ಶಶಿಕುಮಾರ್ ಮಗನ ಮೊದಲ ಸಿನಿಮಾದ ಟ್ರೈಲರ್ ರಿಲೀಸ್.

80ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡಂತಹ ಅತಿ ಮುದ್ದಾದ ನಾಯಕ ನಟ ಶಶಿಕುಮಾರ್ ಅವರಾಗಿದ್ದರು ಎಂದರೆ ತಪ್ಪಾಗದು. ಆ ಕಾಲದಲ್ಲೇ ತಮ್ಮ ಮುಖ ಚಹರೆಯಿಂದಲೇ ಸಿನಿರಸಿಕರ ಮನೆಮಾತಾಗಿದ್ದ ಇವರು ‘ಸುಪ್ರೀಂ ಹೀರೋ’ ಎನಿಸಿಕೊಂಡವರು. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದ ಮುಂಚೂಣಿ ನಾಯಕನಟರಲ್ಲಿ ಒಬ್ಬರಾಗಿ ಯಶಸ್ಸು ಕಂಡಿದ್ದ ಇವರು, ಇದೀಗ ತಮ್ಮ ಪುತ್ರನ ಮೊದಲ ಸಿನಿಮಾದ ಬಿಡುಗಡೆಯ ಸಂತಸದಲ್ಲಿದ್ದಾರೆ. ಇವರ ಮಗನಾದ ಅಕ್ಷಿತ್ ಶಶಿಕುಮಾರ್ ಅವರ ಮೊದಲ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಓ ಮೈ ಲವ್’ […]

ಸಲಾರ್’ ಬಗ್ಗೆ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್.

‘ಕೆಜಿಎಫ್’ ಎನ್ನೋ ಹೊಸ ಪ್ರಪಂಚವನ್ನೇ ಸೃಷ್ಟಿಸಿ ನಮ್ಮ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದು, ಸ್ಟಾರ್ ನಿರ್ದೇಶಕ ಎನಿಸಿಕೊಂಡವರು ಪ್ರಶಾಂತ್ ನೀಲ್. ತಮ್ಮ ವಿಭಿನ್ನ ರೀತಿಯ ನಿರ್ದೇಶನದಿಂದ ಎಲ್ಲರ ಮನಸೆಳೆದಿರೋ ಇವರ ಮುಂದಿನ ಸಿನಿಮಾ ‘ಸಲಾರ್’. ಪ್ರಭಾಸ್ ಅವರು ನಾಯಕನಾಗಿ ನಟಿಸುತ್ತಿರುವ ಈ ಪಾನ್-ಇಂಡಿಯನ್ ಸಿನಿಮಾ ಸದ್ಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ಬಗ್ಗೆ ಮಲಯಾಳಂ ನ ಹೆಸರಾಂತ ಸ್ಟಾರ್ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮಾತನಾಡಿದ್ದಾರೆ. ಈ ಹಿಂದೆ ‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ನಟಿಸಲಿದ್ದಾರೆ ಎಂಬ ಸುದ್ದಿ […]

ವಿಕ್ರಾಂತ್ ರೋಣ ಮೆಚ್ಚಿದ ಬಿಗ್ ಬಿ ಹೇಳಿದ್ದೇನು ಗೊತ್ತಾ?

ಅಭಿನಯ ಚಕ್ರವರ್ತಿ ಎಂದೇ ಚಂದನವನದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ವಿಕ್ರಾಂತ್ ರೋಣದ ಬಿಡುಗಡೆಗೆ ಇಡೀ ಜನತೆ ಕಾತರದಿಂದ ಕಾಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾದ ಸಾಲಿಗೆ ಸೇರಿರುವ ವಿಕ್ರಾಂತ್ ರೋಣದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಅದರಲ್ಲೂ ಕಿಚ್ಚ ಅಭಿಮಾನಿಗಳು ಫಿದಾ ಆಗಿದ್ದರು‌. ಇನ್ನು ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಎಲ್ಲಾ ಭಾಷೆಯ ಟ್ರೇಲರ್ ಗೆ ಅತ್ಯದ್ಭುತವಾದ ಪ್ರತಿಕ್ರಿಯೆ ದೊರಕಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ […]

ಯಶ್ ಗೆ ಎಲ್ಲೆಡೆ ಬಹುಬೇಡಿಕೆ.

ರಾಕಿಂಗ್ ಸ್ಟಾರ್ ಯಶ್ ಅನ್ನುವುದಕ್ಕಿಂತ ರಾಕಿ ಭಾಯ್ ಎಂದೇ ಪ್ರಪಂಚದಾದ್ಯಂತ ಚಿರಪರಿಚಿತರಾಗಿರುವವರು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಸಿತ್ತೋ ಅದಕ್ಕಿಂತ ಸ್ವಲ್ಪ ಹೆಚ್ಚೇ ಅಭಿಮಾನಿಗಳನ್ನ ಯಶ್ ಕೆಜಿಎಫ್ ಸಿನಿಮಾಗಳ ಮೂಲಕ ಪಡೆದಿದ್ದಾರೆ ಎಂದರೆ ತಪ್ಪಾಗದು. ಸದ್ಯ ರಾಕಿ ಭಾಯ್ ಮುಂದೆ ಯಾವ್ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ, ಕುತೂಹಲ ಎಲ್ಲರನ್ನೂ ಆವರಿಸಿಕೊಂಡಿದೆ. ಈ ನಡುವೆಯೇ ಯಶ್ ಗೆ 100 ಕೋಟಿ ಸಂಭಾವನೆಯ ಆಫರ್ ಬಂದಿದೆಯಂತೆ. […]

ಯುವರಾಜನಿಗೆ ನಾಯಕಿಯಾಗಲಿದ್ದಾರ ‘ಮಿಸ್ ವರ್ಡ್’!!

‘ಹೊಂಬಾಳೆ ಫಿಲಂಸ್’ ಸಂಸ್ಥೆ ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ಕೈಗೆಟ್ಟಿಕೊಂಡಿದೆ. ಭಾರತದಾದ್ಯಂತ ಪ್ರಸಿದ್ದಿ ಪಡೆದಿರೋ ಈ ನಿರ್ಮಾಣ ಸಂಸ್ಥೆ ಈಗಾಗಲೇ ಹಲವು ‘ಕೆಜಿಎಫ್’,’ರಾಜಕುಮಾರ’ ದಂತಹ ಅಧ್ಭುತ ಚಿತ್ರಗಳನ್ನು ಚಂದನವನಕ್ಕೆ ನೀಡಿದೆ. ಇವರ ಮುಂದಿನ ಸಿನಿಮಾಗಳ ಸಾಲಿನಲ್ಲಿ ರಾಜ್ ಕುಟುಂಬದ ಮುಂದಿನ ಕುಡಿ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜಕುಮಾರ್ ಅವರ ಚೊಚ್ಚಲ ಚಿತ್ರ ಕೂಡ ಸೇರಿರುವುದು ಈಗಾಗಲೇ ಘೋಷಿತವಾಗಿರೋ ವಿಷಯ. ಯುವರಾಜಕುಮಾರ್ ಅವರನ್ನು ಹೊಂಬಾಳೆ ಫಿಲಂಸ್ ತಮ್ಮ ಬ್ಯಾನರ್ ಅಡಿಯಲ್ಲೇ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಚಿತ್ರಕ್ಕೆ […]

ದಿಲ್ ಖುಷ್ ಎಂದ ಸ್ಪಂದನಾ ಸೋಮಣ್ಣ

ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕರು ಇಂದು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾಮೂಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾನೂ ನನ್ನ ಕನಸು ಧಾರಾವಾಹಿಯಲ್ಲಿ ನಾಯಕಿ ಅನು ಆಗಿ ಅಭಿನಯಿಸಿದ್ದ ಸ್ಪಂದನಾ ಸೋಮಣ್ಣ ಇದೀಗ ಹಿರಿತೆರೆಗೆ ಹಾರಿದ್ದು, ‘ದಿಲ್ ಖುಷ್’ ಎಂದಿದ್ದಾರೆ. ಪ್ರಮೋದ್ ಜಯ ನಿರ್ದೇಶನದ ದಿಲ್ ಖುಷ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸ್ಪಂದನಾ “ನಾನು ನನ್ನ ಕನಸು ಧಾರಾವಾಹಿಯ ಮೂಲಕ ನಟನಾ ಪಯಣ […]

ತೆರೆಕಡೆಗೆ ಹೊರಟಿದೆ ಪೃಥ್ವಿ ಅಂಬರ್ ಹೊಸ ಸಿನಿಮಾ.

‘ದಿಯಾ’ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಹವಾ ಎಬ್ಬಿಸಿದ ನಟ ಪೃಥ್ವಿ ಅಂಬರ್. ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರೆಲ್ಲರ ಮನಸೆಳೆದಿದ್ದರು. ಇದೀಗ ಚಂದನವನದಲ್ಲಿ ಬ್ಯುಸಿ ಆಗಿರುವ ಯುವ ನಟರುಗಳಲ್ಲಿ ಒಬ್ಬರಾಗಿದ್ದಾರೆ. ‘ಬೈರಾಗಿ’ ಸಿನಿಮಾದ ಮೂಲಕ ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಅವರ ಜೊತೆಗೂ ಪೃಥ್ವಿ ಅಂಬರ್ ತೆರೆ ಹಂಚಿಕೊಂಡಿದ್ದು, ಈ ಚಿತ್ರ ಇದೇ ಜುಲೈ 1ಕ್ಕೆ ಬಿಡುಗಡೆಯಾಗುತ್ತಿದೆ. ಇದರ ಬೆನ್ನಿಗೆ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ ಮತ್ತೊಂದು ಸಿನಿಮಾ ತೆರೆಕಾಣುತ್ತಿದೆ. ಅದೇ ಶಶಿಧರ್ ಕೆ ಎಂ ನಿರ್ದೇಶನದ ‘ಶುಗರ್ […]

ರಕ್ಷಿತ್ ಶೆಟ್ಟಿ ಗೆ ಹೊಸ ಮೈಲಿಗಲ್ಲಾದ ‘777 ಚಾರ್ಲಿ’

ರಕ್ಷಿತ್ ಶೆಟ್ಟಿ ಕನ್ನಡದಲ್ಲಿ ಹೊಸ ಬಗೆಯ ಬೆಳವಣಿಗೆಗಳನ್ನು ತಂದಂತಹ ಯುವ ನಟ-ನಿರ್ದೇಶಕರಲ್ಲಿ ಒಬ್ಬರು. ವಿಭಿನ್ನ ಕಥೆ ಅಷ್ಟೇ ವಿಭಿನ್ನ ಸಿನಿಮಾ ಇವರ ವಿಶೇಷತೆ. ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರವೇ ಆದರು, ಚಿತ್ರಗರಂಗದಲ್ಲಿ ಇವರು ಬೀರಿರುವ ಪ್ರಭಾವ ಅಪಾರ. ಅಗಾಧ ಅಭಿಮಾನಿಗಳನ್ನು ಹೊಂದಿರುವ ರಕ್ಷಿತ್ ಶೆಟ್ಟಿ ಅವರ ಇತ್ತೀಚೆಗೆ ಬಿಡುಗಡೆ ಕಂಡು ಎಲ್ಲೆಡೆ ಪ್ರಶಂಸೆ ಪಡೆಯುತ್ತಿರುವ ಚಿತ್ರ ‘777 ಚಾರ್ಲಿ’. ಈ ಸಿನಿಮಾ ಇದೀಗ ರಕ್ಷಿತ್ ಶೆಟ್ಟಿಯವರಿಗೆ ಹೊಸ ಮೈಲಿಗಲ್ಲಾಗಿದೆ. ಈ ವರೆಗೆ ಸುಮಾರು 9 ರಿಂದ 10 […]

“ಪೆಟ್ರೋಮ್ಯಾಕ್ಸ್”ಗೆ ನಿಗದಿಯಾಯ್ತು ದಿನಾಂಕ.

“ನೀರ್ ದೋಸೆ’ ಸಿನಿಮಾ ಹಲವು ವಿಧದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಸಿನಿಮಾ. ಡಬಲ್ ಮೀನಿಂಗ್ ಡೈಲಾಗ್ ಗಳು, ಹಾಗು ಸನ್ನಿವೇಶಗಳ ಮೂಲಕ ಜೀವನದ ಸೂಕ್ಷ್ಮ ಸತ್ಯಗಳನ್ನು, ನೀತಿಪಾಠಗಳನ್ನು ಹೇಳಿದಂತಹ ಚಿತ್ರ ಅದು. ಈಗ ಅದೇ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ನೀನಾಸಮ್ ಸತೀಶ್ ಅವರ ಜೊತೆಗೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಅದುವೇ ‘ಪೆಟ್ರೋಮ್ಯಾಕ್ಸ್’. ಸದ್ಯ ಈ ಸಿನಿಮಾದ ಬಿಡುಗಡೆ ದಿನಾಂಕ ಖಾತ್ರಿಯಾಗಿದೆ. ನೀನಾಸಮ್ ಸತೀಶ್ ಹಾಗು ಹರಿಪ್ರಿಯಾ ಜೋಡಿಯಾಗಿ ನಟಿಸುತ್ತಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೈಲರ್ 2021ರ ಸೆಪ್ಟೆಂಬರ್ […]

ಹೊಸ ಚಿತ್ರದೊಂದಿಗೆ ಒಟಿಟಿಗೆ ಬರಲಿದ್ದಾರೆ ಸತೀಶ್ ನೀನಾಸಂ.

ಸತೀಶ್ ನೀನಾಸಂ ಸದ್ಯ ಸದ್ದಿಲ್ಲದೆ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ತಮ್ಮ ವಿಭಿನ್ನ ರೀತಿಯ ನಟನೆಯಿಂದ ಪ್ರೇಕ್ಷಕರು ಅದರಲ್ಲೂ ಗ್ರಾಮೀಣ ಪ್ರೇಕ್ಷಕರ ಮನಸೆಳೆದಿರುವ ಇವರು, ಚಂದನವನದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಈಗ ಅವರ ಹೊಸ ಚಿತ್ರವೊಂದು ಒಟಿಟಿ ಕಡೆಗೆ ಹೊರಟಿದೆ. ಅದುವೇ ‘ಡಿಯರ್ ವಿಕ್ರಮ್’. ಸತೀಶ್ ಅವರ ಜೊತೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ತನ್ನ ನೇರ ಒಟಿಟಿ ಓಟದ ದಿನಾಂಕ ನಿಗದಿ ಮಾಡಿದೆ. ಈ ಹಿಂದೆ ‘ಗೋಧ್ರ’ ಎಂಬ ಹೆಸರಿನಿಂದ ಆರಂಭವಾಗಿದ್ದ ಈ ಸಿನಿಮಾಗೆ […]