆದುಕೊಂಡಿದೆ. ತನ್ನ […]

ಕೊನೆಗೂ ಒಟಿಟಿ ಕಡೆಗೆ ಹೆಜ್ಜೆ ಹಾಕಿದ ‘ಸಲಗ’.

ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅವರು ಮೊದಲ ಬಾರಿ ನಿರ್ದೇಶಕರ ಕುರ್ಚಿ ಏರಿದ ಸಿನಿಮಾ ‘ಸಲಗ’. ಅಂಡರ್ ವರ್ಲ್ಡ್ ಲೋಕದ ಕಥೆ ಹೇಳುವಂತಹ ಈ ಚಿತ್ರ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. 2021ರ ಅಕ್ಟೋಬರ್ 14ರಂದು ತೆರೆಕಂಡಿದ್ದ ಈ ಸಿನಿಮಾ ಸಿನಿರಸಿಕರ ಮೆಚ್ಚುಗೆ ಪಡೆದಿತ್ತು. ಕರ್ನಾಟಕದ ಹಲವು ಕಡೆಗಳಲ್ಲಿ ಭರ್ಜರಿ 100 ದಿನಗಳ ಪ್ರದರ್ಶನ ಪಡೆದು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿ ಎಂಟು ತಿಂಗಳ ನಂತರ ಒಟಿಟಿ ಕಡೆಗೆ […]

ಉಪ್ಪಿ ಅಖಾಡ ಸೇರಿದ ಕೆಜಿಎಫ್ ಬೆಡಗಿ.

ಕನ್ನಡದ ಸಿನಿರಸಿಕರಿಗೆ ಒಂದಷ್ಟು ನಿರ್ದೇಶಕರು ಅಥವಾ ನಟರು ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಿದ್ದಾರೆ ಎಂದರೆ ಎಲ್ಲಿಲ್ಲದ ಸಂತಸ ಹುಟ್ಟುತ್ತದೆ. ಈ ಸಾಲಿನ ನಟ-ನಿರ್ದೇಶಕರಲ್ಲಿ ಮೊದಲಿಗರು ರಿಯಲ್ ಸ್ಟಾರ್ ಉಪೇಂದ್ರ ಅವರು. ಉಪ್ಪಿ ಅವರ ನಿರ್ದೇಶನಕ್ಕೆ ಪ್ರತ್ಯೇಕವಾದ ಅಭಿಮಾನಿ ಬಳಗವಿದೆ. ‘ಓಂ’, ‘ಉಪ್ಪಿ’, ‘ಉಪ್ಪಿ 2’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿರುವ ಉಪೇಂದ್ರ ಅವರು ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದುವೇ ‘ಉಪ್ಪಿ 3’ ಎಂದೇ ಕರೆಸುಕೊಳ್ಳುತ್ತಿರುವ ‘ಯು ಐ’. ಸದ್ಯ ಈ ಸಿನಿಮಾದ […]

‘ಸಾಮ್ರಾಟ್ ಪೃಥ್ವಿರಾಜ್’ನ ಆಳ್ವಿಕೆ ಇನ್ನು ಒಟಿಟಿಯಲ್ಲಿ!!

ಬಾಲಿವುಡ್ ನ ಚಿರಯುವಕ, ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಇತ್ತೀಚೆಗೆ ಬಿಡುಗಡೆಯಾದ ಬಹುನಿರೀಕ್ಷಿತ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’. ಜೂನ್ 3ರಂದು ಬೆಳ್ಳಿಪರದೆ ಕಂಡಂತಹ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಗಳಿಗೆ ತಣ್ಣೀರು ಎರಚಿತ್ತು. ಭಾರತೀಯ ಇತಿಹಾಸದ ಪ್ರಮುಖ ದೊರೆ ಪೃಥ್ವಿರಾಜ್ ಚೌಹಾಣ್ ಅವರ ಕಥೆ ಹಿಡಿದು ಮಾಡಿದ್ದ ಈ ಸಿನಿಮಾದ ಮೇಲೆ ಸಿನಿರಸಿಕರು ಆಸೆಯ ದೃಷ್ಟಿ ನೆಟ್ಟಿದ್ದರು. ಆದರೆ ಅಭಿಮಾನಿಗಳು ಅಂದುಕೊಂಡಂತಹ ನಿರೀಕ್ಷೆಗಳಾಗಲಿ, ಚಿತ್ರತಂಡ ಬಯಸಿದ ಫಲಿತಾಂಶವಾಗಲಿ ಸಿನಿಮಾದಿಂದ ದೊರೆಯಲಿಲ್ಲ. ಸದ್ಯ ಈ ಸಿನಿಮಾ ಒಟಿಟಿ ಪರದೆ […]

ಘಟಾನುಘಟಿ ಸಿನಿಮಾಗಳನ್ನ ಹಿಂದಿಕ್ಕಿದ ‘777 ಚಾರ್ಲಿ’.

ಸದ್ಯ ಭಾರತದಾದ್ಯಂತ ಮನೆಮಾತಾಗಿರುವ ಚಿತ್ರ ‘777 ಚಾರ್ಲಿ’. ಎಳೆಯರಿಂದ ಹಿಡಿದು ಇಳಿವಯಸ್ಕರವರೆಗೆ ಪ್ರತಿಯೊಬ್ಬರೂ ಮನಸಾರೆ ಚಿತ್ರವನ್ನ ಹಾಡಿಹೊಗಳುತ್ತಿದ್ದಾರೆ. ಧರ್ಮ-ಚಾರ್ಲಿಯ ಜೀವನದ ಕಥೆಯ ಮೂಲಕ ಮನುಷ್ಯ ಮತ್ತು ನಾಯಿಯ ನಡುವಿನ ಭಾಂದವ್ಯವನ್ನು ಸಾರುವ ಈ ಸಿನಿಮಾ ಎಲ್ಲರ ಮನಸ್ಸಿನ ಕದ ತಟ್ಟಿದೆ.ಇಂತಹ ಸಿನಿಮಾ ದಿನದಿಂದ ದಿನಕ್ಕೆ ಯಶಸ್ಸಿನ ಹೊಸ ಹೊಸ ಮೆಟ್ಟಿಲುಗಳನ್ನು ಏರುತ್ತಿದೆ. ಪ್ರಪಂಚದ ಪ್ರಖ್ಯಾತ ಸಿನಿಮಾ ವಿಮರ್ಶಕ ಜಾಲತಾಣ ‘ಐಎಂಡಿಬಿ(IMDB)’.ಜಗತ್ತಿನಾದ್ಯಂತ ವಿವಿಧ ಭಾಷೆಗಳ ಚಿತ್ರಗಳನ್ನು ಜನರದ್ದೇ ಅಭಿಪ್ರಾಯಗಳ ಮೂಲಕ ರೇಟ್ ಮಾಡುತ್ತದೆ. ಇದೀಗ ‘IMDB’ ರೇಟಿಂಗ್ ನಲ್ಲಿ […]

ಸಂಚಿನ ಸುಳಿಯಲ್ಲಿ ಕಿನ್ನರಿ ಜೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಿನ್ನರಿಯಲ್ಲಿ ನಾಯಕ ನಕುಲ್ ಹಾಗೂ ನಾಯಕಿ ಮಣಿಯಾಗಿ ಅಭಿನಯಿಸಿದ್ದ ಪವನ್ ಕುಮಾರ್ ಹಾಗೂ ಭೂಮಿ ಶೆಟ್ಟಿ ಜೋಡಿ ಇದೀಗ ಮತ್ತೆ ವರ್ಷಗಳ ಬಳಿಕ ಒಂದಾಗುತ್ತಿದೆ. ನಕುಲ್ ಹಾಗೂ ಮಣಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಈ ಜೋಡಿ ಇದೀಗ ಒಂದಾಗುತ್ತಿರುವುದು ಹಿರಿತೆರೆಯಲ್ಲಿ. ಪ್ರಮೋದ್.ಎಸ್.ಆರ್ ನಿರ್ದೇಶನದ ಸಂಚಿನ ಸುಳಿ ಸಿನಿಮಾದ ಮೂಲಕ ಮತ್ತೆ ಈ ಜೋಡಿ ತೆರೆ ಮೇಲೆ ಒಂದಾಗುತ್ತಿದೆ. ಎಂಟು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಒಂದು ಘಟನೆ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. […]

ಟಾಲಿವುಡ್ ನಲ್ಲಿ ಸದ್ದು ಮಾಡಲಿದ್ದಾರೆ ಯಶ ಶಿವಕುಮಾರ್

ಬೈರಾಗಿ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಿತರಾದ ಯಶ ಶಿವಕುಮಾರ್ ಇದೀಗ ಪರಭಾಷೆಯ ಸಿನಿರಂಗದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಕೋಸ್ಟಲ್ ವುಡ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿರುವ ಯಶ ಇದೀಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೌದು, ಹೊಸ ತೆಲುಗು ಸಿನಿಮಾವೊಂದಕ್ಕೆ ಯಶ ಶಿವಕುಮಾರ್ ಸಹಿ ಮಾಡಿದ್ದಾರೆ. ವೈ ಧರುವೈ ಸಿನಿಮಾದ ಮೂಲಕ ಟಾಲಿವುಡ್ ಅಂಗಳ ಪ್ರವೇಶಿಸಿರುವ ಯಶ ಶಿವಕುಮಾರ್ ಪುರಿ ಜಗನ್ನಾಥ್ ಸಹೋದರ ಸಾಯಿ ರಾಮ್ ಶಂಕರ್ ಅವರೊಂದಿಗೆ […]

ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ರವಿ ಬಸ್ರುರ್ ಸಂಗೀತ.

ನಮ್ಮ ಕನ್ನಡದ ಕರಾವಳಿಯ ಪ್ರತಿಭೆ ರವಿ ಬಸ್ರುರ್ ಅವರು ಇದೀಗ ಇಡೀ ಪ್ರಪಂಚವೇ ಮಾತನಾಡಿಕೊಳ್ಳುವಂತ ಸಂಗೀತ ನಿರ್ದೇಶಕರು. ‘ಕೆಜಿಎಫ್’ ಚಿತ್ರಗಳ ಯಶಸ್ಸಿನಲ್ಲಿ ಇವರು ಕೂಡ ಒಂದು ಅವಿನಾಭಾವ ಅಂಗ ಎಂದರೆ ತಪ್ಪಾಗದು. ಸದ್ಯ ಇವರ ಕೀರ್ತಿ ಬಾಲಿವುಡ್ ನಲ್ಲೂ ಅತಿ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಅವರ ‘ಅಂತಿಮ್’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿರುವ ಇವರು, ಇದೀಗ ಮತ್ತೊಮ್ಮೆ ‘ಭಾಯ್’ ಅಖಾಡವನ್ನು ಸೇರಲು ಸಜ್ಜಾಗಿದ್ದಾರೆ. ಅದು ಸಲ್ಮಾನ್ ಅವರ ಹೊಸ ಬಹುನಿರೀಕ್ಷಿತ ‘ಭಾಯ್ ಜಾನ್’ ಸಿನಿಮಾದಿಂದ. […]