ಶಿವಣ್ಣನ ಜೊತೆ ಕೈ ಜೋಡಿಸಿದ ‘ಜೀ ಸ್ಟುಡಿಯೋಸ್’

‘ಕರುನಾಡ ಚಕ್ರವರ್ತಿ’ ಡಾ| ಶಿವರಾಜಕುಮಾರ್ ಅವರು ಸದ್ಯ ಕನ್ನಡದ ನಾಯಕನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು. ವಯಸ್ಸಿನ ಜೊತೆಜೊತೆಗೆ ಉತ್ಸಾಹವನ್ನೂ ಹೆಚ್ಚಿಸಿಕೊಳ್ಳುತ್ತಿರುವ ಇವರು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಬ್ಬ ನಾಯಕನಟ 50 ಸಿನಿಮಾಗಳನ್ನು ಪೂರ್ಣಗೊಳಿಸುವುದೇ ಸಾಧನೆಯಾಗಿರುವ ಈ ವೇಗದ ಕಾಲದಲ್ಲಿ, ಶಿವಣ್ಣ ಸದ್ಯ ತಮ್ಮ 125ನೇ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರವೇ ‘ವೇದಾ’. ಶಿವಣ್ಣ ತಮ್ಮ ಸ್ವಂತ ಸಂಸ್ಥೆಯಾದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದ ಈ ಚಿತ್ರಕ್ಕೆ ಇದೀಗ ‘ಜೀ ಸ್ಟುಡಿಯೋಸ್’ ಕೈ ಜೋಡಿಸಿದೆ. ‘ಜೀ […]

ಚಾರ್ಲಿ ಮೆಚ್ಚಿದ ರಜನಿಕಾಂತ್ ಹೇಳಿದ್ದೇನು ಗೊತ್ತಾ?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿರುವ ಈ ಸಿನಿಮಾದ ಕಥೆಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಫಿದಾ ಆಗಿದ್ದಾರೆ. ಭಾವನಾತ್ಮಕ ಸಂದೇಶ ಸಾರುವ ಈ ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೋಡಿದ್ದು ಕಣ್ಣೀರು ಕೂಡಾ ಸುರಿಸಿದ್ದರು. ಇದೀಗ ತಮಿಳಿನ ಸೂಪರ್ ಸ್ಟಾರ್ ತಲೈವಾ ಅವರು ಕೂಡಾ ಈ ಸಿನಿಮಾವನ್ನು ನೋಡಿದ್ದು ಮನಸಾರೆ ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ […]

ತಳಪತಿ ವಿಜಯ್ 66ನೇ ಸಿನಿಮಾಗೆ ಟೈಟಲ್ ಫಿಕ್ಸ್.

“ತಳಪತಿ66” ಎಂಬ ಹೆಸರಿನಿಂದಲೇ ಎಲ್ಲೆಡೆ ಸದ್ದು ಮಾಡಿದ್ದ ಸಿನಿಮಾ ತಮಿಳಿನ ಸೂಪರ್ ಸ್ಟಾರ್ ತಳಪತಿ ವಿಜಯ್ ಅವರ 66ನೇ ಚಿತ್ರ. ತಳಪತಿ ವಿಜಯ್ ಅವರ ಸಿನಿಮಾ ಬರುತ್ತಿದೆ ಅಂದರೆ ಎಲ್ಲೆಡೆ ಹಬ್ಬದ ವಾತಾವರಣ ಹುಟ್ಟಿಕೊಳ್ಳುತ್ತದೆ. ಅಷ್ಟು ದೊಡ್ಡ ಅಭಿಮಾನಿ ಬಳಗ ಅವರದ್ದು. ಇಡೀ ದೇಶದಲ್ಲೂ ಇವರನ್ನ ಆರಾಧಿಸೋ ಅಭಿಮಾನಿಗಳಿದ್ದಾರೆ. ಸದ್ಯ ಇವರೆಲ್ಲರೂ ವಿಜಯ್ ಅವರ 66ನೇ ಸಿನಿಮಾದ ಘೋಷಣೆಯ ಸಂತಸದಲ್ಲಿದ್ದಾರೆ. ಈ ಹೊಸ ಚಿತ್ರಕ್ಕೆ ‘ವರಿಸು’ ಎಂದು ಹೆಸರಿಡಲಾಗಿದೆ. ವಿಜಯ್ ಅವರ ಈ ಹೊಸ ಸಿನಿಮಾ ತಮಿಳು […]

ಬೈರಾಗಿ ಜೊತೆಗೆ ಬರಲಿದ್ದಾರೆ ಯಶ ಶಿವಕುಮಾರ್

ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ ಶಿವಕುಮಾರ್ ನಟನೆಯ ಮೊದಲ ಕನ್ನಡ ಸಿನಿಮಾ ಬೈರಾಗಿ ಬಿಡುಗಡೆಗೆ ತಯಾರಾಗಿದೆ. ವಿಜಯ್ ಮಿಲ್ಟನ್ಸ್ ನಿರ್ದೇಶನದ ಬೈರಾಗಿ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ನಟಿಸಿದ್ದು ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಯಶ ಶಿವಕುಮಾರ್ ಬಣ್ಣ ಹಚ್ಚಿದ್ದಾರೆ. ಮೊದಲಿನಿಂದಲೂ ನನಗೆ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ವಿಶೇಷ ಒಲವು. ಚಿಕ್ಕ ವಯಸ್ಸಿನಿಂದಲೂ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಾನು ಕಾಲೇಜು ದಿನಗಳಲ್ಲಿ […]

ಸೀದಾ ಒಟಿಟಿಗೆ ಹೊರಡುತ್ತಿದ್ದಾರೆ ರಿಷಿ.

ಸಿಂಪಲ್ ಸುನಿ ಅವರ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಚಿತ್ರಮಂದಿರಗಳಲ್ಲಿ ಎಷ್ಟು ಯಶಸ್ಸು ಕಂಡಿತ್ತೋ, ಅದರಲ್ಲಿ ನಟಿಸಿದ್ದ ಕಲಾವಿದರೂ ಕೂಡ ಅಷ್ಟೇ ಯಶಸ್ಸು ಕಂಡಿದ್ದಾರೆ. ಚಿತ್ರದ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ರಿಷಿ ಅವರು ಅದಾದ ನಂತರ ‘ಕವಲುದಾರಿ’, ‘ಸಾರ್ವಜನಿಕರಿಗೆ ಸುವರ್ಣವಕಾಶ’ ಸೇರಿದಂತೆ ಹಲವು ಚಿತ್ರಗಳನ್ನು ಪಡೆದರು. ಇದೀಗ ಇವರ ಮುಂದಿನ ಸಿನಿಮಾ ಬಿಡುಗಡೆಯಾಗಿದ್ದು, ಈ ಬಗ್ಗೆ ಹೊಸ ಸುದ್ದಿಯನ್ನು ಅವರು ಹೊರಹಾಕಿದ್ದಾರೆ. ಜೂನ್ 21ರಂದು ರಿಷಿ ಜನುಮದಿನ. ಇದೇ ಕಾರಣದಿಂದ ಇವರ ಮುಂದಿನ ಸಿನಿಮಾವಾದ ‘ನೋಡಿ ಸ್ವಾಮಿ […]

ಸಿಂಪಲ್ ಸ್ಟಾರ್ ಜೊತೆ ನಟಿಸುವ ಆಸೆ ಎಂದ ಶ್ರದ್ಧಾ ಶ್ರೀನಾಥ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಯಕ ಧರ್ಮ ಹಾಗೂ ಚಾರ್ಲಿ ನಡುವಿನ ಭಾಂದವ್ಯಕ್ಕೆ ಸಿನಿಪ್ರಿಯರು ಮನ ಸೋತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದಲೂ ಚಾರ್ಲಿ ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಚಾರ್ಲಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಸಿನಿಮಾ ಭಾವನಾತ್ಮಕವಾಗಿ ಜನರ ಮನಸ್ಸನ್ನು ಕಟ್ಟಿ ಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ ಯು ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಚಾರ್ಲಿ ಸಿನಿಮಾ ನೋಡಿದ […]

ಸದ್ದು ಮಾಡುತ್ತಿದೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟ್ರೇಲರ್

ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ನಾಯಕ ನಾಯಕಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಡ್ರಗ್ಸ್, ಕೊಲೆ, ಪ್ರೀತಿ, ಪ್ರೇಮ ಜೊತೆಗೊಂದು ಕುಟುಂಬದ ಕಥೆಯನ್ನು ಒಳಗೊಂಡಿರುವಂತಹ ಸಿನಿಮಾ ಇದಾಗಿದ್ದು, ಇದೀಗ ಬಿಡುಗಡೆಯಾಗಿರುವ ಟೀಸರ್ ಸಿನಿಪ್ರಿಯರಲ್ಲಿ ಒಂದು ರೀತಿಯ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಾಯಕಿ ಐಶಾನಿ ಶೆಟ್ಟಿ ಸಕತ್ ಖುಷಿಯಲ್ಲಿದ್ದಾರೆ. “ಇದೇ ಮೊದಲ ಬಾರಿಗೆ ನಾನು ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇಲ್ಲಿಯ ತನಕ ನಾನು ಅಂತಹ ಪಾತ್ರಗಳಲ್ಲಿ ನಟಿಸಿಯೇ […]

ಕ್ಯಾಬ್ ಡ್ರೈವರ್ ಆಗಿ ರಂಜಿಸಲಿದ್ದಾರಾ ನಟ ರಾಜ್ ಶೆಟ್ಟಿ

ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿರ್ಗಮನ ಸಿನಿಮಾದಲ್ಲಿ ನಟಿಸಿರುವ ಅವರು ಭಿನ್ನ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ. “ತುರ್ತು ನಿರ್ಗಮನ ಸಿನಿಮಾದಲ್ಲಿ ನಾನು ಕ್ಯಾಬ್‌ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ತನ್ನ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲ ಮಾಡಿಕೊಂಡಿರುವ ಆತನಿಗೆ ಡೀಸೆಲ್‌ ಹಾಕಿಸಲು ಹಣ ಇರುವುದಿಲ್ಲ. […]

ಸ್ಯಾಂಡಲ್ ವುಡ್ ನಲ್ಲಿ , ನಾಯಿ ಇದೆ ಎಚ್ಚರಿಕೆ !! ಅಬ್ಬರ

ನಾಯಿ ಇದೆ ಎಚ್ಚರಿಕೆ ! ಸಧ್ಯ ಗಾಂಧಿನಗರದಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಸದ್ದು ಮಾಡುತ್ತಿರುವ ವಿಶೇಷ ಮನರಂಜನೆಯ ಚಿತ್ರ … ಟೈಟಲ್ ಜೊತೆಗೆ ಚಿತ್ರದ ಕಥೆ ಕೂಡ ವಿಭಿನ್ನ ಎನ್ನುವುದು ನಿರ್ದೇಶಕ ಕಲಿಗೌಡರ ಮಾತು , ಈ ಹಿಂದೆ ” ತನಿಖೆ ” ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿರುವ ಕಲಿಗೌಡ ಅವರು ” ನಾಯಿ ಇದೆ ಎಚ್ಚರಿಕೆ !! ” ಚಿತ್ರಕ್ಕೆ ಮತ್ತೆ ಕ್ಯಾಪ್ ತೊಟ್ಟಿದ್ದಾರೆ … ಹಾಸ್ಯದ ಜೊತೆಗೆ ರೋಮಾಂಚಕಾರಿ ಕಥಾ ಹಂದರವಿರುವ ಚಿತ್ರದಲ್ಲಿ ಮಂಗಳೂರು ದಿನೇಶ್ […]

ಥೈಲ್ಯಾಂಡ್ ನಲ್ಲಿ ಸದ್ದು ಮಾಡುತ್ತಿರುವ ಆಲಿಯಾ ನಟನೆಯ ಸಿನಿಮಾ

ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಸೂಪರ್ ಹಿಟ್ ಸಿನಿಮಾಗಳಿಗೆ ಸೇರಿರುವುದು ಸಿನಿ ಪ್ರಿಯರಿಗೆ ತಿಳಿದೇ ಇದೆ. ಅದಕ್ಕೆ ಅದು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿರುವುದೇ ಸಾಕ್ಷಿ. ಇಂತಿಪ್ಪ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದ ನಂತರ ಮಗದೊಂದು ಸಂತಸದ ವಿಚಾರ ಹೊರಬಂದಿದೆ‌. ಅದೇನಂತೀರಾ? ಗಂಗೂಬಾಯಿ ಸಿನಿಮಾವನ್ನು ಥೈಲ್ಯಾಂಡ್ ಜನರು ಕೂಡಾ ಮೆಚ್ಚಿಕೊಂಡಿದ್ದಾರೆ. ಸೆಕ್ಸ್ ವರ್ಕರ್ ಗಂಗೂಬಾಯಿ ಜೀವನ ಚರಿತ್ರೆಯನ್ನು ಒಳಗೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಇದೀಗ ಥೈಲ್ಯಾಂಡ್‌ ನಲ್ಲೂ ಸದ್ದು ಮಾಡುತ್ತಿದೆ. […]